ಸೋಮವಾರ, ಏಪ್ರಿಲ್ 28, 2025
HomeSportsCricketnegative comment about KL Rahul : “ನಮ್ಮವರಿಗೆ ನಮ್ಮವರೇ ವಿಲನ್..” ಕೆ.ಎಲ್ ರಾಹುಲ್ ಬಗ್ಗೆ...

negative comment about KL Rahul : “ನಮ್ಮವರಿಗೆ ನಮ್ಮವರೇ ವಿಲನ್..” ಕೆ.ಎಲ್ ರಾಹುಲ್ ಬಗ್ಗೆ ದೊಡ್ಡ ಗಣೇಶ್ ಬಾಯಲ್ಲಿ ಇದೆಂಥಾ ಮಾತು?

- Advertisement -

ಬೆಂಗಳೂರು: “ದುಷ್ಮನ್ ಕಹಾ ಹೈ, ಅಂದ್ರೆ ಬಗಲ್ ಮೇ ಹೈ” ಎಂಬ ಮಾತಿದೆ. ಈ ಮಾತು ಕರ್ನಾಟಕದ ಹೆಮ್ಮೆಯ ಕ್ರಿಕೆಟಿಗ ಕೆ.ಎಲ್ ರಾಹುಲ್ ವಿಚಾರದಲ್ಲಿ ನಿಜವಾಗಿದೆ. ಅಂದ ಹಾಗೆ ರಾಹುಲ್ ಅವರ ಬಗ್ಗೆ ನಕಾರಾತ್ಮಕ ಅಭಿಪ್ರಾಯ ವ್ಯಕ್ತಪಡಿಸಿರುವುದು ಬೇರಾರೂ ಅಲ್ಲ, (Dodda Ganesh made a negative comment about KL Rahul )
) ಕರ್ನಾಟಕದ ಮಾಜಿ ವೇಗದ ಬೌಲರ್ ದೊಡ್ಡ ಗಣೇಶ್.

ಕಳೆದ ದಕ್ಷಿಣ ಆಫ್ರಿಕಾ ವಿರುದ್ಧದ ಟಿ20 ಸರಣಿಗೂ ಮುನ್ನ ತೊಡೆ ಸಂಧು (Groin Injury) ಗಾಯಕ್ಕೊಳಗಾದಿದ್ದ ರಾಹುಲ್, ನಂತರ ಇಂಗ್ಲೆಂಡ್ ಪ್ರವಾಸಕ್ಕೂ ಅಲಭ್ಯರಾಗಿದ್ದರು. ಇದೇ ತಿಂಗಳು ವೆಸ್ಟ್ ಇಂಡೀಸ್’ನಲ್ಲಿ ನಡೆಯಲಿರುವ ಟಿ20 ಹಾಗೂ ಏಕದಿನ ಸರಣಿಗೂ ರಾಹುಲ್ ಲಭ್ಯರಿಲ್ಲ. ಜರ್ಮನಿಯಲ್ಲಿ ಸ್ಪೋರ್ಟ್ಸ್ ಹರ್ನಿಯಾಗೆ ಶಸ್ತ್ರಚಿಕಿತ್ಸೆಗೊಳಗಾಗಿರುವ ರಾಹುಲ್ ಸದ್ಯ ಚೇತರಿಕೆಯ ಹಾದಿಯಲ್ಲಿದ್ದಾರೆ.

ಕೆ.ಎಲ್ ರಾಹುಲ್ ಟೀಮ್ ಇಂಡಿಯಾದಿಂದ ಹೊರಗುಳಿದಿರುವ ಹೊತ್ತಲ್ಲಿ ಯುವ ಆಟಗಾರರು ಭರ್ಜರಿ ಪ್ರದರ್ಶನ ತೋರುತ್ತಿದ್ದಾರೆ. ಐರ್ಲೆಂಡ್ ವಿರುದ್ಧ ಆಲ್ರೌಂಡರ್ ದೀಪಕ್ ಹೂಡ ಶತಕ ಬಾರಿಸಿ ಅಬ್ಬರಿಸಿದ್ರೆ, ಇಂಗ್ಲೆಂಡ್ ವಿರುದ್ಧದ ಟಿ20 ಸರಣಿಯಲ್ಲಿ ಆರಂಭಿಕನಾಗಿ ಕಣಕ್ಕಿಳಿದಿದ್ದ ವಿಕೆಟ್ ಕೀಪರ್ ರಿಷಭ್ ಪಂತ್ ಓಪನರ್ ಆಗಿ ಗಮನ ಸೆಳೆದಿದ್ದರು. 3ನೇ ಟಿ20 ಪಂದ್ಯದಲ್ಲಿ ಸೂರ್ಯ ಕುಮಾರ್ ಯಾದವ್ 4ನೇ ಕ್ರಮಾಂಕದಲ್ಲಿ ಕೇವಲ 55 ಎಸೆತಗಳಲ್ಲಿ 117 ರನ್ ಸಿಡಿಸಿ ಅಬ್ಬರಿಸಿದ್ದರು. ಇದನ್ನೇ ಆಧಾರವಾಗಿಟ್ಟುಕೊಂಡು ರಾಹುಲ್ ಅವರ ಸಾಮರ್ಥ್ಯವನ್ನೇ ಪ್ರಶ್ನಿಸಿದ್ದಾರೆ ದೊಡ್ಡ ಗಣೇಶ್.

“ಹೂಡ ಮತ್ತು ಸೂರ್ಯಕುಮಾರ್ ಟಿ20 ಬ್ಯಾಟಿಂಗ್”ನಲ್ಲಿ ತಮ್ಮ ಇರಾದೆ ಏನೆಂಬುದನ್ನು ಈಗಾಗಲೇ ತೋರಿಸಿ ಕೊಟ್ಟಿದ್ದಾರೆ. ಈಗ ಕೆ.ಎಲ್ ರಾಹುಲ್ ಸರದಿ. 2016-17ರಲ್ಲಿ ಆಡುತ್ತಿದ್ದ ರೀತಿಯಲ್ಲೇ ಆಡಬೇಕಾದ ಅನಿವಾರ್ಯತೆ ರಾಹುಲ್ ಮುಂದಿದೆ. ಇನ್ನೂ ರಾಹುಲ್ ಐಪಿಎಲ್’ನಲ್ಲಿ ಆಡಿದಂತೆ ಕಾದು ನೋಡುವ ಆಟಕ್ಕೆ ಮುಂದಾದರೆ, ಭಾರತ ತಂಡದಲ್ಲಿ ಸ್ಥಾನ ಉಳಿಸಿಕೊಳ್ಳಲು ಹರಸಾಹಸ ಪಡಬೇಕಾದೀತು.”

  • ದೊಡ್ಡ ಗಣೇಶ್, ಮಾಜಿ ಕ್ರಿಕೆಟಿಗ.

ಈ ರೀತಿ ರಾಹುಲ್ ಅವರ ಸಾಮರ್ಥ್ಯವನ್ನೇ ಪ್ರಶ್ನಿಸುವ ರೀತಿಯಲ್ಲಿ ಟ್ವೀಟ್ ಮಾಡಿದ್ದಾರೆ ದೊಡ್ಡ ಗಣೇಶ್. ಕೆ.ಎಲ್ ರಾಹುಲ್ ಸದ್ಯ ಭಾರತ ತಂಡದ ಟಾಪ್-3 ಬ್ಯಾಟರ್”ಗಳಲ್ಲಿ ಒಬ್ಬರು. ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್”ನಲ್ಲಿ ಈಗಾಗಲೇ ಎರಡೆರಡು ಶತಕಗಳನ್ನು ಬಾರಿಸಿ ತಮ್ಮ ಸಾಮರ್ಥ್ಯವನ್ನು ಸಾಬೀತು ಪಡಿಸಿದ ಆಟಗಾರ. ಅಂತಾರಾಷ್ಟ್ರೀಯ ಟಿ20ಯಲ್ಲಿ 40.68ರ ಬ್ಯಾಟಿಂಗ್ ಸರಾಸರಿ, ಎರಡು ಶತಕ, 16 ಅರ್ಧಶಕಗಳನ್ನು ಬಾರಿಸಿರುವ ರಾಹುಲ್ ತಾಕತ್ತು ಏನೆಂಬುದು ಕ್ರಿಕೆಟ್ ಜಗತ್ತಿಗೇ ಗೊತ್ತು. ಆದರೆ ನಮ್ಮ ಕರ್ನಾಟಕದ ಆಟಗಾರನ ಸಾಮರ್ಥ್ಯ ನಮ್ಮವರೇ ಆಗಿರುವ ದೊಡ್ಡ ಗಣೇಶ್ ಅವರಿಗೆ ಕಾಣದಿರುವುದು ವಿಪರ್ಯಾಸ.

30 ವರ್ಷದ ಕೆ.ಎಲ್ ರಾಹುಲ್ ಭಾರತ ಪರ 43 ಟೆಸ್ಟ್, 42 ಏಕದಿನ ಹಾಗೂ 56 ಟಿ20 ಪಂದ್ಯಗಳನ್ನಾಡಿರುವ ಆಟಗಾರ. ರಾಹುಲ್ ಬಗ್ಗೆ ವೆಸ್ಟ್ ಇಂಡೀಸ್ ದಿಗ್ಗಜ ಬ್ರಿಯಾನ್ ಲಾರ್, ದಕ್ಷಿಣ ಆಫ್ರಿಕಾದ ದಿಗ್ಗಜ ವೇಗಿ ಡೇಲ್ ಸ್ಟೇನ್ ಅಂಥವರೇ ಮೆಚ್ಚುಗೆಯ ಮಾತುಗಳನ್ನಾಡಿದ್ದಿದೆ. ಆದರೆ ಭಾರತ ಪರ ಕೇವಲ 4 ಟೆಸ್ಟ್ ಹಾಗೂ ಒಂದೇ ಒಂದು ಏಕದಿನ ಪಂದ್ಯವಾಡಿರುವ ದೊಡ್ಡ ಗಣೇಶ್, ನೆಗೆಟಿವ್ ಕಾಮೆಂಟ್ ಮಾಡಿದ್ದಾರೆ.

ಯಾರೋ ಬೇರೆ ರಾಜ್ಯಗಳ ಒಂದಿಬ್ಬರು ಆಟಗಾರರು ಒಂದೆರಡು ಪಂದ್ಯಗಳಲ್ಲಿ ಅಬ್ಬರಿಸಿ ಬೊಬ್ಬಿರಿದ ತಕ್ಷಣ, ನಮ್ಮ ಕನ್ನಡಿಗನ ಸಾಮರ್ಥ್ಯದ ಬಗ್ಗೆ ಒಬ್ಬ ಕನ್ನಡಿಗನಾಗಿ, ರಾಜ್ಯದ ಕ್ರಿಕೆಟ್ ದಿಗ್ಗಜನಾಗಿ ನಕಾರಾತ್ಮಕ ಮಾತುಗಳನ್ನಾಡುವುದು ಎಷ್ಟು ಸರಿ ಎಂದು ದೊಡ್ಡ ಗಣೇಶ್ ಅವರನ್ನು ಕರ್ನಾಟಕ ಕ್ರಿಕೆಟ್ ಪ್ರಿಯರು ಪ್ರಶ್ನಿಸುತ್ತಿದ್ದಾರೆ.

https://twitter.com/Manimuzic1/status/1546474503668019201?s=20&t=wfJQDfEkLY4EZvpDOat7mQ
https://twitter.com/Golfer20221/status/1546348976021991424?s=20&t=wfJQDfEkLY4EZvpDOat7mQ

ಇದನ್ನೂ ಓದಿ : ‘’ಚಿರು ಹೇಗಿದ್ದೀಯಾ ?’’ 18 ವರ್ಷಗಳ ಹಿಂದಿನ ಗೆಳೆಯನನ್ನು ಇಂಗ್ಲೆಂಡ್’ನಲ್ಲಿ ಭೇಟಿ ಮಾಡಿದ ಕೊಹ್ಲಿ, ಖುಷಿ ಹಂಚಿಕೊಂಡ ಸ್ನೇಹಿತ..!

ಇದನ್ನೂ ಓದಿ : ಉತ್ತರ ಪ್ರದೇಶದ ಹುಡುಗ ಮುಂಬೈನಲ್ಲಿ ಕ್ರಿಕೆಟ್ ಬದುಕು ಕಟ್ಟಿಕೊಂಡ, ಇದು ಸೂರ್ಯನ ಲೈಫ್ ಸ್ಟೋರಿ !

ಇದನ್ನೂ ಓದಿ : ಗಂಗೂಲಿ, ಸೆಹ್ವಾಗ್, ಯುವಿಗೊಂದು ನ್ಯಾಯ.. ಕೊಹ್ಲಿಗೊಂದು ನ್ಯಾಯನಾ..? ಗಂಭೀರ ಪ್ರಶ್ನೆ ಎತ್ತಿದ್ದ ಕರ್ನಾಟಕದ ದಿಗ್ಗಜ

Dodda Ganesh made a negative comment about KL Rahul

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular