Sonu Sood : ರಕ್ತದಲ್ಲಿ ತನ್ನ ಕಲಾಕೃತಿ ಬಿಡಿಸಿದವನಿಗೆ ನಟ ಸೋನು ಸೂದ್​ ಬುದ್ಧಿಮಾತು

Sonu Sood reacts : ತಮ್ಮ ನಟನೆಗಿಂತಲೂ ಹೆಚ್ಚಾಗಿ ಸಾಮಾಜಿಕ ಕಾರ್ಯಗಳ ಮೂಲಕ ಹೆಸರುವಾಸಿಯಾಗಿರುವ ನಟ ಸೋನು ಸೂದ್​​ ಇತ್ತೀಚಿಗೆ ತಮ್ಮ ಅಭಿಮಾನಿಯೊಬ್ಬರಿಗೆ ಆಶ್ಚರ್ಯಕರವಾದ ಉಡುಗೊರೆಯೊಂದನ್ನು ಸ್ವೀಕರಿಸಿದ್ದಾರೆ. ಅಭಿಮಾನಿಯೊಬ್ಬರು ತಮ್ಮ ರಕ್ತದಿಂದ ಸೋನು ಸೂದ್​​ರ ಫೋಟೋವನ್ನು ಚಿತ್ರಿಸಿ ಅದನ್ನು ನಟನಿಗೆ ಉಡುಗೊರೆಯಾಗಿ ನೀಡಿದ್ದರು. ಅಭಿಮಾನಿಯ ಈ ಪ್ರೇಮಕ್ಕೆ ಧನ್ಯವಾದ ತಿಳಿಸಿದ ಸೋನು ಸೂದ್​ ಇದರ ಜೊತೆಯಲ್ಲಿ ಈ ರೀತಿಯಲ್ಲಿ ರಕ್ತವನ್ನು ಬಳಕೆ ಮಾಡುವ ಬದಲು ರಕ್ತದಾನ ಮಾಡಿ ಎಂದು ತಿಳಿ ಹೇಳಿದ್ದಾರೆ.

ನಟ ಸೋನು ಸೋದ್​ ತಮ್ಮ ಅಭಿಮಾನಿ ಹಾಗೂ ಕಲಾವಿದ ಮಧು ಗುರ್ಜಾರ್​ ಜೊತೆಯಲ್ಲಿ ಸಂಭಾಷಣೆ ನಡೆಸುತ್ತಿರುವುದನ್ನು ನೋಡಬಹುದಾಗಿದೆ. ಈ ವಿಡಿಯೋದಲ್ಲಿ ಸೋನು ಸೂದ್​ ಹಾಗೂ ಮಧು ಗುರ್ಜಾರ್​ ಈ ಪೇಟಿಂಗ್​ ಹಿಡಿದುಕೊಂಡಿರುವುದನ್ನು ಕಾಣಬಹುದಾಗಿದೆ. ಮಧು ಗುರ್ಜಾರ್​ ಅತ್ಯಂತ ಪ್ರತಿಭಾನ್ವಿತ ಕಲಾವಿದ. ಅವರು ನನ್ನ ಕಲಾಕೃತಿಯನ್ನು ರಕ್ತದಲ್ಲಿ ರಚಿಸಿದ್ದಾರೆ. ಆದರೆ ಇದನ್ನು ನೀವು ರಕ್ತದಿಂದ ರಚಿಸಿದ್ದು ತಪ್ಪು ಎಂದು ಸೋನು ಸೂದ್​ ಹೇಳಿದ್ದಾರೆ.


ನಿಮಗಾಗಿ ನಾನು ಜೀವವನ್ನೇ ತ್ಯಾಗ ಮಾಡಲು ಸಿದ್ಧನಿದ್ದೇನೆ ಎಂದು ಮಧು ಗುರ್ಜಾರ್​​ ಹೇಳಿದರೆ ಮತ್ತೊಬ್ಬ ನೀವು ದೇವರಿಗಿಂತ ಯಾವುದರಲ್ಲೂ ಕಡಿಮೆಯಿಲ್ಲ ಎಂದಿದ್ದಾರೆ. ಮತ್ತೊಬ್ಬರು ನಿಮ್ಮಂತ ವಿಶಾಲ ಹೃದಯದ ವ್ಯಕ್ತಿಯನ್ನು ನಾವು ಕಂಡೇ ಇಲ್ಲ ಎಂದಿದ್ದಾರೆ. ಇದಕ್ಕೆ ಉತ್ತರಿಸಿದ ಸೋನು ಸೂದ್​​ ನನಗೆ ಅರ್ಥವಾಗುತ್ತೆ. ಆದರೆ ರಕ್ತದಲ್ಲಿ ಯಾಕೆ..? ರಕ್ತದಲ್ಲಿ ಈ ರೀತಿ ಕಲಾಕೃತಿ ರಚಿಸುವ ಬದಲು ರಕ್ತದಾನ ಮಾಡಿ ಎಂದು ಅಭಿಮಾನಿಗಳಿಗೆ ಸೋನು ಸೂದ್​ ಕಿವಿಮಾತು ಹೇಳಿದ್ದಾರೆ.

ಈ ವಿಡಿಯೋವನ್ನು ರಿಟ್ವೀಟ್​ ಮಾಡಿರುವ ಸೋನು ಸೂದ್​, ಮತ್ತೊಮ್ಮೆ ರಕ್ತದಾನ ಮಾಡಿ, ಸಹೋದರ, ನನ್ನನ್ನು ಚಿತ್ರಿಸುವ ಮೂಲಕ ರಕ್ತವನ್ನು ವ್ಯರ್ಥ ಮಾಡಬೇಡಿ ಎಂದು ಬರೆದುಕೊಂಡಿದ್ದಾರೆ. ಸೋನು ಸೂದ್​ ಕೊನೆಯ ಬಾರಿ ಅಕ್ಷಯ್​ ಕುಮಾರ್​ ಮುಖ್ಯ ಭೂಮಿಕೆಯಲ್ಲಿ ನಟಿಸಿರುವ ಪ್ರಥ್ವಿರಾಜ್​ ಸಿನಿಮಾದಲ್ಲಿ ಚಾಂದ್​ ಬರ್ದಾಯಿ ಪಾತ್ರದಲ್ಲಿ ನಟಿಸಿದ್ದಾರೆ. ಸೋನು ಸೂದ್​ ಶೀಘ್ರದಲ್ಲೇ ತಮಿಳು ಸಿನಿಮಾ ಥಮಿಳರಸನ್​ ಮೂಲಕ ತೆರೆ ಮುಂದೆ ಕಾಣಿಸಿಕೊಳ್ಳಲಿದ್ದಾರೆ. ಇದರ ಜೊತೆಯಲ್ಲಿ ಬಾಲಿವುಡ್​​ನ ಫತೇಹ್​ ಸಿನಿಮಾದಲ್ಲಿ ಮುಖ್ಯ ಭೂಮಿಕೆಯಲ್ಲಿ ನಟಿಸಲಿದ್ದಾರೆ. ಈ ಸಿನಿಮಾಗೆ ಅಭಿನಂದನ್​ ಗುಪ್ತಾ ನಿರ್ದೇಶನವಿದೆ.

ಇದನ್ನು ಓದಿ : Virat Kohli Vs Sachin Tendulkar : 71ನೇ ಶತಕ ಬಾರಿಸಲು ತೆಗೆದುಕೊಂಡದ್ದು 1020 ದಿನ.. ಆದರೂ ಸಚಿನ್ ತೆಂಡೂಲ್ಕರ್‌ಗಿಂತ ಸ್ಪೀಡು ಕಿಂಗ್ ಕೊಹ್ಲಿ

ಇದನ್ನೂ ಓದಿ : Six drown : 2 ಪ್ರತ್ಯೇಕ ಘಟನೆಗಳಲ್ಲಿ ಗಣಪತಿ ವಿಸರ್ಜನೆ ವೇಳೆ ಮುಳುಗಿ ಆರು ಮಂದಿ ಜಲಸಮಾಧಿ

Sonu Sood reacts as fan gifts him his painting made with blood: ‘Donate blood instead’

Comments are closed.