ಭಾನುವಾರ, ಜೂನ್ 15, 2025
HomeSportsCricketVirat wrote emotional lines : ಧೋನಿ ಹುಟ್ಟುಹಬ್ಬಕ್ಕೆ 3 ಸಾಲುಗಳ ಭಾವನಾತ್ಮಕ ಸಂದೇಶ ಬರೆದ...

Virat wrote emotional lines : ಧೋನಿ ಹುಟ್ಟುಹಬ್ಬಕ್ಕೆ 3 ಸಾಲುಗಳ ಭಾವನಾತ್ಮಕ ಸಂದೇಶ ಬರೆದ ಕಿಂಗ್ ಕೊಹ್ಲಿ

- Advertisement -

ಲಂಡನ್: ಜುಲೈ 7 ಭಾರತೀಯ ಕ್ರಿಕೆಟ್ ಪ್ರಿಯರಿಗೆ ವಿಶೇಷ ದಿನ. ಯಾಕಂದ್ರೆ ಅದು ಟೀಮ್ ಇಂಡಿಯಾ ಮಾಜಿ ನಾಯಕ, ಕ್ರಿಕೆಟ್ ಜಗತ್ತು ಕಂಡ ದಿಗ್ಗಜ ಕ್ಯಾಪ್ಟನ್ ಮಹೇಂದ್ರ ಸಿಂಗ್ ಧೋನಿಯವರ ಜನ್ಮದಿನ. 41ನೇ ವರ್ಷಕ್ಕೆ ಕಾಲಿಟ್ಟಿರುವ ಎಂ.ಎಸ್ ಧೋನಿ, ಲಂಡನ್”ನಲ್ಲಿ ಕುಟುಂಬ ಸದಸ್ಯರು ಮತ್ತು ಸ್ನೇಹಿತರ ಜೊತೆ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. ಎಂ.ಎಸ್ ಧೋನಿಯವರಿಗೆ ಹಾಲಿ ಮತ್ತು ಮಾಜಿ ಕ್ರಿಕೆಟಿಗರು ಸಾಮಾಜಿಕ ಜಾಲತಾಣಗಳ ಮೂಲಕ ಹುಟ್ಟುಹಬ್ಬದ ಶುಭಾಶಯ ಕೋರಿದ್ದಾರೆ. ಈ ಮಧ್ಯೆ ಭಾರತ ತಂಡದ ಮಾಜಿ ನಾಯಕ ವಿರಾಟ್ ಕೊಹ್ಲಿ, ಧೋನಿಯವರ ಬಗ್ಗೆ(Virat wrote emotional lines on MSD birthday) ಬರೆದಿರುವ ಮೂರು ಸಾಲುಗಳು ಗಮನ ಸೆಳೆಯುತ್ತಿವೆ.

“ನೀವು ಸಾಟಿಯಿಲ್ಲದ ನಾಯಕ. ಭಾರತೀಯ ಕ್ರಿಕೆಟ್”ಗೆ ನೀವು ಎಲ್ಲವನ್ನೂ ಮಾಡಿದ್ದೀರಿ, ಅದಕ್ಕಾಗಿ ಧನ್ಯವಾದಗಳು. ನೀವು ನನ್ನ ಪಾಲಿಗೆ ಹಿರಿಯಣ್ಣ. ನಿಮ್ಮ ಬಗ್ಗೆ ಪ್ರೀತಿ ಮತ್ತು ಗೌರವ ಯಾವತ್ತೂ ಇರುತ್ತದೆ. ಹುಟ್ಟುಹಬ್ಬದ ಶುಭಾಶಯಗಳು ಕ್ಯಾಪ್ಟನ್”

  • ವಿರಾಟ್ ಕೊಹ್ಲಿ, ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ.

ವಿರಾಟ್ ಕೊಹ್ಲಿ ಇವತ್ತು ಕ್ರಿಕೆಟ್ ಜಗತ್ತಿನ ದಿಗ್ಗಜ ಆಟಗಾರನಾಗಿ ಬೆಳೆದು ನಿಂತಿದ್ದಾರೆ ಅಂದ್ರೆ ಅದಕ್ಕೆ ಕಾರಣ ಎಂ.ಎಸ್ ಧೋನಿ. ಕೊಹ್ಲಿಯ ಕ್ರಿಕೆಟ್ ಬದುಕಿಗೆ ಬೆನ್ನೆಲುಬಾಗಿ ನಿಂತಿದ್ದೇ ಧೋನಿ. ನಾಯಕನಾಗಿ ಧೋನಿ ನೀಡಿದ ಬೆಂಬಲವೇ ಕೊಹ್ಲಿ ಯಶಸ್ಸಿಗೆ ಕಾರಣ ಎಂಬುದು ಎಲ್ಲರಿಗೂ ಗೊತ್ತಿರುವ ಸಂಗತಿ.

ವೃತ್ತಿಜೀವನದ ಆರಂಭದ ದಿನಗಳಲ್ಲಿ ಸತತ ವೈಫಲ್ಯ ಎದುರಿಸಿದ್ದ ವಿರಾಟ್ ಕೊಹ್ಲಿಗೆ ನಾಯಕ ಧೋನಿಯ ಕೃಪಾಕಟಾಕ್ಷ ಇದ್ದಿದ್ದರಿಂದಲೇ ಕೊಹ್ಲಿ ಟೀಮ್ ಇಂಡಿಯಾದಲ್ಲಿ ಭದ್ರವಾಗಿ ಬೇರೂರಿದ್ದು. ಇದನ್ನು ಸ್ವತಃ ವಿರಾಟ್ ಕೊಹ್ಲಿ ಅವರೇ ಸಾಕಷ್ಟು ಬಾರಿ ಹೇಳಿಕೊಂಡಿದ್ದಾರೆ. ಕೊಹ್ಲಿಗೆ ಟೀಮ್ ಇಂಡಿಯಾದಲ್ಲಿ ಗಾಡ್ ಫಾದರ್ ಆಗಿದ್ದದ್ದೇ ಧೋನಿ ಅಂದ್ರೂ ಅತಿಶಯೋಕ್ತಿಯಲ್ಲ. 2020ರ ಆಗಸ್ಟ್ 15ರಂದು ಎಂ.ಎಸ್ ಧೋನಿ ಕ್ರಿಕೆಟ್’ಗೆ ವಿದಾಯ ಹೇಳಿದಾಗಲೂ ಧೋನಿ ಬಗ್ಗೆ ವಿರಾಟ್ ಕೊಹ್ಲಿ ಭಾವನಾತ್ಮಕ ಮಾತುಗಳನ್ನಾಡಿದ್ದರು. “ನೀವು ಎಂದೆಂದಿಗೂ ನನ್ನ ಪಾಲಿನ ನಾಯಕ” ಎಂದಿದ್ದರು ಕೊಹ್ಲಿ.

ಇದನ್ನೂ ಓದಿ : ವಿಂಬಲ್ಡನ್ ಟೆನಿಸ್ ಕೋರ್ಟ್‌ನಲ್ಲಿ ಬರ್ತ್ ಡೇ ಬಾಯ್ ಮಹೇಂದ್ರ ಸಿಂಗ್ ಧೋನಿ

ಇದನ್ನೂ ಓದಿ : ಬ್ಯಾಟಿಂಗ್ ದಿಗ್ಗಜನ ಮಹಾಪತನ, 6 ವರ್ಷಗಳಲ್ಲಿ ಮೊದಲ ಬಾರಿ ಟಾಪ್-10ನಿಂದ ವಿರಾಟ್ ಕೊಹ್ಲಿ ಔಟ್ !

Virat wrote emotional lines on MSD birthday

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular