ಮಥುರಾ: ಟೀಮ್ ಇಂಡಿಯಾದ ರನ್ ಮಷಿನ್ ವಿರಾಟ್ ಕೊಹ್ಲಿ (Virat Kohli)ಕ್ರಿಕೆಟ್’ನಿಂದ ಸಣ್ಣ ಬಿಡುವು ಪಡೆದಿದ್ದು, ಪತ್ನಿ ಮತ್ತು ಪುತ್ರಿಯೊಂದಿಗೆ ಉತ್ತರ ಪ್ರದೇಶದ ಮಥುರಾದಲ್ಲಿರುವ ಬಾಬಾ ನಯೀಮ್ ಆಶ್ರಮಕ್ಕೆ ಭೇಟಿ (Virat Kohli in Baba ashram) ನೀಡಿದ್ದಾರೆ. ವಿರಾಟ್ ಕೊಹ್ಲಿ, ಪತ್ನಿ ಅನುಷ್ಕಾ ಶರ್ಮಾ (Virat Kohli’s wife Anushka Sharma )ಮತ್ತು ಪುತ್ರಿ ವಾಮಿಕಾ ಕೊಹ್ಲಿ (Virat Kohli’s daughter Vamika Kohli) ಮಥುರಾದ ಬಾಬಾ ನಯೀಮ್ ಆಶ್ರಮದಲ್ಲಿರುವ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಬಾಬಾ ನಯೀಮ್ ಆಶ್ರಮಕ್ಕೆ ಭೇಟಿ ಕೊಟ್ಟಿರುವ ಕಿಂಗ್ ಕೊಹ್ಲಿ ವೃಂದಾವನ ಧಾಮದಲ್ಲಿ ರಮಾನಂದ ಬಾಬಾ ಅವರ ಆಶೀರ್ವಾದ ಪಡೆದಿದ್ದಾರೆ. ಕುಟುಂಬದ ಜೊತೆ ಬುಧವಾರವೇ ವೃಂದಾವನ ಧಾಮಕ್ಕೆ ಬಂದಿದ್ದ ವಿರಾಟ್ ಕೊಹ್ಲಿ ಅಲ್ಲಿ ಬಡವರಿಗೆ ಬಟ್ಟೆ ದಾನ ಮಾಡಿದ್ದಾರೆ. ನಂತರ ಕೊಹ್ಲಿ ಮತ್ತು ಅನುಷ್ಕಾ ವೃಂದಾವನ ಧಾಮದಲ್ಲಿ ಕುಳಿತು ಒಂದು ಗಂಟೆ ಕಾಲ ಧ್ಯಾನ ಮಾಡಿದ್ದಾರೆ. ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ ಇಬ್ಬರೂ ಬಾಬಾ ನಯೀಮ್ ಕರೋಲಿ ಅವರ ದೊಡ್ಡ ಭಕ್ತರು. ಕಳೆದ ವರ್ಷದ ನವೆಂಬರ್’ನಲ್ಲಿ ಕೊಹ್ಲಿ ಪಂಪತಿ ಉತ್ತರಾಖಂಡ್’ನಲ್ಲಿರುವ ಬಾಬಾ ನಯೀಮ್ ಆಶ್ರಮಕ್ಕೆ ಭೇಟಿ ಕೊಟ್ಟಿದ್ದರು.
Most beautiful video on internet today of virat kohli family pic.twitter.com/YngwtazJ0r
— leishaa ✨ (@katyxkohli17) January 5, 2023
Nice to see Indian cricket team captain @imVkohli and actress @AnushkaSharma seeking blessings from Pujya Premnanand Baba at Vrindavan Dham. ❤️
— सृष्टि (@ShrishtySays) January 5, 2023
Radhe Radhe 🙏 pic.twitter.com/p70i5qcrzF
Virat Kohli with fans at Vrindavan, Mathura. pic.twitter.com/eVqotRvf4Y
— Johns. (@CricCrazyJohns) January 5, 2023
34 ವರ್ಷದ ವಿರಾಟ್ ಕೊಹ್ಲಿ ಸದ್ಯ ನಡೆಯುತ್ತಿರುವ ಪ್ರವಾಸಿ ಶ್ರೀಲಂಕಾ ವಿರುದ್ಧದ ಟಿ20 ಸರಣಿಯಿಂದ ಹೊರಗುಳಿದಿದ್ದಾರೆ. ಲಂಕಾ ವಿರುದ್ಧದ ಟಿ20 ಸರಣಿಗೆ ವಿರಾಟ್ ಕೊಹ್ಲಿ ಜೊತೆ ರೋಹಿತ್ ಶರ್ಮಾ ಮತ್ತು ಕೆ.ಎಲ್ ರಾಹುಲ್ ಅವರಿಗೂ ವಿಶ್ರಾಂತಿ ನೀಡಲಾಗಿದೆ.ರನ್ ಮಷಿನ್ ವಿರಾಟ್ ಕೊಹ್ಲಿ ಹೊಸ ವರ್ಷದ ತಮ್ಮ ಕ್ರಿಕೆಟ್ ಅಭಿಯಾನವನ್ನು ಶ್ರೀಲಂಕಾ ವಿರುದ್ಧದ ಏಕದಿನ ಸರಣಿಯೊಂದಿಗೆ ಆರಂಭಿಸಲಿದ್ದಾರೆ.
ಇದನ್ನೂ ಓದಿ : Hardik Pandya Amit Shah: ಅಮಿತ್ ಶಾ ಜೊತೆ ಫೋಟೋ, ಸುಳ್ಳು ಹೇಳಿ ಸಿಕ್ಕಿ ಬಿದ್ದ ಚಾಲಾಕಿ ಪಾಂಡ್ಯ
ಇದನ್ನೂ ಓದಿ : Delhi Capital new Captain: ಕನ್ನಡಿಗ ಮನೀಶ್ ಪಾಂಡೆಗೆ ಒಲಿಯುತ್ತಾ ಡೆಲ್ಲಿ ಕ್ಯಾಪ್ಟನ್ ಪಟ್ಟ? ಈ ಮೂವರಲ್ಲಿ ಯಾರು ಹೊಸ ನಾಯಕ?
ಇದನ್ನೂ ಓದಿ : Ranji Karnataka : V3 ಸ್ಟಾರ್ಸ್ ದಾಳಿಗೆ ಛತ್ತೀಸ್‌ಗಢ ಚಿತ್, ಕ್ಯಾಪ್ಟನ್ ಮಯಾಂಕ್ ಶತಕದ ಅಬ್ಬರ
ಶ್ರೀಲಂಕಾ ವಿರುದ್ಧದ 3 ಪಂದ್ಯಗಳ ಏಕದಿನ ಸರಣಿಗೆ ಕೊಹ್ಲಿ ಟೀಮ್ ಇಂಡಿಯಾಗೆ ಮರಳಲಿದ್ದು, ಸರಣಿಯ ಮೊದಲ ಪಂದ್ಯ ಮಂಗಳವಾರ (ಜನವರಿ 10) ಅಸ್ಸಾಂನ ಗುವಾಹಟಿಯಲ್ಲಿ ನಡೆಯಲಿದೆ. ನಾಯಕ ರೋಹಿತ್ ಶರ್ಮಾ ಮತ್ತು ಕನ್ನಡಿಗ ಕೆ.ಎಲ್ ರಾಹುಲ್ ಕೂಡ ಇದೇ ಸರಣಿಯ ಮೂಲಕ ಟೀಮ್ ಇಂಡಿಯಾಗೆ ಕಂಬ್ಯಾಕ್ ಮಾಡಲಿದ್ದಾರೆ.
Virat Kohli in Baba ashram : King Kohli in Mathura Vrindavan Dham; Virat blessed by Baba with wife, daughter