Women’s Premier League final : ಮುಂಬೈ ಇಂಡಿಯನ್ಸ್ Vs ಡೆಲ್ಲಿ ಕ್ಯಾಪಿಟಲ್ಸ್, ಯಾರು ಚಾಂಪಿಯನ್ಸ್? ಇಲ್ಲಿದೆ ಫೈನಲ್ ಪಂದ್ಯದ ಕಂಪ್ಲೀಟ್ ಮಾಹಿತಿ

ಮುಂಬೈ: ಚೊಚ್ಚಲ ಆವೃತ್ತಿಯ ಮಹಿಳಾ ಪ್ರೀಮಿಯರ್ ಲೀಗ್ (Women’s Premier League final) ಫೈನಲ್ ಪಂದ್ಯ ಇಂದು (ಭಾನುವಾರ) ಮುಂಬೈನ ಬ್ರೆಬೋರ್ನ್ ಕ್ರೀಡಾಂಗಣದಲ್ಲಿ ನಡೆಯಲಿದ್ದು, ಮುಂಬೈ ಇಂಡಿಯನ್ಸ್ (Mumbai Indians Women) ಹಾಗೂ ಡೆಲ್ಲಿ ಕ್ಯಾಪಿಟಲ್ಸ್ (Dehli Capitals Women) ತಂಡಗಳು ಮುಖಾಮುಖಿಯಾಗಲಿವೆ. ಲೀಗ್ ಹಂತದಲ್ಲಿ ಆಡಿದ 8 ಪಂದ್ಯಗಳಿಂದ 6 ಗೆಲುವು ಹಾಗೂ 2 ಸೋಲುಗಳೊಂದಿಗೆ ಒಟ್ಟು 12 ಅಂಕ ಗಳಿಸಿ ಅಗ್ರಸ್ಥಾನ ಪಡೆದಿದ್ದ ಡೆಲ್ಲಿ ಕ್ಯಾಪಿಟಲ್ಸ್ ನಂ.1 ತಂಡವಾಗಿ ಫೈನಲ್’ಗೆ ಲಗ್ಗೆ ಇಟ್ಟಿತ್ತು. ಮತ್ತೊಂದೆಡೆ ಎಲಿಮಿನೇಟರ್ ಪಂದ್ಯದಲ್ಲಿ ಯು.ಪಿ ವಾರಿಯರ್ಸ್ ವಿರುದ್ಧ 72 ರನ್’ಗಳ ಭರ್ಜರಿ ಗೆಲುವು ದಾಖಲಿಸಿದ್ದ ಮುಂಬೈ ಇಂಡಿಯನ್ಸ್ ಫೈನಲ್ ತಲುಪಿದೆ.

ಲೀಗ್ ಹಂತದಲ್ಲಿ ಮುಂಬೈ ಇಂಡಿಯನ್ಸ್ ಹಾಗೂ ಡೆಲ್ಲಿ ಕ್ಯಾಪಿಟನ್ಸ್ ಎರಡು ಬಾರಿ ಮುಖಾಮುಖಿಯಾಗಿದ್ದು, ಇಬ್ಬರೂ ಒಂದೊಂದು ಪಂದ್ಯದಲ್ಲಿ ಗೆದ್ದಿದ್ದಾರೆ. ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಆಸ್ಟ್ರೇಲಿಯಾ ತಂಡದ ನಾಯಕಿ ಮೆಗ್ ಲ್ಯಾನಿಂಗ್ ಮುನ್ನಡೆಸ್ತಾ ಇದ್ರೆ, ಭಾರತ ತಂಡದ ನಾಯಕಿ ಹರ್ಮನ್ ಪ್ರೀತ್ ಕೌರ್ ಮುಂಬೈ ಇಂಡಿಯನ್ಸ್ ತಂಡದ ಸಾರಥ್ಯ ವಹಿಸಿದ್ದಾರೆ. ಅಮೋಘ ಫಾರ್ಮ್’ನಲ್ಲಿರುವ ಮೆಗ್ ಲ್ಯಾನಿಂಗ್ ಮಹಿಳಾ ಪ್ರೀಮಿಯರ್ ಲೀಗ್’ನಲ್ಲಿ ಆಡಿರುವ 8 ಪಂದ್ಯಗಳಿಂದ 310 ರನ್ ಗಳಿಸಿದ್ರೆ, ಹರ್ಮನ್ ಪ್ರೀತ್ ಕೌರ್ 9 ಪಂದ್ಯಗಳಿಂದ 244 ರನ್ ಕಲೆ ಹಾಕಿದ್ದಾರೆ.

ಸ್ಟಾರ್ ಆಟಗಾರ್ತಿಯರು (ಟಾಪ್-5)
ಡೆಲ್ಲಿ ಕ್ಯಾಪಿಟಲ್ಸ್ : ಮೆಗ್ ಲ್ಯಾನಿಂಗ್, ಶೆಫಾಲಿ ವರ್ಮಾ, ಅಲೀಸ್ ಕ್ಯಾಪ್ಸಿ, ಮರಿಜೇನ್ ಕಾಪ್, ಜೆಸ್ ಜೊನಾಸೆನ್
ಮುಂಬೈ ಇಂಡಿಯನ್ಸ್ : ಹರ್ಮನ್ ಪ್ರೀತ್ ಕೌರ್, ಹೀಲಿ ಮ್ಯಾಥ್ಯೂಸ್, ನೆಥಾಲಿ ಸಿವರ್ ಬ್ರಂಟ್, ಅಮೆಲಿಯಾ ಕರ್, ಇಸೀ ವಾಂಗ್.

Women’s Premier League final : ಮಹಿಳಾ ಪ್ರೀಮಿಯರ್ ಲೀಗ್ ಫೈನಲ್ :

ಡೆಲ್ಲಿ ಕ್ಯಾಪಿಟಲ್ಸ್ Vs ಮುಂಬೈ ಇಂಡಿಯನ್ಸ್
ಪಂದ್ಯ ಆರಂಭ: ರಾತ್ರಿ 7.30ಕ್ಕೆ
ಸ್ಥಳ: ಬ್ರೆಬೋರ್ನ್ ಕ್ರೀಡಾಂಗಣ, ಮುಂಬೈ
ನೇರ ಪ್ರಸಾರ: ಸ್ಪೋರ್ಟ್ಸ್ 18
ಲೈವ್ ಸ್ಟ್ರೀಮಿಂಗ್: ಜಿಯೊ ಸಿನಿಮಾ

ಸಂಭಾವ್ಯ ಪ್ಲೇಯಿಂಗ್ XI :
ಡೆಲ್ಲಿ ಕ್ಯಾಪಿಟಲ್ಸ್: ಮೆಗ್ ಲ್ಯಾನಿಂಗ್ (ನಾಯಕಿ), ಶೆಫಾಲಿ ವರ್ಮಾ, ಅಲೀಸ್ ಕ್ಯಾಪ್ಸಿ, ಮರಿಜೇನ್ ಕಾಪ್, ಜೆಸ್ ಜೊನಾಸೆನ್, ಜೆಮೈಮಾ ರಾಡ್ರಿಗ್ಸ್, ಶಿಖಾ ಪಾಂಡೆ, ರಾಧಾ ಯಾದವ್, ಅರುಂಧತಿ ರೆಡ್ಡಿ, ತಾನಿಯಾ ಭಾಟಿಯಾ (ವಿಕೆಟ್ ಕೀಪರ್), ಪೂನಂ ಯಾದವ್.
ಮುಂಬೈ ಇಂಡಿಯನ್ಸ್: ಹರ್ಮನ್ ಪ್ರೀತ್ ಕೌರ್ (ನಾಯಕಿ), ಹೀಲಿ ಮ್ಯಾಥ್ಯೂಸ್, ಯಸ್ತಿಕಾ ಭಾಟಿಯಾ (ವಿಕೆಟ್ ಕೀಪರ್), ನೆಥಾಲಿ ಸಿವರ್ ಬ್ರಂಟ್, ಅಮೆಲಿಯಾ ಕರ್, ಇಸೀ ವಾಂಗ್. ಸೈಕಾ ಇಶಾಕ್, ಪೂಜಾ ವಸ್ತ್ರಕಾರ್, ಅಮನ್ಜೋತ್ ಕೌರ್, ಹುಮೈರಾ ಕಾಜಿ, ಜಿಂತಿಮಣಿ ಕಾಲಿತ.

ಇದನ್ನೂ ಓದಿ : RCB Unbox : ನಾಳೆ ಚಿನ್ನಸ್ವಾಮಿಯಲ್ಲಿ ಮಹಾ ಸಂಗಮ, ಮತ್ತೆ ಒಟ್ಟಾಗಿ ಕಾಣಿಸಿಕೊಳ್ಳಲಿದ್ದಾರೆ ಕಿಂಗ್ ಕೊಹ್ಲಿ, ಗೇಲ್, ಎಬಿಡಿ

ಇದನ್ನೂ ಓದಿ : Virat Kohli : ರಾಯಲ್ ಚಾಲೆಂಜರ್ಸ್ ಸೈನ್ಯ ಸೇರಲು ಮುಂಬೈನಿಂದ ಹೊರಟ ರಣಬೇಟೆಗಾರ

Women’s Premier League final : Mumbai Indians Vs Delhi Capitals, who will be the champions? Here is the complete information of the final match

Comments are closed.