India vs England : ಇಂಗ್ಲೆಂಡ್ ವಿರುದ್ದ ಭಾರತಕ್ಕೆ ಹಿನಾಯ ಸೋಲು : ವಿಶ್ವಕಪ್ ಗೆಲ್ಲುವ ಕನಸು ಭಗ್ನ

ಅಡಿಲೇಡ್ : India vs England Live : ವಿಶ್ವಕಪ್ ಗೆಲ್ಲುವ ಕೋಟ್ಯಾಂತರ ಭಾರತೀಯ ಕನಸು ಭಗ್ನವಾಗಿದೆ. ಟಿ೨೦ ವಿಶ್ವಕಪ್ ಪಂದ್ಯಾವಳಿಯ ಸೆಮಿಫೈನಲ್ ಪಂದ್ಯದಲ್ಲಿ ಭಾರತ ಇಂಗ್ಲೆಂಡ್ ವಿರುದ್ದ ಹೀನಾಯ ಸೋಲು ಕಂಡಿದೆ. ಭಾರತ ನೀಡಿದ್ದ ಗುರಿಯನ್ನು ಇಂಗ್ಲೆಂಡ್‌ ವಿಕೆಟ್‌ ನಷ್ಟವಿಲ್ಲದೇ ಗೆಲುವು ಕಂಡಿದೆ. ಈ ಮೂಲಕ ಭಾರತ ವಿಶ್ವಕಪ್ ನಿಂದ ಹೊರಬಿದ್ದಿದೆ.

ಅಡಿಲೇಡ್ ಓವಲ್ ಮೈದಾನದಲ್ಲಿ ನಡೆದ ಮ್ಯಾಚ್ ನಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಗೆ ಇಳಿದ ಟೀಂ ಇಂಡಿಯಾ ತಂಡಕ್ಕೆ ರಾಹುಲ್ ಕೇವಲ 5ರನ್ ಗೆ ಔಟಾಗುವ ಮೂಲಕ ಆಘಾತ ಮೂಡಿಸಿದ್ರು. ನಂತರ ರೋಹಿತ್ ಶರ್ಮಾಗೆ ಜೊತೆಯಾದ ವಿರಾಟ್ ಕೊಹ್ಲಿ ಉತ್ತಮ ಇನ್ನಿಂಗ್ಸ್ ಕಟ್ಟಲು ಮುಂದಾದ್ರು. ಆದರೆ ರೋಹಿತ್ ಶರ್ಮಾ 27 ರನ್ ಗಳಿಸಿ ಔಟಾದ್ರು. ನಂತರ ಬಂದ ಸೂರ್ಯಕುಮಾರ್ ಹೆಚ್ಚು ಹೊತ್ತು ಕ್ರೀಸ್ ನಲ್ಲಿ ಉಳಿಯಲಿಲ್ಲ. ವಿರಾಟ್ ಕೊಹ್ಲಿ ಆಕರ್ಷಕ ಅರ್ಧಶತಕ ಗಳಿಸಿದ್ರೆ, ಸ್ಪೋಟಕ ಆಟ ಆಡಿದ ಹಾರ್ದಿಕ್ ಪಾಂಡ್ಯ 33 ಎಸೆತಗಳಲ್ಲಿ 63 ರನ್ ಗಳಿಸುವ ಮೂಲಕ ಭಾರತ 20 ಓವರ್ ಗಳಲ್ಲಿ 6 ವಿಕೆಟ್ ಕಳೆದುಕೊಂಡು 168 ರನ್ ಗಳಿಸಿತ್ತು.

ಭಾರತ ನೀಡಿದ ೧೬೯ರನ್ ಗುರಿಯನ್ನು ಬೆನ್ನತ್ತಲು ಹೊರಟ ಇಂಗ್ಲೆಂಡ್ ತಂಡಕ್ಕೆ ಆರಂಭಿಕರಾದ ಜೋಸ್ ಬಟ್ಲರ್ ಹಾಗೂ ಅಲೆಕ್ಸ್ ಹಾಲ್ಸ್ ಉತ್ತಮ ಆರಂಭ ಒದಗಿಸಿದ್ರು. ಇಂಗ್ಲೆಂಡ್ ತಂಡದ ನಾಯಕ ಜೋಸ್ ಬಟ್ಲರ್ 49 ಎಸೆತಗಳಲ್ಲಿ 80 ರನ್‌ ಬಾರಿಸಿದ್ರೆ, ಅಲೆಕ್ಸ್ ಹಾಲ್ಸ್ 47 ಎಸೆತಗಳಲ್ಲಿ ಬರೋಬ್ಬರಿ 86 ರನ್ ಸಿಡಿಸಿದ್ದಾರೆ. ಈ ಮೂಲಕ ಇಂಗ್ಲೆಂಡ್ ತಂಡ ಇನ್ನೂ ನಾಲ್ಕು ಓವರ್ ಬಾಕಿ ಇರುವಂತೆಯೇ 170 ರನ್ ಬಾರಿಸುವ ಮೂಲಕ ಗೆಲುವಿನ ನಗೆ ಬೀರಿದೆ.ಭಾರತೀಯ ಬೌಲರ್ ಗಳು ಸೆಮಿಫೈನಲ್ ನಲ್ಲಿ ವಿಕೆಟ್ ಕಬಳಿಸಲು ಪರದಾಟವಾಡಿದ್ರು.

ಇಂಗ್ಲೆಂಡ್ ತಂಡ ಫೈನಲ್ ಪಂದ್ಯದಲ್ಲಿ ಪಾಕಿಸ್ತಾನ ತಂಡವನ್ನು ಎದುರಿಸಲಿದೆ. ಎ ಹಾಗೂ ಬಿ ಗುಂಪಿನಲ್ಲಿ ಎರಡನೇ ಸ್ಥಾನ ಪಡೆದು ಸೆಮಿಫೈನಲ್ ಪ್ರವೇಶಿಸಿದ್ದ ಇಂಗ್ಲೆಂಡ್ ಹಾಗೂ ಪಾಕಿಸ್ತಾನ ತಂಡಗಳು ಇದೀಗ ವಿಶ್ವಕಪ್ ಫೈನಲ್ ತಲುಪಿವೆ.

ಇದನ್ನೂ ಓದಿ : Raghuram Bhat KSCA President : ರಾಜ್ಯ ಕ್ರಿಕೆಟ್ ಸಂಸ್ಥೆಯ ಅಧ್ಯಕ್ಷರಾಗಿ ರಘುರಾಮ್ ಭಟ್, ಚುನಾವಣೆಯೇ ಇಲ್ಲದೆ ಗೆದ್ದ ಬ್ರಿಜೇಶ್ ಬಣ

ಇದನ್ನೂ ಓದಿ : Fazal Atrachali : ಪ್ರೊ ಕಬಡ್ಡಿ ಲೀಗ್‌ನಲ್ಲಿ 400 ಟ್ಯಾಕಲ್ ಪಾಯಿಂಟ್ಸ್, ಐತಿಹಾಸಿಕ ದಾಖಲೆ ಬರೆದ ಇರಾನ್ ದಿಗ್ಗಜ ಫಜಲ್ ಅತ್ರಾಚಲಿ

t20 world cup 2022 india vs England india lost match eng vs pak final India vs England Live

Comments are closed.