ಸೋಮವಾರ, ಏಪ್ರಿಲ್ 28, 2025
HomeSportsCricketRahul Dravid : ಟೀಮ್ ಇಂಡಿಯಾ ಕೋಚ್ ರಾಹುಲ್ ದ್ರಾವಿಡ್‌ಗೆ ಕೋವಿಡ್, ಏಷ್ಯಾ ಕಪ್‌ಗೆ ಡೌಟ್...

Rahul Dravid : ಟೀಮ್ ಇಂಡಿಯಾ ಕೋಚ್ ರಾಹುಲ್ ದ್ರಾವಿಡ್‌ಗೆ ಕೋವಿಡ್, ಏಷ್ಯಾ ಕಪ್‌ಗೆ ಡೌಟ್ ?

- Advertisement -

ಬೆಂಗಳೂರು: (Rahul Dravid doubt Asia Cup) ಭಾರತ ಕ್ರಿಕೆಟ್ ತಂಡದ ಕೋಚ್ ರಾಹುಲ್ ದ್ರಾವಿಡ್ ಕೋವಿಡ್-19 ಪಾಸಿಟಿವ್’ಗೆ ಗುರಿಯಾಗಿದ್ದಾರೆ. ಹೀಗಾಗಿ ಏಷ್ಯಾ ಕಪ್ ಟೂರ್ನಿಯಲ್ಲಿ ಆಡಲು ದುಬೈಗೆ ತೆರಳಿದ ಟೀಮ್ ಇಂಡಿಯಾ ಜೊತೆ ದ್ರಾವಿಡ್ ಪ್ರಯಾಣ ಬೆಳೆಸಿಲ್ಲ.

ಟೀಮ್ ಇಂಡಿಯಾ ಆಟಗಾರರು ಏಷ್ಯಾ ಕಪ್ ಟಿ20 ಟೂರ್ನಿಗಾಗಿ (Asia Cup 2022) ಸೋಮವಾರ ಮಧ್ಯರಾತ್ರಿ ಮುಂಬೈನಿಂದ ದುಬೈಗೆ ಪ್ರಯಾಣ ಬೆಳೆಸಿದರು. ಆದರೆ ರಾಹುಲ್ ದ್ರಾವಿಡ್ ತಂಡದೊಂದಿಗೆ ತೆರಳಿಲ್ಲ. ಕೋವಿಡ್-19 ಪರೀಕ್ಷೆಯಲ್ಲಿ ದ್ರಾವಿಡ್ ಅವರಿಗೆ ಪಾಸಿಟಿವ್ ರಿಸಲ್ಟ್ ಬಂದಿರುವ ಕಾರಣ, ಇನ್ನೂ ಒಂದಷ್ಟು ದಿನ ಬೆಂಗಳೂರಿನ ತಮ್ಮ ಮನೆಯಲ್ಲಿ ದ್ರಾವಿಡ್ ಐಸೋಲೇಷನ್’ನಲ್ಲಿ ಇರಲಿದ್ದಾರೆ.

ಕೋವಿಡ್-19ಗೆ ಗುರಿಯಾಗಿರುವ ಕಾರಣ ರಾಹುಲ್ ದ್ರಾವಿಡ್ ಅವರು ಏಷ್ಯಾ ಕಪ್’ಗೆ ಲಭ್ಯರಾಗುವ ಸಾಧ್ಯತೆಗಳು ಕಡಿಮೆ. ಒಂದು ವೇಳೆ ಕೋವಿಡ್’ನಿಂದ ಚೇತರಿಸಿಕೊಂಡು ಕಡ್ಡಾಯ ಐಸೋಲೇಷನ್ ಮುಗಿಸಿದರೆ ದುಬೈಗೆ ತೆರಳಲಿದ್ದಾರೆ. ರಾಹುಲ್ ದ್ರಾವಿಡ್ ಅಲಭ್ಯರಾದರೆ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯ ಮುಖ್ಯಸ್ಥ ವಿವಿಎಸ್ ಲಕ್ಷ್ಮಣ್ ಏಷ್ಯಾ ಕಪ್ ಟೂರ್ನಿಯಲ್ಲಿ ಟೀಮ್ ಇಂಡಿಯಾದ ಕೋಚ್ ಆಗಿ ಕಾರ್ಯನಿರ್ವಹಿಸಲಿದ್ದಾರೆ. ದ್ರಾವಿಡ್ ಅವರ ಅನುಪಸ್ಥಿತಿಯಲ್ಲಿ ಜಿಂಬಾಬ್ವೆ ಪ್ರವಾಸದಲ್ಲಿ ಲಕ್ಷ್ಮಣ್ ಅವರೇ ಭಾರತ ತಂಡದ ಕೋಚ್ ಆಗಿದ್ದರು. ಜಿಂಬಾಬ್ವೆ ವಿರುದ್ಧದ 3 ಪಂದ್ಯಗಳ ಏಕದಿನ ಸರಣಿಯನ್ನು ಭಾರತ 3-0 ಅಂತರದಲ್ಲಿ ಕ್ಲೀನ್ ಸ್ವೀಪ್ ಮಾಡಿತ್ತು.

ಏಷ್ಯಾ ಕಪ್ ಟಿ20 ಟೂರ್ನಿ ಇದೇ ಶನಿವಾರ (ಆಗಸ್ಟ್ 27) ಆರಂಭವಾಗಲಿದ್ದು, ಭಾನುವಾರ ದುಬೈನಲ್ಲಿ ನಡೆಯಲಿರುವ ತನ್ನ ಮೊದಲ ಪಂದ್ಯದಲ್ಲಿ ಭಾರತ ತಂಡ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ತಂಡವನ್ನು ಎದುರಿಸಲಿದೆ. . ಟೂರ್ನಿಯ ಫೈನಲ್ ಪಂದ್ಯ ಸೆಪ್ಟೆಂಬರ್ 11ರಂದು ನಡೆಯಲಿದೆ. ಪಾಕಿಸ್ತಾನ ವಿರುದ್ಧ ಹೈವೋಲ್ಟೇಜ್ ಪಂದ್ಯಕ್ಕೂ ಮೊದಲು ಭಾರತ ತಂಡ ದುಬೈನಲ್ಲಿ 3 ದಿನಗಳ ಕಾಲ ಅಭ್ಯಾಸ ನಡೆಸಲಿದೆ.

ಏಷ್ಯಾಕಪ್ ಟಿ20 (Asia Cup 2022) ಟೂರ್ನಿಯ ವೇಳಾಪಟ್ಟಿ
Group A
ಭಾರತ Vs ಪಾಕಿಸ್ತಾನ: 28 ಆಗಸ್ಟ್, ದುಬೈ
ಭಾರತ Vs ಕ್ವಾಲಿಫೈಯರ್ ಟೀಮ್: 31 ಆಗಸ್ಟ್, ದುಬೈ
ಪಾಕಿಸ್ತಾನ Vs ಕ್ವಾಲಿಫೈಯರ್ ಟೀಮ್: 02 ಸೆಪ್ಟೆಂಬರ್, ಶಾರ್ಜಾ

Group B
ಶ್ರೀಲಂಕಾ Vs ಅಫ್ಘಾನಿಸ್ತಾನ: 27 ಆಗಸ್ಟ್, ದುಬೈ
ಬಾಂಗ್ಲಾದೇಶ Vs ಅಫ್ಘಾನಿಸ್ತಾನ: 30 ಆಗಸ್ಟ್, ಶಾರ್ಜಾ
ಶ್ರೀಲಂಕಾ Vs ಬಾಂಗ್ಲಾದೇಶ: 01 ಸೆಪ್ಟೆಂಬರ್, ದುಬೈ

ಇದನ್ನೂ ಓದಿ : Sania Mirza pulls out of US Open : ಯುಎಸ್ ಓಪನ್ ಟೆನಿಸ್ ನಿಂದ ಹಿಂದೆ ಸರಿದ ಸಾನಿಯಾ ಮಿರ್ಜಾ

ಇದನ್ನೂ ಓದಿ : Shubman Gill Next captain : ಜಿಂಬಾಬ್ವೆಯಲ್ಲಿ ಚೊಚ್ಚಲ ಶತಕ ಬಾರಿಸಿದವರು ಟೀಮ್ ಇಂಡಿಯಾ ಕ್ಯಾಪ್ಟನ್ ; ಶುಭಮನ್ ಗಿಲ್ ಮುಂದಿನ ನಾಯಕ ?

Team India coach Rahul Dravid doubt Asia Cup due to Covid Positive

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular