Actor Sudeep ವಿರುದ್ಧ ಅವಹೇಳನಕಾರಿ ಮಾತು : ಸೈಬರ್ ಕ್ರೈಂ ಮತ್ತು ಆಯುಕ್ತರಿಗೆ ಭಾಮಾ ಹರೀಶ್ ದೂರು

ನಟ ಸುದೀಪ್ ಸದ್ಯ ವಿಕ್ರಾಂತ್ ರೋಣ ಸಿನಿಮಾ ರಿಲೀಸ್ ಸಿದ್ಧತೆಯಲ್ಲಿ ಬ್ಯುಸಿಯಾಗಿದ್ದಾರೆ. ಪ್ರಮೋಶನ್ ಚಟುವಟಿಕೆಗಳಲ್ಲಿ ನಿರತರಾಗಿರೋ ಸುದೀಪ್ (Actor Sudeep) ವಿರುದ್ಧ ಸೋಷಿಯಲ್ ಮೀಡಿಯಾದಲ್ಲಿ ಒಂದಿಷ್ಟು ಜನರು ಅವಹೇಳನಕಾರಿ ಪೋಸ್ಟ್ ಹಾಕೋದು ಹಾಗೂ ಮಾತಾಡೋದನ್ನೇ ವೃತ್ತಿಯನ್ನಾಗಿ ಮಾಡಿಕೊಂಡಿದ್ದಾರೆ. ಇದರಿಂದ ಬೇಸತ್ತ ಸುದೀಪ್ ಅಭಿಮಾನಿಗಳು ನಗರ ಪೊಲೀಸ್ ಆಯುಕ್ತರ ಮೊರೆ ಹೋಗಿದ್ದಾರೆ.

ಹೌದು ನಟ ಸುದೀಪ್ ರನ್ನು ವಿನಾಕಾರಣ ಟಾರ್ಗೆಟ್ ಮಾಡಿದ ತಂಡವೊಂದು ಅವಹೇಳನಕಾರಿ ಮಾತುಗಳನ್ನಾಡೋ ವ್ಯವಸ್ಥಿತ ಸಂಚು ನಡೆಸುತ್ತಲೇ ಬಂದಿದೆ.‌ ಇದರಿಂದ ಬೇಸತ್ತ ಫಿಲ್ಮ್ ಚೇಂಬರ್ ಅಧ್ಯಕ್ಷ ಭಾಮಾ ಹರೀಶ್ ನಗರ ಪೊಲೀಸ್ ಆಯುಕ್ತ ದೂರು ನೀಡಿದ್ದಾರೆ. ಭಾಮಾ ಹರೀಶ್ ನೀಡಿದ ದೂರಿನಲ್ಲಿ ಸುದೀಪ್ ವಿರುದ್ಧ ಅವಹೇಳನಕಾರಿ ಪೋಸ್ಟ್ ಹಾಕಲಾಗುತ್ತಿದೆ. ಅವಹೇಳನಕಾರಿ ಶಬ್ದ ಬಳಕೆ ಮಾಡಲಾಗುತ್ತಿದೆ. ಸುದೀಪ್ ಭಾರತೀಯ ಚಿತ್ರರಂಗದಲ್ಲಿ ಹೆಸರು ಗಳಿಸಿದ ನಟ. ಆದರೆ ಈ ರೀತಿ ಅವಹೇಳನಕಾರಿ ಪೋಸ್ಟ್ ಹಾಗೂ ಬರಹಗಳ ಮೂಲಕ ಅವಮಾನ ಮಾಡೋ ಕೆಲಸ‌ ಮಾಡುತ್ತಿದ್ದಾರೆ ಎಂದು ಭಾಮಾ ಹರೀಶ್ ದೂರಿನಲ್ಲಿ ಆರೋಪಿಸಿದ್ದಾರೆ.

ಪ್ರಮುಖವಾಗಿ ಸುದೀಪ್ ವಿರುದ್ಧ ಸೋಷಿಯಲ್ ಮೀಡಿಯಾದಲ್ಲಿ ಸದಾ ಅವಹೇಳನಕಾರಿ ವಿಡಿಯೋಗಳನ್ನು ಹರಿಬಿಡುವ ಅಹೋರಾತ್ರ ಹಾಗೂ ಚರಣ್ ಎಂಬುವವರ ವಿರುದ್ಧ ದೂರು ನೀಡಲಾಗಿದೆ. ಈ ರೀತಿ ಕಲಾವಿದರ ಬಗ್ಗೆ ಅವಹೇಳನಕಾರಿಯಾಗಿ ಹೇಳಿಕೆ ನೀಡಲು ಅವಕಾಶ ನೀಡಿದರೇ ಕಲಾವಿದರ ಬೆಳವಣಿಗೆಗೆ ಚ್ಯುತಿ ಬರಲಿದೆ. ಹೀಗಾಗಿ ಈ ಪ್ರವೃತ್ತಿಗೆ ಕಡಿವಾಣ ಹಾಕಬೇಕಿದೆ ಎಂದು ಭಾಮಾಹರೀಶ್ ಮನವಿ ಮಾಡಿದ್ದಾರೆ. ಆನ್ ಲೈನ್ ಗೇಮ್ ಗಳ ಜಾಹೀರಾತಿನಲ್ಲಿ ಸುದೀಪ್ ನಟಿಸಿರೋದು ಸೇರಿದಂತೆ ಸುದೀಪ್ ಗೆ ಸಂಬಂಧಿಸಿದ ಹಲವು ವಿಚಾರಗಳನ್ನು ಇಟ್ಟುಕೊಂಡು ಚರಣ್ ಎಂಬ ಯುವಕ ಹಾಗೂ ಅಹೋರಾತ್ರ ಅವಹೇಳನಕಾರಿ ಹೇಳಿಕೆ ನೀಡುತ್ತಲೇ ಬಂದಿದ್ದಾರೆ.

ಇತ್ತೀಚಿಗೆ ಚರಣ್ ಎಂಬಾತನ ಅವಹೇಳನದ ವಿರುದ್ಧ ನಿರ್ದೇಶಕ ನಂದಕಿಶೋರ್ ಕೂಡ ಆಕ್ರೋಶ ವ್ಯಕ್ತಪಡಿಸಿದ್ದರು. ಮಾತ್ರವಲ್ಲ ಸೋಷಿಯಲ್ ಮೀಡಿಯಾದಲ್ಲಿ ಲೈವ್ ಬಂದು ವಾರ್ನಿಂಗ್ ಕೂಡ ನೀಡಿದ್ದರು. ಇದೆಲ್ಲದರ ವಿರುದ್ಧ ಈಗ ಸುದೀಪ್ ಅಭಿಮಾನಿಗಳು ಹಾಗೂ ಬೆಂಬಲಿಗರ ಪರವಾಗಿ ಭಾಮಾ ಹರೀಶ್ ಸೈಬರ್ ಕ್ರೈಂ ಹಾಗೂ ನಗರ ಪೊಲೀಸ್ ಆಯುಕ್ತರಿಗೆ ದೂರು ನೀಡಿ ಕ್ರಮಕ್ಕೆ ಆಗ್ರಹಿಸಿದ್ದಾರೆ. ಆದರೆ ಇಂಥ ಯಾವುದೇ ವಿಚಾರಗಳ ಬಗ್ಗೆಯೂ ಸುದೀಪ್ ಇದುವರೆಗೂ ಯಾವ ಪ್ರತಿಕ್ರಿಯೆ ಯನ್ನು ನೀಡಿಲ್ಲ.

ಇದನ್ನೂ ಓದಿ : OTT Release Movies: ಜುಲೈನಲ್ಲಿ ರಿಲೀಸ್ ಆಗಲಿರುವ ಒಟಿಟಿ ಚಿತ್ರಗಳು ಯಾವುವು ಗೊತ್ತಾ !

ಇದನ್ನೂ ಓದಿ : John Abraham Mike : ಚೊಚ್ಚಲ ಮಲಯಾಳಂ “ಮೈಕ್” ಸಿನಿಮಾದಲ್ಲಿ ಜಾನ್ಅಬ್ರಹಾಂ

Ahoratra derogatory words against actor Sudeep, Ba ma Harish Complaint to Cybercrime and Commissioner

Comments are closed.