Shivamogga Harsha family : ಗೃಹ ಸಚಿವರ ವಿರುದ್ಧ ಹರ್ಷ ಕುಟುಂಬಸ್ಥರ ಆಕ್ರೋಶ : ವೈರಲ್ ಆಯ್ತು ವಿಡಿಯೋ

ಶಿವಮೊಗ್ಗ : ಒಂದೆಡೆ ಸಾಲು ಸಾಲು ಹಿಂದೂ ಕಾರ್ಯಕರ್ತರ ಹತ್ಯೆ ಜೋರಾಗಿದ್ದು ದೇಶದಾದ್ಯಂತ ಆಕ್ರೋಶ ವ್ಯಕ್ತವಾಗುತ್ತಿದ್ದರೇ, ಇತ್ತ ರಾಜ್ಯವನ್ನೇ ಬೆಚ್ಚಿ ಬೀಳಿಸಿದ್ದ ಹಿಂದೂಪರ ಕಾರ್ಯಕರ್ತ ಹರ್ಷ ಕೊಲೆ (Shivamogga Harsha family)ಪ್ರಕರಣದ ಸಂತ್ರಸ್ಥ ಹರ್ಷನ ಕುಟುಂಬಸ್ಥರು ತಮಗೆ ನ್ಯಾಯ ಸಿಗ್ತಿಲ್ಲ ಎಂದು ಮಾಧ್ಯಮಗಳ ಎದುರೇ ಆಕ್ರೋಶ ವ್ಯಕ್ತಪಡಿಸಿದ ಘಟನೆ ನಡೆದಿದೆ. ಫೆಬ್ರವರಿ 20 ರಂದು ಶಿವಮೊಗ್ಗದ ಭಾರತಿ ನಗರ ನಿವಾಸಿ ಹರ್ಷನ ಹತ್ಯೆ ನಡೆದಿತ್ತು. ಈ ಕೊಲೆ ಪ್ರಕರಣ ರಾಜ್ಯದಾದ್ಯಂತ ತೀವ್ರ ಕೋಲಾಹಲಕ್ಕೆ ಕಾರಣವಾಗಿತ್ತು. ಬಿಜೆಪಿ ಹಿರಿಯ ನಾಯಕ ಈಶ್ವರಪ್ಪ ಸೇರಿದಂತೆ ಹಲವು ನಾಯಕರ ಮೇಲೆ ಈ ಹತ್ಯೆ ಆರೋಪಗಳು ಕೇಳಿಬಂದಿದ್ದವು.

ಕೊನೆಯಲ್ಲಿ ಈ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಸ್ಲಿಂ ಸಂಘಟನೆಯೊಂದಕ್ಕೆ ಸೇರಿದ ಹಲವರನ್ನು ಬಂಧಿಸಲಾಗಿದೆ. ಪ್ರಸ್ತುತ ಈ ಪ್ರಕರಣ ಎನ್ ಐ ಎ ತನಿಖೆಯಲ್ಲಿದ್ದು, ಎನ್ ಐಎ ಅಧಿಕಾರಿಗಳು ಇತ್ತೀಚಿಗಷ್ಟೇ ಶಿವಮೊಗ್ಗ ಕ್ಕೆ ಭೇಟಿ ನೀಡಿ ತನಿಖೆ ನಡೆಸಿದ್ದಾರೆ. ಈ ಮಧ್ಯೆ ಸಂತ್ರಸ್ಥ ಯುವಕ ಹರ್ಷನ ಸಹೋದರಿ ಇತ್ತೀಚಿಗೆ ಗೃಹ ಸಚಿವರ ಭೇಟಿಗೆ ಗೃಹ ಸಚಿವರ ಕಚೇರಿಗೆ ಆಗಮಿಸಿದ್ದರು ಎನ್ನಲಾಗಿದೆ. ಈ ವೇಳೆ ಗೃಹ ಸಚಿವರು ತಮ್ಮ ಕೆಲಸದಲ್ಲಿ ನಿರತರಾಗಿದ್ದು, ಹರ್ಷ ಸಹೋದರಿಯೊಂದಿಗೆ ಸರಿಯಾಗಿ‌ ಮಾತನಾಡಿಲ್ಲ ಎನ್ನಲಾಗಿದೆ.

ಇದರಿಂದ ನೊಂದ ಹರ್ಷ ಸಹೋದರಿ ಆಶ್ವಿನಿ ಗೃಹ ಸಚಿವರ ಕಚೇರಿಯಿಂದ ಆಕ್ರೋಶ ಭರಿತರಾಗಿ ಹೊರಬಂದಿದ್ದಾರೆ. ಕೆಲ ಸಂಘಟನೆಗಳ ಸದಸ್ಯರೊಂದಿಗೆ ಅಶ್ವಿನಿ ಗೃಹ ಸಚಿವರ ಭೇಟಿಗೆ ತೆರಳಿದ್ದರು. ಆದರೆ ಅಶ್ವಿನಿ ಯಾವ ವಿಚಾರ ಮಾತನಾಡಲು ತೆರಳಿದ್ದರು ಎಂಬ ಸಂಗತಿ ಬಯಲಾಗಿಲ್ಲ. ಗೃಹ ಸಚಿವರು ಸೂಕ್ತವಾಗಿ ಸ್ಪಂದಿಸಲಿಲ್ಲ ಎಂದು ಅಶ್ವಿನಿ ಆರೋಪಿಸಿದ್ದು, ಗೃಹ ಸಚಿವರ ಗೃಹ ಕಚೇರಿಯ ಹೊರಗೆ ಹೈಡ್ರಾಮಾ ಸೃಷ್ಟಿಸಿದ್ದಾರೆ. ಎಲ್ಲೂ ನ್ಯಾಯ ಸಿಗಲ್ಲ ಅನ್ನೋದು ನಮಗೆ ಈಗ ಗೊತ್ತಾಯಿತು. ನ್ಯಾಯ ಕೇಳೋಕೆ ಹೋದರೇ ಗೃಹ ಸಚಿವರು ನಮಗೆ ಬೈಯ್ದು ಕಳಿಸಿದ್ದಾರೆ.

ಗೃಹ ಸಚಿವರು ಹೀಗೆ ಮಾಡಿದ್ರೇ ನಾವು ಎಲ್ಲಿಗೆ ಹೋಗಬೇಕು ಎಂದಿದ್ದಾರೆ. ಈ ವಿಡಿಯೋ ಈಗ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ. ಮೀಡಿಯಾಗಳ ಮಾಹಿತಿ ಪ್ರಕಾರ ಇತ್ತೀಚಿಗಷ್ಟೇ ಹರ್ಷ ಕೊಲೆ ಪ್ರಕರಣದ ಆರೋಪಿಗಳು ಜೈಲಿನಿಂದ ಕುಟುಂಬಸ್ಥರ ಜೊತೆ ಪೋನ್ ನಲ್ಲಿ ಮಾತನಾಡಿದ ಸಂಗತಿ ವೈರಲ್ ಆಗಿತ್ತು. ಈ ವಿಚಾರಕ್ಕೆ ಸಂಬಂಧಿಸಿದಂತೆ ಅಶ್ವಿನಿಯವರು ಗೃಹ ಸಚಿವರ ಜೊತೆ ಮಾತನಾಡಲು ತೆರಳಿದ್ದರು ಎನ್ನಲಾಗಿದೆ. ಈ ವಿಚಾರ ಬೆಳಕಿಗೆ ಬಂದಾಗಲೂ ಹರ್ಷನ ಕುಟುಂಬಸ್ಥರು ಪೊಲೀಸ್ ಹಾಗೂ ಜೈಲು ವ್ಯವಸ್ಥೆಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು.

ಇದನ್ನೂ ಓದಿ : MS Dhoni Turns 41: ಅಭಿಮಾನಿಗಳಿಂದ ನಿರ್ಮಾಣವಾಯಿತು 41 ಅಡಿಯ ಧೋನಿ ಕಟೌಟ್‌

ಇದನ್ನೂ ಓದಿ : ಲಂಡನ್‌ನಲ್ಲಿ ದಾದಾ 50ನೇ ಹುಟ್ಟುಹಬ್ಬದ “ಪ್ರೀ ಬರ್ತ್’ಡೇ ಸೆಲೆಬ್ರೇಷನ್”.. ಗಂಗೂಲಿಗೆ ಕೇಕ್ ತಿನ್ನಿಸಿದ ತೆಂಡೂಲ್ಕರ್

Outrage of Shivamogga Harsha family against Home Minister Araga Jnanendra : Video viral

Comments are closed.