Dinesh Karthik : ಬೆಂಗಳೂರು: ಮೊನ್ನೆ ಮೇ 18ರಂದು ಬೆಂಗಳೂರಿನ ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಸೋಲಿಸಿದ ನಂತರ ಎರಡೂ ತಂಡಗಳ ಅಭಿಮಾನಿಗಳ ಮಧ್ಯೆ ದೊಡ್ಡ ಜಟಾಪಟಿಯೇ ನಡೆದಿತ್ತು. ಅಭಿಮಾನಿಗಳಷ್ಟೇ ಅಲ್ಲದೆ, ಅಂಬಾಟಿ ರಾಯುಡು ಸೇರಿದಂತೆ ಚೆನ್ನೈ ತಂಡದ ಹಲವಾರು ಮಾಜಿ ಆಟಗಾರರು ಆರ್’ಸಿಬಿ ಗೆಲುವನ್ನು ಹೀಯಾಳಿಸಿ ಮಾತಾಡಿದ್ದರು.

ಅಂಬಾಟಿ ರಾಯುಡು (Ambati Rayudu) ಅವರಂತೂ ನಿನ್ನೆ ರಾಜಸ್ಥಾನ್ ರಾಯಲ್ಸ್ ವಿರುದ್ಧ ಆರ್’ಸಿಬಿ ಪ್ಲೇ ಆಫ್’ನಲ್ಲಿ ಸೋಲು ಕಂಡ ನಂತರ ಆರ್’ಸಿಬಿಯನ್ನು ಕಟು ಶಬ್ದಗಳಲ್ಲಿ ಟೀಕಿಸಿದ್ದಾರೆ. ‘’ಸಂಭ್ರಮಿಸುವ ಮೂಲಕ ಮತ್ತು ಆಕ್ರಮಣಕಾರಿಯಾಗಿ ವರ್ತಿಸುವ ಮೂಲಕ ಐಪಿಎಲ್ ಟ್ರೋಫಿ ಗೆಲ್ಲಲು ಸಾಧ್ಯವಿಲ್ಲ. ಐಪಿಎಲ್ ಟ್ರೋಫಿ ಎತ್ತಬೇಕಾದರೆ ನೀವು ಪ್ಲೇ ಆಫ್’ನಲ್ಲಿ ಉತ್ತಮ ಕ್ರಿಕೆಟ್ ಆಡಿ ನಿರ್ಣಾಯಕ ಪಂದ್ಯಗಳನ್ನು ಗೆಲ್ಲಲೇಬೇಕು’’ ಎಂದು ಆರ್’ಸಿಬಿಯನ್ನು ಗುರಿಯಾಗಿಸಿಕೊಂಡು ರಾಯುಡು ಹೇಳಿಕೆ ಕೊಟ್ಟಿದ್ದಾರೆ.
ಸಿಎಸ್’ಕೆ ಅಭಿಮಾನಿಗಳು, ಮಾಜಿ ಆಟಗಾರರು ಆರ್’ಸಿಬಿ ವಿರುದ್ಧ ನಂಜು ಕಾರುತ್ತಿದ್ದರೆ, ಇತ್ತ ಸಿಎಸ್’ಕೆ ಫ್ರಾಂಚೈಸಿ ಕ್ರಿಕೆಟ್’ಗೆ ವಿದಾಯ ಹೇಳಿದ ಆರ್’ಸಿಬಿ ಆಟಗಾರ ದಿನೇಶ್ ಕಾರ್ತಿಕ್ (Dinesh Karthik) ಅವರಿಗೆ ವಿಶೇಷ ಪೋಸ್ಚರ್ ಮೂಲಕ ಗೌರವ ಸಲ್ಲಿಸಿದೆ. ತಮಿಳುನಾಡಿನವರೇ ಆದ ದಿನೇಶ್ ಕಾರ್ತಿಕ್ ಐಪಿಎಲ್’ನಲ್ಲಿ ಪ್ರತಿನಿಧಿಸಿದ ಆರೂ ತಂಡಗಳ ಫೋಟೋಗಳನ್ನು ಪೋಸ್ಟರ್’ನಲ್ಲಿ ಹಾಕಿ ತನ್ನ ಟ್ವಿಟರ್ ಅಕೌಂಟ್’ನಲ್ಲಿ ಸಿಎಸ್’ಕೆ ಫ್ರಾಂಚೈಸಿ ಪೋಸ್ಟ್ ಮಾಡಿದೆ.
https://x.com/chennaiipl/status/1793566629068210552?s=46
ಇದನ್ನೂ ಓದಿ : 1% ಚಾನ್ಸ್, 99% ನಂಬಿಕೆ.. ಭರವಸೆಗಳೇ ಬತ್ತಿ ಹೋಗಿದ್ದವರ ಎದೆಯಲ್ಲಿ ಗೆಲುವಿನ ಕಿಚ್ಚು ಹೊತ್ತಿಸಿದ ಧೀರನೊಬ್ಬನ ಕಥೆ..!
ಅಹ್ಮದಾಬಾದ್’ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಿನ್ನೆ ರಾತ್ರಿ ನಡೆದ ಎಲಿಮಿನೇಟರ್ ಪಂದ್ಯದಲ್ಲಿ ರಾಜಸ್ಥಾನ್ ವಿರುದ್ಧ ಆರ್’ಸಿಬಿ ಸೋಲು ಕಾಣುತ್ತಿದ್ದಂತೆ 38 ವರ್ಷದ ವಿಕೆಟ್ ಕೀಪರ್ ಬ್ಯಾಟರ್ ದಿನೇಶ್ ಕಾರ್ತಿಕ್ ಕ್ರಿಕೆಟ್’ಗೆ ವಿದಾಯ ಘೋಷಿಸಿದ್ದಾರೆ. ಐಪಿಎಲ್ 2024 ಪ್ಲೇ ಆಫ್ (IPL 2024 play off) ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ (Royal Challengers Bengaluru), ರಾಜಸ್ಥಾನ ರಾಯಲ್ಸ್ (Rajasthan Royals) ವಿರುದ್ಧ 4 ವಿಕೆಟ್’ಗಳ ಸೋಲು ಅನುಭವಿಸಿ ಟೂರ್ನಿಯಿಂದ ನಿರ್ಗಮಿಸಿದೆ. ಇದರೊಂದಿಗೆ ‘’ಈ ಸಲ ಕಪ್ ನಮ್ದೇ’’ ಎಂಬ ನಿರೀಕ್ಷೆ ಸತತ 17ನೇ ವರ್ಷವೂ ಸುಳ್ಳಾಗಿದೆ.
ಇದನ್ನೂ ಓದಿ : Dhoni Meets CISF Soldiers: RCB ವಿರುದ್ಧದ ಹೈವೋಲ್ಟೇಜ್ ಪಂದ್ಯಕ್ಕೂ ಮುನ್ನ ಸೈನಿಕರನ್ನು ಭೇಟಿ ಮಾಡಿದ ಧೋನಿ!
ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ರಾಯಲ್ ಚಾಲೆಂಜರ್ಸ್, 20 ಓವರ್’ಗಳಲ್ಲಿ 8 ವಿಕೆಟ್ ನಷ್ಟಕ್ಕೆ 172 ರನ್ ಗಳಿಸಲಷ್ಟೇ ಶಕ್ತವಾಯಿತು. ಗುರಿ ಬೆನ್ನಟ್ಟಿದ ರಾಯಲ್ಸ್ 19 ಓವರ್’ಗಳಲ್ಲಿ 6 ವಿಕೆಟ್ ಕಳೆದುಕೊಂಡು 174 ರನ್ ಗಳಿಸಿ 2ನೇ ಕ್ವಾಲಿಫೈಯರ್’ಗೆ ಅರ್ಹತೆ ಪಡೆಯಿತು. 39 ವರ್ಷದ ಡಿಕೆ ಅವರನ್ನು 2022ರ ಮೆಗ್ ಆಕ್ಷನ್’ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರ ಫ್ರಾಂಚೈಸಿ ₹5.5 ಕೋಟಿಗಳ ಖರೀದಿಸಿತ್ತು. 2018ರಲ್ಲಿ ಕೆಕೆಆರ್ ತಂಡದ ನಾಯಕತ್ವ ವಹಿಸಿದ್ದ ದಿನೇಶ್ ಕಾರ್ತಿಕ್ ತಂಡವನ್ನು ಪ್ಲೇ ಆಫ್’ಗೆ ಮುನ್ನಡೆಸಿದ್ದರು. ಐಪಿಎಲ್’ನಲ್ಲಿ ದಿನೇಶ್ ಕಾರ್ತಿಕ್ ಒಟ್ಟು 6 ತಂಡಗಳನ್ನು ಪ್ರತಿನಿಧಿಸಿದ್ದಾರೆ.

ಐಪಿಎಲ್’ನಲ್ಲಿ ದಿನೇಶ್ ಕಾರ್ತಿಕ್ ಪ್ರತಿನಿಧಿಸಿದ ತಂಡಗಳು:
2008-10: ಡೆಲ್ಲಿ ಡೇರ್ ಡೆವಿಲ್ಸ್
2011: ಕಿಂಗ್ಸ್ ಇಲವೆನ್ ಪಂಜಾಬ್
2012-13: ಮುಂಬೈ ಇಂಡಿಯನ್ಸ್
2014: ಡೆಲ್ಲಿ ಡೇರ್ ಡೆವಿಲ್ಸ್
2015: ರಾಯಲ್ ಚಾಲೆಂಜರ್ಸ್ ಬೆಂಗಳೂರು (₹10.5 ಕೋಟಿ)
2016-17: ಗುಜರಾತ್ ಲಯನ್ಸ್
2018-21: ಕೋಲ್ಕತಾ ನೈಟ್ ರೈಡರ್ಸ್
2022-24: ರಾಯಲ್ ಚಾಲೆಂಜರ್ಸ್ ಬೆಂಗಳೂರು
ಇದನ್ನೂ ಓದಿ : My Mom Is In Hospital..! ಅತ್ತ ಆಸ್ಪತ್ರೆಯಲ್ಲಿ ಹೆತ್ತ ತಾಯಿ, ಇತ್ತ ಐಪಿಎಲ್’ನಲ್ಲಿ ಕೆಕೆಆರ್ ಪರ ಮಗನ ಆಟ !
CSK Honoured Dinesh Karthik Chennai Super Kings IPL 2024