ಮಂಗಳವಾರ, ಏಪ್ರಿಲ್ 29, 2025
HomeSportsCricketVirat Kohli 50 ODI hundreds: 2023 ವಿರಾಟ್ ಕೊಹ್ಲಿ ವರ್ಷ, ಈ ವರ್ಷವೇ 50...

Virat Kohli 50 ODI hundreds: 2023 ವಿರಾಟ್ ಕೊಹ್ಲಿ ವರ್ಷ, ಈ ವರ್ಷವೇ 50 ಏಕದಿನ ಶತಕ ಬಾರಿಸಲಿದ್ದಾರೆ ಕಿಂಗ್ ಕೊಹ್ಲಿ

- Advertisement -


ಬೆಂಗಳೂರು: Virat Kohli 50 ODI hundreds : ಹೊಸ ವರ್ಷ 2023ರನ್ನು ಇಡೀ ಜಗತ್ತೇ ಸಂಭ್ರಮದಿಂದ ಸ್ವಾಗತಿಸಿದೆ. ಟೀಮ್ ಇಂಡಿಯಾದ ಮಾಜಿ ನಾಯಕ ವಿರಾಟ್ ಕೊಹ್ಲಿ, ಪತ್ನಿ ಅನುಷ್ಕಾ ಶರ್ಮಾ ಮತ್ತು ಪುತ್ರಿ ವಾಮಿಕಾ ಕೊಹ್ಲಿ ಜೊತೆ ದುಬೈನಲ್ಲಿ ಹೊಸ ವರ್ಷದ ಸಂಭ್ರಮವನ್ನು ಆಚರಿಸಿದ್ದಾರೆ. 2022ನೇ ವರ್ಷ ವಿರಾಟ್ ಕೊಹ್ಲಿ ಅವರಿಗೆ ಅದೃಷ್ಟ ತಂದ ವರ್ಷ ಅಂದರೂ ತಪ್ಪಿಲ್ಲ. ಸತತ ಮೂರು ವರ್ಷಗಳಿಂದ ಅಂತರಾಷ್ಟ್ರೀಯ ಕ್ರಿಕೆಟ್’ನಲ್ಲಿ ಶತಕದ ಬರ ಎದುರಿಸಿದ್ದ ಕಿಂಗ್ ಕೊಹ್ಲಿ, 2022ರ ಸೆಪ್ಟೆಂಬರ್ ತಿಂಗಳಲ್ಲಿ ಆ ಶತಕದ ಬರವನ್ನು ನೀಗಿಸಿಕೊಂಡಿದ್ದರು. ದುಬೈನಲ್ಲಿ ನಡೆದ ಏಷ್ಯಾ ಕಪ್ ಟಿ20 ಟೂರ್ನಿಯಲ್ಲಿ ವಿರಾಟ್ ಕೊಹ್ಲಿ ಅಫ್ಘಾನಿಸ್ತಾನ ವಿರುದ್ಧ ಅಮೋಘ ಶತಕ ಸಿಡಿಸಿದ್ದರು. ಕಳೆದ ತಿಂಗಳು ಬಾಂಗ್ಲಾದೇಶದಲ್ಲಿ ನಡೆದ ಏಕದಿನ ಸರಣಿಯಲ್ಲೂ ಕೊಹ್ಲಿ ಒಂದು ಶತಕ ಸಿಡಿಸಿದ್ದರು.

2023ರಲ್ಲಿ ವಿರಾಟ್ ಕೊಹ್ಲಿ ಬ್ಯಾಟ್’ನಿಂದ ಶತಕಗಳ ಸುರಿಮಳೆಯಾಗುವ ಸಾಧ್ಯತೆಯಿದೆ. ಈ ವರ್ಷ ಭಾರತ ಒಟ್ಟು 25ಕ್ಕೂ ಹೆಚ್ಚು ಏಕದಿನ ಅಂತರಾಷ್ಟ್ರೀಯ ಪಂದ್ಯಗಳನ್ನಾ ಡಲಿದ್ದು, ಈ ವರ್ಷವೇ ಕಿಂಗ್ ಕೊಹ್ಲಿ 50 ಏಕದಿನ ಶತಕಗಳ ಗಡಿ ಮುಟ್ಟಲಿದ್ದಾರೆ ಎಂದು ಟೀಮ್ ಇಂಡಿಯಾದ ಮಾಜಿ ಬ್ಯಾಟಿಂಗ್ ಕೋಚ್ ಸಂಜಯ್ ಬಾಂಗರ್ ಹೇಳಿದ್ದಾರೆ (Virat Kohli can touch 50 hundres in ODI in 2023).

“ವಿರಾಟ್ ಕೊಹ್ಲಿ ಚಿಕ್ಕ ವಯಸ್ಸಲ್ಲೇ ಅತ್ಯಂತ ವೇಗವಾಗಿ 44 ಏಕದಿನ ಶತಕಗಳನ್ನು ಬಾರಿಸಿದ್ದಾರೆ. ಇದೊಂದು ಅದ್ಭುತ ಸಾಧನೆ. ಈ ವರ್ಷ ಭಾರತ 25ಕ್ಕಿಂತಲೂ ಹೆಚ್ಚು ಏಕದಿನ ಪಂದ್ಯಗಳನ್ನಾಡಲಿರುವುದರಿಂದ ಈ ವರ್ಷವೇ ಕೊಹ್ಲಿ 50 ಶತಕಗಳ ಮೈಲುಗಲ್ಲು ಸ್ಥಾಪಿಸುವ ಎಲ್ಲಾ ಸಾಧ್ಯತೆಗಳಿವೆ” ಎಂದು ಸ್ಟಾರ್ ಸ್ಪೋರ್ಟ್ಸ್ ಇಂಟರ್’ವ್ಯೂನಲ್ಲಿ ಸಂಜಯ್ ಬಾಂಗರ್ ಅಭಿಪ್ರಾಯ ಪಟ್ಟಿದ್ದಾರೆ. ದನ್ನೂ ಓದಿ : ಭಾರತದಲ್ಲಿ ವಿಶ್ವಕಪ್ ಗೆಲ್ಲಲು ಕಾಂಗರೂಗಳ ಮಾಸ್ಟರ್‌ಪ್ಲಾನ್, ಹೇಗಿದೆ ಗೊತ್ತಾ ಆಸ್ಟ್ರೇಲಿಯಾ ರಣವ್ಯೂಹ ?

34 ವರ್ಷದ ವಿರಾಟ್ ಕೊಹ್ಲಿ ಸದ್ಯ ಆಡಿರುವ 265 ಏಕದಿನ ಪಂದ್ಯಗಳಿಂದ 44 ಶತಕ ಬಾರಿಸಿದ್ದಾರೆ. ಏಕದಿನ ಕ್ರಿಕೆಟ್’ನಲ್ಲಿ 50 ಶತಕಗಳನ್ನು ಪೂರ್ತಿಗೊಳಿಸಲು ಕೊಹ್ಲಿಗೆ ಬೇಕಿರುವುದಿನ್ನು ಕೇವಲ 6 ಶತಕ ಮಾತ್ರ. ಏಕದಿನ ಅಂತರಾಷ್ಟ್ರೀಯ ಕ್ರಿಕೆಟ್’ನಲ್ಲಿ ಅತೀ ಹೆಚ್ಚು ಶತಕಗಳ ವಿಶ್ವದಾಖಲೆ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಹೆಸರಲ್ಲಿದೆ. ಸಚಿನ್ 463 ಏಕದಿನ ಪಂದ್ಯಗಳಿಂದ 49 ಶತಕ ಬಾರಿಸಿದ್ದಾರೆ. ಇನ್ನು ಐದು ಏಕದಿನ ಶತಕ ಬಾರಿಸಿದರೆ ಸಚಿನ್ ವಿಶ್ವದಾಖಲೆಯನ್ನು ವಿರಾಟ್ ಕೊಹ್ಲಿ ಸರಿಗಟ್ಟಲಿದ್ದಾರೆ. ಇದನ್ನೂ ಓದಿ : ICC World Cup 2023 : ಐಸಿಸಿ ಏಕದಿನ ವಿಶ್ವಕಪ್‌ಗೆ ಟೀಮ್ ಇಂಡಿಯಾ ರೆಡಿ : ವರ್ಲ್ಡ್ ಕಪ್ ಆಡಲಿರುವ ಆಟಗಾರರು ಇವರೇ

ಶ್ರೀಲಂಕಾ ವಿರುದ್ಧ ಮಂಗಳವಾರ (ಜನವರಿ 3) ಆರಂಭವಾಗಿರುವ 3 ಪಂದ್ಯಗಳ ಟಿ20 ಸರಣಿಗೆ ವಿರಾಟ್ ಕೊಹ್ಲಿ ಅವರಿಗೆ ವಿಶ್ರಾಂತಿ ನೀಡಲಾಗಿದ್ದು, ಏಕದಿನ ಸರಣಿಗೆ ಟೀಮ್ ಇಂಡಿಯಾಗೆ ವಾಪಸ್ಸಾಗಲಿದ್ದಾರೆ. ಶ್ರೀಲಂಕಾ ವಿರುದ್ಧದ 3 ಪಂದ್ಯಗಳ ಏಕದಿನ ಸರಣಿಯ ಮೊದಲ ಪಂದ್ಯ ಜನವರಿ 10ರಂದು ಅಸ್ಸಾಂನ ಗುವಾಹಟಿಯಲ್ಲಿ ನಡೆಯಲಿದೆ.

Virat Kohli 50 ODI hundreds complete in 2023

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular