Dhoni car craze : ಹುಟ್ಟೂರಲ್ಲಿ ಓಬಿರಾಯನ ಕಾಲದ ರೋಲ್ಸ್ ರಾಯ್ಸ್ ಕಾರು ಓಡಿಸಿದ ಎಂ.ಎಸ್ ಧೋನಿ

ರಾಂಚಿ: ಕ್ರಿಕೆಟ್ ಜಗತ್ತು ಕಂಡ ಸಾರ್ವಕಾಲಿಕ ಶ್ರೇಷ್ಠ ದಿಗ್ಗಜ ನಾಯಕ, ಭಾರತಕ್ಕೆ ಎರಡು ವಿಶ್ವಕಪ್’ಗಳನ್ನ ಗೆದ್ದುಕೊಟ್ಟಿರುವ ಗ್ರೇಟ್ ಕ್ಯಾಪ್ಟನ್ ಎಂ.ಎಸ್ ಧೋನಿ (MS Dhoni), ಅತೀ ದೊಡ್ಡ ಕಾರು ಪ್ರಿಯ. ಜಾರ್ಖಂಡ್’ನ ರಾಂಚಿಯಲ್ಲಿರುವ ಧೋನಿ ಅವರ ಮನೆಯಲ್ಲಿ (Dhoni car craze) ಕಾರುಗಳ ದೊಡ್ಡ ಗ್ಯಾರೇಜ್ ಇದೆ. ಅಲ್ಲಿ ಧೋನಿ 20ಕ್ಕೂ ಹೆಚ್ಚು ಕಾರುಗಳನ್ನು ನಿಲ್ಲಿಸಿದ್ದಾರೆ.

ಹಳೆಯ ಮಾದರಿಯ ಕಾರುಗಳಿಂದ ಹಿಡಿದು ಹೊಸ ಹೊಸ ಕಾರುಗಳನ್ನು ಖರೀದಿಸುವುದು ಧೋನಿ ಅವರ ಹವ್ಯಾಸ. ಈ ಪೈಕಿ 1980ನೇ ಇಸವಿಯ ರೋಲ್ಸ್ ರಾಯ್ ಕಾರು ಕೂಡ ಧೋನಿ ಅವರ ಗ್ಯಾರೇಜ್’ನಲ್ಲಿದೆ. ಆ ಕಾರನ್ನು ಧೋನಿ ರಾಂಚಿಯ ರಸ್ತೆಯಲ್ಲಿ ಓಡಿಸಿದ್ದು, ಆ ವೀಡಿಯೊ ಈಗ ವೈರಲ್ ಆಗಿದೆ.

ಐಪಿಎಲ್-2023 ಟೂರ್ನಿಯಲ್ಲಿ ಎಂ.ಎಸ್ ಧೋನಿ ದಾಖಲೆಯ 5ನೇ ಬಾರಿ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಚಾಂಪಿಯನ್ ಪಟ್ಟಕ್ಕೇರಿಸಿದ್ದರು. ಧೋನಿ ನಾಯಕತ್ವದಲ್ಲಿ ಚೆನ್ನೈ ತಂಡ 2010, 2011, 2018, 2021 ಹಾಗೂ 2023ರಲ್ಲಿ ಐಪಿಎಲ್ ಚಾಂಪಿಯನ್ ಪಟ್ಟಕ್ಕೇರಿದೆ. ಧೋನಿ ನಾಯಕತ್ವದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡ 14 ವರ್ಷ ಐಪಿಎಲ್’ನಲ್ಲಿ ಆಡಿದ್ದು 12 ಬಾರಿ ಪ್ಲೇ ಆಫ್ ತಲುಪಿದೆ. 10 ಬಾರಿ ಫೈನಲ್ ತಲುಪಿ 5 ಬಾರಿ ಪ್ರಶಸ್ತಿ ಗೆದ್ದಿದೆ.

ಇದನ್ನೂ ಓದಿ : Syazrul Ezat Idrus : ಟಿ20 ವಿಶ್ವಕಪ್ ಕ್ವಾಲಿಫೈಯರ್, ಚೀನಾ 23ಕ್ಕೆ ಆಲೌಟ್; 8 ರನ್ನಿಗೆ 7 ವಿಕೆಟ್ ಕಬಳಿಸಿದ ಮಲೇಷ್ಯಾ ಬೌಲರ್

ಇದನ್ನೂ ಓದಿ : India Vs Pakistan World Cup match: ಭಾರತ Vs ಪಾಕಿಸ್ತಾನ ವಿಶ್ವಕಪ್ ಪಂದ್ಯ: 10 ಸೆಕೆಂಡ್ ಜಾಹೀರಾತಿಗೆ 30 ಲಕ್ಷ..!

2004ರಲ್ಲಿ ಭಾರತ ತಂಡಕ್ಕೆ ಪದಾರ್ಪಣೆ ಮಾಡಿದ್ದ ಜಾರ್ಖಂಡ್’ನ ರಾಂಚಿಯ ಎಂ.ಎಸ್ ಧೋನಿ ಭಾರತಕ್ಕೆ 2 ವಿಶ್ವಕಪ್’ಗಳನ್ನು ಗೆದ್ದುಕೊಟ್ಟಿದ್ದಾರೆ. 2007ರಲ್ಲಿ ಐಸಿಸಿ ಟಿ20 ವಿಶ್ವಕಪ್ ಗೆದ್ದುಕೊಟ್ಟಿದ್ದ ಧೋನಿ, 2011ರಲ್ಲಿ ಐಸಿಸಿ ಏಕದಿನ ವಿಶ್ವಕಪ್ ಗೆಲ್ಲಿಸಿಕೊಟ್ಟಿದ್ದರು. 2013ರಲ್ಲಿ ಧೋನಿ ನಾಯಕತ್ವದಲ್ಲಿ ಭಾರತ ತಂಡ, ಇಂಗ್ಲೆಂಡ್’ನಲ್ಲಿ ನಡೆದ ಐಸಿಸಿ ಚಾಂಪಿಯನ್ಸ್ ಟ್ರೋಫಿ ಟೂರ್ನಿಯಲ್ಲಿ ಚಾಂಪಿಯನ್ ಪಟ್ಟಕ್ಕೇರಿತ್ತು. ಐಸಿಸಿ ಟಿ20 ವಿಶ್ವಕಪ್, ಐಸಿಸಿ ಏಕದಿನ ವಿಶ್ವಕಪ್ ಹಾಗೂ ಐಸಿಸಿ ಚಾಂಪಿಯನ್ಸ್ ಟ್ರೋಫಿಗಳನ್ನು ಗೆದ್ದ ಜಗತ್ತಿನ ಮೊದಲ ಮತ್ತು ಏಕೈಕ ನಾಯಕನೆಂಬ ಖ್ಯಾತಿ ಧೋನಿ ಅವರದ್ದು. ಅಂತರಾಷ್ಟ್ರೀಯ ಕ್ರಿಕೆಟ್’ನಲ್ಲಿ ಒಟ್ಟು 538 ಪಂದ್ಯಗಳನ್ನಾಡಿರುವ ಎಂ.ಎಸ್ ಧೋನಿ, 16 ಶತಕ ಹಾಗೂ 108 ಅರ್ಧಶತಕಗಳ ಸಹಿತ 17,266 ರನ್ ಕಲೆ ಹಾಕಿದ್ದಾರೆ.

Dhoni car craze: MS Dhoni drove an old Rolls Royce at the birth place.

Comments are closed.