ಬೆಂಗಳೂರು:( Virat Kohli Visit Uttarakhand )ಟೀಮ್ ಇಂಡಿಯಾದ ರನ್ ಮಷಿನ್, ಆಧುನಿಕ ಕ್ರಿಕೆಟ್’ನ ದಿಗ್ಗಜ ಬ್ಯಾಟ್ಸ್’ಮನ್ ವಿರಾಟ್ ಕೊಹ್ಲಿ ಕ್ರಿಕೆಟ್’ನಿಂದ ಬಿಡುವು ಪಡೆದಿದ್ದು, ಪತ್ನಿ ಹಾಗೂ ಮಗಳೊಂದಿಗೆ ಉತ್ತರಾಖಂಡ್ ಪ್ರವಾಸದಲ್ಲಿದ್ದಾರೆ. ವಿರುಷ್ಕಾ (Anushka Sharma) ದಂಪತಿ ಉತ್ತರಾಖಂಡ್’ನ ಪ್ರೇಕ್ಷಣೀಯ ಹಾಗೂ ಧಾರ್ಮಿಕ ಸ್ಥಳಗಳಿಗೆ ಭೇಟಿ ಕೊಡುತ್ತಿದ್ದಾರೆ.
ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಸೆಮಿಫೈನಲ್’ನಲ್ಲಿ ಸೋಲುಂಡಿರುವ ಭಾರತ ತಂಡ, ಸದ್ಯ ನ್ಯೂಜಿಲೆಂಡ್ ಪ್ರವಾಸದಲ್ಲಿದೆ. ವಿಶ್ವಕಪ್ ವೈಫಲ್ಯದ ನಂತರ ನಾಯಕ ರೋಹಿತ್ ಶರ್ಮಾ, ಉಪನಾಯಕ ಕೆ.ಎಲ್ ರಾಹುಲ್ ಮತ್ತು ಮಾಜಿ ನಾಯಕ ವಿರಾಟ್ ಕೊಹ್ಲಿ ಅವರಿಗೆ ನ್ಯೂಜಿಲೆಂಡ್ ಪ್ರವಾಸದಿಂದ ವಿಶ್ರಾಂತಿ ನೀಡಲಾಗಿದೆ.
ಕ್ರಿಕೆಟ್’ನಿಂದ ಸಿಕ್ಕಿರುವ ಬಿಡುವಿನ ಸಮಯವನ್ನು ವಿರಾಟ್ ಕೊಹ್ಲಿ ಪತ್ನಿ ಅನುಷ್ಕಾ ಶರ್ಮಾ ಹಾಗೂ ಪುತ್ರಿ ವಾಮಿಕಾ ಜೊತೆ ಉತ್ತರಾಖಂಡ್ ಪ್ರವಾಸದಲ್ಲಿ ಕಳೆಯುತ್ತಿದ್ದಾರೆ. ಶುಕ್ರವಾರ ಉತ್ತರಾಖಂಡ್’ನ ಕಾಕ್ರಿಘಾಟ್’ನಲ್ಲಿರುವ ನೀಮ್ ಕರೋರಿ ಬಾಬಾ ಆಶ್ರಮಕ್ಕೆ ಕೊಹ್ಲಿ ಕುಟುಂಬ ಭೇಟಿ ಕೊಟ್ಟಿತ್ತು. ಈ ವೇಳೆ ಅಲ್ಲಿನ ವಿರಾಟ್ ಕೊಹ್ಲಿ ಅವರ ಅಭಿಮಾನಿಗಳು ತಮ್ಮ ನೆಚ್ಚಿನ ಕ್ರಿಕೆಟಿಗನ ಜೊತೆ ಫೋಟೋ ಕ್ಲಿಕ್ಕಿಸಿಕೊಂಡಿದ್ದರು.
ಇತ್ತೀಚೆಗಷ್ಟೇ ಆಸ್ಟ್ರೇಲಿಯಾದಲ್ಲಿ ನಡೆದಿದ್ದ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಅಮೋಘ ಪ್ರದರ್ಶನ ತೋರಿದ್ದ ವಿರಾಟ್ ಕೊಹ್ಲಿ, ಆಡಿದ 6 ಪಂದ್ಯಗಳಿಂದ 4 ಅರ್ಧಶತಕ ಸಹಿತ 98.66 ರ ಸರಾಸರಿಯಲ್ಲಿ ಟೂರ್ನಿಯಲ್ಲೇ ಸರ್ವಾಧಿಕ 296 ರನ್ ಕಲೆ ಹಾಕಿದ್ದರು. ಆದರೆ ಸೆಮಿಫೈನಲ್’ನಲ್ಲಿ ಇಂಗ್ಲೆಂಡ್ ವಿರುದ್ಧ 10 ವಿಕೆಟ್’ಗಳ ಹೀನಾಯ ಸೋಲು ಕಾಣುವ ಮೂಲಕ ವಿರಾಟ್ ಕೊಹ್ಲಿ ಅವರ ಹೋರಾಟ ವ್ಯರ್ಥಗೊಂಡಿತ್ತು.
ನ್ಯೂಜಿಲೆಂಡ್ ವಿರುದ್ಧದ ಟಿ20 ಹಾಗೂ ಏಕದಿನ ಸರಣಿಗೆ ವಿಶ್ರಾಂತಿ ಪಡೆದಿರುವ ಕಿಂಗ್ ಕೊಹ್ಲಿ ಬಾಂಗ್ಲಾದೇಶ ಪ್ರವಾಸದ ಮೂಲಕ ಟೀಮ್ ಇಂಡಿಯಾಗೆ ವಾಪಸ್ಸಾಗಲಿದ್ದಾರೆ. ಬಾಂಗ್ಲಾ ಪ್ರವಾಸದಲ್ಲಿ ಭಾರತ ತಂಡ 3 ಪಂದ್ಯಗಳ ಏಕದಿನ ಸರಣಿ ಹಾಗೂ 2 ಪಂದ್ಯಗಳ ಟೆಸ್ಟ್ ಸರಣಿಯನ್ನಾಡಲಿದ್ದು, ನವೆಂಬರ್ 30ರಂದು ಟೀಮ್ ಇಂಡಿಯಾ ಕೋಲ್ಕತ್ತಾದಿಂದ ಢಾಕಾಗೆ ಪ್ರಯಾಣ ಬೆಳೆಸಲಿದೆ.
Never seen more down to earth cricketer than VIRAT KOHLI, the GOAT 🐐 pic.twitter.com/JpRwL3OEAn
— Vishal. (@SportyVishaI) November 18, 2022
ಭಾರತದ ಬಾಂಗ್ಲಾದೇಶ ಪ್ರವಾಸದ ವೇಳಾಪಟ್ಟಿ
ಡಿಸೆಂಬರ್ 04: ಮೊದಲ ಏಕದಿನ (ಶೇರ್ ಎ ಬಾಂಗ್ಲಾ ರಾಷ್ಟ್ರೀಯ ಕ್ರೀಡಾಂಗಣ, ಢಾಕಾ)
ಡಿಸೆಂಬರ್ 07: 2ನೇ ಏಕದಿನ (ಶೇರ್ ಎ ಬಾಂಗ್ಲಾ ರಾಷ್ಟ್ರೀಯ ಕ್ರೀಡಾಂಗಣ, ಢಾಕಾ)
ಡಿಸೆಂಬರ್ 10: 3ನೇ ಏಕದಿನ (ಶೇರ್ ಎ ಬಾಂಗ್ಲಾ ರಾಷ್ಟ್ರೀಯ ಕ್ರೀಡಾಂಗಣ, ಢಾಕಾ)
ಡಿಸೆಂಬರ್ 14-18: ಮೊದಲ ಟೆಸ್ಟ್ (ಜಹೂರ್ ಅಹ್ಮದ್ ಚೌಧರಿ ಕ್ರೀಡಾಂಗಣ, ಛಟ್ಟೊಗ್ರಾಮ್)
ಡಿಸೆಂಬರ್ 22-26: 2ನೇ ಏಕದಿನ (ಶೇರ್ ಎ ಬಾಂಗ್ಲಾ ರಾಷ್ಟ್ರೀಯ ಕ್ರೀಡಾಂಗಣ, ಢಾಕಾ)
ಇದನ್ನೂ ಓದಿ : Wimbledon dress code: ವಿಂಬಲ್ಡನ್ ಆಡುವ ಮಹಿಳಾ ಆಟಗಾರ್ತಿಯರಿಗೆ ಬಿಗ್ ರಿಲೀಫ್; ಡ್ರೆಸ್ ಕೋಡ್ ನಿಯಮದಲ್ಲಿ ಬದಲಾವಣೆ
ಇದನ್ನೂ ಓದಿ : 2023ರ ವಿಶ್ವಕಪ್ ನಂತರ ಏಕದಿನ, ಟೆಸ್ಟ್ ತಂಡಕ್ಕೆ ಕೆ ಎಲ್ ರಾಹುಲ್ ಅಥವಾ ರಿಷಬ್ ಪಂತ್ ಕ್ಯಾಪ್ಟನ್
Virat Kohli and Anushka Sharma Visit Uttarakhand Photo Viral