UP car accident: ಸೈಕಲ್‌ ನಲ್ಲಿ ತೆರಳುತ್ತಿದ್ದ ವಿದ್ಯಾರ್ಥಿನಿ ಮೇಲೆ ಹರಿದ ಕಾರು: ಚಾಲಕ ಅರೆಸ್ಟ್‌

ಉತ್ತರ ಪ್ರದೇಶ: (UP car accident) ಸೈಕಲ್‌ ನಲ್ಲಿ ತೆರಳುತ್ತಿದ್ದ ವಿದ್ಯಾರ್ಥಿನಿ ಮೇಲೆ ಕಾರು ಹರಿದಿರುವ ಘಟನೆ ಉತ್ತರ ಪ್ರದೇಶದ ಹರ್ದೋಯಿ ಜಿಲ್ಲೆಯ ಕೊತ್ವಾಲಿ ನಗರದಲ್ಲಿ ನಡೆದಿದೆ. ಕಾರು ಚಾಲಕ ಚಕ್ರದಡಿ ಸಿಲುಕಿದ ಅಪ್ರಾಪ್ತೆಯನ್ನು ಕೆಲ ದೂರದ ವರೆಗೆ ಎಳೆದೊಯ್ದಿದ್ದಾನೆ. ಪರಿಣಾಮ ವಿದ್ಯಾರ್ಥಿನಿಗೆ ಗಂಭೀರವಾದ ಗಾಯಗಳಾಗಿದ್ದು, ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಆರೋಪಿ ಕಾರು ಚಾಲಕನನ್ನು ಪೊಲೀಸರು ಬಂಧಿಸಿದ್ದಾರೆ.

ದೆಹಲಿಯಲ್ಲಿ ಚಕ್ರದಡಿಗೆ ಸಿಲುಕಿದ ಮಹಿಳೆಯೋರ್ವಳನ್ನು ಸುಮಾರು ಹನ್ನೆರಡು ಕಿಲೋಮೀಟರ್‌ ವೆರೆಗೆ ಎಳೆದುಕೊಂಡು ಹೋದ ಘಟನೆಯಂತೆಯೇ ಮತ್ತೊಂದು ಘಟನೆ (UP car accident) ಉತ್ತರ ಪ್ರದೇಶದಲ್ಲಿ ಮರುಕಳಿಸಿದೆ. ಶುಕ್ರವಾರ ಸಂಜೆ ಶಾಲೆ ಮುಗಿಸಿ ಕೋಚಿಂಗ್‌ ತರಗತಿಗೆ ಸೈಕಲ್‌ ನಲ್ಲಿ ತೆರಳುತ್ತಿದ್ದ ವಿದ್ಯಾರ್ಥಿನಿ ಗೆ ಕಾರು ಢಿಕ್ಕಿ ಹೊಡೆದಿದೆ. ಈ ವೇಳೆ ಕಾರಿನ ಚಕ್ರದಡಿಗೆ ಸಿಲುಕಿಕೊಂಡ ವಿದ್ಯಾರ್ಥಿನಿಯನ್ನು ಕೆಲ ದೂರದವರೆಗೆ ಕಾರು ಚಾಲಕ ಎಳೆದುಕೊಂಡು ಹೋಗಿದ್ದಾನೆ.

ವಿದ್ಯಾರ್ಥಿನಿ ಚಕ್ರದಡಿಗೆ ಸಿಲುಕಿದ್ದು ತಿಳಿದಿದ್ದರೂ ಕೂಡ ನಿರ್ಲಕ್ಷಿಸಿ ಕಾರು ಚಾಲಕ ವಿದ್ಯಾರ್ಥಿನಿಯನ್ನು ಕೆಲ ದೂರದ ವರೆಗೆ ಎಳೆದುಕೊಂಡು ಹೋಗಿದ್ದಾನೆ. ಈ ವೇಳೆ ಘಟನೆಯನ್ನು ಗಮನಿಸಿದ ಸ್ಥಳೀಯರು ಕಾರಿನ ಹಿಂದೆ ಓಡಿ ಕಾರನ್ನು ನಿಲ್ಲಿಸಿ ಚಾಲಕನಿಗೆ ಥಳಿಸಿದ್ದಾರೆ. ನಂತರದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ವಿದ್ಯಾರ್ಥಿನಿಯನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ್ದಾರೆ. ಸದ್ಯ ಗಾಯಾಳು ವಿದ್ಯಾರ್ಥಿನಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ.

ಘಟನೆಯ ಬಗ್ಗೆ ಸ್ಥಳೀಯರು ಕೊತ್ವಾಲಿ ಠಾಣಾ ಪೊಲೀಸರಿಗೆ ಮಾಹಿತಿ ನೀಡಿದ್ದು, ಸ್ಥಳಕ್ಕೆ ಬಂದ ಪೊಲೀಸರು ಪರಿಸ್ಥಿತಿ ನಿಯಂತ್ರಿಸಿ ಚಾಲಕನನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಸದ್ಯ ಘಟನೆ ಕುರಿತು ಕೊತ್ವಾಲಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ : West bengal crime: ಚಕ್ರದಡಿ‌‌ ಸ್ಕೂಟರ್ ಸಮೇತ ಸಿಲುಕಿದ್ದ ವ್ಯಕ್ತಿಯನ್ನು 1 ಕಿ.ಮೀ ಎಳೆದೊಯ್ದ ಟ್ರಕ್: ವ್ಯಕ್ತಿ ಸಾವು, ಆರೋಪಿ ಅರೆಸ್ಟ್

ಇದನ್ನೂ ಓದಿ : E-mail Bomb threat: ಬೆಂಗಳೂರಿನ ಖಾಸಗಿ ಶಾಲೆಯೊಂದಕ್ಕೆ‌ ಹುಸಿ ಬಾಂಬ್ ಬೆದರಿಕೆ: ಸುರಕ್ಷಿತ ಸ್ಥಳಕ್ಕೆ ವಿದ್ಯಾರ್ಥಿಗಳು ಶಿಫ್ಟ್

UP car accident: A student who was traveling on a bicycle was hit by a car: the driver was arrested

Comments are closed.