Kohli Parnel : 2008 ಜೂನಿಯರ್ ವಿಶ್ವಕಪ್‌ನಲ್ಲಿ ಎದುರಾಳಿ ನಾಯಕರು, ಆರ್‌ಸಿಬಿಯಲ್ಲಿ ಟೀಮ್ ಮೇಟ್ಸ್

ಬೆಂಗಳೂರು : ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದಲ್ಲೊಂದು ಅಪೂರ್ವ ಸಂಗಮ. ಇದು 15 ವರ್ಷಗಳ ಚಾಲೆಂಜ್ ಕೂಡ ಹೌದು. ಕಿಂಗ್, ರನ್ ಮಷಿನ್ ಖ್ಯಾತಿಯ (Kohli Parnel) ವಿರಾಟ್ ಕೊಹ್ಲಿ (Virat Kohli) ಸದ್ಯ ರಾಯಲ್ ಚಾಲೆಂಜರ್ಸ್ ಬೆಂಗಳೂರು (Royal Challengers Bangalore) ತಂಡದ ಹಂಗಾಮಿ ನಾಯಕ. ಫಾಫ್ ಡುಪ್ಲೆಸಿಸ್ ಸಂಪೂರ್ಣ ಫಿಟ್ ಇಲ್ಲದ ಕಾರಣ ಟೂರ್ನಿಯ ಮಧ್ಯದಲ್ಲೇ ಕೊಹ್ಲಿ ಆರ್’ಸಿಬಿ ನಾಯಕತ್ವ (Virat Kohli‌ – Wayne Parnell) ವಹಿಸಿದ್ದಾರೆ. ಕೊಹ್ಲಿ ನಾಯಕತ್ವದಲ್ಲಿ ಆಡಿದ 3 ಪಂದ್ಯದಳಲ್ಲಿ ಚಾಲೆಂಜರ್ಸ್ ಪಡೆ ಎರಡರಲ್ಲಿ ಗೆದ್ದು ಒಂದು ಸೋಲು ಕಂಡಿದೆ.

ದಕ್ಷಿಣ ಆಫ್ರಿಕಾದ ಎಡಗೈ ಮಧ್ಯಮ ವೇಗದ ಬೌಲರ್ ವೇನ್ ಪಾರ್ನೆಲ್ (Wayne Parnell) ಕೂಡ ಈ ಬಾರಿ ಆರ್’ಸಿಬಿ ಪರ ಆಡುತ್ತಿದ್ದಾರೆ. ಇಂಗ್ಲೆಂಡ್’ನ ಎಡಗೈ ವೇಗಿ ರೀಸೀ ಟೊಪ್ಲೆ ಮೊದಲ ಪಂದ್ಯದಲ್ಲೇ ಗಾಯಗೊಂಡಿದ್ದ ಕಾರಣ, ಅವರ ಬದಲು ವೇನ್ ಪಾರ್ನೆಲ್ ಆರ್’ಸಿಬಿ ಪಾಳೆಯ ಸೇರಿಕೊಂಡಿದ್ದಾರೆ.

ವೇನ್ ಪಾರ್ನೆಲ್ ಮತ್ತು ವಿರಾಟ್ ಕೊಹ್ಲಿ ಅವರದ್ದು 15 ವರ್ಷಗಳ ನಂತರ ಅಪೂರ್ವ ಸಂಗಮ. 2008ರ ಐಸಿಸಿ ಅಂಡರ್-19 ವಿಶ್ವಕಪ್ ಫೈನಲ್’ನಲ್ಲಿ ಕೊಹ್ಲಿ ಮತ್ತು ಪಾರ್ನೆಲ್ ಮುಖಾಮುಖಿಯಾಗಿದ್ದರು. ಕೊಹ್ಲಿ ಭಾರತ ತಂಡದ ನಾಯಕತ್ವ ವಹಿಸಿದ್ದರೆ, ಪಾರ್ನೆಲ್ ದಕ್ಷಿಣ ಆಫ್ರಿಕಾ ತಂಡದ ನಾಯಕರಾಗಿದ್ದರು. ಮಲೇಷ್ಯಾದ ಕೌಲಾಲಂಪುರದಲ್ಲಿ ನಡೆದಿದ್ದ ಅಂಡರ್-19 ವಿಶ್ವಕಪ್ ಫೈನಲ್ ಪಂದ್ಯದಲ್ಲಿ ವೇನ್ ಪಾರ್ನೆಲ್ ಸಾರಥ್ಯದ ದಕ್ಷಿಣ ಆಫ್ರಿಕಾ ತಂಡವನ್ನು ರೋಚಕವಾಗಿ ಸೋಲಿಸಿದ್ದ ವಿರಾಟ್ ಕೊಹ್ಲಿ ನಾಯಕತ್ವದ ಯಂಗ್ ಇಂಡಿಯಾ, ಜ್ಯೂನಿಯರ್ ವಿಶ್ವಕಪ್ ಗೆದ್ದಿತ್ತು.

ಇದನ್ನೂ ಓದಿ : KL Rahul LSG : ರಾಹುಲ್ ಫೇಲ್ ಆದ್ರೆ ಎಲ್‌ಎಸ್‌ಜಿ ಧಮ್ ಕೇ ಧಾರ್ ಧಮಾಕ, ಐಪಿಎಲ್‌ನಲ್ಲಿ ಏನಿದು ವಿಚಿತ್ರ?

ಇದನ್ನೂ ಓದಿ : ಅಜಿಂಕ್ಯ ರಹಾನೆಗೆ ಟೀಮ್ ಇಂಡಿಯಾ ಟಿಕೆಟ್ ಕೊಡಿಸಿತು ಧೋನಿ ಜೊತೆಗಿನ ಅದೊಂದು ಫೋನ್ ಕಾಲ್

ಇದೀಗ ಈ ಇಬ್ಬರೂ ಆಟಗಾರರು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪರ ಆಡುತ್ತಿದ್ದು, ಈ ಅಪೂರ್ವ ಸಂಗಮವನ್ನು ಆರ್’ಸಿಬಿ ಫ್ರಾಂಚೈಸಿ ತನ್ನ ಸೋಷಿಯನ್ ಮೀಡಿಯಾ ಅಕೌಂಟ್’ನಲ್ಲಿ ಇಬ್ಬರ ಅಂದಿನ ಮತ್ತು ಇಂದಿನ ಫೋಟೋ ಸಮೇತ ಪೋಸ್ಟ್ ಮಾಡಿದೆ.

ಐಪಿಎಲ್-2023 ಟೂರ್ನಿಯಲ್ಲಿ 8 ಪಂದ್ಯಗಳನ್ನಾಡಿರುವ ರಾಯಲ್ ಚಾಲೆಂಜರ್ಸ್ ಪಡೆ, 4 ಗೆಲುವು ಹಾಗೂ 4 ಸೋಲುಗಳೊಂದಿಗೆ ಒಟ್ಟು 8 ಅಂಕ ಸಂಪಾದಿಸಿ, ಪಾಯಿಂಟ್ ಪಟ್ಟಿಯಲ್ಲಿ 5ನೇ ಸ್ಥಾನದಲ್ಲಿದೆ. ಮೇ ಒಂದರಂದು ಲಕ್ನೋದಲ್ಲಿ ನಡೆಯಲಿರುವ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ, ಆತಿಥೇಯ ಲಕ್ನೋ ಸೂಪರ್ ಜೈಂಟ್ಸ್ ತಂಡವನ್ನು ಎದುರಿಸಲಿದೆ.

Virat Kohli‌ – Wayne Parnell : Opposing captains in 2008 Junior World Cup, teammates at RCB

Comments are closed.