ಬುಧವಾರ, ಜೂನ್ 18, 2025
HomeSportsCricketVeda Krishnamurthy marriage : ತಾಯಿಯ ಜನ್ಮದಿನದಂದೇ ಪ್ರೀತಿಸಿದ ಹುಡುಗನ ರಿಜಿಸ್ಟರ್ ಮದುವೆಯಾದ ಕ್ರಿಕೆಟರ್ ವೇದಾ...

Veda Krishnamurthy marriage : ತಾಯಿಯ ಜನ್ಮದಿನದಂದೇ ಪ್ರೀತಿಸಿದ ಹುಡುಗನ ರಿಜಿಸ್ಟರ್ ಮದುವೆಯಾದ ಕ್ರಿಕೆಟರ್ ವೇದಾ ಕೃಷ್ಣಮೂರ್ತಿ

- Advertisement -

ಬೆಂಗಳೂರು: ಭಾರತ ಮಹಿಳಾ ಕ್ರಿಕೆಟ್ ತಂಡದ ಮಾಜಿ ಆಟಗಾರ್ತಿ ವೇದಾ ಕೃಷ್ಣಮೂರ್ತಿ (Veda Krishnamurthy marriage), ತಮ್ಮ ತಾಯಿಯ ಹುಟ್ಟುಹಬ್ಬದ ದಿನವೇ ಪ್ರೀತಿಸಿದ ಹುಡುಗನ ಜೊತೆ ರಿಜಿಸ್ಟರ್ ಮದುವೆಯಾಗಿದ್ದಾರೆ.

https://www.instagram.com/p/CnURC6py12m/?utm_source=ig_web_copy_link

ಗುರುವಾರ (ಜನವರಿ 12) ವೇದಾ ಕೃಷ್ಣಮೂರ್ತಿ ಅವರ ತಾಯಿಯ ಜನ್ಮದಿನ. ಹೀಗಾಗಿ ತಾಯಿಯ ಹುಟ್ಟುಹಬ್ಬದ ದಿನವೇ ಬೆಂಗಳೂರಿನಲ್ಲಿ ವೇದಾ ಕೃಷ್ಣಮೂರ್ತಿ ರಿಜಿಸ್ಟರ್ ಮದುವೆಯಾಗಿದ್ದಾರೆ. ಅಂದ ಹಾಗೆ ವೇದಾ ಕೃಷ್ಣಮೂರ್ತಿ ಮದುವೆಯಾಗಿರುವ ಹುಡುಗನ ಹೆಸರು ಅರ್ಜುನ್ ಹೊಯ್ಸಳ (Arjun Hoysala). ಕರ್ನಾಟಕದ ಪ್ರಥಮದರ್ಜೆ ಕ್ರಿಕೆಟ್ ಆಟಗಾರನಾಗಿರುವ ಅರ್ಜುನ್ ಹೊಯ್ಸಳ ಕರ್ನಾಟಕದ ಒಂದು ರಣಜಿ ಪಂದ್ಯವಾಡಿದ್ದಾರೆ.ಚಿಕ್ಕಮಗಳೂರಿನ ಕಡೂರಿನವರಾದ 30 ವರ್ಷದ ವೇದಾ ಕೃಷ್ಣಮೂರ್ತಿ ಮತ್ತು ಅರ್ಜುನ್ ಹೊಯ್ಸಳ ಕಳೆದ ಕೆಲ ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದರು. ಕಳೆದ ವರ್ಷ ಇಬ್ಬರೂ ಬೆಂಗಳೂರಿನಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿದ್ದರು.

ವೇದಾ ಕೃಷ್ಣಮೂರ್ತಿಯವರ ತಾಯಿ ಚೆಲುವಾಂಬ ದೇವಿ 2021ರ ಮೇ ತಿಂಗಳಲ್ಲಿ ಕೋವಿಡ್’ಗೆ ಬಲಿಯಾಗಿದ್ದರು. ತಾಯಿ ತೀರಿಕೊಂಡ ಕೇವಲ ಎರಡೇ ವಾರಗಳ ಒಳಗೆ ವೇದಾ ಅವರ ಸಹೋದರಿ ವತ್ಸಲಾ ಶಿವಕುಮಾರ್ ಕೂಡ ಕೋರೊನಾಗೆ ಬಲಿಯಾಗಿದ್ದರು. ತಾಯಿಯ ಹುಟ್ಟುಹಬ್ಬದ ದಿನವೇ ಸರಳವಾಗಿ ರಿಜಿಸ್ಟರ್ ಮದುವೆಯಾಗುವ ಮೂಲಕ ಮೂಲಕ ವೇದಾ ಕೃಷ್ಣಮೂರ್ತಿ ಗಮನ ಸೆಳೆದಿದ್ದಾರೆ. ರಿಜಿಸ್ಟರ್ ಮದುವೆಯ ಫೋಟೋವನ್ನು ಅರ್ಜುನ್ ಹೊಯ್ಸಳ ತಮ್ಮ ಇನ್’ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದಾರೆ.

https://www.instagram.com/p/CnUJEIytFOM/?utm_source=ig_web_copy_link
https://www.instagram.com/p/CnUJki3p174/?utm_source=ig_web_copy_link

30 ವರ್ಷದ ವೇದಾ ಕೃಷ್ಣಮೂರ್ತಿ 2011ರಲ್ಲಿ ಅಂತರಾಷ್ಟ್ರೀಯ ಕ್ರಿಕೆಟ್’ಗೆ ಪದಾರ್ಪಣೆ ಮಾಡಿದ್ದರು. ಭಾರತ ಪರ ಒಟ್ಟು 48 ಏಕದಿನ ಪಂದ್ಯಗಳನ್ನಾಡಿರುವ ಬಲಗೈ ಬ್ಯಾಟರ್ ವೇದಾ 25.90ರ ಸರಾಸರಿಯಲ್ಲಿ 8 ಅರ್ಧಶತಕಗಳ ಸಹಿತ 829 ರನ್ ಕಲೆ ಹಾಕಿದ್ದಾರೆ.

ಇದನ್ನೂ ಓದಿ : KL Rahul 50 ODI matches : 24 ವರ್ಷಗಳ ನಂತರ ಭಾರತ ಪರ 50 ಏಕದಿನ ಪಂದ್ಯಗಳನ್ನಾಡಿದ ಮೊದಲ ಕನ್ನಡಿಗ

ಇದನ್ನೂ ಓದಿ : ನಾಳೆಯಿಂದ ಮಹಿಳಾ U19 ವಿಶ್ವಕಪ್; ಶೆಫಾಲಿ ವರ್ಮಾ ಸಾರಥ್ಯದ ಭಾರತಕ್ಕೆ ದಕ್ಷಿಣ ಆಫ್ರಿಕಾ ಮೊದಲ ಎದುರಾಳಿ

ಇದನ್ನೂ ಓದಿ : Karnataka Team beat Rajasthan : ರಾಜಸ್ಥಾನವನ್ನು ಮೂರೇ ದಿನಗಳಲ್ಲಿ ಹೆಡಮುರಿ ಕಟ್ಟಿದ ಕನ್ನಡಿಗರು, ಹೊಸ ವರ್ಷ ಕರ್ನಾಟಕಕ್ಕೆ ಸತತ 2ನೇ ಜಯ

ಭಾರತ ಪರ 76 ಟಿ20 ಪಂದ್ಯಗಳನ್ನೂ ಆಡಿರುವ ವೇದಾ ಕೃಷ್ಣಮೂರ್ತಿ 18.61ರ ಸರಾಸರಿಯಲ್ಲಿ 2 ಅರ್ಧಶತಕಗಳೊಂದಿಗೆ 875 ರನ್ ಗಳಿಸಿದ್ದಾರೆ. 2017ರಲ್ಲಿ ಇಂಗ್ಲೆಂಡ್’ನಲ್ಲಿ ನಡೆದ ಐಸಿಸಿ ಮಹಿಳಾ ವಿಶ್ವಕಪ್ ಟೂರ್ನಿಯಲ್ಲಿ ಭಾರತ ತಂಡ ಫೈನಲ್ ತಲುಪುವಲ್ಲಿ ವೇದಾ ಮಹತ್ವದ ಪಾತ್ರ ವಹಿಸಿದ್ದರು. ನ್ಯೂಜಿಲೆಂಡ್ ವಿರುದ್ಧದ ಲೀಗ್ ಪಂದ್ಯದಲ್ಲಿ ಕೇವಲ 45 ಎಸೆತಗಳಲ್ಲಿ ಸಿಡಿಲಬ್ಬರದ 70 ರನ್ ಬಾರಿಸಿದ್ದ ವೇದಾ ಭಾರತವನ್ನು ಸೆಮಿಫೈನಲ್’ಗೆ ಮುನ್ನಡೆಸಿದ್ದರು.

Veda Krishnamurthy marriage : Cricketer Veda Krishnamurthy got married to the boy she loved on her mother’s birthday

RELATED ARTICLES

Most Popular