Vaastu Tips : ಮನೆಯಲ್ಲಿ ನೆಮ್ಮದಿ ನೆಲೆಸಬೇಕು ಅಂದರೆ ಈ ರೀತಿಯ ಗಡಿಯಾರ ಮನೆಗೆ ತನ್ನಿ

Vaastu Tips : ಮನೆ ಅಂದಮೇಲೆ ಅಲ್ಲೊಂದು ಚೆಂದನೆಯ ಗಡಿಯಾರವಿದ್ದರೇ ಒಂದು ಕಳೆ ಇರುತ್ತದೆ. ಮೊಬೈಲ್​, ವಾಚ್​ ಸೇರಿದಂತೆ ವಿವಿಧ ಸಾಧನಗಳ ಮೂಲಕ ನಿಮಗೆ ಸಮಯ ನೋಡಲು ಆಗುತ್ತದೆಯಾದರೂ ಸಹ ಎಲ್ಲರ ಮನೆಯಲ್ಲಿಯೂ ಗಡಿಯಾರವಂತು ಇದ್ದೇ ಇರುತ್ತದೆ. ತಂತ್ರಜ್ಞಾನ ಮುಂದುವರಿದಂತೆಲ್ಲ ನಾನಾ ಬಗೆಯ ಗಡಿಯಾರಗಳು ಮಾರುಕಟ್ಟೆಗೆ ಬಂದಿವೆ. ಆದರೆ ಗಡಿಯಾರವನ್ನು ಗೋಡೆಗೆ ನೇತು ಹಾಕುವ ಮುನ್ನವೂ ನೀವು ವಾಸ್ತುಶಾಸ್ತ್ರವನ್ನು ಕೇಳಲೇಬೇಕು.

ಹೌದು..! ಮನೆಯಲ್ಲಿರುವ ಪ್ರತಿಯೊಂದು ವಸ್ತುಗಳಿಗೆ ಅದರದ್ದೇ ಆದ ವಾಸ್ತು ನಿಯಮಗಳಿವೆ, ಅದೇ ರೀತಿ ಗೋಡೆಯಲ್ಲಿ ನೇತು ಹಾಕುವ ಗಡಿಯಾರಗಳಿಗೂ ವಾಸ್ತು ನಿಯಮ ಅನ್ವಯಿಸುತ್ತದೆ. ವಾಸ್ತು ಶಾಸ್ತ್ರದ ಪ್ರಕಾರ ಗೋಡೆಯ ಮೇಲೆ ಲೋಲಕದ ಗಡಿಯಾರವನ್ನು ಹಾಕುವುದು ಹೆಚ್ಚು ಶ್ರೇಷ್ಟವಂತೆ. ಈ ರೀತಿಯ ಗಡಿಯಾರಗಳು ಮನೆಯಲ್ಲಿದ್ದರೆ ನಿಮ್ಮ ಸಮಯವು ಉತ್ತಮವಾಗಿ ಇರುತ್ತದೆ. ಅಲ್ಲದೆ ಇದು ಜೀವನದ ತೊಂದರೆಗಳನ್ನೂ ದೂರ ಮಾಡುತ್ತದೆ.

ಇನ್ನು ಮನೆಯ ಡ್ರಾಯಿಂಗ್​ ರೂಮಿನಲ್ಲಿ ಗಡಿಯಾರವನ್ನು ಅಳವಡಿಸುವುದು ಹೆಚ್ಚು ಉತ್ತಮವೆಂದು ಹೇಳುತ್ತದೆ ವಾಸ್ತು ಶಾಸ್ತ್ರ. ಹೀಗಾಗಿ ಮನೆಯ ಡ್ರಾಯಿಂಗ್​ ಕೋಣೆಯಲ್ಲಿ ಲೋಲಕದ ಗಡಿಯಾರವನ್ನು ಹಾಕಲು ಮರೆಯಬೇಡಿ. ಇನ್ನು ಗಡಿಯಾರದ ಆಕಾರ ಕೂಡ ವಾಸ್ತು ಶಾಸ್ತ್ರದ ಪ್ರಕಾರ ಪ್ರಮುಖ ಪಾತ್ರ ವಹಿಸುತ್ತದೆ.

ವಾಸ್ತು ಶಾಸ್ತ್ರದ ಪ್ರಕಾರ ಚೌಕ, ಅಂಡಾಕಾರ ಅಥವಾ ಷಟ್ಕೋನ ಆಕಾಡದ ಗಡಿಯಾರಗಳು ಹೆಚ್ಚು ಉತ್ತಮವಾಗಿದೆ. ಈ ರೀತಿಯ ಆಕಾರದ ಗಡಿಯಾರಗಳು ಮನೆಯಲ್ಲಿನ ಋಣಾತ್ಮಕ ಅಂಶಗಳನ್ನು ದೂರ ಮಾಡಿ ಧನಾತ್ಮಕ ಅಂಶಗಳನ್ನು ತರುತ್ತವೆ. ಅಲ್ಲದೇ ಈ ಆಕಾರದ ಗಡಿಯಾರಗಳು ಮನೆಯ ಸದಸ್ಯರ ಅದೃಷ್ಟವನ್ನು ಬದಲಾಯಿಸುತ್ತದೆ ಎಂದು ನಂಬಲಾಗಿದೆ. ಹೀಗಾಗಿ ಮನೆಗೆಂದು ಗಡಿಯಾರವನ್ನು ಖರೀದಿ ಮಾಡುವ ಮುನ್ನ ಈ ಎಲ್ಲಾ ಅಂಶಗಳ ಬಗ್ಗೆ ಮತ್ತೊಮ್ಮೆ ಸರಿಯಾಗಿ ಯೋಚನೆ ಮಾಡಿ ಬಳಿಕ ಖರೀದಿಸುವುದು ಉತ್ತಮ.

ಇದನ್ನು ಓದಿ : success in business: ವ್ಯವಹಾರದಲ್ಲಿ ಪ್ರಗತಿಗಾಗಿ ಕಚೇರಿಯಲ್ಲಿ ತಂದಿಡಿ ಈ ವಿಶೇಷ ವಸ್ತು

ಇದನ್ನೂ ಓದಿ : Bedroom Vaastu Tips : ದಾಂಪತ್ಯ ಜೀವನದ ವಿರಸ ದೂರ ಮಾಡುತ್ತದೆ ಈ ವಾಸ್ತು ಟಿಪ್ಸ್​

vaastu tips for clock for good atmosphere in house

Comments are closed.