ಏಷ್ಯಾಕಪ್‌ 2023 : ಭಾರತ ಪಾಕಿಸ್ತಾನ ಪಂದ್ಯಕ್ಕೆ ಮಳೆಯ ಭೀತಿ : ಏನ್‌ ಹೇಳುತ್ತೆ ಪಿಚ್‌ ರಿಪೋರ್ಟ್‌, ಹೇಗಿದೆ ತಂಡದ ಬಲಾಬಲ

ಏಷ್ಯಾಕಪ್‌ 2023ನಲ್ಲಿ ಸೆಪ್ಟೆಂಬರ್ 2ರಂದು ಭಾರತ vs ಪಾಕಿಸ್ತಾನ ಮುಖಾಮುಖಿಯಾಗಲಿವೆ. ಆದರೆ ಈ ಪಂದ್ಯಕ್ಕೆ ಇದೀಗ ಮಳೆಯ ಭೀತಿ ಎದುರಾಗಿದೆ. ಶ್ರೀಲಂಕಾದ ಹಮಾಮಾನ ಇಲಾಖೆ ನೀಡಿರುವ ವರದಿಯ ಪ್ರಕಾರ ಮುಂದಿನ ಕೆಲವು ದಿನಗಳ ಕಾಲ ಮಳೆಯಾಗುವ ಸಾಧ್ಯತೆಯಿದೆ.

ಕೊಲಂಬೋ : ಏಷ್ಯಾಕಪ್‌ (Asia cup 2023 ) ಪಂದ್ಯಾವಳಿಯ ಮೊದಲ ಪಂದ್ಯದಲ್ಲಿಯೇ ಗೆದ್ದು ಬೀಗಿರುವ ಪಾಕಿಸ್ತಾನ ತಂಡ ಇದೀಗ ಸೆಪ್ಟೆಂಬರ್ 2ರಂದು ಭಾರತ ತಂಡದ (india vs pakistan) ವಿರುದ್ದ ಸೆಣೆಸಾಡಲಿದೆ. ಕ್ರಿಕೆಟ್‌ ಬದ್ದವೈರಿಗಳ ನಡುವಿನ ಕಾದಾಟವನ್ನು ನೋಡಲು ವಿಶ್ವವೇ ಕಾತರವಾಗಿದೆ. ಶ್ರೀಲಂಕಾದ ಕ್ಯಾಂಡಿಯಲ್ಲಿ ನಡೆಯಲಿರುವ ಪಂದ್ಯಕ್ಕಾಗಿ ಭಾರತ ತಂಡ ಈಗಾಗಲೇ ಸಜ್ಜಾಗಿದೆ. ಇನ್ನೊಂದೆಡೆಯಲ್ಲಿ ಏಷ್ಯಾಕಪ್‌ ಕ್ರಿಕೆಟ್‌ ಪಂದ್ಯಾವಳಿಯ ಮೊದಲ ಪಂದ್ಯದಲ್ಲಿ ನೇಪಾಳ ತಂಡದ ವಿರುದ್ದ ಭರ್ಜರಿ ಗೆಲುವು ದಾಖಲಿಸಿರುವ ಪಾಕಿಸ್ತಾನ ತಂಡ ಭಾರತದ ವಿರುದ್ದದ ಪಂದ್ಯಕ್ಕಾಗಿ ಕಾತರವಾಗಿದೆ. ಆದ್ರೀಗ ಭಾರತ ಪಾಕಿಸ್ತಾನ ವಿರುದ್ದ ಪಂದ್ಯಕ್ಕೆ ಮಳೆಯ ಭೀತಿ ಎದುರಾಗಿದೆ.

Asia Cup 2023 Rain threat for India vs Pakistan match pitch report team Playing XI
Image credit Original Source

ಶ್ರೀಲಂಕಾ ಹವಾಮಾನ ಇಲಾಖೆ ನೀಡಿರುವ ವರದಿಯ ಪ್ರಕಾರ ಕ್ಯಾಂಡಿಯಲ್ಲಿ ಭಾರತ ಮತ್ತು ಪಾಕಿಸ್ತಾನ ( IND vs PAK ) ಪಂದ್ಯದ ಸಮಯದಲ್ಲಿ ಮಳೆಯಾಗುವ ಸಾಧ್ಯತೆ 70% ರಷ್ಟಿದೆ.ಮಳೆಯು 2:30 ಕ್ಕೆ ಪಂದ್ಯ ಆರಂಭವಾಗಲಿದ್ದು, ಪಂದ್ಯ ಆರಂಭವಾಗುವ ಅರ್ಧ ಗಂಟೆಯ ಮೊದಲು ಮಳೆ ಆರಂಭವಾಗುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ. ಆದರೆ ಸಂಜೆ 5:30 ರ ವೇಳೆಗೆ ಮಳೆಯ ಸಾಧ್ಯತೆ 60% ರಷ್ಟಿದೆ. ಮಳೆ ಆರಂಭದಲ್ಲೇ ಕಾಣಿಸಿಕೊಂಡ್ರೆ ತಡವಾಗಿಯಾದ್ರೂ ಪಂದ್ಯ ನಡೆಯುವ ಸಾಧ್ಯತೆಯಿದೆ. ಶ್ರೀಲಂಕಾದ ಪಶ್ಚಿಮ, ಸಬರಗಾಮುವಾ, ಮಧ್ಯ ಮತ್ತು ವಾಯುವ್ಯ ಪ್ರಾಂತ್ಯಗಳು ಮತ್ತು ಗಾಲೆ ಮತ್ತು ಮಾತಾರಾ ಜಿಲ್ಲೆಗಳಲ್ಲಿ ತುಂತುರು ಮಳೆಯಾಗುವ ಸಾಧ್ಯತೆಯಿದೆ. ಅದ್ರಲ್ಲೂ 75 ಮಿಮೀಗಿಂತಲೂ ಅಧಿಕ ಮಳೆಯಾಗಲಿದೆ ಎಂದು ಶ್ರೀಲಂಕಾ ಹವಾಮಾನ ಇಲಾಖೆ ತಿಳಿಸಿದೆ. ಇದನ್ನೂ ಓದಿ : Karnataka Cricket: ರಾಜ್ಯ ಕ್ರಿಕೆಟ್’ನಲ್ಲಿ ಕಡೆಗಣಿಸಿದವರಿಗೆ ಆಟದಿಂದಲೇ ಉತ್ತರಿಸುತ್ತಿದ್ದಾರೆ ತ್ರಿಮೂರ್ತಿಗಳು

Asia Cup 2023 Rain threat for India vs Pakistan match pitch report team Playing XI
Image Credit : Original Source

 

ಏಷ್ಯಾಕಪ್‌ನಲ್ಲಿ ಭಾರತ – ಪಾಕಿಸ್ತಾನ (india vs pakistan ) ಬಲಾಬಲ :

ಏಷ್ಯಾ ಕಪ್‌ನಲ್ಲಿ ಭಾರತ ಹಾಗೂ ಪಾಕಿಸ್ತಾನ ತಂಡಗಳು ಮುಖಾಮುಖಿಯಾಗಲಿವೆ. ಇತ್ತೀಚಿನ ವರ್ಷಗಳಲ್ಲಿ ಭಾರತ ಪ್ರಮುಖ ಪಂದ್ಯಾವಳಿಗಳಲ್ಲಿಯೇ ಭಾರತ ಪಾಕಿಸ್ತಾನ ತಂಡದ ವಿರುದ್ದ ನೀರಸ ಪ್ರದರ್ಶನವನ್ನು ನೀಡಿತ್ತು. ಆದ್ರೀಗ ಹಿಂದಿನ ಪಂದ್ಯಾವಳಿಗಳಲ್ಲಿ ಸೋಲಿಗೆ ಸೇಡು ತೀರಿಸಿಕೊಳ್ಳುವ ತವಕದಲ್ಲಿದೆ. ಭಾರತ, ಪಾಕಿಸ್ತಾನ ಹಾಗೂ ನೇಪಾಳ ಒಂದೇ ಗುಂಪಿನಲ್ಲಿದೆ. ಭಾರತ ತಂಡ ರೋಹಿತ್‌ ಶರ್ಮಾ ನೇತೃತ್ವದಲ್ಲಿ ಕಣಕ್ಕೆ ಇಳಿಯಲಿದ್ದು, ವಿರಾಟ್‌ ಕೊಹ್ಲಿ, ಶುಭಮನ್‌ ಗಿಲ್‌ ಬ್ಯಾಟಿಂಗ್‌ ಬಲ ಟೀಂ ಇಂಡಿಯಾಕ್ಕಿದೆ. ಉಳಿದಂತೆ ಮೊಹಮದ್‌ ಸೆಮಿ, ಜಸ್ಪ್ರಿತ್‌ ಬೂಮ್ರಾ ಬೌಲಿಂಗ್‌ ಬಲವಿದೆ. ಇನ್ನುಳಿದಂತೆ ಹಾರ್ದಿಕ್‌ ಪಾಂಡ್ಯ, ರವೀಂದ್ರ ಜಡೇಜಾ, ತಿಲಕ್‌ ವರ್ಮಾ, ಅಕ್ಷರ್‌ ಪಟೇಲ್‌ ತಂಡಕ್ಕೆ ಬೌಲಿಂಗ್‌ ಹಾಗೂ ಬ್ಯಾಟಿಂಗ್‌ ವಿಭಾಗದಲ್ಲಿ ನೆರವಾಗುವ ಸಾಮರ್ಥ್ಯವನ್ನು ಹೊಂದಿದ್ದಾರೆ. ಇನ್ನು ಪಾಕಿಸ್ತಾನ ತಂಡ ಕೂಡ ಬಲಿಷ್ಠವಾಗಿದೆ. ಬಾಬರ್‌ ಅಜಮ್‌ ಭರ್ಜರಿ ಫಾರ್ಮ್‌ನಲ್ಲಿದ್ದು, ಬಾಬರ್ ಅಜಮ್‌ ಜೊತೆಗೆ ರಿಜ್ವಾನ್, ಫಖರ್, ಶಾದಾಬ್, ಶಾಹೀನ್ ಮತ್ತು ಹಾರಿಸ್ ರೌಫ್ ಈಗಾಗಲೇ ನೇಪಾಳ ವಿರುದ್ದ ಪಂದ್ಯದಲ್ಲಿ ಅಬ್ಬರಿಸಿದ್ದಾರೆ.

ಏಷ್ಯಾಕಪ್‌ : ಭಾರತ – ಪಾಕಿಸ್ತಾನ ಪಂದ್ಯ ಸಂಭಾವ್ಯ ತಂಡ :

ಭಾರತ ಸಂಭಾವ್ಯ ತಂಡ :
ರೋಹಿತ್ ಶರ್ಮಾ (ನಾಯಕ), ಶುಭಮನ್ ಗಿಲ್, ವಿರಾಟ್ ಕೊಹ್ಲಿ, ತಿಲಕ್ ವರ್ಮಾ, ಹಾರ್ದಿಕ್ ಪಾಂಡ್ಯ (ಉಪನಾಯಕ), ರವೀಂದ್ರ ಜಡೇಜಾ, ಯುಜ್ವೇಂದ್ರ ಚಹಾಲ್, ಕುಲದೀಪ್ ಯಾದವ್, ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್, ಜಸ್ಪ್ರೀತ್ ಬುಮ್ರಾ

ಪಾಕಿಸ್ತಾನ ಸಂಭಾವ್ಯ ತಂಡ :
ಫಖರ್ ಜಮಾನ್, ಇಮಾಮ್-ಉಲ್-ಹಕ್, ಬಾಬರ್ ಅಜಮ್ (ನಾಯಕ), ಇಫ್ತಿಕರ್ ಅಹ್ಮದ್, ಮೊಹಮ್ಮದ್ ರಿಜ್ವಾನ್ (ವಿ.ಕೀ), ಶಾದಾಬ್ ಖಾನ್ (ಉಪನಾಯಕ ), ಫಹೀಮ್ ಅಶ್ರಫ್, ಮೊಹಮ್ಮದ್ ನವಾಜ್, ಶಾಹೀನ್ ಅಫ್ರಿದಿ, ಹ್ಯಾರಿಸ್ ರೌಫ್, ನಸೀಮ್ ಶಾ

Asia Cup 2023 Rain threat for India vs Pakistan match pitch report team Playing XI
Image Credit : original source

ಭಾರತ vs ಪಾಕಿಸ್ತಾನ ಏಕದಿನ ಪಂದ್ಯದ ಬಲಾಬಲ :

ಭಾರತ ಹಾಗೂ ಪಾಕಿಸ್ತಾನ ವಿರುದ್ದ ಪಂದ್ಯ ಎಂದ್ರೆ ಸಾಕು ಭಾರತ – ಪಾಕಿಸ್ತಾನದವರು ಮಾತ್ರವಲ್ಲದೇ ಇಡೀ ವಿಶ್ವವೇ ಕಾತರದಿಂದ ಕಾಯುತ್ತದೆ. ಇದೀಗ ಏಷ್ಯಾ ಕಪ್‌ನಲ್ಲಿ ಭಾರತ ತನ್ನ ಮೊದಲ ಪಂದ್ಯದಲ್ಲಿಯೇ ಪಾಕಿಸ್ತಾನವನ್ನು ಎದುರಿಸಲಿದೆ. ಇದುವರೆಗೆ ಭಾರತ ಮತ್ತು ಪಾಕಿಸ್ತಾನ ನಡುವೆ ಒಟ್ಟು 132 ಏಕದಿನ ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಡಲಿದ್ದು, ಈ ಪೈಕಿ ಭಾರತ 55 ಪಂದ್ಯಗಳಲ್ಲಿ ಜಯ ಸಾಧಿಸಿದ್ದರೆ, ಪಾಕಿಸ್ತಾನ 73 ರಲ್ಲಿ ಜಯಭೇರಿ ಬಾರಿಸಿದೆ. ಇದೀಗ ಮತ್ತೆ ಎರಡೂ ತಂಡಗಳು ಮುಖಾಮುಖಿಯಾಗಲಿದ್ದು, ಕ್ರಿಕೆಟ್‌ ದಿಗ್ಗಜರ ನಡುವಿನ ಪೈಪೋಟಿ ವೀಕ್ಷಿಸಲು ಕ್ರಿಕೆಟ್‌ ಅಭಿಮಾನಿಗಳು ಕಾತರರಾಗಿದ್ದಾರೆ. ಇದನ್ನೂ ಓದಿ : ICC World Cup 2023: ಅಭ್ಯಾಸ ಪಂದ್ಯಗಳ ವೇಳಾಪಟ್ಟಿ ಪ್ರಕಟ, ಭಾರತಕ್ಕೆ ಯಾರು ಎದುರಾಳಿಗಳು? ಇಲ್ಲಿದೆ ಕಂಪ್ಲೀಟ್ ಡೀಟೇಲ್ಸ್

ಏಷ್ಯಾ ಕಪ್ 2023 ಗುಂಪುಗಳು:

ಗುಂಪು ಎ
ಭಾರತ
ಪಾಕಿಸ್ತಾನ
ನೇಪಾಳ

ಗುಂಪು ಬಿ
ಅಫ್ಘಾನಿಸ್ತಾನ
ಬಾಂಗ್ಲಾದೇಶ
ಶ್ರೀಲಂಕಾ

Asia Cup 2023 Rain threat for India vs Pakistan match pitch report team Playing XI
Image credit : original Source

ಏಷ್ಯಾ ಕಪ್ 2023 ಕ್ರಿಕೆಟ್ ಪಂದ್ಯಾವಳಿಯನ್ನು ಪಾಕಿಸ್ತಾನ ಮತ್ತು ಶ್ರೀಲಂಕಾ ಜಂಟಿಯಾಗಿ ಆಯೋಜಿಸಿವೆ. ಪಾಕಿಸ್ತಾನದ ಮುಲ್ತಾನ್ ಮತ್ತು ಲಾಹೋರ್ ಮತ್ತು ಶ್ರೀಲಂಕಾದ ಕ್ಯಾಂಡಿ ಮತ್ತು ಕೊಲಂಬೊದಲ್ಲಿ ಪಂದ್ಯಗಳು ನಡೆಯಲಿವೆ. ಪಂದ್ಯಾವಳಿಯನ್ನು ಎರಡು ಗುಂಪುಗಳಾಗಿ ವಿಂಗಡಿಸಲಾಗಿದೆ. ಗುಂಪು ಹಂತದ ಪಂದ್ಯಗಳು ಆಗಸ್ಟ್ 30 ರಿಂದ ಸೆಪ್ಟೆಂಬರ್ 5 ರವರೆಗೆ ನಡೆಯಲಿದೆ.ಈ ಪೈಕಿ ಮೂರು ಪಂದ್ಯಗಳನ್ನು ಪಾಕಿಸ್ತಾನದಲ್ಲಿ ಮತ್ತು ಉಳಿದವು ಶ್ರೀಲಂಕಾದಲ್ಲಿ ನಡೆಯಲಿದೆ.

ಇನ್ನು ಸೂಪರ್ ಫೋರ್ ಹಂತವು ಸೆಪ್ಟೆಂಬರ್ 6 ರಿಂದ ಸೆಪ್ಟೆಂಬರ್ 15 ರವರೆಗೆ ನಡೆಯಲಿದ್ದು, ಐದು ಪಂದ್ಯಗಳನ್ನು ಶ್ರೀಲಂಕಾದಲ್ಲಿ ಮತ್ತು ಒಂದು ಪಂದ್ಯವನ್ನು ಪಾಕಿಸ್ತಾನದಲ್ಲಿ ಆಡಲಿವೆ. ಏಷ್ಯಾ ಕಪ್ 2023 ರ ಅಂತಿಮ ಪಂದ್ಯವು ಸೆಪ್ಟೆಂಬರ್ 17 ರಂದು ಶ್ರೀಲಂಕಾದ ಕೊಲಂಬೊದಲ್ಲಿರುವ ಆರ್ ಪ್ರೇಮದಾಸ ಕ್ರೀಡಾಂಗಣದಲ್ಲಿ ನಡೆಯಲಿದೆ.

ಏಷ್ಯಾ ಕಪ್‌ ಪಂದ್ಯಾವಳಿ ನಡೆಯುವ ಸ್ಥಳಗಳು :

ಮುಲ್ತಾನ್ ಕ್ರಿಕೆಟ್ ಸ್ಟೇಡಿಯಂ, ಮುಲ್ತಾನ್
ಗಡಾಫಿ ಸ್ಟೇಡಿಯಂ, ಲಾಹೋರ್
ಪಲ್ಲೆಕೆಲೆ ಅಂತರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂ, ಕ್ಯಾಂಡಿ
ಆರ್. ಪ್ರೇಮದಾಸ ಸ್ಟೇಡಿಯಂ, ಕೊಲಂಬೊ

ಏಷ್ಯಾ ಕಪ್ 2023ನಲ್ಲಿ ಭಾಗವಹಿಸುವ ತಂಡಗಳ ವಿವರ :

ಭಾರತ ತಂಡ:

ರೋಹಿತ್ ಶರ್ಮಾ (ನಾಯಕ), ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಕೆಎಲ್ ರಾಹುಲ್, ಶುಭಮನ್ ಗಿಲ್, ಸೂರ್ಯಕುಮಾರ್ ಯಾದವ್, ತಿಲಕ್ ವರ್ಮಾ, ಇಶಾನ್ ಕಿಶನ್, ಹಾರ್ದಿಕ್ ಪಾಂಡ್ಯ (ಉಪನಾಯಕ ), ರವೀಂದ್ರ ಜಡೇಜಾ, ಅಕ್ಸರ್ ಪಟೇಲ್, ಶಾರ್ದೂಲ್ ಠಾಕೂರ್, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್, , ಕುಲದೀಪ್ ಯಾದವ್, ಪ್ರಸಿದ್ಧ್ ಕೃಷ್ಣ, ಸಂಜು ಸ್ಯಾಮ್ಸನ್ (ಮೀಸಲು ಆಟಗಾರ)

ಅಫ್ಘಾನಿಸ್ತಾನ ತಂಡ:

ಹಶ್ಮತುಲ್ಲಾ ಶಾಹಿದಿ (ಸನಾಯಕ ), ರಹಮಾನುಲ್ಲಾ ಗುರ್ಬಾಜ್, ಇಬ್ರಾಹಿಂ ಜದ್ರಾನ್, ರಿಯಾಜ್ ಹಸನ್, ರಹಮತ್ ಷಾ, ನಜೀಬುಲ್ಲಾ ಝದ್ರಾನ್, ಮೊಹಮ್ಮದ್ ನಬಿ, ಇಕ್ರಮ್ ಅಲಿಖಿಲ್, ರಶೀದ್ ಖಾನ್, ಗುಲ್ಬದಿನ್ ನೈಬ್, ಕರೀಂ ಜನತ್, ಅಬ್ದುಲ್ ರಹಮಾನ್, ಶರಫುದ್ದೀನ್ ಅಶ್ರಫ್, ಮುಜೀಬ್, ಸು ನೊಲಿ ಅಶ್ರಫ್ ಸಫಿ, ಫಜಲಹಕ್ ಫಾರೂಕಿ

ಬಾಂಗ್ಲಾದೇಶ ತಂಡ:

ಶಾಕಿಬ್ ಅಲ್ ಹಸನ್ (ನಾಯಕ), ಲಿಟ್ಟನ್ ದಾಸ್, ನಜ್ಮುಲ್ ಹೊಸೈನ್ ಶಾಂಟೊ, ತೌಹಿದ್ ಹೃದಯೋಯ್, ಮುಶ್ಫಿಕರ್ ರಹೀಮ್, ಅಫೀಫ್ ಹೊಸೈನ್ ಧ್ರುಬೋ, ಮೆಹಿದಿ ಹಸನ್ ಮಿರಾಜ್, ತಸ್ಕಿನ್ ಅಹ್ಮದ್, ಹಸನ್ ಮಹ್ಮದ್, ಮುಸ್ತಾಫಿಜುರ್ ರೆಹಮಾನ್, ಶೋರಿಫುಲ್ ಶೆಮದ್ ಇಸ್ಲಾಂ, ನಸುಮ್ ಅಹ್ಮದ್, ನಸುಮ್ ಅಹ್ಮದ್ ಶಮೀಮ್ ಹೊಸೈನ್, ತಂಝೀದ್ ಹಸನ್ ತಮೀಮ್, ತಂಝಿಮ್ ಹಸನ್ ಸಾಕಿಬ್

ನೇಪಾಳ ತಂಡ:

ರೋಹಿತ್ ಪೌಡೆಲ್ (ನಾಯಕ), ಕುಶಾಲ್ ಭುರ್ಟೆಲ್, ಆಸಿಫ್ ಶೇಖ್, ಭೀಮ್ ಶರ್ಕಿ, ಕುಶಾಲ್ ಮಲ್ಲಾ, ಆರಿಫ್ ಶೇಖ್, ದೀಪೇಂದ್ರ ಸಿಂಗ್ ಐರಿ, ಗುಲ್ಶನ್ ಝಾ, ಸೋಂಪಾಲ್ ಕಾಮಿ, ಕರಣ್ ಕೆಸಿ, ಸಂದೀಪ್ ಲಾಮಿಚಾನೆ, ಲಲಿತ್ ರಾಜಬಂಶಿ, ಪ್ರತೀಶ್ ಜಿಸಿ, ಮೌಸಮ್ ಧಾಕಲ್, ಸುನ್ದೀಪ್ ಜೊರಾ ಮಹತೋ, ಅರ್ಜುನ್ ಸೌದ್

ಪಾಕಿಸ್ತಾನ ತಂಡ:

ಬಾಬರ್ ಆಜಮ್ (ನಾಯಕ), ಅಬ್ದುಲ್ಲಾ ಶಫೀಕ್, ಫಖರ್ ಜಮಾನ್, ಇಮಾಮ್-ಉಲ್-ಹಕ್, ಸಲ್ಮಾನ್ ಅಲಿ ಅಘಾ, ಇಫ್ತಿಕರ್ ಅಹ್ಮದ್, ಮೊಹಮ್ಮದ್ ರಿಜ್ವಾನ್, ಮೊಹಮ್ಮದ್ ಹಾರಿಸ್, ಶಾದಾಬ್ ಖಾನ್, ಮೊಹಮ್ಮದ್ ನವಾಜ್, ಉಸಾಮಾ ಮಿರ್, ಫಹೀಮ್ ಅಶ್ರಫ್, ಹ್ಯಾರಿಸ್ ರೌಫ್, ಮೊಹಮ್ಮದ್ ವಾಸಿಮ್ ಜೆ ನಸೀಮ್ ಶಾ, ಶಾಹೀನ್ ಅಫ್ರಿದಿ, ಸೌದ್ ಶಕೀಲ್, ತಯ್ಯಬ್ ತಾಹಿರ್ (ಪ್ರಯಾಣ ಮೀಸಲು)

ಶ್ರೀಲಂಕಾ ತಂಡ : 
ದಸುನ್ ಶನಕ (ನಾಯಕ), ಪಾತುಮ್ ನಿಸ್ಸಾನಕ, ದಿಮುತ್ ಕರುಣಾರತ್ನ, ಕುಸಲ್ ಜನಿತ್ ಪೆರೇರಾ, ಕುಸಲ್ ಮೆಂಡಿಸ್ (ಉಪನಾಯಕ), ಚರಿತ್ ಅಸಲಂಕ, ಧನಂಜಯ ಡಿ ಸಿಲ್ವ, ಸದೀರ ಸಮರವಿಕ್ರಮ, ಮಹೀಶ್ ತೀಕ್ಷಣ, ದುನಿತ್ ವೆಲ್ಲಲಗೆ, ಮಥೀಶ ಪತಿರಣ, ಕಸುನನ್ ರಜಿತ, ಬಿ, ದೂಶನ್ ಹೇಮಂತ, ಬಿ. ಪ್ರಮೋದ್ ಮದುಶನ್. ಇದನ್ನೂ ಓದಿ : Virat Kohli Complets 15 Years : ವಿರಾಟ್ ಕೊಹ್ಲಿ ಅಂತರಾಷ್ಟ್ರೀಯ ಕರಿಯರ್’ಗೆ 15 ವರ್ಷ, ಕ್ರಿಕೆಟ್ ಪಿಚ್’ನಲ್ಲಿ 500 ಕಿ.ಮೀ ಓಡಿದ್ದಾರೆ ರನ್ ಮಷಿನ್

Asia Cup 2023 Rain threat for India vs Pakistan match pitch report team Playing XI
Image Credit : original Source

ಏಷ್ಯಾ ಕಪ್ 2023 ಪಂದ್ಯಗಳ ವೇಳಾಪಟ್ಟಿ :

30-ಆಗಸ್ಟ್ ಪಾಕಿಸ್ತಾನ ವಿರುದ್ಧ ನೇಪಾಳ ಮುಲ್ತಾನ್, PAK
31-ಆಗಸ್ಟ್ ಬಾಂಗ್ಲಾದೇಶ ವಿರುದ್ಧ ಶ್ರೀಲಂಕಾ ಕ್ಯಾಂಡಿ, SL
02-ಸೆಪ್ಟೆಂಬರ್ ಪಾಕಿಸ್ತಾನ ವಿರುದ್ಧ ಭಾರತ ಕ್ಯಾಂಡಿ, SL
03-ಸೆಪ್ಟೆಂಬರ್ ಬಾಂಗ್ಲಾದೇಶ ವಿರುದ್ಧ ಅಫ್ಘಾನಿಸ್ತಾನ ಲಾಹೋರ್, PAK
04-ಸೆಪ್ಟೆಂಬರ್ ಭಾರತ ವಿರುದ್ಧ ನೇಪಾಳ ಕ್ಯಾಂಡಿ, SL
05-ಸೆಪ್ಟೆಂಬರ್ ಅಫ್ಘಾನಿಸ್ತಾನ ವಿರುದ್ಧ ಶ್ರೀಲಂಕಾ ಲಾಹೋರ್, PAK

ಏಷ್ಯಾ ಕಪ್ 2023 : ಸೂಪರ್ 4  ಪಂದ್ಯಾವಳಿಗಳು

06-ಸೆಪ್ಟೆಂಬರ್ A1 ವಿರುದ್ಧ B2 ಲಾಹೋರ್, PAK
09-ಸೆಪ್ಟೆಂಬರ್ B1 vs B2 ಕೊಲಂಬೊ, Sl
10-ಸೆಪ್ಟೆಂಬರ್ A1 ವಿರುದ್ಧ A2 ಕೊಲಂಬೊ, Sl
12-ಸೆಪ್ಟೆಂಬರ್ A2 ವಿರುದ್ಧ B1 ಕೊಲಂಬೊ, Sl
14-ಸೆಪ್ಟೆಂಬರ್ A1 ವಿರುದ್ಧ B1 ಕೊಲಂಬೊ, Sl
15-ಸೆಪ್ಟೆಂಬರ್ A2 ವಿರುದ್ಧ B2 ಕೊಲಂಬೊ, Sl
17-ಸೆಪ್ಟೆಂಬರ್ ಫೈನಲ್ ಕೊಲಂಬೊ, Sl

ಏಷ್ಯಾ ಕಪ್ 2023 : ನೇರ ಪ್ರಸಾರದ ವಿವರ

ಏಷ್ಯಾ ಕಪ್‌ನ ಎಲ್ಲಾ ಪಂದ್ಯಾವಳಿಗಳನ್ನು ಸ್ಟಾರ್‌ ಸ್ಪೋರ್ಟ್‌ ಖರೀದಿ ಮಾಡಿದೆ. ಆದರೆ ದೂರದರ್ಶನ ಪ್ರಸಾರದ ಹಕ್ಕನ್ನು ಹೊಂದಿದೆ. ಭಾರತದಲ್ಲಿ ಸ್ಟಾರ್ ಸ್ಪೋರ್ಟ್ಸ್ 1, ಸ್ಟಾರ್ ಸ್ಪೋರ್ಟ್ಸ್ 1 HD, ಸ್ಟಾರ್ ಸ್ಪೋರ್ಟ್ಸ್ 1 ಹಿಂದಿ, ಸ್ಟಾರ್ ಸ್ಪೋರ್ಟ್ಸ್ 1 ಹಿಂದಿ HD, ಸ್ಟಾರ್ ಸ್ಪೋರ್ಟ್ಸ್ 1 ತಮಿಳು SD + HD, ಸ್ಟಾರ್ ಸ್ಪೋರ್ಟ್ಸ್ 1 ತೆಲುಗು SD+ HD, ಸ್ಟಾರ್ ಸ್ಪೋರ್ಟ್ಸ್ 1 ಕನ್ನಡನಲ್ಲಿ ಪಂದ್ಯಾವಳಿಗಳನ್ನು ವೀಕ್ಷಿಸಬಹುದಾಗಿದೆ. ಅಲ್ಲದೇ ಡಿಸ್ನಿ ಹಾಟ್‌ಸ್ಟಾರ್‌ (Disney+Hotstar ) ಪ್ಲಾಟ್‌ಫಾರ್ಮ್‌ ಮೂಲಕವೂ ಪಂದ್ಯಾವಳಿ ವೀಕ್ಷಿಸಬಹುದು.

ಏಷ್ಯಾ ಕಪ್‌ ಇತರ ದೇಶಗಳ ನೇರಪ್ರಸಾರದ ವಿವರ :
ಪಾಕಿಸ್ತಾನ: ಪಿಟಿವಿ (PTV) ಸ್ಪೋರ್ಟ್ಸ್ ಮತ್ತು ಟೆನ್ ಸ್ಪೋರ್ಟ್ಸ್
ಬಾಂಗ್ಲಾದೇಶ: ಗಾಜಿ ಟಿವಿ
ಯುನೈಟೆಡ್ ಕಿಂಗ್‌ಡಮ್: ಐಎನ್‌ಟಿ (TNT) ಸ್ಪೋರ್ಟ್ಸ್ ಅಪ್ಲಿಕೇಶನ್
ಆಸ್ಟ್ರೇಲಿಯಾ: ಫಾಕ್ಸ್ ಸ್ಪೋರ್ಟ್ಸ್ ಮತ್ತು ಪೋಕ್ಸ್‌ಟೆಲ್‌ (FOXTel)ಅಪ್ಲಿಕೇಶನ್
ದಕ್ಷಿಣ ಆಫ್ರಿಕಾ: ಸೂಪರ್‌ಸ್ಪೋರ್ಟ್

Asia Cup 2023 Rain threat for India vs Pakistan match pitch report team Playing XI

Comments are closed.