ಉಜ್ಜಯಿನಿ: ಟೀಮ್ ಇಂಡಿಯಾದ ಮಾಜಿ ನಾಯಕ, ಕ್ರಿಕೆಟ್ ಸೂಪರ್ ಸ್ಟಾರ್ ವಿರಾಟ್ ಕೊಹ್ಲಿ ಮತ್ತು ಪತ್ನಿ ಅನುಷ್ಕಾ ಶರ್ಮಾ ( Virat Kohli-Anushka couple ) ಇತಿಹಾಸ ಪ್ರಸಿದ್ಧ ಉಜ್ಜಯಿನಿ ಮಹಾಕಾಳೇಶ್ವರನ ದರ್ಶನ ಪಡೆದಿದ್ದಾರೆ (Virat Kohli and Anushka Sharma visits Ujjain’s Mahakaleshwar temple).
ಮಧ್ಯಪ್ರದೇಶದ ಉಜ್ಜಯಿನಿಯಲ್ಲಿರುವ ಮಹಾಕಾಳೇಶ್ವರನ ಸನ್ನಿಧಿಗೆ ಶನಿವಾರ ಪತ್ನಿ ಅನುಷ್ಕಾ ಶರ್ಮಾ ಜೊತೆ ಭೇಟಿ ನೀಡಿದ ವಿರಾಟ್ ಕೊಹ್ಲಿ, ಶಿವನಿಗೆ ವಿಶೇಷ ಪೂಜೆ ಸಲ್ಲಿಸಿದರು. ಪತ್ನಿ ಜೊತೆಗೂಡಿ ಮಹಾಕಾಳೇಶ್ವರನಿಗೆ ವಿರಾಟ್ ಕೊಹ್ಲಿ ಭಸ್ಮಾರತಿ ಪೂಜೆ ನೆರವೇರಿಸಿದರು.
ಟೀಮ್ ಇಂಡಿಯಾದ ರನ್ ಮಷಿನ್ ಖ್ಯಾತಿಯ ವಿರಾಟ್ ಕೊಹ್ಲಿ ಟೆಸ್ಟ್ ಕ್ರಿಕೆಟ್’ನಲ್ಲಿ ಕಳಪೆ ಫಾರ್ಮ್’ನಲ್ಲಿದ್ದಾರೆ. ಪ್ರವಾಸಿ ಆಸ್ಟ್ರೇಲಿಯಾ ವಿರುದ್ಧದ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯ (India Vs Australia Border-Gavaskar test series) ಮೊದಲ ಮೂರು ಪಂದ್ಯಗಳಲ್ಲಿ ವಿರಾಟ್ ಕೊಹ್ಲಿ ಮುಗ್ಗರಿಸಿದ್ದಾರೆ. ಆಸೀಸ್ ವಿರುದ್ಧದ ಟೆಸ್ಟ್ ಸರಣಿಯ 3 ಪಂದ್ಯಗಳ 5 ಇನ್ನಿಂಗ್ಸ್’ಗಳಿಂದ ವಿರಾಟ್ 22.20 ಸರಾಸರಿಯಲ್ಲಿ ಕೇವಲ 111 ರನ್ ಗಳಿಸಲಷ್ಟೇ ಶಕ್ತರಾಗಿದ್ದಾರೆ.
ನಾಗ್ಪುರದಲ್ಲಿ ನಡೆದ ಪ್ರಥಮ ಟೆಸ್ಟ್ ಪಂದ್ಯದಲ್ಲಿ 12 ರನ್ ಗಳಿಸಿ ಔಟಾಗಿದ್ದ ಕಿಂಗ್ ಕೊಹ್ಲಿ, ದೆಹಲಿಯ ಫಿರೋಜ್ ಷಾ ಕೋಟ್ಲಾ ಮೈದಾನದಲ್ಲಿ ನಡೆದ ದ್ವಿತೀಯ ಟೆಸ್ಟ್ ಪಂದ್ಯದಲ್ಲಿ 44 ಮತ್ತು 20 ರನ್ ಗಳಿಸಿದ್ದರು. ಇಂದೋರ್’ನ ಹೋಳ್ಕರ್ ಮೈದಾನದಲ್ಲಿ ಶುಕ್ರವಾರ ಅಂತ್ಯಗೊಂಡ ತೃತೀಯ ಟೆಸ್ಟ್ ಪಂದ್ಯದಲ್ಲಿ ಕೊಹ್ಲಿ 22 ಮತ್ತು 13 ರನ್ ಗಳಿಸಿದ್ದರು. 3ನೇ ಟೆಸ್ಟ್ ಪಂದ್ಯವನ್ನು ಆಸೀಸ್ 9 ವಿಕೆಟ್’ಗಳಿಂದ ಗೆದ್ದುಕೊಂಡಿದ್ದು, 4 ಪಂದ್ಯಗಳ ಸರಣಿಯಲ್ಲಿ ಭಾರತ 2-1ರ ಮುನ್ನಡೆಯಲ್ಲಿದೆ.
ಇಂದೋರ್ ಟೆಸ್ಟ್ ಪಂದ್ಯ ಕೇವಲ ಎರಡೂವರೆ ದಿನಗಳಲ್ಲೇ ಅಂತ್ಯಗೊಂಡಿರುವ ಕಾರಣ ಟೀಮ್ ಇಂಡಿಯಾ ಆಟಗಾರರಿಗೆ ಕೊಂಚ ಬಿಡುವು ಸಿಕ್ಕಿದೆ. ಬಿಡುವಿನ ವೇಳೆಯನ್ನು ಬಳಸಿಕೊಂಡಿರುವ ವಿರಾಟ್ ಕೊಹ್ಲಿ, ಪತ್ನಿ ಜೊತೆ ಇಂದೋರ್’ನಿಂದ ಉಜ್ಜಯಿನಿಗೆ ತೆರಳಿ ಮಹಾಕಾಳೇಶ್ವರನ ದರ್ಶನ ಪಡೆದಿದ್ದಾರೆ.
ಕಳೆದ ಭಾನುವಾರವಷ್ಟೇ ಟೀಮ್ ಇಂಡಿಯಾದ ಮತ್ತೊಬ್ಬ ಆಟಗಾರ ಕೆ.ಎಲ್ ರಾಹುಲ್ ಪತ್ನಿ ಆತಿಯಾ ಶೆಟ್ಟಿ ಜೊತೆ ಮಹಾಕಾಳೇಶ್ವರನ ದರ್ಶನ ಪಡೆದಿದ್ದರು (KL Rahul and Athiya Shetty visits Ujjain’s Mahakaleshwar temple). ಮಹಾಕಾಳೇಶ್ವರನಿಗೆ ವಿಶೇಷ ಪೂಜೆ ಸಲ್ಲಿಸಿದ್ದ ರಾಹುಲ್, ಯಶಸ್ಸಿಗಾಗಿ ಪ್ರಾರ್ಥಿಸಿದ್ದರು.
ಇದನ್ನೂ ಓದಿ : WPL 2023 : ಇಂದಿನಿಂದ ಮಹಿಳಾ ಪ್ರೀಮಿಯರ್ ಲೀಗ್ ಆರಂಭ, ತಂಡಗಳ ಬಲಾಬಲ, ವೇಳಾಪಟ್ಟಿ, ನೇರಪ್ರಸಾರ; ಇಲ್ಲಿದೆ ಕಂಪ್ಲೀಟ್ ಡಿಟೇಲ್ಸ್
ಇದನ್ನೂ ಓದಿ : RCB New Sponsor : ಆರ್‌ಸಿಬಿ 75 ಕೋಟಿಯ ಮೆಗಾ ಡೀಲ್‌ಗೆ ಸಹಿ ಹಾಕಿದ ರಾಯಲ್ ಚಾಲೆಂಜರ್ಸ್ ಫ್ರಾಂಚೈಸಿ
Ujjains Mahakaleshwar temple : Virat Kohli-Anushka couple offered Bhasmarathi Puja to Ujjain Mahakashelva.