ಮಂಗಳವಾರ, ಏಪ್ರಿಲ್ 29, 2025
HomeSportsCricketDhoni Factor in Sri Lanka's Asia Cup Victory: ನಂಬರ್ 7 'D' ಮೋಡಿ.....

Dhoni Factor in Sri Lanka’s Asia Cup Victory: ನಂಬರ್ 7 ‘D’ ಮೋಡಿ.. ಶ್ರೀಲಂಕಾ ಏಷ್ಯಾ ಕಪ್ ಗೆಲುವಿನ ಹಿಂದೆ ಧೋನಿ ಜರ್ಸಿ ನಂಬರ್ ಮೋಡಿ

- Advertisement -

ದುಬೈ: (Asia Cup Victory Dhoni Factor)ಏಷ್ಯಾ ಕಪ್ ಟೂರ್ನಿಯ ಫೈನಲ್ ಪಂದ್ಯದಲ್ಲಿ (Asia Cup Final) ಪಾಕಿಸ್ತಾನವನ್ನು 23 ರನ್’ಗಳಿಂದ ಬಗ್ಗು ಬಡಿದ ಶ್ರೀಲಂಕಾ ತಂಡ ಚಾಂಪಿಯನ್ ಪಟ್ಟಕ್ಕೇರಿದೆ. ದುಬೈ ಅಂತಾರಾಷ್ಟ್ರೀಯ ಕ್ರಿಕೆಟ್ ಮೈದಾನದಲ್ಲಿ ಭಾನುವಾರ ನಡೆದ ಪಂದ್ಯದಲ್ಲಿ ಪಾಕಿಸ್ತಾನದ ಸೊಕ್ಕಡಗಿಸಿದ ಶ್ರೀಲಂಕಾ ಅವಿಸ್ಮರಣೀಯ ಗೆಲುವು ದಾಖಲಿಸಿತು. ಲಂಕಾದ ಈ ಗೆಲುವಿನ ಹಿಂದೆ ಟೀಮ್ ಇಂಡಿಯಾದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿಯವರ ನಂ.7 ಜರ್ಸಿ ಮೋಡಿಯಿದೆ.

ಶ್ರೀಲಂಕಾ ಏಷ್ಯಾ ಕಪ್ ಗೆದ್ದಿರುವುದಕ್ಕೂ ಧೋನಿ ನಂ.7 ಜರ್ಸಿಗೂ ಏನ್ ಸಂಬಂಧ? ವಿಷ್ಯ ಇರೋದು ಅಲ್ಲೇ. ನಂ.7 ಅನ್ನೋದು ಧೋನಿ ಜರ್ಸಿ ನಂಬರ್. ಅದು ಧೋನಿ ಬ್ರ್ಯಾಂಡ್ ಕೂಡ. ಸೆವೆನ್ ಹೆಸರಲ್ಲಿ ಧೋನಿ ಬೇರೆ ಬೇರೆ ಉದ್ಯಮಗಳನ್ನೂ ಹುಟ್ಟು ಹಾಕಿದ್ದಾರೆ. ಧೋನಿಯವರ ಜನ್ಮದಿನ ಜುಲೈ7. ಹೀಗಾಗಿ ಅದೇ ನಂಬರ್ ಅನ್ನು ಧೋನಿ ಜರ್ಸಿ ನಂಬರ್ ಆಗಿಸಿಕೊಂಡಿದ್ದರು. ನಂತರ ಅದು ಕ್ರಿಕೆಟ್ ಜಗತ್ತಿನಲ್ಲಿ ದೊಡ್ಡ ಬ್ರ್ಯಾಂಡ್ ಆಗಿತ್ತು. ಧೋನಿಯವರ ನಿವೃತ್ತಿಯ ನಂತರ ನಂ.7 ಜರ್ಸಿಯನ್ನು ಭಾರತ ತಂಡದ ಬೇರೆ ಯಾವ ಆಟಗಾರನೂ ಬಳಸುತ್ತಿಲ್ಲ. ಕಾರಣ ಅದು ಧೋನಿ ಬ್ರ್ಯಾಂಡ್.

https://twitter.com/ChamikaKaru29/status/1569037318517841925?s=20&t=ygrXg1mofpz6_8Nyh9c9SQ

ಏಷ್ಯಾ ಕಪ್ ಟಿ20 ಟೂರ್ನಿಯಲ್ಲಿ ಶ್ರೀಲಂಕಾ ತಂಡದ ಚಾಂಪಿಯನ್ ಪಟ್ಟಕ್ಕೇರಿರುವಲ್ಲಿ ನಾಯಕ ದಸುನ್ ಶನಕ ಅವರ ಪಾತ್ರ ದೊಡ್ಡದು. ಭಾರತ ಮತ್ತು ಪಾಕಿಸ್ತಾನ ತಂಡಗಳ ಮಧ್ಯೆ ಶ್ರೀಲಂಕಾ ಏಷ್ಯಾ ಕಪ್ ಗೆಲ್ಲಲಿದೆ ಎಂಬ ನಿರೀಕ್ಷೆ ಯಾರಿಗೂ ಇರಲಿಲ್ಲ. ಆದರೆ ಉತ್ಸಾಹಿ ಯುವಕರ ತಂಡವನ್ನು ಅದ್ಭುತವಾಗಿ ಮುನ್ನಡೆಸಿದ ಶನಕ ಇತಿಹಾಸ ಸೃಷ್ಠಿಸಿದ್ದಾರೆ. ಮೊದಲ ಲೀಗ್ ಪಂದ್ಯದಲ್ಲೇ ಅಫ್ಘಾನಿಸ್ತಾನ ವಿರುದ್ಧ ಹೀನಾಯ ಸೋಲು ಕಂಡ ನಂತರ ಸತತ 5 ಪಂದ್ಯಗಳನ್ನು ಗೆದ್ದ ಶ್ರೀಲಂಕಾ ಚಾಂಪಿಯನ್ ಆಗಿ ಹೊರಹೊಮ್ಮಿದೆ.

ಏನಿದು ಡಿ ಫ್ಯಾಕ್ಟರ್‌ (Asia Cup Victory Dhoni Factor)

ಅಂದ ಹಾಗೆ ಶ್ರೀಲಂಕಾ ತಂಡದ ನಾಯಕ ದಸುನ್ ಶನಕ ಅವರ ಜರ್ಸಿ ನಂಬರ್ ಕೂಡ 7 (ಏಳು). ಮತ್ತೊಂದು ವಿಶೇಷ ಏನಂದ್ರೆ ಧೋನಿ ಹೆಸರಿನ ಮೊದಲ ಅಕ್ಷರ ‘D’.. ದಸುನ್ ಶನಕ ಅವರ ಹೆಸರಿನ ಮೊದಲ ಅಕ್ಷರವೂ ‘D’.

ಜರ್ಸಿ ನಂಬರ್ 7 ಕ್ರಿಕೆಟ್ ಜಗತ್ತಿನಲ್ಲಿ ಮಾಡಿರುವ ಮೋಡಿಯ ಬಗ್ಗೆ ಎಲ್ಲರಿಗೂ ಗೊತ್ತೇ ಇದೆ. ನಂ.7 ಜರ್ಸಿ ಧರಿಸಿ ಆಡುತ್ತಿದ್ದ ಮಹೇಂದ್ರ ಸಿಂಗ್ ಧೋನಿ ಕ್ರಿಕೆಟ್ ದುನಿಯಾದ ಸರ್ವಶ್ರೇಷ್ಠ ನಾಯಕನೆಂಬ ಹಿರಿಮೆಗೆ ಪಾತ್ರರಾಗಿದ್ದರು. ಧೋನಿ ನಾಯಕತ್ವದಲ್ಲಿ ಭಾರತ ತಂಡ 2007ರಲ್ಲಿ ಐಸಿಸಿ ಟಿ20 ವಿಶ್ವಕಪ್, 2011ರಲ್ಲಿ ಐಸಿಸಿ ಏಕದಿನ ವಿಶ್ವಕಪ್, 2013ರಲ್ಲಿ ಐಸಿಸಿ ಚಾಂಪಿಯನ್ಸ್ ಟ್ರೋಫಿ, ಎರಡು ಬಾರಿ ಏಷ್ಯಾ ಕಪ್, ಟೆಸ್ಟ್ ಕ್ರಿಕೆಟ್’ನಲ್ಲಿ ನಂ.1 ಪಟ್ಟ, ಐಪಿಎಲ್’ನಲ್ಲಿ ನಾಲ್ಕು ಬಾರಿ ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ಚಾಂಪಿಯನ್ ಪಟ್ಟ, ಚಾಂಪಿಯನ್ಸ್ ಲೀಗ್’ನಲ್ಲಿ ಚೆನ್ನೈ ತಂಡ 2 ಬಾರಿ ಟ್ರೋಫಿ ಗೆದ್ದಿದೆ. ಐಸಿಸಿ ನಡೆಸುವ ಟಿ20 ವಿಶ್ವಕಪ್, ಏಕದಿನ ವಿಶ್ವಕಪ್ ಮತ್ತು ಚಾಂಪಿಯನ್ಸ್ ಟ್ರೋಫಿಗಳನ್ನು ಗೆದ್ದ ಜಗತ್ತಿನ ಮೊದಲ ಮತ್ತು ಏಕೈಕ ನಾಯಕನೆಂಬ ವಿಶ್ವದಾಖಲೆ ಧೋನಿ ಅವರ ಹೆಸರಲ್ಲಿದೆ.

ಇದನ್ನೂ ಓದಿ : Veda Krishnamurthy Engagement : ವೇದಾ Loves ಅರ್ಜುನ, ಕರ್ನಾಟಕದ ಕ್ರಿಕೆಟಿಗನ ಜೊತೆ ವೇದಾ ಕೃಷ್ಣಮೂರ್ತಿ ನಿಶ್ಚಿತಾರ್ಥ

ಇದನ್ನೂ ಓದಿ : ICC T20 World Cup India Squad : ಸೆಪ್ಟೆಂಬರ್ 16ಕ್ಕೆ ಟೀಮ್ ಇಂಡಿಯಾ ಆಯ್ಕೆ, ವರ್ಲ್ಡ್ ಕಪ್‌ನಲ್ಲಿ ಆಡಲಿರುವ 15 ಮಂದಿ ಆಟಗಾರರು ಇವರೇ..!

Dhoni Factor in Sri Lanka’s Asia Cup Victory

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular