India World Cup plan : ವಿಶ್ವಕಪ್’ಗೂ ಮುನ್ನ ಕೇವಲ 12 ಪಂದ್ಯಗಳು ಬಾಕಿ, ಇನ್ನೂ ಫಿಕ್ಸ್ ಆಗಿಲ್ಲ ಟೀಮ್ ಇಂಡಿಯಾದ ಪ್ಲೇಯಿಂಗ್ XI

ಬೆಂಗಳೂರು : India World Cup plan : ಭಾರತದಲ್ಲಿ ನಡೆಯಲಿರುವ ಐಸಿಸಿ ಏಕದಿನ ವಿಶ್ವಕಪ್ (ICC Cricket World Cup 2023) ಟೂರ್ನಿಗಿನ್ನು ಕೇವಲ 68 ದಿನಗಳಷ್ಟೇ ಬಾಕಿ. ವಿಶ್ವಕಪ್ ಟೂರ್ನಿಗೂ ಮುನ್ನ ಭಾರತ ಒಟ್ಟು 12 ಏಕದಿನ ಪಂದ್ಯಗಳನ್ನಾಡಲಿದೆ. ತವರು ನೆಲದಲ್ಲೇ ಈ ಬಾರಿ ವಿಶ್ವಕಪ್ ನಡೆಯಲಿರುವ ಕಾರಣ ಟೀಮ್ ಇಂಡಿಯಾ ಮೇಲಿನ ನಿರೀಕ್ಷೆ ಇಮ್ಮಡಿಯಾಗಿದೆ. 2011ರಲ್ಲಿ ಭಾರತದಲ್ಲೇ ನಡೆದ ವಿಶ್ವಕಪ್ ಟೂರ್ನಿಯಲ್ಲಿ 28 ವರ್ಷಗಳ ನಂತರ ಚಾಂಪಿಯನ್ ಪಟ್ಟಕ್ಕೇರಿದ್ದ ಟೀಮ್ ಇಂಡಿಯಾ, ಈ ಬಾರಿಯೂ ವಿಶ್ವಕಪ್ ಗೆಲ್ಲುವ ಉತ್ಸಾಹದಲ್ಲಿದೆ. ಆದರೆ ತಂಡದ ಸಿದ್ಧತೆ ಅಷ್ಟಕ್ಕಷ್ಟೇ.

ವಿಶ್ವಕಪ್ ಟೂರ್ನಿಗೆ ಭಾರತದ ಸಿದ್ಧತೆ ಗುರುವಾರ ಆರಂಭವಾಗಲಿರುವ ವೆಸ್ಟ್ ಇಂಡೀಸ್ ವಿರುದ್ಧದ ಏಕದಿನ ಸರಣಿಯ ಮೂಲಕ ಆರಂಭವಾಗಲಿದೆ. ವಿಂಡೀಸ್ ವಿರುದ್ಧದ ಏಕದಿನ ಸರಣಿಯ ನಂತರ ಭಾರತ, ಪ್ರವಾಸಿ ಆಸ್ಟ್ರೇಲಿಯಾ ವಿರುದ್ಧ ಸೆಪ್ಟೆಂಬರ್ 22ರಿಂದ 27ವರೆಗೆ 3 ಪಂದ್ಯಗಳ ಏಕದಿನ ಸರಣಿಯನ್ನಾಡಲಿದೆ. ಇದಕ್ಕೂ ಮೊದಲು ಆಗಸ್ಟ್ 31ರಿಂದ ಶ್ರೀಲಂಕಾದಲ್ಲಿ ಏಷ್ಯಾಕಪ್ ಟೂರ್ನಿಯನ್ನಾಡಲಿದೆ.

ವಿಶ್ವಕಪ್’ಗೆ ಸಜ್ಜಾಗುತ್ತಿರುವ ಭಾರತ ತಂಡದ ಪ್ಲೇಯಿಂಗ್ XI ಇನ್ನೂ ರೆಡಿಯಾಗಿಲ್ಲ. ಮುಖ್ಯವಾಗಿ 4ನೇ ಕ್ರಮಾಂಕ ಹಾಗೂ 5ನೇ ಕ್ರಮಾಂಕಗಳಲ್ಲಿ ಆಡಬೇಕಿರುವ ಶ್ರೇಯಸ್ ಅಯ್ಯರ್ ಮತ್ತು ಕೆ.ಎಲ್ ರಾಹುಲ್ ಗಾಯದಿಂದ ಚೇತರಿಸಿಕೊಳ್ಳುತ್ತಿದ್ದು, ಇನ್ನಷ್ಟೇ ಭಾರತ ತಂಡಕ್ಕೆ ಕಂಬ್ಯಾಕ್ ಮಾಡಬೇಕಿದೆ. ಮಹತ್ವದ ವಿಶ್ವಕಪ್’ನಲ್ಲಿ ಈ ಇಬ್ಬರು ಆಟಗಾರರ ಲಭ್ಯತೆ ಭಾರತಕ್ಕೆ ಅನಿವಾರ್ಯವಾಗಿದೆ. ಇನ್ನು ಪ್ರೀಮಿಯಂ ಫಾಸ್ಟ್ ಬೌಲರ್ ಜಸ್ಪ್ರೀತ್ ಬುಮ್ರಾ ಕೂಡ ಇನ್ನೂ ಫಿಟ್ ಆಗದಿರುವುದು ಭಾರತ ತಂಡದ ಚಿಂತೆಗೆ ಕಾರಣವಾಗಿದೆ. ರಸ್ತೆ ಅಪಘಾತದಲ್ಲಿ ಗಾಯಗೊಂಡು ಚೇತರಿಸಿಕೊಳ್ಳುತ್ತಿರುವ ವಿಕೆಟ್ ಕೀಪರ್ ರಿಷಭ್ ಪಂತ್ ಈ ವರ್ಷ ಕ್ರಿಕೆಟ್ ಆಡುವುದೇ ಅನುಮಾನ. ಹೀಗಾಗಿ ವಿಶ್ವಕಪ್’ನಲ್ಲಿ ಪಂತ್ ಆಡುತ್ತಿಲ್ಲ.

ಐಸಿಸಿ ವಿಶ್ವಕಪ್ ಟೂರ್ನಿ ಅಕ್ಟೋಬರ್ 5ರಂದು ಆರಂಭವಾಗಲಿದೆ. ಅಕ್ಟೋಬರ್ 5ರಂದು ಅಹ್ಮದಾಬಾದ್’ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯುವ ಟೂರ್ನಿಯ ಉದ್ಘಾಟನಾ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಇಂಗ್ಲೆಂಡ್ ಮತ್ತು ಕಳೆದ ಬಾರಿಯ ರನ್ನರ್ಸ್ ಅಪ್ ನ್ಯೂಜಿಲೆಂಡ್ ತಂಡಗಳು ಮುಖಾಮುಖಿಯಾಗಲಿವೆ. ಅಕ್ಟೋಬರ್ 15ರಂದು ನಡೆಯುವ ಭಾರತ ಮತ್ತು ಪಾಕಿಸ್ತಾನ (India Vs Pakistan) ಪಂದ್ಯಕ್ಕೂ ಅಹ್ಮದಾಬಾದ್’ನ ನರೇಂದ್ರ ಮೋದಿ ಕ್ರೀಡಾಂಗಣವೇ ಆತಿಥ್ಯ ವಹಿಸಲಿದೆ. ಅಕ್ಟೋಬರ್ 8ರದು ಆಸ್ಟ್ರೇಲಿಯಾ ವಿರುದ್ಧ ಚೆನ್ನೈನಲ್ಲಿ ನಡೆಯುವ ಪಂದ್ಯದ ಮೂಲಕ 2 ಬಾರಿಯ ಚಾಂಪಿಯನ್ ಭಾರತ ತಂಡದ ವಿಶ್ವಕಪ್ ಅಭಿಯಾನ ಆರಂಭವಾಗಲಿದೆ.

ಇದನ್ನೂ ಓದಿ : Syazrul Ezat Idrus : ಟಿ20 ವಿಶ್ವಕಪ್ ಕ್ವಾಲಿಫೈಯರ್, ಚೀನಾ 23ಕ್ಕೆ ಆಲೌಟ್; 8 ರನ್ನಿಗೆ 7 ವಿಕೆಟ್ ಕಬಳಿಸಿದ ಮಲೇಷ್ಯಾ ಬೌಲರ್

ಐಸಿಸಿ ವಿಶ್ವಕಪ್ ಟೂರ್ನಿಯ ಸಂಪೂರ್ಣ ವೇಳಾಪಟ್ಟಿ (ICC World Cup 2023 Schedule) :

  • ಅಕ್ಟೋಬರ್ 5: ಇಂಗ್ಲೆಂಡ್ Vs ನ್ಯೂಜಿಲೆಂಡ್ (ಅಹ್ಮದಾಬಾದ್)
  • ಅಕ್ಟೋಬರ್ 6: ಪಾಕಿಸ್ತಾನ Vs ಕ್ವಾಲಿಫೈಯರ್-1 (ಹೈದರಾಬಾದ್)
  • ಅಕ್ಟೋಬರ್ 7: ಬಾಂಗ್ಲಾದೇಶ Vs ಅಫ್ಘಾನಿಸ್ತಾನ (ಧರ್ಮಶಾಲಾ)
  • ಅಕ್ಟೋಬರ್ 7: ದಕ್ಷಿಣ ಆಫ್ರಿಕಾ Vs ಕ್ವಾಲಿಫೈಯರ್-2 (ದೆಹಲಿ)
  • ಅಕ್ಟೋಬರ್ 8: ಭಾರತ Vs ಆಸ್ಟ್ರೇಲಿಯಾ (ಚೆನ್ನೈ)
  • ಅಕ್ಟೋಬರ್ 9: ನ್ಯೂಜಿಲೆಂಡ್ Vs ಕ್ವಾಲಿಫೈಯರ್-1 (ಹೈದರಾಬಾದ್)
  • ಅಕ್ಟೋಬರ್ 10: ಇಂಗ್ಲೆಂಡ್ Vs ಬಾಂಗ್ಲಾದೇಶ (ಧರ್ಮಶಾಲಾ)
  • ಅಕ್ಟೋಬರ್ 11: ಭಾರತ Vs ಅಫ್ಘಾನಿಸ್ತಾನ (ದೆಹಲಿ)
  • ಅಕ್ಟೋಬರ್ 12: ಪಾಕಿಸ್ತಾನ Vs ಕ್ವಾಲಿಫೈಯರ್-2 (ಹೈದರಾಬಾದ್)
  • ಅಕ್ಟೋಬರ್ 13: ಆಸ್ಟ್ರೇಲಿಯಾ Vs ದಕ್ಷಿಣ ಆಫ್ರಿಕಾ (ಲಕ್ನೋ)
  • ಅಕ್ಟೋಬರ್ 14: ಇಂಗ್ಲೆಂಡ್ Vs ಅಫ್ಘಾನಿಸ್ತಾನ (ದೆಹಲಿ)
  • ಅಕ್ಟೋಬರ್ 14: ಬಾಂಗ್ಲಾದೇಶ Vs ನ್ಯೂಜಿಲೆಂಡ್ (ಚೆನ್ನೈ)
  • ಅಕ್ಟೋಬರ್ 15: ಭಾರತ Vs ಪಾಕಿಸ್ತಾನ (ಅಹ್ಮದಾಬಾದ್)
  • ಅಕ್ಟೋಬರ್ 16: ಆಸ್ಟ್ರೇಲಿಯಾ Vs ಕ್ವಾಲಿಫೈಯರ್-2 (ಲಕ್ನೋ)
  • ಅಕ್ಟೋಬರ್ 17: ದಕ್ಷಿಣ ಆಫ್ರಿಕಾ Vs ಕ್ವಾಲಿಫೈಯರ್-1(ಧರ್ಮಶಾಲಾ)
  • ಅಕ್ಟೋಬರ್ 18: ಅಫ್ಘಾನಿಸ್ತಾನ Vs ನ್ಯೂಜಿಲೆಂಡ್ (ಚೆನ್ನೈ)
  • ಅಕ್ಟೋಬರ್ 19: ಭಾರತ Vs ಬಾಂಗ್ಲಾದೇಶ (ಪುಣೆ)
  • ಅಕ್ಟೋಬರ್ 20: ಆಸ್ಟ್ರೇಲಿಯಾ Vs ಪಾಕಿಸ್ತಾನ (ಬೆಂಗಳೂರು)
  • ಅಕ್ಟೋಬರ್ 21: ಇಂಗ್ಲೆಂಡ್ Vs ದಕ್ಷಿಣ ಆಫ್ರಿಕಾ (ಮುಂಬೈ)
  • ಅಕ್ಟೋಬರ್ 21: ಕ್ವಾಲಿಫೈಯರ್-1 Vs ಕ್ವಾಲಿಫೈಯರ್-2 (ಲಕ್ನೋ)
  • ಅಕ್ಟೋಬರ್ 22: ಭಾರತ Vs ನ್ಯೂಜಿಲೆಂಡ್ (ಧರ್ಮಶಾಲಾ)
  • ಅಕ್ಟೋಬರ್ 23: ಪಾಕಿಸ್ತಾನ Vs ಅಫ್ಘಾನಿಸ್ತಾನ (ಚೆನ್ನೈ)
  • ಅಕ್ಟೋಬರ್ 24: ದಕ್ಷಿಣ ಆಫ್ರಿಕಾ Vs ಬಾಂಗ್ಲಾದೇಶ (ಮುಂಬೈ)
  • ಅಕ್ಟೋಬರ್ 25: ಆಸ್ಟ್ರೇಲಿಯಾ Vs ಕ್ವಾಲಿಫೈಯರ್-1 (ದೆಹಲಿ)
  • ಅಕ್ಟೋಬರ್ 26: ಇಂಗ್ಲೆಂಡ್ Vs ಕ್ವಾಲಿಫೈಯರ್-2 (ಬೆಂಗಳೂರು)
  • ಅಕ್ಟೋಬರ್ 27: ಪಾಕಿಸ್ತಾನ Vs ದಕ್ಷಿಣ ಆಫ್ರಿಕಾ (ಚೆನ್ನೈ)
  • ಅಕ್ಟೋಬರ್ 28: ಕ್ವಾಲಿಫೈಯರ್-2 Vs ಬಾಂಗ್ಲಾದೇಶ (ಕೋಲ್ಕತಾ)
  • ಅಕ್ಟೋಬರ್ 28: ಆಸ್ಟ್ರೇಲಿಯಾ Vs ನ್ಯೂಜಿಲೆಂಡ್ (ಧರ್ಮಶಾಲಾ)
  • ಅಕ್ಟೋಬರ್ 29: ಭಾರತ Vs ಇಂಗ್ಲೆಂಡ್ (ಲಕ್ನೋ)
  • ಅಕ್ಟೋಬರ್ 30: ಅಫ್ಘಾನಿಸ್ತಾನ Vs ಕ್ವಾಲಿಫೈಯರ್-2 (ಪುಣೆ)
  • ಅಕ್ಟೋಬರ್ 31: ಪಾಕಿಸ್ತಾನ Vs ಬಾಂಗ್ಲಾದೇಶ (ಕೋಲ್ಕತಾ)
  • ನವೆಂಬರ್ 1: ದಕ್ಷಿಣ ಆಫ್ರಿಕಾ Vs ನ್ಯೂಜಿಲೆಂಡ್ (ಪುಣೆ)
  • ನವೆಂಬರ್ 2: ಭಾರತ Vs ಕ್ವಾಲಿಫೈಯರ್-2 (ಮುಂಬೈ)
  • ನವೆಂಬರ್ 3: ಕ್ವಾಲಿಫೈಯರ್-1Vs ಅಫ್ಘಾನಿಸ್ತಾನ (ಲಕ್ನೋ)
  • ನವೆಂಬರ್ 4: ಇಂಗ್ಲೆಂಡ್ Vs ಆಸ್ಟ್ರೇಲಿಯಾ (ಅಹ್ಮದಾಬಾದ್)
  • ನವೆಂಬರ್ 4: ಪಾಕಿಸ್ತಾನ Vs ನ್ಯೂಜಿಲೆಂಡ್ (ಬೆಂಗಳೂರು)
  • ನವೆಂಬರ್ 5: ದಕ್ಷಿಣ ಆಫ್ರಿಕಾ Vs ಭಾರತ (ಕೋಲ್ಕತಾ)
  • ನವೆಂಬರ್ 6: ಬಾಂಗ್ಲಾದೇಶ Vs ಕ್ವಾಲಿಫೈಯರ್-2 (ದೆಹಲಿ)
  • ನವೆಂಬರ್ 7: ಆಸ್ಟ್ರೇಲಿಯಾ Vs ಅಫ್ಘಾನಿಸ್ತಾನ (ಮುಂಬೈ)
  • ನವೆಂಬರ್ 8: ಇಂಗ್ಲೆಂಡ್ Vs ಕ್ವಾಲಿಫೈಯರ್-1 (ಪುಣೆ)
  • ನವೆಂಬರ್ 9: ನ್ಯೂಜಿಲೆಂಡ್ Vs ಕ್ವಾಲಿಫೈಯರ್-2 (ಬೆಂಗಳೂರು)
  • ನವೆಂಬರ್ 10: ದಕ್ಷಿಣ ಆಫ್ರಿಕಾ Vs ಅಫ್ಘಾನಿಸ್ತಾನ (ಅಹ್ಮದಾಬಾದ್)
  • ನವೆಂಬರ್ 11: ಭಾರತ Vs ಕ್ವಾಲಿಫೈಯರ್-1 (ಬೆಂಗಳೂರು)
  • ನವೆಂಬರ್ 12: ಇಂಗ್ಲೆಂಡ್ Vs ಪಾಕಿಸ್ತಾನ (ಕೋಲ್ಕತಾ)
  • ನವೆಂಬರ್ 12: ಆಸ್ಟ್ರೇಲಿಯಾ Vs ಬಾಂಗ್ಲಾದೇಶ (ಪುಣೆ)
  • ನವೆಂಬರ್ 15: ಸೆಮಿಫೈನಲ್-1 (ಮುಂಬೈ)
  • ನವೆಂಬರ್ 16: ಸೆಮಿಫೈನಲ್-2 (ಕೋಲ್ಕತಾ)
  • ನವೆಂಬರ್ 19: ಫೈನಲ್ (ಅಹ್ಮದಾಬಾದ್)

India World Cup plan: Only 12 matches left before the World Cup, Team India’s playing XI is not fixed yet

Comments are closed.