ಸೋಮವಾರ, ಏಪ್ರಿಲ್ 28, 2025
HomeSportsCricketVirat Kohli better than Sachin Tendulkar : 7.44 ಪಂದ್ಯಕ್ಕೊಂದು ಸೆಂಚುರಿ, ಶತಕ ಬೇಟೆಯಲ್ಲೂ...

Virat Kohli better than Sachin Tendulkar : 7.44 ಪಂದ್ಯಕ್ಕೊಂದು ಸೆಂಚುರಿ, ಶತಕ ಬೇಟೆಯಲ್ಲೂ ಸಚಿನ್ ತೆಂಡೂಲ್ಕರ್‌ಗಿಂತ ಕಿಂಗ್ ಕೊಹ್ಲಿಯೇ ಬೆಸ್ಟ್

- Advertisement -

ಬೆಂಗಳೂರು: ಅಂತರಾಷ್ಟ್ರೀಯ ಕ್ರಿಕೆಟ್’ನಲ್ಲಿ (Virat Kohli better than Sachin Tendulkar) ಕೆಲ ದಿನಗಳ ಹಿಂದಷ್ಟೇ 72ನೇ ಶತಕ ಬಾರಿಸಿರುವ ರನ್ ಮಷಿನ್ ವಿರಾಟ್ ಕೊಹ್ಲಿಯ (Virat Kohli) ಮುಂದಿನ ಗುರಿ 100 ಶತಕಗಳ ದಾಖಲೆ. ಆಧುನಿಕ ಕ್ರಿಕೆಟ್’ನ ದಿಗ್ಗಜ ಬ್ಯಾಟ್ಸ್’ಮನ್ ವಿರಾಟ್ ಕೊಹ್ಲಿ, ಬ್ಯಾಟಿಂಗ್ ದಿಗ್ಗಜ ಸಚಿನ್ ತೆಂಡೂಲ್ಕರ್ (Sachin Tendulkar) ಅವರ ಒಂದೊಂದೇ ವಿಶ್ವದಾಖಲೆಗಳನ್ನು ಪುಡಿಗಟ್ಟುತ್ತಾ ಮುನ್ನುಗ್ಗುತ್ತಿದ್ದಾರೆ.

ಶನಿವಾರ ಬಾಂಗ್ಲಾದೇಶ ವಿರುದ್ಧ ಛಟ್ಟೋಗ್ರಾಮ್’ನಲ್ಲಿ ನಡೆದ 3ನೇ ಏಕದಿನ ಪಂದ್ಯದಲ್ಲಿ ಅಮೋಘ ಶತಕ ಸಿಡಿಸಿದ್ದ ವಿರಾಟ್ ಕೊಹ್ಲಿ, ಅಂತಾರಾಷ್ಟ್ರೀಯ ಕ್ರಿಕೆಟ್’ನಲ್ಲಿ 72ನೇ ಶತಕ ಬಾರಿಸಿದ್ದರು. ಈ ಮೂಲಕ ಅಂತಾರಾಷ್ಟ್ರೀಯ ಕ್ರಿಕೆಟ್’ನಲ್ಲಿ ಅತೀ ಹೆಚ್ಚು ಶತಕಗಳನ್ನು ದಾಖಲಿಸಿದವರ ಸಾಲಿನಲ್ಲಿ ಆಸ್ಟ್ರೇಲಿಯಾ ತಂಡದ ಮಾಜಿ ನಾಯಕ ರಿಕಿ ಪಾಂಟಿಂಗ್ (71 ಶತಕ) ಅವರನ್ನು ಹಿಂದಿಕ್ಕಿ 2ನೇ ಸ್ಥಾನಕ್ಕೇರಿದ್ದರು. 100 ಶತಕಗಳನ್ನು ಬಾರಿಸಿರುವ ಸಚಿನ್ ತೆಂಡೂಲ್ಕರ್ ಮೊದಲ ಸ್ಥಾನದಲ್ಲಿದ್ದಾರೆ (Most centuries in international cricket). ಅಂತರಾಷ್ಟ್ರೀಯ ಕ್ರಿಕೆಟ್’ನಲ್ಲಿ ಸಚಿನ್ ತೆಂಡೂಲ್ಕರ್ ಅವರಿಗಿಂತ ವಿರಾಟ್ ಕೊಹ್ಲಿ ವೇಗವಾಗಿ ಶತಕಗಳನ್ನು ಬಾರಿಸುತ್ತಿದ್ದಾರೆ.

ಬ್ಯಾಟಿಂಗ್ ದಿಗ್ಗಜ ಸಚಿನ್ ತೆಂಡೂಲ್ಕರ್ 782 ಅಂತಾರಾಷ್ಟ್ರೀಯ ಇನ್ನಿಂಗ್ಸ್’ಗಳಲ್ಲಿ 100 ಶತಕಗಳನ್ನು ಬಾರಿಸಿದ್ದಾರೆ. ಅಂದರೆ ಪ್ರತೀ 7.82 ಇನ್ನಿಂಗ್ಸ್’ಗಳಿಗೊಂದು ಶತಕ ಬಾರಿಸಿದ್ದಾರೆ. ವಿರಾಟ್ ಕೊಹ್ಲಿ 536 ಅಂತಾರಾಷ್ಟ್ರೀಯ ಇನ್ನಿಂಗ್ಸ್’ಗಳಲ್ಲಿ 72 ಶತಕಗಳನ್ನು ಬಾರಿಸಿದ್ದು, ಪ್ರತೀ 7.44 ಇನ್ನಿಂಗ್ಸ್’ಗಳಿಗೊಂದು ಶತಕ ಸಿಡಿಸಿದ್ದಾರೆ. ಅತೀ ಹೆಚ್ಚು ಶತಕ ಸಿಡಿಸಿದವರ ಸಾಲಿನಲ್ಲಿ 3ನೇ ಸ್ಥಾನದಲ್ಲಿರುವ ರಿಕಿ ಪಾಂಟಿಂಗ್ 668 ಇನ್ನಿಂಗ್ಸ್’ಗಳಿಂದ 71 ಶತಕಗಳನ್ನು ಸಿಡಿಸಿದ್ದಾರೆ. ಪಾಂಟಿಂಗ್ 9.41 ಇನ್ನಿಂಗ್ಸ್’ಗಳಿಗೊಂದು ಶತಕ ಬಾರಿಸಿದ್ದಾರೆ. ಶ್ರೀಲಂಕಾದ ದಿಗ್ಗಜ ಕುಮಾರ ಸಂಗಕ್ಕರ 63 ಶತಗಳೊಂದಿಗೆ 4ನೇ ಸ್ಥಾನದಲ್ಲಿದ್ರೆ, ದಕ್ಷಿಣ ಆಫ್ರಿಕಾದ ದಿಗ್ಗಜ ಆಲ್ರೌಂಡರ್ ಜಾಕ್ ಕಾಲೀಸ್ 62 ಶತಕಗಳನ್ನು ಸಿಡಿಸಿ 5ನೇ ಸ್ಥಾನದಲ್ಲಿದ್ದಾರೆ.

ಇದನ್ನೂ ಓದಿ : India women beat Australia : ಆಸೀಸ್ ವನಿತೆಯರ ಗರ್ವಭಂಗ.. 45 ಸಾವಿರ ಪ್ರೇಕ್ಷಕರ ಮುಂದೆ ಟೀಮ್ ಇಂಡಿಯಾಗೆ ಸೂಪರ್ ಜಯ

ಇದನ್ನೂ ಓದಿ : KL Rahul to lead Team India: ಬಾಂಗ್ಲಾದೇಶ ವಿರುದ್ಧದ ಟೆಸ್ಟ್ ಸರಣಿಯಿಂದ ರೋಹಿತ್ ಔಟ್; ಟೀಂ ಇಂಡಿಯಾಗೆ ಕೆ.ಎಲ್. ರಾಹುಲ್ ನಾಯಕ

ಇದನ್ನೂ ಓದಿ : IPL 2023 mini auction : ಅಂತರಾಷ್ಟ್ರೀಯ ಪಂದ್ಯ ಆಡಿಲ್ಲ, ಆದ್ರೂ ಐಪಿಎಲ್ ನಲ್ಲಿ ದುಬಾರಿ ಬೆಲೆಗೆ ಮಾರಾಟವಾಗ್ತಾರೆ ಈ ಆಟಗಾರರು

ಅಂತಾರಾಷ್ಟ್ರೀಯ ಕ್ರಿಕೆಟ್’ನಲ್ಲಿ ಅತೀ ಹೆಚ್ಚು ಶತಕ
ಆಟಗಾರ ಇನ್ನಿಂಗ್ಸ್ ಶತಕ ಇನ್ನಿಂಗ್ಸ್/ಶತಕ
ಸಚಿನ್ ತೆಂಡೂಲ್ಕರ್ 782 100 7.82
ವಿರಾಟ್ ಕೊಹ್ಲಿ 536 72 7.44
ರಿಕಿ ಪಾಂಟಿಂಗ್ 668 71 9.41
ಕುಮಾರ ಸಂಗಕ್ಕಾರ 666 63 10.57
ಜಾಕ್ ಕಾಲೀಸ್ 617 62 9.95

Virat Kohli better than Sachin Tendulkar : 7.44 a century per match, King Kohli is better than Sachin Tendulkar in century hunting.

RELATED ARTICLES

Most Popular