My Mom is in Hospital..! ಅತ್ತ ಆಸ್ಪತ್ರೆಯಲ್ಲಿ ಹೆತ್ತ ತಾಯಿ, ಇತ್ತ ಐಪಿಎಲ್’ನಲ್ಲಿ ಕೆಕೆಆರ್ ಪರ ಮಗನ ಆಟ !

Rahmanullah Gurbaz : ಬೆಂಗಳೂರು: ಎರಡು ಬಾರಿಯ ಚಾಂಪಿಯನ್ಸ್ ಕೋಲ್ಕತಾ ನೈಟ್ ರೈಡರ್ಸ್ (Kolkata Knight Riders) ತಂಡ ಐಪಿಎಲ್-2024 ಟೂರ್ನಿಯಲ್ಲಿ (IPL 2024) ಫೈನಲ್ ಪ್ರವೇಶಿಸಿದೆ.

Rahmanullah Gurbaz : ಬೆಂಗಳೂರು: ಎರಡು ಬಾರಿಯ ಚಾಂಪಿಯನ್ಸ್ ಕೋಲ್ಕತಾ ನೈಟ್ ರೈಡರ್ಸ್ (Kolkata Knight Riders) ತಂಡ ಐಪಿಎಲ್-2024 (IPL 2024)  ಟೂರ್ನಿಯಲ್ಲಿ ಫೈನಲ್ ಪ್ರವೇಶಿಸಿದೆ. ಅಹ್ಮದಾಬಾದ್’ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಮಂಗಳವಾರ ನಡೆದ ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ಶ್ರೇಯಸ್ ಅಯ್ಯರ್ ನಾಯಕತ್ವದ ಕೋಲ್ಕತಾ ನೈಟ್ ರೈಡರ್ಸ್ ತಂಡ, ಸನ್ ರೈಸರ್ಸ್ ಹೈದರಾಬಾದ್ (Sunrisers Hyderabad) ತಂಡವನ್ನು 8 ವಿಕೆಟ್’ಗಳಿಂದ ಭರ್ಜರಿಯಾಗಿ ಮಣಿಸಿ 3ನೇ ಬಾರಿ ಫೈನಲ್’ಗೆ ಎಂಟ್ರಿ ಕೊಟ್ಟಿದೆ.

Rahmanullah-Gurbaz Mother Admitted Hospital but Son Plying IPL 2024 for Kolkata Night Riders
Image Credit : IPL

ಗೆಲ್ಲಲು ಹೈದರಾಬಾದ್ ಒಡ್ಡಿದ 160 ರನ್’ಗಳ ಗುರಿಯನ್ನು ಬೆನ್ನಟ್ಟುವ ಸಂದರ್ಭದಲ್ಲಿ ಕೆಕೆಆರ್ ತಂಡಕ್ಕೆ ಆರಂಭಿಕರಾದ ರಹ್ಮನುಲ್ಲಾ ಗುರ್ಬಾಜ್ (Rahmanullah Gurbaz) ಮತ್ತು ಸುನಿಲ್ ನರೈನ್ (Sunil Narine) ಮೊದಲ ವಿಕೆಟ್’ಗೆ ಕೇವಲ 3.2 ಓವರ್’ಗಳಲ್ಲಿ 44 ರನ್ ಸೇರಿಸಿ ಸ್ಫೋಟಕ ಆರಂಭ ಒದಗಿಸಿದರು.

ಅಫ್ಘಾನಿಸ್ತಾನದ ವಿಕೆಟ್ ಕೀಪರ್ ಗುರ್ಬಾಜ್ 14 ಎಸೆತಗಳಲ್ಲಿ 2 ಬೌಂಡರಿ ಹಾಗೂ 2 ಸಿಕ್ಸರ್’ಗಳ ಸಹಿತ 23 ರನ್ ಸಿಡಿಸಿ ಕೆಕೆಆರ್’ಟಗೆ ಬಿರುಸಿನ ಆರಂಭ ಒದಗಿಸಿದರು. ಇದು ಈ ಐಪಿಎಲ್’ನಲ್ಲಿ 22 ವರ್ಷದ ರಹ್ಮನುಲ್ಲಾ ಗುರ್ಬಾಜ್’(Rahmanullah Gurbaz ) ಗೆ ಮೊದಲ ಪಂದ್ಯ. ಆರಂಭದಿಂದ ಇಂಗ್ಲೆಂಡ್ ವಿಕೆಟ್ ಕೀಪರ್ ಫಿಲ್ ಸಾಲ್ಟ್ ಪ್ಲೇಯಿಂಗ್ XIನಲ್ಲಿ ಆಡಿದ್ದರಿಂದ ಗುರ್ಬಾಜ್’ಗೆ  ಅವಕಾಶ ಸಿಕ್ಕಿರಲಿಲ್ಲ. ಆದರೆ ಫಿಲ್ ಸಾಲ್ಟ್ ಟಿ20 ವಿಶ್ವಕಪ್ ಸಿದ್ಧತೆಗಾಗಿ ತವರಿಗೆ ಮರಳಿರುವ ಕಾರಣ ಗುರ್ಬಾಜ್ ಅವಕಾಶ ಪಡೆದಿದ್ದಾರೆ.

ಇದನ್ನೂ ಓದಿ : Shreyas Iyer: ಐಪಿಎಲ್ ಫೈನಲ್ ತಲುಪಿದ ಕೆಕೆಆರ್, ಬಿಸಿಸಿಐ ಎಷ್ಟು ತುಳಿದರೂ ಮೇಲೆದ್ದು ನಿಂತ ಮುಂಬೈಕರ್ !

ತಾಯಿ ಅನಾರೋಗ್ಯದಿಂದ ಬಳಲುತ್ತಿರುವ ಕಾರಣ ಈ ತಿಂಗಳ ಮೊದಲ ವಾರದಲ್ಲೇ ಗುರ್ಬಾಜ್ ತವರಿಗೆ ಮರಳಿದ್ದರು. ಆಸ್ಪತ್ರೆಯಲ್ಲಿದ್ದು ತಾಯಿಯನ್ನು ನೋಡಿಕೊಳ್ಳುತ್ತಿದ್ದ ಗುರ್ಬಾಜ್’ಗೆ ಕೆಲ ದಿನಗಳ ಹಿಂದೆ ಕೆಕೆಆರ್ ತಂಡದಿಂದ ಮೆಸೇಜ್ ಬಂದಿತ್ತು. ಫಿಲ್ ಸಾಲ್ಟ್ ಅಲಭ್ಯತೆಯ ಕಾರಣ, ಗುರ್ಬಾಜ್’ಗೆ ಕೆಕೆಆರ್ ಟೀಮ್ ಮ್ಯಾನೇಜ್ಮೆಟ್ ಕರೆ ಮಾಡಿತ್ತು. ಸನ್ ರೈಸರ್ಸ್ ಹೈದರಾಬಾದ್ ವಿರುದ್ಧ ಮೊದಲ ಕ್ವಾಲಿಫೈಯರ್ ಪಂದ್ಯ ಗೆದ್ದು ಫೈನಲ್ ತಲುಪಿದ ನಂತರ ನಡೆದ ಸುದ್ದಿಗೋಷ್ಠಿಯಲ್ಲಿ ತಮ್ಮ ವೈಯಕ್ತಿಕ ಜೀವನದ ಸಮಸ್ಯೆಯ ಬಗ್ಗೆ ಸ್ವತಃ ಗುರ್ಬಾಜ್ ಅವರೇ ಮಾತನಾಡಿದ್ದಾರೆ.

Rahmanullah-Gurbaz Mother Admitted Hospital but Son Plying IPL 2024 for Kolkata Night Riders
Image Credit : IPL

“ನನ್ನ ತಾಯಿ ಇನ್ನೂ ಆಸ್ಪತ್ರೆಯಲ್ಲೇ ಇದ್ದಾರೆ. ನಾನು ತಾಯಿಯನ್ನು ನೋಡಿಕೊಳ್ಳಲು ಅಲ್ಲಿಗೆ ಹೋಗಿದ್ದೆ. ಫಿಲ್ ಸಾಲ್ಟ್ ತಂಡವನ್ನು ತೊರೆದ ನಂತರ ಇದ್ದಕ್ಕಿದ್ದಂತೆ ಕೆಕೆಆರ್ ತಂಡದಿಂದ ನನಗೆ ಕರೆ ಬಂತು. “ಗುರ್ಬಾಜ್, ನಮಗೆ ನಿನ್ನ ಅವಶ್ಯಕತೆಯಿದೆ, ಬರುತ್ತೀಯಾ” ಎಂದು ಅವರು ಮೆಸೇಜ್ ಮಾಡಿದರು. ನಾನು “ಯೆಸ್, ಬರುತ್ತೇನೆ”ಎಂದೆ. ಆಸ್ಪತ್ರೆಯಲ್ಲಿರುವ ತಾಯಿಯ ಜೊತೆ ಮಾತನಾಡುತ್ತಿದ್ದೇನೆ. ಕೆಕೆಆರ್ ಕೂಡ ನನ್ನ ಕುಟುಂಬ. ನಾನು ತಾಯಿಯ ಜೊತೆ ಕೆಕೆಆರ್ ಕುಟುಂಬವನ್ನೂ ನಿಭಾಯಿಸಬೇಕಿದೆ. ಇದು ತುಂಬಾ ಕಷ್ಟದ ಕೆಲಸ. ಆದರೆ ನಾನು ಇದನ್ನು ಮಾಡಲೇಬೇಕಿದೆ” ಎಂದು ರಹ್ಮನುಲ್ಲಾ ಗುರ್ಬಾಜ್ ಹೇಳಿದ್ದಾರೆ.

ಇದನ್ನೂ ಓದಿ : RCB Vs RR IPL 2024 Play Off: ಐಪಿಎಲ್ ಎಲಿನೇಟರ್ ಪಂದ್ಯ: ಆರ್’ಸಿಬಿಗೆ ರಾಯಲ್ಸ್ ಎದುರಾಳಿ, ಫೈನಲ್’ಗೆ ಮೂರೇ ಮೆಟ್ಟಿಲು !

ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ಕೋಲ್ಕತಾ ನೈಟ್ ರೈಡರ್ಸ್ ವಿರುದ್ಧ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಸನ್ ರೈಸರ್ಸ್ ಹೈದರಾಬಾದ್ ತಂಡ, 19.3 ಓವರ್’ಗಳಲ್ಲಿ ಕೇವಲ 159 ರನ್ನಿಗೆ ಆಲೌಟಾಯಿತು. ನಂತರ ಗುರಿ ಬೆನ್ನಟ್ಟಿದ ಕೆಕೆಆರ್ ಕೇವಲ 13.4 ಓವರ್’ಗಳಲ್ಲಿ 2 ವಿಕೆಟ್ ನಷ್ಟಕ್ಕೆ 164 ರನ್ ಗಳಿಸಿ ಭರ್ಜರಿ ಜಯ ದಾಖಲಿಸಿತು. ಕೆಕೆಆರ್ ಪರ ನಾಯಕ ಶ್ರೇಯಸ್ ಅಯ್ಯರ್ 24 ಎಸೆತಗಳಲ್ಲಿ 5 ಬೌಂಡರಿ ಹಾಗೂ 4 ಸಿಕ್ಸರ್’ಗಳನ್ನೊಳಗೊಂಡ ಅಜೇಯ 58 ರನ್ ಗಳಿಸಿದರೆ, ವೆಂಕಟೇಶ್ ಅಯ್ಯರ್ 28 ಎಸೆತಗಳಲ್ಲಿ 5 5 ಬೌಂಡರಿ ಹಾಗೂ 4 ಸಿಕ್ಸರ್’ಗಳ ಸಹಿತ ಅಜೇಯ 51 ರನ್ ಸಿಡಿಸಿದರು. ಈ ಜೋಡಿ ಮುರಿಯದ 3ನೇ ವಿಕೆಟ್’ಗೆ 97 ರನ್ ಸೇರಿಸಿ ಕೆಕೆಆರ್’ಗೆ ಸುಲಭ ಗೆಲುವು ತಂದು ಕೊಟ್ಟಿತು.

ಇದನ್ನೂ ಓದಿ : Chris Gayle Play For RCB Next Year : ಮುಂದಿನ ವರ್ಷ ಆರ್’ಸಿಬಿ ಪರ ಆಡ್ತಾರಾ ಕ್ರಿಸ್ ಗೇಲ್ ? ಗೇಲ್’ಗೆ ಬಿಗ್ ಆಫರ್ ಕೊಟ್ಟ ಕೊಹ್ಲಿ!

Rahmanullah Gurbaz Mother Admitted Hospital but Son Plying IPL 2024 for Kolkata Night Riders

Comments are closed.