ಏಷ್ಯಾ ಕಪ್ 2023 (ODI World Cup 2023 ) ಸರಣಿಯ ನಡುವಲ್ಲೇ ಏಕದಿನ ವಿಶ್ವಕಪ್‌ಗಾಗಿ ಭಾರತ ಕ್ರಿಕೆಟ್ ತಂಡದ (Indian Cricket team) ಆಯ್ಕೆ ನಡೆಯಲಿದೆ. ಏಷ್ಯಾ ಕಪ್‌ಗೆ 17 ಸದಸ್ಯರ ತಂಡವನ್ನು ಆಯ್ಕೆ ಮಾಡಿದ್ದು, 2023 ರ ವಿಶ್ವಕಪ್‌ಗೆ ಭಾರತ ತಂಡವನ್ನು 15 ಕ್ಕೆ ಇಳಿಸಲು ಬಿಸಿಸಿಐ ಚಿಂತನೆ ನಡೆಸಿದೆ. ಅದ್ರಲ್ಲೂ ವಿಶ್ವಕಪ್‌ಗೆ ಭಾರತ ತಂಡದ ಆಯ್ಕೆ ಮುಂದಿನ ವಾರ ನಡೆಯಲಿದ್ದು, ಕನ್ನಡಿಗ ಕೆಎಲ್ ರಾಹುಲ್ (KL Rahul), ಸಂಜು ಸ್ಯಾಮ್ಸನ್ (Sanju Samson) ಮತ್ತು ತಿಲಕ್ ವರ್ಮಾ (Thilak Varma) ಮೇಲೆ ಎಲ್ಲರ ಕಣ್ಣಿದೆ.
ಭಾರತದಲ್ಲಿಯೇ ನಡೆಯಲಿರುವ ಏಕದಿನ ಕ್ರಿಕೆಟ್ ವಿಶ್ವಕಪ್ ನತ್ತ ಎಲ್ಲರ ಚಿತ್ತ ನೆಟ್ಟಿದೆ. ಏಷ್ಯಾಕಪ್‌ನಲ್ಲಿ ನಾಳೆ ಭಾರತ ಬದ್ದ ವೈರಿ ಪಾಕಿಸ್ತಾನ ತಂಡವನ್ನು ಎದುರಿಸಲಿದೆ. ಭಾರತ ತಂಡದ ಹಿರಿಯರ ಆಯ್ಕೆ ಸಮಿತಿಯುವ ಏಷ್ಯಾ ಕಪ್‌ನಲ್ಲಿ ನೇಪಾಳ ವಿರುದ್ಧ ಭಾರತ ಲೀಗ್ ಹಂತದ ಪಂದ್ಯದ ಮರುದಿನ (ಸೆಪ್ಟೆಂಬರ್ 5 ರಂದು ) ವಿಶ್ವಕಪ್ 2023 ಭಾರತ ತಂಡದ ಆಯ್ಕೆ ನಡೆಯಲಿದೆ.

ವಿಶ್ವಕಪ್‌ನಲ್ಲಿ ಪಾಲ್ಗೊಳ್ಳುವ ತಂಡಗಳು ಸೆಪ್ಟೆಂಬರ್ 5ರಂದು ಆಟಗಾರರ ಆಯ್ಕೆ ಪಟ್ಟಿಯನ್ನು ಅಂತರಾಷ್ಟ್ರೀಯ ಕ್ರಿಕೆಟ್ ಮಂಡಳಿಗೆ (ICC) ಸಲ್ಲಿಸಬೇಕಾಗಿದೆ. ಈ ಹಿನ್ನೆಲೆಯಲ್ಲಿ ಟೀಂ ಇಂಡಿಯಾ ಆಯ್ಕೆ ಸಮಿತಿಯ (BCCI Selection Committe) ಅಧ್ಯಕ್ಷ ಅಜಿತ್ ಅಗರ್ಕರ್ ಅವರ ನೇತೃತ್ವದಲ್ಲಿ ತಂಡದ ಆಯ್ಕೆ ನಡೆಯಲಿದೆ. ಏಷ್ಯಾಕಪ್‌ನಲ್ಲಿ ಪಾಲ್ಗೊಂಡಿರುವ ಆಟಗಾರರ ಪ್ರದರ್ಶನದ ಮೇಲೆ ವಿಶ್ವಕಪ್‌ನಲ್ಲಿ ಸ್ಥಾನ ಗಿಟ್ಟಿಸಿಕೊಳ್ಳಲಿದ್ದಾರೆ. ಏಷ್ಯಾಕಪ್‌ಗೆ ಆಯ್ಕೆಯಾಗಿರುವ ಬಹುತೇಕ ಆಟಗಾರರು ವಿಶ್ವಕಪ್ ತಂಡಕ್ಕೂ ಆಯ್ಕೆಯಾಗುವ ಸಾಧ್ಯತೆಯಿದೆ.
ಈಗಾಗಲೇ ಗಾಯಗೊಂಡಿರುವ ಕೆಎಲ್ ರಾಹುಲ್ ವಿಶ್ವಕಪ್ ತಂಡದಲ್ಲಿ ಸ್ಥಾನ ಪಡೆಯಲು ವಿಫಲರಾದ್ರೆ ಕೇರಳದ ಸಂಜು ಸ್ಯಾಮ್ಸನ್ ಆಯ್ಕೆಯಾಗುವುದು ಬಹುತೇಕ ಖಚಿತ. ಇನ್ನು ಗಾಯಗೊಂಡಿರುವ ಜಸ್ಪ್ರಿತ್ ಬೂಮ್ರಾ ಈಗಾಗಲೇ ಟೀಂ ಇಂಡಿಯಾ ಸೇರಿಕೊಂಡಿದ್ದಾರೆ. ಜೊತೆಗೆ ಕರ್ನಾಟಕದ ಪ್ರಸಿದ್ದ ಕೃಷ್ಣ, ತಿಲಕ್ ವರ್ಮಾ, ಸಂಜು ಸ್ಯಾಮ್ಸನ್ ಮೀಸಲು ಆಟಗಾರರಾಗುವ ಸಾಧ್ಯತೆಯಿದೆ. ಒಂದೊಮ್ಮೆ ಆಟಗಾರರ ಸಂಖ್ಯೆಯಲ್ಲಿ ಕಡಿತವಾದ್ರೆ ತಿಲಕ್ ವರ್ಮಾ ತಂಡದಿಂದ ಹೊರಗುವ ಸಾಧ್ಯತೆಯಿದೆ.
ಇದನ್ನೂ ಓದಿ : Venkatesh Prasad – KL Rahul : ಕೆ.ಎಲ್ ರಾಹುಲ್ ಯಶಸ್ಸಿಗಾಗಿ ದೇವರಲ್ಲಿ ರಹಸ್ಯವಾಗಿ ಪ್ರಾರ್ಥಿಸಿದ ವೆಂಕಟೇಶ್ ಪ್ರಸಾದ್; ಇದೇನಾಶ್ಚರ್ಯ?
ಇನ್ನು ಏಷ್ಯಾಕಪ್‌ನಲ್ಲಿ(Asia Cup 2023) ಪಾಲ್ಗೊಂಡಿರುವ ಭಾರತ ತಂಡ ಈಗಾಗಲೇ ಕ್ಯಾಂಡಿಗೆ ಆಗಮಿಸದೆ. ಇಂದು ರಾತ್ರಿ ಹಾಗೂ ನಾಳೆ ಕಠಿಣ ತರಬೇತಿಯನ್ನು ನಡೆಸಲು ನಿರ್ಧಾರ ಮಾಡಿದೆ. ಶನಿವಾರ ಏಷ್ಯಾಕಪ್‌ನಲ್ಲಿ ಭಾರತ ಮೊದಲ ಪಂದ್ಯವನ್ನು ತನ್ನ ಬದ್ದ ವೈರಿ ಪಾಕಿಸ್ತಾನದ ವಿರುದ್ದ ಆಡಲಿದೆ. ಆದರೆ ಪಂದ್ಯಕ್ಕೆ ಮಳೆಯ ಭೀತಿ ಎದುರಾಗಿದ್ದು, ಕ್ರಿಕೆಟ್ ಅಭಿಮಾನಿಗಳು ಪಂದ್ಯ ನಡೆಯುವಂತೆ ದೇವರಲ್ಲಿ ಮೊರೆಯಿಡುತ್ತಿದ್ದಾರೆ.
ಏಷ್ಯಾ ಕಪ್ ಆರಂಭದಲ್ಲಿಯೇ ಮಳೆಯ ಭೀತಿ ಎದುರಾಗಿದ್ದು, ನಿನ್ನೆ ನಡೆದ ಶ್ರೀಲಂಕಾ ಹಾಗೂ ಬಾಂಗ್ಲಾದೇಶ (SL VS BAN) ವಿರುದ್ದದ ಪಂದ್ಯದಲ್ಲಿಯೂ ತುಂತುರು ಮಳೆ ಸುರಿದಿದೆ. ಆದರೆ ಪಂದ್ಯಕ್ಕೆ ಮಳೆ ಯಾವುದೇ ರೀತಿಯಲ್ಲಿಯೂ ಅಡ್ಡಿ ಪಡಿಸಿಲ್ಲ. ಇನ್ನು ಭಾರತ ಹಾಗೂ ಪಾಕಿಸ್ತಾನ ವಿರುದ್ದದ ಪಂದ್ಯದಲ್ಲಿಯೂ ಮಳೆಯ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ.

ಇದನ್ನೂ ಓದಿ : ಏಷ್ಯಾಕಪ್ 2023 : ಭಾರತ ಪಾಕಿಸ್ತಾನ ಪಂದ್ಯಕ್ಕೆ ಮಳೆಯ ಭೀತಿ : ಏನ್ ಹೇಳುತ್ತೆ ಪಿಚ್ ರಿಪೋರ್ಟ್, ಹೇಗಿದೆ ತಂಡದ ಬಲಾಬಲ
ವಿಶ್ವಕಪ್‌ನಲ್ಲಿ ಕೇವಲ 15 ಮಂದಿ ಆಟಗಾರರನ್ನು ಆಯ್ಕೆ ಮಾಡಬೇಕಾಗಿದೆ. ಬೌಲಿಂಗ್ ವಿಭಾಗದಲ್ಲಿ ಮೊಹಮದ್ ಸೆಮಿ, ಜಸ್ಪ್ರಿತ್ ಬೂಮ್ರಾ ಆಯ್ಕೆ ಬಹುತೇಕ ಖಚಿತ, ಆದರೂ ಶಾರ್ದೂಲ್ ಠಾಕೂರು, ಪ್ರಸಿದ್ದ ಕೃಷ್ಣ ಬಾರೀ ಪೈಪೋಟಿ ನೀಡಲಿದ್ದಾರೆ. ಇನ್ನು ಸ್ಪಿನ್ ಬೌಲಿಂಗ್‌ನಲ್ಲಿ ರವೀಂದ್ರ ಜಡೇಜಾ, ಅಕ್ಷರ್ ಪಟೇಲ್, ಯಜುವೇಂದ್ರ ಚಹಲ್, ಕುಲದೀಪ್ ಯಾದವ್ ನಡುವೆ ಫೈಟ್ ಇದೆ.
ಆದರೂ ರವೀಂದ್ರ ಜಡೇಜಾ ಹಾಗೂ ಅಕ್ಷರ್ ಪಟೇಲ್ ಆಲ್‌ರೌಂಡರ್ ಕೋಟಾದಡಿಯಲ್ಲಿ ಸ್ಥಾನ ಪಡೆಯುವ ಸಾಧ್ಯತೆಯಿದೆ. ಇನ್ನು ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ, ಶುಭಮನ್ ಗಿಲ್, ಶ್ರೇಯಸ್ ಅಯ್ಯರ್ ಆಯ್ಕೆ ಬಹುತೇಕ ಖಚಿತ ಎನ್ನಲಾಗುತ್ತಿದೆ. ವಿಕೆಟ್ ಕೀಪರ್ ಜವಾಬ್ದಾರಿಯನ್ನು ಕೆಎಲ್ ರಾಹುಲ್, ಇಶಾನ್ ಕಿಶನ್ ಅಥವಾ ಸಂಜು ಸ್ಯಾಮ್ಸನ್ ನಿರ್ವಹಿಸುವ ಸಾಧ್ಯತೆಯಿದೆ.
ಇದನ್ನೂ ಓದಿ : ICC World Cup 2023: ಅಭ್ಯಾಸ ಪಂದ್ಯಗಳ ವೇಳಾಪಟ್ಟಿ ಪ್ರಕಟ, ಭಾರತಕ್ಕೆ ಯಾರು ಎದುರಾಳಿಗಳು? ಇಲ್ಲಿದೆ ಕಂಪ್ಲೀಟ್ ಡೀಟೇಲ್ಸ್
ಆದರೆ ಫಿಟ್ನೆಸ್ ಕೊರತೆಯಿಂದಾಗಿ ಕೆಎಲ್ ರಾಹುಲ್ ಈಗಾಗಲೇ ಏಷ್ಯಾಕಪ್ ತಂಡದಿಂದ ಹೊರಗುಳಿದಿದ್ದಾರೆ. ವಿಶ್ವಕಪ್‌ಗೆ ಆಯ್ಕೆಯಾಗ್ತಾರಾ ಅನ್ನೋದು ಇನ್ನೂ ಖಚಿತವಾಗಿಲ್ಲ. ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿ ತರಬೇತಿಯನ್ನು ಪಡೆದುಕೊಂಡಿದ್ದು, ಫಿಟ್ನೆಸ್ ಸಾಬೀತು ಪಡಿಸಿದ್ರೆ ವಿಶ್ವಕಪ್‌ಗೆ ಆಯ್ಕೆಯಾಗುವ ಸಾಧ್ಯತೆಯಿದೆ.
ಏಕದಿನ ವಿಶ್ವಕಪ್ ಗೆ ಭಾರತ ಸಂಭಾವ್ಯ ತಂಡ :
ರೋಹಿತ್ ಶರ್ಮಾ (ನಾಯಕ), ಶುಭಮನ್ ಗಿಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಕೆಎಲ್ ರಾಹುಲ್ (ವಿಕೀ.), ಇಶಾನ್ ಕಿಶನ್ (ವಿಕೀ), ಹಾರ್ದಿಕ್ ಪಾಂಡ್ಯ, ಶಾರ್ದೂಲ್ ಠಾಕೂರ್, ರವೀಂದ್ರ ಜಡೇಜಾ, ಅಕ್ಷರ್ ಪಟೇಲ್, ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್, ಜಸ್ಪ್ರೀತ್ ಬುಮ್ರಾ, ಕುಲದೀಪ್ ಯಾದವ್, ಯುಜ್ವೇಂದ್ರ ಚಾಹಲ್ ಮೀಸಲು ಆಟಗಾರರು : ಸಂಜು ಸ್ಯಾಮ್ಸನ್, ಶಾರ್ದೂಲ್ ಠಾಕೂರ್, ಪ್ರಸಿದ್ದ ಕೃಷ್ಣ