TRAI new technology: ಇನ್ಮುಂದೆ ಮೊಬೈಲ್ ನಲ್ಲೇ ಕರೆ ಮಾಡಿದ ಅಪರಿಚಿತರ ಡೀಟೈಲ್ಸ್; ಟ್ರೂಕಾಲರ್ ಅಂತ್ಯ ಸಮೀಪಿಸಿತೆ..?

ನವದೆಹಲಿ: TRAI new technology: ತಮ್ಮ ಮೊಬೈಲ್ ಗೆ ಬರುವ ಅಪರಿಚಿತ ಕರೆಗಳ ಬಗ್ಗೆ ತಲೆಕೆಡಿಸಿಕೊಳ್ಳುವ ಕಾಲ ಒಂದಿತ್ತು. ಆದರೆ ಟ್ರೂ ಕಾಲರ್ ಅಪ್ಲಿಕೇಶನ್ ಬಂದ ಮೇಲೆ ಎಲ್ಲರೂ ತಮ್ಮ ಮೊಬೈಲ್ ನಲ್ಲಿ ಟ್ರೂ ಕಾಲರ್ ಆಪ್ ನ ಇಟ್ಟುಕೊಂಡಿರ್ತಾರೆ. ಆದರೆ ಹಲವು ಬಾರಿ ಟ್ರೂ ಕಾಲರ್ ಸೇಫ್ ಅಲ್ಲ. ನಮ್ಮ ಎಲ್ಲ ಡಾಟಗಳನ್ನು ಅದು ಸಂಗ್ರಹಿಸಿ ಇಟ್ಟುಕೊಳ್ಳುತ್ತೆ ಮುಂತಾದ ದೂರುಗಳು ಕೇಳಿ ಬರುತ್ತಿವೆ. ಅದಕ್ಕಾಗಿಯೇ ಭಾರತೀಯ ಟೆಲಿಕಾಂ ನಿಯಂತ್ರಣ ಪ್ರಾಧಿಕಾರ (TRAI) ಮೊಬೈಲ್ ನಲ್ಲೇ ಅಪರಿಚಿತ ಕರೆಗಳನ್ನು ಕಂಡುಹಿಡಿಯಲೆಂದೇ ಹೊಸ ತಂತ್ರಜ್ಞಾನವನ್ನು ಪರಿಚಯಿಸುತ್ತಿದೆ ಎಂದು ತಿಳಿದುಬಂದಿದೆ.

ಇದನ್ನೂ ಓದಿ: Jio 5G and Airtel 5G : ದೇಶದಲ್ಲಿ ಎಲ್ಲೆಲ್ಲಿ ಜಿಯೊ ಮತ್ತು ಏರ್‌ಟೆಲ್‌ ಸೇವೆ ಲಭ್ಯ; 5G ಹೀಗೆ ಆಕ್ಟಿವೇಟ್‌ ಮಾಡಿ

ಟ್ರೂಕಾಲರ್ ಆಪ್ ಇಲ್ಲದೆಯೇ ಇನ್ಮುಂದೆ ಅಪರಿಚಿತ ಕರೆಗಳ ಹೆಸರು ಫೋನ್ ನಲ್ಲೇ ಕಾಣಿಸಿಕೊಳ್ಳಲಿದೆ. ಟೆಲಿಕಾಂ ಕಂಪೆನಿಗಳ ಬಳಿ ಇರುವ ಗ್ರಾಹಕರ ಕೆವೈಸಿ(KYC) ಆಧರಿಸಿ, ಕರೆ ಮಾಡಿದವರ ಹೆಸರು ಪ್ರಕಟವಾಗಲಿದೆ. ಇದರಿಂದ ಯಾವುದೇ ಅಪರಿಚಿತರ ಕರೆಯನ್ನು ಗುರುತಿಸಬಹುದಾಗಿದೆ. ಈವರೆಗೆ ಟ್ರೂಕಾಲರ್ ನಲ್ಲಿ ಮಾತ್ರ ಈ ಸೌಲಭ್ಯ ಸಿಗುತ್ತಿತ್ತು. ಇನ್ಮುಂದೆ ಎಲ್ಲಾ ಮೊಬೈಲ್ ನಲ್ಲೂ ಈ ಸೌಲಭ್ಯ ಸಿಗಲಿದ್ದು, ಟ್ರೂಕಾಲರ್ ಬಳಕೆದಾರರು ಕಡಿಮೆಯಾಗುವ ಸಾಧ್ಯತೆ ಹೆಚ್ಚಿದೆ.

ಟೆಲಿಕಾಂ ಕಂಪೆನಿಗಳೇ ಈ ಸೌಲಭ್ಯ ಒದಗಿಸುವುದರಿಂದ ಅನಧಿಕೃತವಲ್ಲದ ಕಾಲರ್ಸ್, ಸ್ಪ್ಯಾಮರ್ಸ್, ಇತರೆ ವಂಚಕರನ್ನು ಸುಲಭವಾಗಿ ಪತ್ತೆಹಚ್ಚಲು ಸಾಧ್ಯವಾಗುತ್ತದೆ. ಹೀಗಾಗಿ ಟೆಲಿಕಾಂ ಕಂಪೆನಿಗಳು ತಮ್ಮ ಗ್ರಾಹಕರ ಕೆವೈಸಿ ಸಂಗ್ರಹಿಸುವುದು ಅತೀ ಅಗತ್ಯವಾಗಿದೆ. ಎರಡಕ್ಕಿಂತ ಹೆಚ್ಚು ಸಿಮ್ ಬಳಸಿಕೊಂಡು ವಂಚನೆ ಮಾಡುವ ಸೈಬರ್ ಕ್ರೈಂಗೆ ಇದರಿಂದ ಹೊಡೆತ ಬೀಳಲಿದೆ.

ಇದನ್ನೂ ಓದಿ: Google Health Connect App : ಗೂಗಲ್‌ನ ಹೊಸ ಅಪ್ಲಿಕೇಶನ್‌ ಹೆಲ್ತ್‌ ಕನೆಕ್ಟ್‌ ಬಗ್ಗೆ ನಿಮಗೆ ಗೊತ್ತಾ…

TRAI new technology : ವಾಟ್ಸಪ್ ಕರೆಗಳಿಗೂ ಅನ್ವಯ..?

ಮುಂದಿನ ದಿನಗಳಲ್ಲಿ ವಾಟ್ಸಪ್ ಮೂಲಕ ಬರುವ ಕರೆಗಳಿಗೂ ಈ ರೀತಿಯ ಪ್ರತ್ಯೇಕ ನಿಯಮವನ್ನು ಜಾರಿಗೆ ತರಲಾಗುತ್ತೆ ಎನ್ನಲಾಗುತ್ತಿದೆ. ವಾಟ್ಸಪ್ ನ್ನು ಸಿಮ್ ಕಾರ್ಡ್‍ಗಳಿಗೆ ಲಿಂಕ್ ಮಾಡಿರುವುದರಿಂದ, ಬಳಕೆದಾರರ ಫೋನ್ ಸಂಖ್ಯೆ ಮತ್ತು ವಾಟ್ಸಪ್ ಖಾತೆಯ ನಡುವೆ ನೇರ ಸಂಪರ್ಕವಿದೆ. ದೂರಸಂಪರ್ಕ ಇಲಾಖೆ, ಟ್ರಾಯ್ ಮತ್ತು ಟೆಲಿಕಾಂ ಆಪರೇಟರ್ ಗಳನ್ನು ಒಳಗೊಳ್ಳುವಂಥ ಕ್ರಮಗಳನ್ನು ಜಾರಿಗೊಳಿಸಲು ಪೂರ್ಣ ಪ್ರಮಾಣದ ಕಾರ್ಯವಿಧಾನವನ್ನು ರೂಪಿಸುವ ಅಗತ್ಯವಿದೆ ಎಂದು ಮೂಲಗಳು ತಿಳಿಸಿವೆ.

TRAI new technology: You may soon see KYC names of callers on your mobile screens is this end of the True caller era

Comments are closed.