ದುಬೈ: (Rohit Sharma oppressing) ಹಿಟ್ ಮ್ಯಾನ್ ಖ್ಯಾತಿಯ ರೋಹಿತ್ ಶರ್ಮಾ ಟಿ20 ಕ್ರಿಕೆಟ್’ನಲ್ಲಿ ಟೀಮ್ ಇಂಡಿಯಾದ ಬೆಸ್ಟ್ ಕ್ಯಾಪ್ಟನ್ ಅಂತ ಕರೆಸಿಕೊಂಡಿದ್ದಾರೆ. ಅಂತಾರಾಷ್ಟ್ರೀಯ ಟಿ20 ಯಲ್ಲಷ್ಟೇ ಅಲ್ಲದೆ, ಐಪಿಎಲ್’ನಲ್ಲೂ ರೋಹಿತ್ ಕ್ಯಾಪ್ಟನ್ಸಿಯಲ್ಲಿ ಮೋಡಿ ಮಾಡಿದ್ದಾರೆ. ರೋಹಿತ್ ನಾಯಕತ್ವದಲ್ಲಿ ಮುಂಬೈ ಇಂಡಿಯನ್ಸ್ ತಂಡದ ಐದು ಬಾರಿ ಚಾಂಪಿಯನ್ ಪಟ್ಟಕ್ಕೇರಿದೆ.
ಆದರೆ ರೋಹಿತ್ ಶರ್ಮಾ ನಾಯಕತ್ವದಲ್ಲಿ ಭಾರತ ಏಷ್ಯಾ ಕಪ್ ಟೂರ್ನಿಯಲ್ಲಿ ಫೈನಲ್ ತಲುಪಲು ವಿಫಲವಾದ ಬೆನ್ನಲ್ಲೇ ರೋಹಿತ್ ಕ್ಯಾಪ್ಟನ್ಸಿ ಬಗ್ಗೆ ಅಪಸ್ವರ ಎದ್ದಿದೆ. ಅದ್ರಲ್ಲೂ ಯುವ ಆಟಗಾರರನ್ನು ರೋಹಿತ್ ಶರ್ಮಾ ನಡೆಸಿಕೊಳ್ಳುತ್ತಿರುವ ರೀತಿಯ ಬಗ್ಗೆ ಕ್ರಿಕೆಟ್ ಪ್ರಿಯರು ಸಾಮಾಜಿಕ ಜಾಲತಾಣದಲ್ಲಿ ಕಿಡಿ ಕಾರುತ್ತಿದ್ದಾರೆ. ಶ್ರೀಲಂಕಾ ವಿರುದ್ಧದ ಪಂದ್ಯದಲ್ಲಿ ಬೌಲಿಂಗ್’ಗೆ ರೆಡಿಯಾಗುತ್ತಿದ್ದ ಯುವ ಎಡಗೈ ಮಧ್ಯಮ ವೇಗದ ಬೌಲರ್ ಅರ್ಷದೀಪ್ ಸಿಂಗ್ , ಫೀಲ್ಡ್ ಪ್ಲೇಸ್ಮೆಂಟ್ ಬಗ್ಗೆ ನಾಯಕ ರೋಹಿತ್ ಜೊತೆ ಚರ್ಚಿಸಲು ಬಂದಾಗ ರೋಹಿತ್ ಅದನ್ನು ಕಿವಿಗೆ ಹಾಕಿಕೊಳ್ಳದ ವೀಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಯುವ ಬೌಲರ್ ಅರ್ಷದೀಪ್ ಜೊತೆ ನಾಯಕ ರೋಹಿತ್ ಶರ್ಮಾ ನಡೆದುಕೊಂಡ ರೀತಿಗೆ ಕ್ರಿಕೆಟ್ ಪ್ರಿಯರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
“ಟೀಮ್ ಇಂಡಿಯಾವನ್ನು ಮುನ್ನಡೆಸಲು ರೋಹಿತ್ ಶರ್ಮಾ ಯೋಗ್ಯ ವ್ಯಕ್ತಿಯಲ್ಲ. ರೋಹಿತ್’ಗಿಂತ ಮೊಹಮ್ಮದ್ ಅಜರುದ್ದೀನ್ ಎಷ್ಟೋ ಉತ್ತಮ. ಗಂಗೂಲಿ, ದ್ರಾವಿಡ್, ಧೋನಿ, ಕೊಹ್ಲಿ ನಂತರ ಒಬ್ಬ ದುರಹಂಕಾರಿಯ ಕೈಗೆ ತಂಡದ ನಾಯಕತ್ವವನ್ನು ಕೊಡಲಾಗಿದೆ” ಎಂದು ಕ್ರಿಕೆಟ್ ಅಭಿಮಾನಿಯೊಬ್ಬ ಟ್ವೀಟ್ ಮಾಡಿದ್ದಾನೆ.
ರೋಹಿತ್ ಶರ್ಮಾ ಎಷ್ಟೇ ಟ್ರೋಫಿಗಳನ್ನು ಗೆದ್ದಿರಲಿ, ಆದರೆ ಆತ ವಿರಾಟ್ ಕೊಹ್ಲಿಯಂತಹ ಲೀಡರ್ ಆಗಲು ಸಾಧ್ಯವೇ ಇಲ್ಲ ಅಂತ ಮತ್ತೊಬ್ಬ ಕ್ರಿಕೆಟ್ ಅಭಿಮಾನಿ ಟ್ವೀಟ್ ಮಾಡಿದ್ದಾನೆ.
I don’t care how many trophies Rohit has but he can never be a leader like Virat Kohli #arshdeepsingh #ViratKohli #captaincy #INDvSL #RohitSharma pic.twitter.com/1WQ6kEY5pm
— tharun virat (@tharunvirat4) September 7, 2022
ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲೂ ರಿಷಭ್ ಪಂತ್ ಮತ್ತು ಹಾರ್ದಿಕ್ ಪಾಂಡ್ಯ ವಿರುದ್ಧ ನಾಯಕ ರೋಹಿತ್ ಶರ್ಮಾ ಆಕ್ರೋಶ ವ್ಯಕ್ತಡಿಸಿದ್ದರು. ರಿಷಭ್ ಹಾಗೂ ಪಾಂಡ್ಯ ಔಟಾಗಿ ಪೆವಿಲಿಯನ್’ಗೆ ಬಂದಾಗ ಔಟಾದ ರೀತಿಗೆ ನಾಯಕ ರೋಹಿತ್ ಅಸಮಾಧಾನ ವ್ಯಕ್ತಪಡಿಸಿದ್ದು, ಮಹತ್ವದ ಪಂದ್ಯವೊಂದರಲ್ಲಿ ಹೀಗಾ ಬೇಜವಾಬ್ದಾರಿಯಿಂತ ಆಡೋದು ಅಂತ ಇಬ್ಬರನ್ನೂ ತರಾಟೆಗೆ ತೆಗೆದುಕೊಂಡಿದ್ದರು.
ಇದನ್ನೂ ಓದಿ : Suresh Rains Retires: ದಕ್ಷಿಣ ಆಫ್ರಿಕಾ ಟಿ20 ಲೀಗ್‌ನಲ್ಲಿ ಆಡಲು ಕ್ರಿಕೆಟ್‌ಗೆ ಗುಡ್ ಬೈ ಹೇಳಿದ ಸುರೇಶ್ ರೈನಾ
ಇದನ್ನೂ ಓದಿ : KL Rahul wedding date fix : ಕೆಎಲ್ ರಾಹುಲ್ ಆಥಿಯಾ ಶೆಟ್ಟಿ ಮದುವೆ ದಿನಾಂಕ ಫಿಕ್ಸ್ : ಇಲ್ಲಿದೆ ಫಕ್ಕಾ ಮಾಹಿತಿ
Team India captain Rohit Sharma oppressing young players