ಬರ್ಮಿಂಗ್ಹ್ಯಾಮ್ : Lakshya Sen Won Gold Medal : ಬರ್ಮಿಂಗ್ಹ್ಯಾಮ್ನಲ್ಲಿ ನಡೆಯುತ್ತಿರುವ ಕೊನೆಯ ದಿನದ ಕಾಮನ್ವೆಲ್ತ್ ಗೇಮ್ಸ್ನಲ್ಲಿ ಭಾರತವು ಮತ್ತೊಂದು ಚಿನ್ನದ ಪದಕಕ್ಕೆ ಮುತ್ತಿಟ್ಟಿದೆ. ಬ್ಯಾಡ್ಮಿಂಟನ್ನ ಸಿಂಗಲ್ಸ್ ವಿಭಾಗದಲ್ಲಿ ಭಾರತದ ಲಕ್ಷ್ಯ ಸೇನ್ ಮಲೇಷಿಯಾದ ಎನ್ಜಿ ತ್ಸೆ ಯೋಂಗ್ರನ್ನು 21-191, 21-9, 21-16 ಅಂತರದಲ್ಲಿ ಫೈನಲ್ನಲ್ಲಿ ಮಣಿಸುವ ಮೂಲಕ ಚಿನ್ನದ ಪದಕವನ್ನು ಗಳಿಸಿದ್ದಾರೆ .
ಮೊದಲ ಹಂತದಲ್ಲಿ ಎನ್ಜಿ ತ್ಸೆ ಯೋಂಗ್ ಮುನ್ನಡೆ ಕಾಯ್ದುಕೊಂಡಿದ್ದರು. ಆದರೆ ಯೋಂಗ್ರನ್ನು ಸರಿಗಟ್ಟುವಲ್ಲಿ ಯಶಸ್ವಿಯಾದ ಲಕ್ಷ್ಯ ಸೇನ್ 2 ಪಾಯಿಂಟ್ಗಳ ಅಂತರದಲ್ಲಿ ಸೋಲನ್ನು ಅನುಭವಿಸಿದ್ದಾರೆ.ಎರಡನೆ ಹಂತದಲ್ಲಿ ಲಕ್ಷ್ಯ ಸೇನ್ ಹಾಗೂ ಯೋಂಗ್ ನಡುವೆ ಭಾರೀ ಪೈಪೋಟಿ ಎದುರಾಗಿತ್ತು. ಎರಡನೇ ಹಂತದಲ್ಲಿ ಲಕ್ಷ್ಯ ಸಿಂಗ್ಗೆ ಹಿನ್ನೆಡೆ ನೀಡಿದ ಯೋಂಗ್ 21-9 ಅಂತರದಲ್ಲಿ ಸೆಟ್ನ್ನು ಗೆದ್ದುಕೊಂಡರು.
ಮೊದಲ ಎರಡು ಸುತ್ತಿನಲ್ಲಿ ಸಮಬಲ ಸಾಧಿಸಿದ ಬಳಿಕ ಲೆಮನ್ ಬ್ರೇಕ್ನಲ್ಲಿ ಲಕ್ಷ್ಯ 11 ಪಾಯಿಂಟ್ಗಳನ್ನು ಕಲೆ ಹಾಕಿ ಮುನ್ನಡೆಗೆ ಕಾಯ್ದುಕೊಂಡರು. ಮೂರನೇ ಸುತ್ತಿನಲ್ಲಿ 21-16 ಪಾಯಿಂಟ್ಗಳ ಅಂತರದಲ್ಲಿ ಎನ್ಜಿ ತ್ಸೆ ಯೋಂಗ್ರನ್ನು ಮಣಿಸುವ ಮೂಲಕ ಲಕ್ಷ್ಯ ಸಿಂಗ್ ಚಿನ್ನದ ಪದಕ್ಕೆ ಮುತ್ತಿಟ್ಟಿದ್ದಾರೆ. ಮೂರು ಸುತ್ತಿನ ಹಣಾಹಣಿಯಲ್ಲಿ ತೀವ್ರ ಪೈಪೋಟಿಯನ್ನು ಎದುರಿಸಿದ ಲಕ್ಷ್ಯ ಸೇನ್ ಅನುಭವಿ ಆಟಗಾರನ ಎದುರು ತನ್ನ ಸಾಮರ್ಥ್ಯ ಪ್ರದರ್ಶಿಸುವಲ್ಲಿ ಯಶಸ್ವಿಯಾದರು.
ಇತ್ತ ಮಹಿಳಾ ಸಿಂಗಲ್ಸ್ ಫೈನಲ್ನಲ್ಲಿ ಬ್ಯಾಡ್ಮಿಂಟನ್ ತಾರೆ ಪಿವಿ ಸಿಂಧು ಕೆನಡಾದ ಮಿಶೆಲ್ ಲಿ ಅವರನ್ನು 21-15, 21-13 ನೇರ ಸೆಟ್ಗಳಿಂದ ಸೋಲಿಸುವ ಮೂಲಕ ಭಾರತಕ್ಕೆ ಚಿನ್ನದ ಪದಕ ತಂದುಕೊಟ್ಟಿದ್ದಾರೆ. ಈ ಮೂಲಕ ಮಹಿಳಾ ಹಾಗೂ ಪುರುಷ ಸಿಂಗಲ್ಸ್ ಬ್ಯಾಡ್ಮಿಂಟನ್ನಲ್ಲಿ ಭಾರತವು ‘ಸ್ವರ್ಣ’ ಸಾಧನೆ ಮಾಡಿದಂತಾಗಿದೆ .
ಇದನ್ನು ಓದಿ : Siddramautsav program : ಸಿದ್ದರಾಮೋತ್ಸವದಿಂದ ನಡುಕ ಶುರುವಾಗಿದ್ದು ಬಿಜೆಪಿಗಲ್ಲ, ಕಾಂಗ್ರೆಸ್ಸಿಗರಿಗೆ : ಡಾ.ಸಿ.ಎನ್ ಅಶ್ವತ್ಥ ನಾರಾಯಣ
ಇದನ್ನೂ ಓದಿ : Saligrama: ಗಿರಿ ಫ್ರೆಂಡ್ಸ್(ರಿ ) ಚಿತ್ರಪಾಡಿ – ಸಾಲಿಗ್ರಾಮ: “ಮನೆಗೊಂದು ಮಕ್ಕಳ ಹೆಸರಲ್ಲಿ ಗಿಡ ನೆಡುವ “ವಿನೂತನ ಕಾರ್ಯಕ್ರಮ
ಇದನ್ನೂ ಓದಿ : Dipika Pallikal : ಕಂಚಿನ ಪದಕ ಗೆದ್ದ ದಿನೇಶ್ ಕಾರ್ತಿಕ್ ಪತ್ನಿ, ಅವಳಿ ಮಕ್ಕಳ ತಾಯಿ ದೀಪಿಕಾ
CWG 2022 Men’s Singles Badminton: Lakshya Sen Won Gold Medal