PM Kisan Update : ಪಿಎಂ ಕಿಸಾನ್ ಯೋಜನೆಯಿಂದ 6000 ರೂ. ಜಮೆ ಆಗಬೇಕಾ : ಹಾಗಾದ್ರೆ ತಕ್ಷಣವೇ ಈ ಕೆಲಸ ಮಾಡಿ

ನವದೆಹಲಿ : ದೇಶದ ಎಲ್ಲಾ ಸಣ್ಣ ಮತ್ತು ಅತಿ ಸಣ್ಣ ರೈತರ ವ್ಯವಸಾಯಕ್ಕೆ ಸಹಾಯವಾಗಲೆಂದು ಕೇಂದ್ರ ಸರಕಾರ ಪಿಎಂ ಕಿಸಾನ್‌ ಸಮ್ಮಾನ್‌ ನಿಧಿ (PM Kisan Update) ಯೋಜನೆಯನ್ನು ಜಾರಿಗೊಳಿಸಿದೆ. ಇದರಲ್ಲಿ ಕೇಂದ್ರ ಸರಕಾರವು ವರ್ಷಕ್ಕೆ ಆರು ಸಾವಿರ ರೂ ದೇಶದ ರೈತರ ವ್ಯವಸಾಯಕ್ಕೆ ಆರ್ಥಿಕ ನೆರವು ಒದಗಿಸುವುದು ಈ ಯೋಜನೆಯ ಉದ್ದೇಶವಾಗಿದೆ. ಈ ಯೋಜನೆ ಅಡಿಯಲ್ಲಿ ರೈತ ಮಿತ್ರರ ಬ್ಯಾಂಕ್‌ ಖಾತೆಗೆ ನೇರವಾಗಿ ಬರುತ್ತದೆ.

ದೇಶದಲ್ಲಿ ಇರುವ ಇನ್ನೂ ಅನೇಕ ರೈತರು ಪಿಎಂ ಕಿಸಾನ್‌ ಯೋಜನೆ ಅಡಿಯಲ್ಲಿ ವಾರ್ಷಿಕ ರೂ. 6 ಸಾವಿರ ಆರ್ಥಿಕ ಸಹಾಯದ ಪ್ರಯೋಜನವನ್ನು ಪಡೆಯುತ್ತಿಲ್ಲ. ಅಂತಹ ರೈತ ಮಿತ್ರರು ಈ ಯೋಜನೆಯ ಲಾಭವನ್ನು ಪಡೆಯಲು ಪಿಎಂ ಕಿಸಾನ್‌ ಯೋಜನೆ ಅಡಿಯಲ್ಲಿ ತಮ್ಮನ್ನು ಕೂಡಲೇ ನೋಂದಾಯಿಸಿಕೊಳ್ಳಬೇಕಾಗಿದೆ. ಇದಕ್ಕಾಗಿ ರೈತರು ತಮ್ಮ ನೊಂದಾವಣಿಯನ್ನು ಈ ಯೋಜನೆಯ ಅಧಿಕೃತ ವೆಬ್‌ಸೈಟ್‌ ಆದ https://pmkisan.gov.in/ಗೆ ಲಾಗ್‌ಇನ್‌ ಆಗುವ ಮೂಲಕ ನೊಂದಾವಣಿ ಮಾಡಿಕೊಳ್ಳಬೇಕಾಗಿದೆ.

ಪ್ರಧಾನಮಂತ್ರಿ ಕಿಸಾನ್‌ ಯೋಜನೆ ಅಡಿಯಲ್ಲಿ ದೇಶದಾದ್ಯಂತ ಎಲ್ಲಾ ಅರ್ಹ ರೈತ ಕುಟುಂಬಗಳಿಗೆ ಪ್ರತಿ ನಾಲ್ಕು ತಿಂಗಳಿಗೊಮ್ಮೆ ಎರಡು ಸಾವಿರ ರೂಪಾಯಿಗಳ ಮೂರು ಸಮಾನ ಕಂತುಗಳಲ್ಲಿ ವರ್ಷಕ್ಕೆ ಆರು ಸಾವಿರ ರೂಪಾಯಿಗಳ ಆರ್ಥಿಕ ಸಹಾಯವನ್ನು ನೀಡಲಾಗುತ್ತಿದೆ. ಈ ಯೋಜನೆ ಅಡಿಯಲ್ಲಿ ಕುಟುಂಬದಲ್ಲಿ ಗಂಡ, ಹೆಂಡತಿ ಮತ್ತು ಅಪ್ರಾಪ್ತ ಮಕ್ಕಳು ಆರ್ಥಿಕ ನೆರವು ಪಡೆಯಬಹುದಾಗಿದೆ.

ಪಿಎಂ ಕಿಸಾನ್‌ ಯೋಜನೆಗೆ ಅರ್ಹತೆ ವಿವರ :

  • ಈ ಯೋಜನೆ ಅಡಿಯಲ್ಲಿ ಕೃಷಿಯೋಗ್ಯ ಭೂಮಿ ಹೊಂದಿರುವ ಭೂಹಿಡುವಳಿದಾರ ರೈತ ಕುಟುಂಬಗಳು ತಮ್ಮ ಹೆಸರಿನಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ.
  • ಈ ಯೋಜನೆಗೆ ನಗರ ಮತ್ತು ಗ್ರಾಮೀನ ಪ್ರದೇಶದ ರೈತು ಅರ್ಹರಾಗುತ್ತಾರೆ.
  • ಈ ಯೋಜನೆ ಅಡಿಯಲ್ಲಿ ಸಣ್ಣ ಮತ್ತು ಅತಿ ಸಣ್ಣ ರೈತು ಕುಟುಂಬಗಳು ಅರ್ಹಾರಾಗುತ್ತಾರೆ.

ಇದನ್ನೂ ಓದಿ : PNB Account Holders : ಪಂಜಾಬ್ ನ್ಯಾಷನಲ್ ಬ್ಯಾಂಕ್ ಗ್ರಾಹಕರ ಗಮನಕ್ಕೆ : ಕೂಡಲೇ KYC ಅಪ್ಡೇಟ್‌ ಮಾಡಿ

ಇದನ್ನೂ ಓದಿ : Bank Saving Account :ಈ ಬ್ಯಾಂಕ್‌ ಉಳಿತಾಯ ಖಾತೆ ಮೇಲೆ ಗ್ರಾಹಕರಿಗೆ ಶೇ.7.5ರಷ್ಟು ಬಡ್ಡಿ ಹೆಚ್ಚಳ

ಇದನ್ನೂ ಓದಿ : Last Day To Link PAN With Aadhaar | ಏ.1ರ ಒಳಗೆ ಪಾನ್‌ – ಆಧಾರ್‌ ಲಿಂಕ್‌ ಮಾಡದಿದ್ದರೆ ಪಾನ್‌ ನಿಷ್ಕ್ರಿಯ : UIDAI ಹೊಸ ಆದೇಶ

ಪಿಎಂ ಕಿಸಾನ್‌ ಯೋಜನೆಗೆ ಅನರ್ಹ ಯಾರು ?

  • ಸಾಂಸ್ಥಿಕ ಜಮೀನುದಾರ ಈ ಯೋಜನೆಗೆ ಸೇರ್ಪಡೆಗೊಳ್ಳುವುದಿಲ್ಲ.
  • ಈ ಯೋಜನೆಗೆ ರಾಜ್ಯ ಅಥವಾ ಕೇಂದ್ರ ಸರಕಾರ ಹಾಗೂ ಸಾರ್ವಜನಿಕ ವಲಯದ ಉದ್ಯಮಗಳು ಮತ್ತು ಸರಕಾರಿ ಸ್ವಾಯುತ್ತ ಸಂಸ್ಥೆಗಳ ಪ್ರಸ್ತುತ ಅಥವಾ ನಿವೃತ್ತ ಅಧಿಕಾರಿಗಳು ಮತ್ತು ನೌಕರರು ಅನರ್ಹರಾಗಿರುತ್ತಾರೆ.
  • ಈ ಯೋಜನೆಗೆ ಉನ್ನತ ಆರ್ಥಿಕ ಸ್ಥಿತಿಯ ಫಲಾನುಭವಿಗಳು ಅರ್ಹರಾಗಿರುವುದಿಲ್ಲ.
  • ಈ ಯೋಜನೆಗೆ ಆದಾಯ ತೆರಿಗೆ ಪಾವತಿಸುವವರು ಅರ್ಹರಾಗಿರುವುದಿಲ್ಲ.
  • ಸಾಂವಿಧಾನಿಕ ಹುದ್ದೆಗಳನ್ನು ಹೊಂದಿರುವ ರೈತರು ಈ ಯೋಜನೆಗೆ ಅರ್ಹರಾಗಿರುವುದಿಲ್ಲ.
  • ವೈದ್ಯರು, ಎಂಜಿನಿಯರ್‌ಗಳು ಹಾಗೂ ವಕೀಲರು ಈ ಯೋಜನೆಗೆ ಅನರ್ಹರಾಗಿರುತ್ತಾರೆ.
  • ಹತ್ತು ಸಾವಿರಕ್ಕಿಂತ ಹೆಚ್ಚಿನ ಪಿಂಚಣಿ ಹೊಂದಿರುವ ನಿವೃತ್ತ ಪಿಂಚಣಿದಾರರು ಅರ್ಹರಾಗಿರುವುದಿಲ್ಲ.

PM Kisan Update : 6000 Rs from PM Kisan scheme. Need to deposit : If so then do this immediately

Comments are closed.