ಸೋಮವಾರ, ಏಪ್ರಿಲ್ 28, 2025
HomeSportsCricketSRH top player banned : ಸನ್‌ರೈಸಸ್‌ ಹೈದ್ರಬಾದ್‌ ತಂಡದ ಖ್ಯಾತ ಆಟಗಾರನಿಗೆ 3 ವರ್ಷ...

SRH top player banned : ಸನ್‌ರೈಸಸ್‌ ಹೈದ್ರಬಾದ್‌ ತಂಡದ ಖ್ಯಾತ ಆಟಗಾರನಿಗೆ 3 ವರ್ಷ ಕ್ರಿಕೆಟ್‌ನಿಂದ ನಿಷೇಧ ಹೇರಿದ ಐಸಿಸಿ

- Advertisement -

ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಆರಂಭಕ್ಕೆ ಸಿದ್ದತೆಗಳು ಜೋರಾಗಿ ನಡೆಯುತ್ತಿದೆ. ಫೆಬ್ರವರಿ 12 ಮತ್ತು 13 ರಂದು ಬೆಂಗಳೂರಿನಲ್ಲಿಐಪಿಎಲ್‌ ( IPL 2022 ) ಮೆಗಾ ಹರಾಜು ನಡೆಯಲಿದೆ. ಎಲ್ಲಾ 10 ಫ್ರಾಂಚೈಸ್ ಮ್ಯಾನೇಜ್‌ಮೆಂಟ್ ಈಗಾಗಲೇ ಆಟಗಾರರ ಖರೀದಿಗೆ ಫ್ಲ್ಯಾನ್‌ ರೂಪಿಸುತ್ತಿವೆ. ಬಿಸಿಸಿಐ ಈಗಾಗಲೇ ಆಟಗಾರರ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಆದರೆ ಐಪಿಎಲ್ 2022 ರ ಆರಂಭಕ್ಕೆ ಮೊದಲು ಸನ್‌ರೈಸಸ್‌ ಹೈದ್ರಾಬಾದ್‌ ತಂಡದ (SRH top player banned ) ಮಾಜಿ ಖ್ಯಾತ (SRH ) ಆಟಗಾರನಿಗೆ ಐಸಿಸಿ ಮೂರುವರೆ ವರ್ಷಳ ಕಾಲ ನಿಷೇಧ ಹೇರಿದೆ.

ಅಂತರರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ ಜಿಂಬಾಬ್ವೆಯ ಮಾಜಿ ನಾಯಕ ಬ್ರೆಂಡನ್ ಟೇಲರ್ ಅವರನ್ನು ಎಲ್ಲಾ ಕ್ರಿಕೆಟ್‌ನಿಂದ ಮೂರುವರೆ ವರ್ಷಗಳ ಕಾಲ ನಿಷೇಧ ಹೇರಿದೆ. ಬ್ರೆಂಡನ್‌ ಟೇಲರ್‌ ಅವರು ಐಸಿಸಿ ಭ್ರಷ್ಟಾಚಾರ-ವಿರೋಧಿ ಕೋಡ್‌ನ ನಾಲ್ಕು ಆರೋಪಗಳನ್ನು ಮತ್ತು ಪ್ರತ್ಯೇಕವಾಗಿ ಐಸಿಸಿ ವಿರೋಧಿ ಡೋಪಿಂಗ್ ಕೋಡ್‌ನ ಒಂದು ಆರೋಪವನ್ನು ಅವರು ಉಲ್ಲಂಘಿಸಿದ್ದಾರೆ ಎಂದು ಐಸಿಸಿ ಹೇಳಿಕೆಯಲ್ಲಿ ತಿಳಿಸಿದೆ.

ಬ್ರೆಂಡನ್‌ ಟೇಲರ್‌ಗೆ ಹೇರಿರುವ ನಿಷೇಧದ ಅವಧಿಯು ಜುಲೈ 28, 2025 ಕ್ಕೆ ಕೊನೆಗೊಳ್ಳಲಿದೆ. ಹೀಗಾಗಿ ಅಂದಿನಿಂದಲೇ ಬ್ರೆಂಡನ್‌ ಟೇಲರ್‌ ತಮ್ಮನ್ನು ಆಟದಲ್ಲಿ ತೊಡಗಿಸಿ ಕೊಳ್ಳಬಹುದಾಗಿದೆ. ಬ್ರೆಂಡನ್ ಟೇಲರ್ ಅವರು ಈ ತಿಂಗಳ ಆರಂಭದಲ್ಲಿ ಸಾಮಾಜಿಕ ಜಾಲತಾಣದಲ್ಲಿ ಕೊಕೇನ್ ಸೇವಿಸುವ ಫೋಟೋಗಳನ್ನು ಹಂಚಿಕೊಂಡಿದ್ದರು. ಅಲ್ಲದೇ 2019 ರಲ್ಲಿ ಭಾರತೀಯ ಉದ್ಯಮಿಗಳ ಗುಂಪಿನಿಂದ ಸ್ಪಾಟ್ ಫಿಕ್ಸಿಂಗ್‌ನಲ್ಲಿ ತೊಡಗಿಸಿಕೊಳ್ಳಲು ಬ್ಲಾಕ್‌ಮೇಲ್ ಮಾಡಲಾಗಿತ್ತು ಎಂಬ ವಿಚಾರವನ್ನು ಬಹಿರಂಗ ಪಡಿಸಿದ್ದರು.

ಆದರೆ ಬ್ರೆಂಡನ್‌ ಟೇಲರ್‌ ಸ್ಪಾಟ್‌ ಫಿಕ್ಸಿಂಗ್‌ನಲ್ಲಿ ಭಾಗಿಯಾಗಿರಲಿಲ್ಲ. ಆದರೆ ಅವರ ಕುಟುಂಬವನ್ನು ರಕ್ಷಿಸುವ ಪ್ರಯತ್ನದಲ್ಲಿ ಐಸಿಸಿಗೆ ನಾಲ್ಕೂವರೆ ತಿಂಗಳ ವರೆಗೆ ಘಟನೆಯನ್ನು ವರದಿ ಮಾಡಿರಲಿಲ್ಲ. ಅಲ್ಲದೇ ಗಾಯದ ಸಮಸ್ಯೆಯ ನಂತರದಲ್ಲಿ ನಾನು ಮಾದಕ ವ್ಯಸನಕ್ಕೆ ಒಳಗಾಗಿದ್ದೇನೆ. ಇದೀಗ ಅದರಿಂದ ಹೊರ ಬರಲು ನಾನು ಪುನರ್ವಸತಿ ಕೇಂದ್ರವನ್ನು ಪರಿಶೀಲಿಸುತ್ತಿದ್ದೇನೆ ಎಂದು ಟೇಲರ್‌ ಹೇಳಿದ್ದಾರೆ. ಸಾಮಾನ್ಯವಾಗಿ ಸಂಜೆಯ ವೇಳೆಯಲ್ಲಿ ಡ್ರಿಂಕ್ಸ್‌ ಮಾಡುತ್ತಿದ್ದು, ಕೆಲವರು ನನಗೆ ಕೊಕೇನ್‌ ಅನ್ನು ಬಹಿರಂಗವಾಗಿ ನೀಡಿದ್ದರು. ನಾನು ಇದರಲ್ಲಿ ತೊಡಗಿಲ್ಲ, ಆದರೆ ಮೂರ್ಖತನದಿಂದ ಆಮಿಷವನ್ನು ತೆಗೆದುಕೊಂಡೆ. ಬೆಳಗ್ಗೆ ಕೊಕೇನ್‌ ನೀಡಿದ ಯುವಕರೇ ಹೋಟೆಲ್‌ ಕೋನೆಗೆ ನುಗ್ಗಿ, ಕೊಕೇನ್‌ ತೆಗೆದುಕೊಳ್ಳುವ ವಿಡಿಯೋವನ್ನು ಬಿಡುಗಡೆ ಮಾಡುವುದಾಗಿ ಬೆದರಿಕೆಯೊಡ್ಡಿದ್ದಾರೆ. ಸ್ಪಾಟ್‌ ಫಿಕ್ಸಿಂಗ್‌ ಬೇಡಿಕೆಗಳಿಗೆ ಸಹಕರಿಸಲು ಕೇಳಿಕೊಂಡಿದ್ದರು. ಆದರೆ ನಾನು ಯಾವುದೇ ರೀತಿಯ ಮ್ಯಾಚ್‌ ಫಿಕ್ಸಿಂಗ್‌ನಲ್ಲಿ ಭಾಗಿಯಾಗಿಲ್ಲ. ನಾನು ಮೋಸಗಾರ ಅಲ್ಲ ಎಂದಿದ್ದಾರೆ.

ಜಿಂಬಾಬ್ವೆ ಆಟಗಾರ ಟೇಲರ್ 8 ವರ್ಷಗಳ ಹಿಂದೆ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಆಡಿದ್ದರು. ಟೇಲರ್ 2014 ರ ಐಪಿಎಲ್ ಋತುವಿನಲ್ಲಿ ಸನ್ರೈಸರ್ಸ್ ಹೈದರಾಬಾದ್ ರೋಸ್ಟರ್ನ ಭಾಗವಾಗಿದ್ದರು. SRH IPL 2014 ಋತುವಿನಲ್ಲಿ 50000 US ಡಾಲರ್‌ ಮೊತ್ತವನ್ನು ಪಡೆದುಕೊಂಡಿದ್ದರು.

ಇದನ್ನೂ ಓದಿ : Jason Holder IPL 2022 ಆರ್‌ಸಿಬಿ ತಂಡಕ್ಕೆ ಜೇಸನ್ ಹೋಲ್ಡರ್ ನಾಯಕ

ಇದನ್ನೂ ಓದಿ : Krunal Pandya : ಟೀಂ ಇಂಡಿಯಾದ ಖ್ಯಾತ ಆಲ್‌ರೌಂಡರ್‌ ಕೃನಾಲ್ ಪಾಂಡ್ಯ ಟ್ವಿಟರ್ ಖಾತೆ ಹ್ಯಾಕ್

( SRH top player banned for 3 and half years before IPL 2022)

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular