Home Minister Araga jnanendra : ಈ ಬಾರಿ ಸೂಕ್ಷ್ಮ ಪ್ರದೇಶದಲ್ಲಿಯೂ ಗಣೇಶ ಹಬ್ಬ : ಗೃಹ ಸಚಿವ ಆರಗ ಜ್ಞಾನೇಂದ್ರ

ಕೋಲಾರ : Araga jnanendra outraged against Siddaramaiah : ವಿಪಕ್ಷ ನಾಯಕ ಸಿದ್ದರಾಮಯ್ಯ ಕೊಡಗಿಗೆ ಬಂದ ಸಂದರ್ಭದಲ್ಲಿ ಅವರ ವಾಹನದ ಮೇಲೆ ಮೊಟ್ಟೆ ಹೊಡೆದ ಪ್ರಕರಣವನ್ನು ಖಂಡಿಸಿರುವ ಕಾಂಗ್ರೆಸ್​​ ಕೊಡಗು ಚಲೋ ಮಾಡಲು ನಿರ್ಧರಿಸಿದೆ. ಈ ವಿಚಾರವಾಗಿ ಕೋಲಾರ ಜಿಲ್ಲೆಯ ಕೆಜಿಎಫ್​​​ನಲ್ಲಿ ಪ್ರತಿಕ್ರಿಯಿಸಿದ ಗೃಹ ಸಚಿವ ಆರಗ ಜ್ಞಾನೇಂದ್ರ , ಕೊಡಗು ಚಲೋ ವಿಚಾರದಲ್ಲಿ ನಮಗೆ ಯಾವ ಭಯ ಇಲ್ಲ ಎಂದು ಹೇಳಿದ್ದಾರೆ.

ನಮಗೆ ರಾಜ್ಯದಲ್ಲಿ ಜನರ ಶಾಂತಿ ಮುಖ್ಯ. ಹೀಗಾಗಿ ಕೊಡಗಿನಲ್ಲಿ ಸೆಕ್ಷನ್​ 144 ಜಾರಿ ಮಾಡಿದ್ದೇವೆ. ಎರಡೂ ಪಕ್ಷಗಳು ಜಗಳ ಮಾಡಿಕೊಂಡು ಶಾಂತಿ ಕದಡಬಾರದು. ಕೊಡಗು ಚಲೋ ಮಾಡಲು ಆಗೋದಿಲ್ಲ. ಯಾವುದೇ ಪಕ್ಷಗಳಿಗೆ ಅಲ್ಲಿ ಪ್ರತಿಭಟನೆ ನಡೆಸಲು ಅವಕಾಶವಿಲ್ಲ ಎಂದು ಹೇಳಿದರು.

ಮುಸ್ಲಿಂ ಏರಿಯಾದಲ್ಲಿ ಸಾವರ್ಕರ್​ ಫೋಟೋ ಏಕೆ ಇರಿಸಬೇಕಿತ್ತು ಎಂಬ ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿಕೆಗೂ ಇದೇ ವೇಳೆ ಪ್ರತಿಕ್ರಿಯಿಸಿದ ಅವರು, ಸಿದ್ದರಾಮಯ್ಯ ಮುಸ್ಲಿಂ ಕೇರಿಯಲ್ಲಿ ಸಾವರ್ಕರ್​ ಫೋಟೋ ಇಟ್ಟಿದ್ದೇಕೆ ಎಂದು ಕೇಳುತ್ತಾರೆ. ಸಾವರ್ಕರ್​ ಓರ್ವ ಗೌರವಾನ್ವಿತ ಸ್ವಾತಂತ್ರ್ಯ ಹೋರಾಟಗಾರ .ಬ್ರಿಟೀಷ್​ ಬೂಟ್​ ನೆಕ್ಕಿದವನು ಅಂತಾ ಓರ್ವ ವ್ಯಕ್ತಿ ಶುರು ಮಾಡಿದ್ದಾನೆ. ಹೀಗಾಗಿ ಇಷ್ಟೊಂದು ಗಲಾಟೆ ಸೃಷ್ಟಿಯಾಗಿದೆ ಎಂದು ಹೇಳಿದರು.

ಪ್ರಸ್ತುತ ರಾಜ್ಯದಲ್ಲಿ ಎಲ್ಲೆಡೆ ಶಾಂತಿ ಸುವ್ಯವಸ್ಥೆ ಇದೆ. ಗಣೇಶ ಹಬ್ಬ ರಾಜ್ಯದಲ್ಲಿ ಶಾಂತಿಯುತವಾಗಿ ನಡೆಯಬೇಕು. ಈ ಬಾರಿ ಸೂಕ್ಷ್ಮ ಪ್ರದೇಶಗಳಲ್ಲಿಯೂ ಗಣೇಶ ಹಬ್ಬವನ್ನು ಮಾಡಲು ನಿರ್ಧರಿಸಿದ್ದೇವೆ. ವಿವಾದಿತ ಈದ್ಗಾ ಮೈದಾನ ಕಂದಾಯ ಇಲಾಖೆಗೆ ಸೇರಿದೆ. ಅಲ್ಲಿ ನಾವು ಭದ್ರತೆಯನ್ನು ನೀಡಲಿದ್ದೇವೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದರು. ಇತ್ತೀಚಿಗಷ್ಟೇ ಚಾಮರಾಜಪೇಟೆಯಲ್ಲಿನ ಈದ್ಗಾ ಮೈದಾನ ಕಂದಾಯ ಇಲಾಖೆಗೆ ಸೇರಿದ್ದು ಎಂದು ಬಿಬಿಎಂಪಿ ಆದೇಶ ಹೊರಡಿಸಿತ್ತು. ಇದರ ಬೆನ್ನಲ್ಲೇ ಇದೇ ಮೈದಾನದಲ್ಲಿ ಸ್ವಾತಂತ್ರ್ಯೋತ್ಸವವನ್ನು ಆಚರಿಸಲಾಗಿತ್ತು.

ಇದನ್ನು ಓದಿ : bath naked in public : ಗಂಡು ಮಗು ಬೇಕೆಂಬ ಹಂಬಲಕ್ಕೆ ಪತ್ನಿಗೆ ಸಾರ್ವಜನಿಕವಾಗಿ ಬೆತ್ತಲೆ ಸ್ನಾನ ಮಾಡಿಸಲು ಮುಂದಾದ ಪತಿ

ಇದನ್ನೂ ಓದಿ : Jothe Jotheyali Team : ಜೊತೆ ಜೊತೆಯಲಿ ಸೀರಿಯಲ್​ ಸೆಟ್​ನಿಂದ ಅನೂಪ್​ ಭಂಡಾರಿಗೆ ಆಫರ್​​

Home Minister Araga jnanendra outraged against Siddaramaiah

Comments are closed.