ಭಾನುವಾರ, ಏಪ್ರಿಲ್ 27, 2025
HomeSportsCricketVRR ಟಿ20 ಕರಿಯರ್ ಕ್ಲೋಸ್? ನ್ಯೂಜಿಲೆಂಡ್ ವಿರುದ್ಧದ ಟಿ20 ಸರಣಿಗೂ ಇಲ್ಲ ಟೀಮ್ ಇಂಡಿಯಾ ತ್ರಿಮೂರ್ತಿಗಳು

VRR ಟಿ20 ಕರಿಯರ್ ಕ್ಲೋಸ್? ನ್ಯೂಜಿಲೆಂಡ್ ವಿರುದ್ಧದ ಟಿ20 ಸರಣಿಗೂ ಇಲ್ಲ ಟೀಮ್ ಇಂಡಿಯಾ ತ್ರಿಮೂರ್ತಿಗಳು

- Advertisement -

ಬೆಂಗಳೂರು: ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ (Rohit Sharma), ಮಾಜಿ ನಾಯಕ ವಿರಾಟ್ ಕೊಹ್ಲಿ (Virat Kohli) ಮತ್ತು ಕನ್ನಡಿಗ ಕೆ.ಎಲ್ ರಾಹುಲ್ (KL Rahul) ಅವರ ಅಂತರಾಷ್ಟ್ರೀಯ ಟಿ20 ಕರಿಯರ್ ಅಂತ್ಯಗೊಳ್ಳುವ (Sri Lanka T20 series) ಸಾಧ್ಯತೆಯಿದೆ.

ಶ್ರೀಲಂಕಾ ವಿರುದ್ಧದ ಟಿ20 ಸರಣಿಯಿಂದ ಹೊರಗುಳಿದಿರುವ ರೋಹಿತ್, ವಿರಾಟ್ ಮತ್ತು ರಾಹುಲ್ ಮುಂಬರುವ ನ್ಯೂಜಿಲೆಂಡ್ ವಿರುದ್ಧದ ಟಿ20 ಸರಣಿಯಿಂದಲೂ ಹೊರಗುಳಿಯಲಿದ್ದಾರೆ ಎನ್ನಲಾಗ್ತಿದೆ. ಕಿವೀಸ್ ವಿರುದ್ಧದ 3 ಪಂದ್ಯಗಳ ಟಿ20 ಸರಣಿಗೆ ಈ ಮೂವರನ್ನೂ ಆಯ್ಕೆ ಮಾಡದಿರಲು ಬಿಸಿಸಿಐ ನಿರ್ಧರಿಸಿದೆ ಎಂದು ತಿಳಿದು ಬಂದಿದೆ.ಐಸಿಸಿ ಏಕದಿನ ವಿಶ್ವಕಪ್ ಟೂರ್ನಿ ಈ ವರ್ಷ ಭಾರತದಲ್ಲೇ ನಡೆಯಲಿದೆ.

ವಿಶ್ವಕಪ್ ವರ್ಷವಾಗಿರುವ ಕಾರಣ ಈ ವರ್ಷ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಮತ್ತು ಕೆ.ಎಲ್ ರಾಹುಲ್ ಅವರಿಗೆ ಹೆಚ್ಚು ಹೆಚ್ಚು ಏಕದಿನ ಪಂದ್ಯಗಳನ್ನಾಡುವಂತೆ ಬಿಸಿಸಿಐ ಸೂಚನೆ ನೀಡಿದೆ. ಹೀಗಾಗಿ ಟಿ20 ತಂಡಕ್ಕೆ ಈ ತ್ರಿಮೂರ್ತಿಗಳನ್ನು ಪರಿಗಣಿಸದಿರಲು ನಿರ್ಧರಿಸಲಾಗಿದೆ ಎಂದು ಬಿಸಿಸಿಐ ಮೂಲಗಳು ತಿಳಿಸಿವೆ. ಐಸಿಸಿ ಟಿ20 ವಿಶ್ವಕಪ್ ಟೂರ್ನಿ ಮುಂದಿನ ವರ್ಷ ನಡೆಯಲಿದ್ದು, ವಿಶ್ವಕಪ್’ಗೆ ಯುವ ತಂಡವನ್ನು ಕಟ್ಟಲು ಬಿಸಿಸಿಐ ಮುಂದಾಗಿದೆ. ಹೀಗಾಗಿ ಅನುಭವಿಗಳಾದ ರೋಹಿತ್, ವಿರಾಟ್ ಮತ್ತು ರಾಹುಲ್ ಅವರನ್ನು ಟಿ20 ತಂಡಕ್ಕೆ ಆಯ್ಕೆ ಮಾಡದಿರಲು ಬಿಸಿಸಿಐ ನಿರ್ಧರಿಸಿದೆ.

ಇದನ್ನೂ ಓದಿ : Ranji Trophy 2022-23 : ಛತ್ತೀಸ್‌ಗಢ ವಿರುದ್ಧ ತವರು ನೆಲದಲ್ಲಿ ಭರ್ಜರಿ ಜಯ, ಅಗ್ರಸ್ಥಾನಕ್ಕೆ ಲಗ್ಗೆ ಇಟ್ಟ ಕರ್ನಾಟಕ

ಇದನ್ನೂ ಓದಿ : Dasun Shanaka : ಶ್ರೀಲಂಕಾ ನಾಯಕನಿಗೆ ಐಪಿಎಲ್ ಫ್ರಾಂಚೈಸಿಗಳು ಅನ್ಯಾಯ ಮಾಡಿದ್ರಾ?

ಇದನ್ನೂ ಓದಿ : Kedar Jadhav double century : ರಣಜಿ ಟ್ರೋಫಿಯಲ್ಲಿ ಸಿಡಿಲಬ್ಬರದ 283 ರನ್ ಚಚ್ಚಿದ ಟೀಮ್ ಇಂಡಿಯಾದ ಮಾಜಿ ಆಟಗಾರ

ಇದನ್ನೂ ಓದಿ : Abhishek Reddy : ಕರ್ನಾಟಕ ತಂಡದಲ್ಲಿ ಸಿಗದ ಅವಕಾಶ, ಆಂಧ್ರ ಪ್ರದೇಶ ಪರ ಆಡುತ್ತಿದ್ದಾನೆ ಕನ್ನಡಿಗ

ಶ್ರೀಲಂಕಾ ವಿರುದ್ಧದ ಟಿ20 ಸರಣಿಯಲ್ಲಿ ಟೀಮ್ ಇಂಡಿಯಾ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಮತ್ತು ಕೆ.ಎಲ್ ರಾಹುಲ್ ಅವರ ಅನುಪಸ್ಥಿತಿಯಲ್ಲಿ ಆಡುತ್ತಿದೆ. ತ್ರಿಮೂರ್ತಿಗಳ ಅನುಪಸ್ಥಿತಿಯಲ್ಲಿ ಮುಂಬೈನಲ್ಲಿ ನಡೆದ ಮೊದಲ ಟಿ20 ಪಂದ್ಯವನ್ನು 2 ರನ್’ಗಳಿಂದ ರೋಚಕವಾಗಿ ಗೆದ್ದಿದ್ದ ಹಾರ್ದಿಕ್ ಪಾಂಡ್ಯ ನಾಯಕತ್ವದ ಭಾರತ ತಂಡ, ಪುಣೆಯಲ್ಲಿ ನಡೆದ 2ನೇ ಟಿ20 ಪಂದ್ಯದಲ್ಲಿ 16 ರನ್’ಗಳ ಸೋಲು ಕಂಡಿತ್ತು. ಸರಣಿ 1-1ರಲ್ಲಿ ಸಮಬಲಗೊಂಡಿದ್ದು, ನಿರ್ಣಾಯಕ ಪಂದ್ಯ ಇಂದು ರಾಜ್’ಕೋಟ್’ನಲ್ಲಿ ನಡೆಯಲಿದೆ.

Sri Lanka T20 series : VRR T20 career close? Team India’s triumvirate is not even for the T20 series against New Zealand

RELATED ARTICLES

Most Popular