Delay in flight take off:ವಿಮಾನ ಟೇಕಾಫ್​ ಆಗುವಲ್ಲಿ ವಿಳಂಬ: ಕತ್ತಿ ಅಂತ್ಯಕ್ರಿಯೆ ವಿಳಂಬ ಸಾಧ್ಯತೆ

ಬೆಳಗಾವಿ : Delay in flight take off: ಆಹಾರ, ನಾಗರಿಕ ಸರಬರಾಜು ಹಾಗೂ ಅರಣ್ಯ ಸಚಿವ ಉಮೇಶ್​ ಕತ್ತಿ ನಿನ್ನೆ ರಾತ್ರಿ ಹೃದಯಾಘಾತದಿಂದ ನಿಧನರಾಗಿದ್ದಾರೆ. ಎಂ.ಎಸ್​ ರಾಮಯ್ಯ ಆಸ್ಪತ್ರೆಯಲ್ಲಿರುವ ಉಮೇಶ್​ ಕತ್ತಿ ಪಾರ್ಥಿವ ಶರೀರವನ್ನು ಬೆಳಗಾವಿಯ ಸಾಂಬ್ರಾ ವಿಮಾನ ನಿಲ್ದಾಣಕ್ಕೆ ಕರೆದೊಯ್ಯಲು ಎಲ್ಲಾ ರೀತಿಯ ಸಿದ್ಧತೆಗಳನ್ನು ಮಾಡಲಾಗ್ತಿದೆ. ಆದರೆ ಹವಾಮಾನ ವೈಪರಿತ್ಯದ ಹಿನ್ನೆಲೆಯಲ್ಲಿ ವಿಮಾನವನ್ನು ಟೇಕಾಫ್​ ಮಾಡಲು ಅನುಮತಿ ಸಿಗದ ಕಾರಣ ಉಮೇಶ್​ ಕತ್ತಿ ಅಂತ್ಯಕ್ರಿಯೆಯಲ್ಲಿ ವಿಳಂಬ ಉಂಟಾಗುವ ಸಾಧ್ಯತೆಯಿದೆ .


ಬೆಳಗಾವಿಗೆ ಸಚಿವ ಉಮೇಶ್ ಕತ್ತಿ ಪಾರ್ಥಿವ ಶರೀರವನ್ನು ಏರ್​ಲಿಫ್ಟ್​ ಮಾಡಲು ಚೆನ್ನೈನಿಂದ ವಿಶೇಷ ವಿಮಾನವು ಆಗಮಿಸಲಿದೆ ಎಂದು ಹೇಳಲಾಗಿತ್ತು. ಆದರೆ ಪ್ರತಿಕೂಲ ಹವಾಮಾನದಿಂದಾಗಿ ಚೆನ್ನೈನಿಂದ ವಿಶೇಷ ವಿಮಾನವು ಬೆಂಗಳೂರಿಗೆ ಆಗಮಿಸುವುದು ರದ್ದಾಗಿದ್ದು ಇದರ ಬರಲು ಹೈದರಾಬಾದ್​ನಿಂದ ವಿಶೇಷ ವಿಮಾನವು ಬೆಂಗಳೂರಿನ ಹೆಚ್​ಎಎಲ್​ ವಿಮಾನ ನಿಲ್ದಾಣಕ್ಕೆ ಬಂದಿಳಿಯಲಿದೆ. ಇದೇ ವಿಶೇಷ ವಿಮಾನದ ಮೂಲಕ ಉಮೇಶ್​ ಕತ್ತಿ ಪಾರ್ಥಿವ ಶರೀರ ಬೆಳಗಾವಿಗೆ ರವಾನೆಯಾಗಲಿದೆ.


ಪ್ರಸ್ತುತ ಉಮೇಶ್​ ಕತ್ತಿ ಪಾರ್ಥಿವ ಶರೀರವನ್ನು ಹೆಚ್​ಎಎಲ್​ ವಿಮಾನ ನಿಲ್ದಾಣದಲ್ಲಿ ಉಮೇಶ್​ ಕತ್ತಿ ಪಾರ್ಥಿವ ಶರೀರವನ್ನು ಇರಿಸಲಾಗಿದೆ. ಇಲ್ಲಿ ವಿಧಾನಪರಿಷತ್​ ಸದಸ್ಯ ಹೆಚ್​.ವಿಶ್ವನಾಥ್​. ಸಚಿವ ಎಂಟಿಬಿ ನಾಗರಾಜ್​, ಮಾಜಿ ಸಿಎಂ ಸಿದ್ದರಾಮಯ್ಯ ಸೇರಿದಂತೆ ಅನೇಕರು ಉಮೇಶ್​ ಕತ್ತಿ ಪಾರ್ಥಿವ ಶರೀರದ ಅಂತಿಮ ದರ್ಶನವನ್ನು ಪಡೆಯುತ್ತಿದ್ದಾರೆ.


ಆಹಾರ ಸಚಿವ ಉಮೇಶ್​ ಕತ್ತಿ ಅಂತ್ಯಕ್ರಿಯೆಯನ್ನು ಬೆಳಗಾವಿಯಲ್ಲಿ ನಡೆಸಲು ಈಗಾಗಲೇ ಸಿದ್ದತೆಗಳು ನಡೆದಿದೆ.ಅಂತಿಮ ದರ್ಶನದಲ್ಲಿ ಭಾಗಿಯಾಗಲು ಸಿಎಂ ಬಸವರಾಜ ಬೊಮ್ಮಾಯಿ, ಸಚಿವ ಆರ್​.ಅಶೋಕ್​ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್​ ಕುಮಾರ್​ ಕಟೀಲ್​ ಸೇರಿದಂತೆ ಅನೇಕರು ಬೆಳಗಾವಿಗೆ ತೆರಳಲಿದ್ದಾರೆ.


ಸಚಿವ ಉಮೇಶ್​ ಕತ್ತಿ ನಿಧನದ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಒಂದು ದಿನಗಳ ಕಾಲ ಶೋಕಾಚರಣೆ ಆಚರಿಸಲು ನಿರ್ಧರಿಸಲಾಗಿದೆ.ಬೆಳಗಾವಿ ಜಿಲ್ಲೆಯ ಎಲ್ಲಾ ಸರ್ಕಾರಿ ಶಾಲಾ -ಕಾಲೇಜುಗಳಿಗೆ ಇಂದು ರಜೆ ಘೋಷಣೆ ಮಾಡಲಾಗಿದೆ. ಸಕಲ ಸರ್ಕಾರಿ ಗೌರವಗಳೊಂದೊಗೆ ಉಮೇಶ್​ ಕತ್ತಿ ಅಂತ್ಯಕ್ರಿಯೆ ನಡೆಯಲಿದೆ. ಸರ್ಕಾರಿ ಕಚೇರಿಗಳಲ್ಲಿ ರಾಷ್ಟ್ರಧ್ವಜವನ್ನು ಅರ್ಧಮಟ್ಟದಲ್ಲಿ ಹಾರಿಸುವಂತೆ ಸರ್ಕಾರ ಆದೇಶ ನೀಡಿದೆ.

ಇದನ್ನು ಓದಿ : Ravindra Jadeja Surgery Success : ರವೀಂದ್ರ ಜಡೇಜ ಆಪರೇಷನ್ ಸಕ್ಸಸ್, ಟಿ20 ವಿಶ್ವಕಪ್ ಆಡುವುದು ಡೌಟ್

ಇದನ್ನೂ ಓದಿ : Minister Umesh Katti : ಸಚಿವ ಉಮೇಶ್​ ಕತ್ತಿ ನಿಧನಕ್ಕೆ ಜಗದೀಶ್​ ಶೆಟ್ಟರ್​,ಬಸವರಾಜ ಹೊರಟ್ಟಿ ಸಂತಾಪ

Delay in flight take off: Umesh Katthi’s funeral may be delayed

Comments are closed.