ಮಂಗಳವಾರ, ಏಪ್ರಿಲ್ 29, 2025
HomeSportsCricketWill Jacks out : ಐಪಿಎಲ್ ಆರಂಭಕ್ಕೂ ಮೊದಲೇ ರಾಯಲ್ ಚಾಲೆಂಜರ್ಸ್‌ಗೆ ಶಾಕ್, ಸ್ಟಾರ್ ಆಟಗಾರ...

Will Jacks out : ಐಪಿಎಲ್ ಆರಂಭಕ್ಕೂ ಮೊದಲೇ ರಾಯಲ್ ಚಾಲೆಂಜರ್ಸ್‌ಗೆ ಶಾಕ್, ಸ್ಟಾರ್ ಆಟಗಾರ ಟೂರ್ನಿಯಿಂದಲೇ ಔಟ್

- Advertisement -

ಬೆಂಗಳೂರು : ಮಿಲಿಯನ್ ಡಾಲರ್ ಟೂರ್ನಿ ಐಪಿಎಲ್ ಆರಂಭಕ್ಕಿನ್ನು ಕೇವಲ ಎರಡು ವಾರಗಳಷ್ಟೇ ಬಾಕಿ. ಐಪಿಎಲ್ (IPL 2023) 16ನೇ ಆವೃತ್ತಿಯ ಟೂರ್ನಿ ಮಾರ್ಚ್ 31ರಂದು ಅಹ್ಮದಾಬಾದ್‌ನಲ್ಲಿ (Will Jacks out) ಆರಂಭವಾಗಲಿದ್ದು, ಉದ್ಘಾಟನಾ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಗುಜರಾತ್ ಟೈಟನ್ಸ್ ಮತ್ತು 4 ಬಾರಿಯ ಚಾಂಪಿಯನ್ಸ್ ಚೆನ್ನೈ ಸೂಪರ್ ಕಿಂಗ್ಸ್ ತಂಡಗಳು ಮುಖಾಮುಖಿಯಾಗಲಿವೆ.

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಏಪ್ರಿಲ್ 2ರಂದು ಬೆಂಗಳೂರಿನ ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿರುವ ತನ್ನ ಮೊದಲ ಪಂದ್ಯದಲ್ಲಿ 5 ಬಾರಿಯ ಚಾಂಪಿಯನ್ಸ್ ಮುಂಬೈ ಇಂಡಿಯನ್ಸ್ ತಂಡವನ್ನು ಎದುರಿಸಲಿದೆ. ಆದರೆ ಐಪಿಎಲ್ ಟೂರ್ನಿ ಆರಂಭಕ್ಕೂ ಮೊದಲೇ ಆರ್‌ಸಿಬಿಗೆ ಆಘಾತ ಎದುರಾಗಿದೆ.

ಈ ಬಾರಿಯ ಐಪಿಎಲ್‌ನಲ್ಲಿ ರಾಯಲ್ ಚಾಲೆಂಜರ್ಸ್ ಪರ ಆಡಬೇಕಿದ್ದ ಇಂಗ್ಲೆಂಡ್ ಆಲ್ರೌಂಡರ್ ವಿಲ್ ಜೇಕ್ಸ್ ಗಾಯದ ಕಾರಣ ಇಡೀ ಟೂರ್ನಿಯಿಂದಲೇ ಹೊರ ಬಿದ್ದಿದ್ದಾರೆ. ವಿಲ್ ಜೇಕ್ಸ್ ಅವರನ್ನು ಆರ್‌ಸಿಬಿ ಫ್ರಾಂಚೈಸಿ 3.2 ಕೋಟಿ ಮೊತ್ತಕ್ಕೆ ಖರೀದಿಸಿತ್ತು. ಬಾಂಗ್ಲಾದೇಶ ವಿರುದ್ಧ ಮೀರ್‌ಪುರದಲ್ಲಿ ನಡೆದ ಏಕದಿನ ಸರಣಿಯ 2ನೇ ಪಂದ್ಯದ ವೇಳೆ ವಿಲ್ ಜೇಕ್ಸ್ ಸ್ನಾಯು ಸೆಳೆತಕ್ಕೊಳಗಾಗಿದ್ದರು. ಗಾಯದ ಸ್ವರೂಪ ಕೊಂಚ ಗಂಭೀರವಾಗಿರುವ ಕಾರಣ ಐಪಿಎಲ್’ನಿಂದ ಜೇಕ್ಸ್ ಹೊರಗುಳಿಯಲಿದ್ದಾರೆ.

ಇದನ್ನೂ ಓದಿ : ರಿಷಭ್ ಪಂತ್ ಅನುಪಸ್ಥಿತಿಯಲ್ಲಿ ಡೆಲ್ಲಿ ಕ್ಯಾಪಿಟಲ್ಸ್’ಗೆ ಡೇವಿಡ್ ವಾರ್ನರ್ ನಾಯಕ

ಇದನ್ನೂ ಓದಿ : Ellyse Perry : ರಾಯಲ್ ಚಾಲೆಂಜರ್ಸ್ ತಂಡ ಈ ಆಸೀಸ್ ಸ್ಟಾರ್ ಆಟಗಾರ್ತಿಯ ವಿಶೇಷ ಗುಣಕ್ಕೆ ನೀವು ಕ್ಲೀನ್ ಬೌಲ್ಡ್ ಆಗ್ತೀರಿ!

ಇದನ್ನೂ ಓದಿ : Virat Kohli RCB : ಆರ್‌ಸಿಬಿ ಆಟಗಾರ್ತಿಯರಿಗೆ ವಿರಾಟ್ ಸ್ಪೆಷಲ್ ಕ್ಲಾಸ್, ರಾಯಲ್ ಚಾಲೆಂಜರ್ಸ್‌ಗೆ ಮೊದಲ ಜಯ ತಂದ ಕಿಂಗ್ ಕೊಹ್ಲಿ

ಐಪಿಎಲ್‌ನಿಂದ ಹೊರ ಬಿದ್ದಿರುವುದು ವಿಲ್ ಜೇಕ್ಸ್ ಅವರಿಗೆ ಭಾರೀ ಆಘಾತ ತಂದಿದೆ. ಭಾರತದಲ್ಲಿ ಮೊದಲ ಬಾರಿ ಆಡುವ ಸಂಭ್ರಮದಲ್ಲಿದ್ದ ವಿಲ್ ಜೇಕ್ಸ್, ಐಪಿಎಲ್‌ನಲ್ಲಿ ಉತ್ತಮ ಪ್ರದರ್ಶನ ತೋರಿ ಭಾರತದಲ್ಲೇ ನಡೆಯುವ ಐಸಿಸಿ ಏಕದಿನ ವಿಶ್ವಕಪ್‌ನಲ್ಲಿ ಆಡಲಿರುವ ಇಂಗ್ಲೆಂಡ್ ತಂಡದಲ್ಲಿ ಸ್ಥಾನ ಪಡೆಯುವ ನಿರೀಕ್ಷೆಯಲ್ಲಿದ್ದರು. ವಿಲ್ ಜೇಕ್ಸ್ ಅವರ ಬದಲು ನ್ಯೂಜಿಲೆಂಡ್ ಆಲ್ರೌಂಡರ್ ಮೈಕೆಲ್ ಬ್ರೇಸ್‌ವೆಲ್ ರಾಯಲ್ ಚಾಲೆಂಜರ್ಸ್ ತಂಡ ಸೇರುವ ಸಾಧ್ಯತೆಯಿದೆ. ಕಳೆದ ಭಾರತ ವಿರುದ್ಧದ ಏಕದಿನ ಸರಣಿಯಲ್ಲಿ ಮಿಂಚಿದ್ದ ಬ್ರೇಸ್ ವೆಲ್ ಜೊತೆ ಆರ್’ಸಿಬಿ ಫ್ರಾಂಚೈಸಿ ಸಂಪರ್ಕದಲ್ಲಿದ್ದು, ತಂಡಕ್ಕೆ ಸೇರಿಸಿಕೊಳ್ಳುವ ಇರಾದೆಯಲ್ಲಿದೆ.

Will Jacks out: Shock for Royal Challengers before the start of IPL, the star player is out of the tournament.

RELATED ARTICLES

Most Popular