ಸೋಮವಾರ, ಏಪ್ರಿಲ್ 28, 2025
HomeSportsCricketKL Rahul Dooda Ganesh : ನಮ್ಮ ಕನ್ನಡಿಗ ಕೆ.ಎಲ್ ರಾಹುಲ್ ವಿರುದ್ಧ ಮತ್ತೆ ವಿಷ...

KL Rahul Dooda Ganesh : ನಮ್ಮ ಕನ್ನಡಿಗ ಕೆ.ಎಲ್ ರಾಹುಲ್ ವಿರುದ್ಧ ಮತ್ತೆ ವಿಷ ಕಾರಿದ ದೊಡ್ಡ ಗಣೇಶ್

- Advertisement -

ಬೆಂಗಳೂರು: (KL Rahul Dooda Ganesh) ಕರ್ನಾಟಕದ ಮಾಜಿ ವೇಗದ ಬೌಲರ್ ದೊಡ್ಡ ಗಣೇಶ್ ಅವರಿಗೆ ಕೆ.ಎಲ್ ರಾಹುಲ್ ಬಗ್ಗೆ ಏನೋ ಪೂರ್ವಗ್ರಹವಿದ್ದಂತೆ ಕಾಣುತ್ತಿದೆ. ಇತ್ತೀಚೆಗೆ ರಾಹುಲ್ ಅವರ ಬದಲು ಭಾರತ ಟಿ20 ತಂಡದಲ್ಲಿ ಪೃಥ್ವಿ ಶಾ ಅವರನ್ನು ಆಡಿಸಬೇಕೆಂದು ಮುಂಬೈ ಆಟಗಾರನ ಪರ ಬ್ಯಾಟ್ ಬೀಸಿದ್ದ ದೊಡ್ಡ ಗಣೇಶ್ (Dodda Ganesh), ಈಗ ಮತ್ತೊಮ್ಮೆ ನಮ್ಮ ಕನ್ನಡಿಗನ ಬಗ್ಗೆ ವಿಷ ಕಾರಿದ್ದಾರೆ. ಐಸಿಸಿ ಟಿ20 ವಿಶ್ವಕಪ್ (T20 World Cup) ಟೂರ್ನಿಯಲ್ಲಿ ಭಾರತದ ಇನ್ನಿಂಗ್ಸ್ ಆರಂಭಿಸಲು ಕೆ.ಎಲ್ ರಾಹುಲ್’ಗಿಂತ ವಿರಾಟ್ ಕೊಹ್ಲಿ (Asia Cup 2022 ) ಸೂಕ್ತ ಆಟಗಾರ ಎಂದಿದ್ದಾರೆ. ಈ ಮೂಲಕ ನಮ್ಮದೇ ರಾಜ್ಯದ ಆಟಗಾರನ ಸಾಮರ್ಥ್ಯದ ಬಗ್ಗೆ ಪ್ರಶ್ನೆ ಎತ್ತಿದ್ದಾರೆ.

ಏಷ್ಯಾ ಕಪ್ ಟೂರ್ನಿಯ ಸೂಪರ್-4 ಪಂದ್ಯದಲ್ಲಿ (Asia Cup 2022) ಅಫ್ಘಾನಿಸ್ತಾನ ವಿರುದ್ಧ ಕೆ.ಎಲ್ ರಾಹುಲ್ ಜೊತೆ ಇನ್ನಿಂಗ್ಸ್ ಆರಂಭಿಸಿದ್ದ ವಿರಾಟ್ ಕೊಹ್ಲಿ, ಅಮೋಘ ಶತಕದೊಂದಿಗೆ ಅಬ್ಬರಿಸಿದ್ದರು. ಕೇವಲ 61 ಎಸೆತಗಳಲ್ಲಿ 12 ಬೌಂಡರಿ ಮತ್ತು 6 ಸಿಕ್ಸರ್’ಗಳ ನೆರವಿನಿಂದ ಅಜೇಯ 122 ರನ್ ಸಿಡಿಸಿದ್ದ ಕೊಹ್ಲಿ, ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್’ನಲ್ಲಿ ಚೊಚ್ಚಲ ಶತಕ ಬಾರಿಸಿದ್ದರು. ವಿರಾಟ್ ಕೊಹ್ಲಿ ಆಡಿದ ಆ ಅತ್ಯಮೋಘ ಇನ್ನಿಂಗ್ಸ ನಂತರ ಟ್ವೀಟ್ ಮಾಡಿರುವ ದೊಡ್ಡ ಗಣೇಶ್, ಟಿ20 ವಿಶ್ವಕಪ್’ನಲ್ಲಿ ಕೆ.ಎಲ್ ರಾಹುಲ್ ಬದಲು ವಿರಾಟ್ ಕೊಹ್ಲಿಯೇ ಇನ್ನಿಂಗ್ಸ್ ಆರಂಭಿಸಬೇಕು ಎಂದಿದ್ದಾರೆ.

” ಟಿ20 ವಿಶ್ವಕಪ್’ನಲ್ಲಿ ರೋಹಿತ್ ಶರ್ಮಾ ಜೊತೆ ವಿರಾಟ್ ಕೊಹ್ಲಿ ಇನ್ನಿಂಗ್ಸ್ ಆರಂಭಿಸಿದರೆ ಉತ್ತಮ. ಕೆ.ಎಲ್ ರಾಹುಲ್ 3ನೇ ಕ್ರಮಾಂಕದಲ್ಲಿ ಆಡಬಹುದು. ವಿರಾಟ್ ಕೊಹ್ಲಿ ಪವರ್ ಪ್ಲೇನಲ್ಲಿ ಹೆಚ್ಚು ರನ್ ಗಳಿಸಬಲ್ಲರು. ಆದರೆ ಕೆ.ಎಲ್ ರಾಹುಲ್’ಗೆ ಆ ಸಾಮರ್ಥ್ಯವಿಲ್ಲ” ಎಂದು ದೊಡ್ಡ ಗಣೇಶ್ ಟ್ವೀಟ್ ಮಾಡಿದ್ದಾರೆ.

ಇದಕ್ಕೆ ಉತ್ತರವಾಗಿ ಜಗನ್ನಾಥ್ ಎಂಬ ವ್ಯಕ್ತಿ ಕೆ.ಎಲ್ ರಾಹುಲ್ ಅವರನ್ನು ತಂಡದಿಂದ ಕೈಬಿಡುವುದು ಉತ್ತಮವಲ್ಲವೇ ಎಂದು ದೊಡ್ಡ ಗಣೇಶ್ ಅವರನ್ನು ಪ್ರಶ್ನಿಸಿದ್ದಾನೆ. ಇದಕ್ಕೆ ಉತ್ತರಿಸಿರುವ ದೊಡ್ಡ ಗಣೇಶ್ ಮತ್ತೆ ಕೆ.ಎಲ್ ರಾಹುಲ್ ಬಗ್ಗೆ ಪೂರ್ವಗ್ರಹ ಪೀಡಿತರಾಗಿ ಮಾತನಾಡಿದ್ದು ” ವಿಶ್ವಕಪ್’ನಲ್ಲಿ ವಿಫಲರಾದರೆ ಅದೂ ಆಗುತ್ತದೆ” ಎಂದಿದ್ದಾರೆ.

ದೊಡ್ಡ ಗಣೇಶ್ ಅವರ ಈ ಅಭಿಪ್ರಾಯಕ್ಕೆ ಸ್ಯಾಮ್ ಡಿ’ಸೋಜಾ ಎಂಬ ಕ್ರಿಕೆಟ್ ಅಭಿಮಾನಿ ತಿರುಗೇಟು ಕೊಟ್ಟಿದ್ದಾರೆ. “ನೀವೇಕೆ ಕೆ.ಎಲ್ ರಾಹುಲ್ ಬಗ್ಗೆ ಈ ರೀತಿ ಟೀಕೆ ಮಾಡುತ್ತಿರುವಿರಿ ? ಗುಣಮಟ್ಟದ ಆಟಗಾರರಿಗೆ ಭಾರತ ತಂಡದಲ್ಲಿ ಹೆಚ್ಚು ಹೆಚ್ಚು ಅವಕಾಶಗಳನ್ನು ನೀಡಲಾಗುತ್ತಿದೆ. ವಿಶ್ವಕಪ್ ಬಗ್ಗೆ ಮಾತನಾಡುವುದನನ್ನು ನಿಲ್ಲಿಸಿ. ಅದು ಇನ್ನೂ ತುಂಬಾ ದೂರವಿದೆ. ನಿಮ್ಮಲ್ಲಿ ನನ್ನ ವಿನಮ್ರ ವಿನಂತಿ ಏನೆಂದರೆ ನಮ್ಮ ಆಟಗಾರರನ್ನು ಬೆಂಬಲಿಸಿ” ಎಂದು ದೊಡ್ಡ ಗಣೇಶ್’ಗೆ ಸ್ಯಾಮ್ ಡಿ’ಸೋಜಾ ಎಂಬ ಕ್ರಿಕೆಟ್ ಅಭಿಮಾನಿ ಬುದ್ಧಿಮಾತು ಹೇಳಿದ್ದಾರೆ. ಅರುಣ್ ಎಂಬ ಕ್ರಿಕೆಟ್ ಅಭಿಮಾನಿಯೂ ದೊಡ್ಡ ಗಣೇಶ್ ವಿರುದ್ಧ ಕಿಡಿ ಕಾರಿದ್ದು, “ಕೆ.ಎಲ್ ರಾಹುಲ್ ಅವರನ್ನು ಭಾರತ ತಂಡದಿಂದ ಡ್ರಾಪ್ ಮಾಡುತ್ತಾರೆಂದು ನೀವು ಕೊರಗುತ್ತಲೇ ಇರಿ” ಎಂದು ದೊಡ್ಡ ಗಣೇಶ್’ಗೆ ತಪರಾಕಿ ಕೊಟ್ಟಿದ್ದಾರೆ.

ಡಾನಾ ಪೂಜಾರಿ ಎಂಬ ಅಭಿಮಾನಿ ದೊಡ್ಡ ಗಣೇಶ್’ಗೆ ತೀಕ್ಷ್ಣ ಶಬ್ದಗಳಲ್ಲಿ ತಿರುಗೇಟು ಕೊಟ್ಟಿದ್ದು “ಕೆ.ಎಲ್ ರಾಹುಲ್ ಅವರನ್ನು ಮನೆಗೆ ಕಳುಹಿಸುವವರೆಗೆ ನಿಮಗೆ ನಿದ್ದೆ ಬರುವುದಿಲ್ಲ. ರಾಹುಲ್ ನಿಮಗೆ ಅಂಥದ್ದೇನು ಮಾಡಿದ್ದಾರೆ, ಅದನ್ನು ಹೇಳಿ. ಸೂರ್ಯಕುಮಾರ್ ಯಾದವ್ 4-5 ಇನ್ನಿಂಗ್ಸ್’ಗಳಲ್ಲಿ ಫ್ಲಾಪ್ ಶೋ ಕೊಟ್ಟು ಒಂದು ಇನ್ನಿಂಗ್ಸ್’ನಲ್ಲಿ ಚೆನ್ನಾಗಿ ಆಡ್ತಾನೆ, ಆತ ನಿಮಗೆ ಸೂಪರ್ ಸ್ಟಾರ್” ಎಂದು ದೊಡ್ಡ ಗಣೇಶ್ ವಿರುದ್ಧ ಕಿಡಿ ಕಾರಿದ್ದಾರೆ.

30 ವರ್ಷದ ಕೆ.ಎಲ್ ರಾಹುಲ್ ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್’ನಲ್ಲಿ ಸರಿ ಸುಮಾರು 141ರ ಉತ್ತಮ ಸ್ಟ್ರೈಕ್ ರೇಟ್ (140.91) ಹೊಂದಿದ್ದಾರೆ. ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್’ನಲ್ಲಿ ವಿರಾಟ್ ಕೊಹ್ಲಿ ಅವರ ಸ್ಟ್ರೈಕ್ ರೇಟ್ 138.37. ಭಾರತ ಪರ ಇತ್ತೀಚಿನ ವರ್ಷಗಳಲ್ಲಿ ಟಿ20 ಕ್ರಿಕೆಟ್’ನಲ್ಲಿ ಉತ್ತಮ ಪ್ರದರ್ಶನ ತೋರುತ್ತಾ ಬಂದಿರುವ ಕೆ.ಎಲ್ ರಾಹುಲ್ ಬಗ್ಗೆ ಕರ್ನಾಟಕದವರೇ ಆಗಿರುವ ದೊಡ್ಡ ಗಣೇಶ್ ವಿಷ ಕಾರುತ್ತಿರುವುದು ವಿಪರ್ಯಾಸ.

ಇದನ್ನೂ ಓದಿ : Virat Kohli KL Rahul : ಕೊಹ್ಲಿ ಆರಂಭಿಕನಾಗಿ ಆಡಿದರೆ ನಾನೇನು ಹೊರಗೆ ಕೂರಬೇಕಾ ; ಕೆ.ಎಲ್ ರಾಹುಲ್ ಹೀಗಂದಿದ್ದೇಕೆ ?

ಇದನ್ನೂ ಓದಿ : Sachin Tendulkar Silent virat Kohli: ಇಡೀ ಕ್ರಿಕೆಟ್ ಜಗತ್ತೇ ಕೊಹ್ಲಿಗೆ ಶಹಬ್ಬಾಸ್ ಅಂದ್ರೂ ಸಚಿನ್ ತೆಂಡೂಲ್ಕರ್ ಮಾತ್ರ ಗಪ್ ಚುಪ್

Dooda Ganesh who Allegation Kannadiga KL Rahul again Asia Cup 2022 T20 World Cup

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular