Dream11 Title Sponsorship : ಟೀಮ್ ಇಂಡಿಯಾಗೆ ಡ್ರೀಮ್11 ಟೈಟಲ್ ಸ್ಪಾನ್ಸರ್, ಡೀಲ್ ಕುದುರಿದ್ದು ಎಷ್ಟು ಕೋಟಿಗೆ ಗೊತ್ತಾ?

ಬೆಂಗಳೂರು : ಭಾರತ ಕ್ರಿಕೆಟ್ ತಂಡದ ನೂತನ ಟೈಟಲ್ ಸ್ಪಾನ್ಸರ್‌ಶಿಪ್ (Dream11 Title Sponsorship) ಭಾರತದ ಫ್ಯಾಂಟಸಿ ಯೂನಿಕಾರ್ನ್ ಕಂಪನಿ ಡ್ರೀಮ್11 (Dream11) ಪಾಲಾಗಿದೆ. ಟೀಮ್ ಇಂಡಿಯಾ ಟೈಟಲ್ ಸ್ಪಾನ್ಸರ್‌ಶಿಪ್ ಅನ್ನು ಡ್ರೀಮ್11 3 ವರ್ಷಗಳ ಅವಧಿಗೆ ಪಡೆದುಕೊಂಡಿದೆ ಎಂದು ಬಿಸಿಸಿಐ (BCCI) ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.

ವೆಸ್ಟ್ ಇಂಡೀಸ್ ವಿರುದ್ಧ ಇದೇ ತಿಂಗಳ 12ನೇ ತಾರೀಕಿನಂತು ಆರಂಭವಾಗಲಿರುವ ಟೆಸ್ಟ್ ಸರಣಿಯ ಮೂಲಕ ಡ್ರೀಮ್11 ಟೈಟಲ್ ಸ್ಪಾನ್ಸರ್‌ಶಿಪ್ ಭಾರತ ತಂಡದ ಆಟಗಾರರ ಜರ್ಸಿಯಲ್ಲಿ ಮಿಂಚಲಿದೆ. ಕೆರಿಬಿಯನ್ ನಾಡಿನಲ್ಲಿ (India tour of West Indies) ಟೀಮ್ ಇಂಡಿಯಾ 2 ಟೆಸ್ಟ್, 3 ಏಕದಿನ ಹಾಗೂ 5 ಟಿ20 ಪಂದ್ಯಗಳ ಸರಣಿಯನ್ನಾಡಲಿದ್ದು, ಪ್ರಥಮ ಟೆಸ್ಟ್ ಪಂದ್ಯ ಜುಲೈ 12ರಂದು ಡೊಮಿನಿಕಾದಲ್ಲಿರುವ ವಿಂಡ್ಸರ್ ಪಾರ್ಕ್ ಮೈದಾನದಲ್ಲಿ ಆರಂಭವಾಗಲಿದೆ.

ಟೀಮ್ ಇಂಡಿಯಾದ ಟೈಟಲ್ ಸ್ಪಾನ್ಸರ್‌ಶಿಪ್‌ಗೆ ಬಿಸಿಸಿಐ 350 ಕೋಟಿ ರೂ.ಗಳ ಮೂಲಬೆಲೆ ನಿಗದಿ ಪಡಿಸಿತ್ತು. 2022ರಿಂದ 2023ರವರೆಗೆ ಬೈಜುಸ್ ಕಂಪನಿ ಟೀಮ್ ಇಂಡಿಯಾದ ಟೈಟಲ್ ಸ್ಪಾನ್ಸರ್ ಆಗಿತ್ತು. ದ್ವಿಪಕ್ಷೀಯ ಸರಣಿಯ ಪ್ರತೀ ಪಂದ್ಯಗಳಿಗೆ 5.5 ಕೋಟಿ ರೂ. ಹಾಗೂ ಐಸಿಸಿ ಆಯೋಜಿಸುವ ಟೂರ್ನಿಗಳ ಪಂದ್ಯಗಳಿಗೆ ಬೈಜುಸ್ 1.7 ಕೋಟಿ ರೂ.ಗಳನ್ನ ಐದು ವರ್ಷಗಳ ಕಾಲ ಬಿಸಿಸಿಐಗೆ ಬೈಜುಸ್ ಪಾವತಿ ಮಾಡಿತ್ತು.

ಆದರೆ ಈ ಬಾರಿ ಟೀಮ್ ಇಂಡಿಯಾ ಸ್ಪಾನ್ಸರ್‌ಶಿಪ್ ಪಡೆಯಲು ಕಾರ್ಪೊರೆಟ್ ಕಂಪನಿಗಳು ನಿರಾಸಕ್ತಿ ತೋರಿದ ಕಾರಣ ಮೂಲಬೆಲೆಯನ್ನು 350 ಕೋಟಿಗೆ ಇಳಿಸಲಾಗಿತ್ತು. ಅದರಂತೆ ದ್ವಿಪಕ್ಷೀಯ ಸರಣಿಗಳ ಪ್ರತೀ ಪಂದ್ಯಗಳಿಗೆ 3 ಕೋಟಿ ರೂ. ಹಾಗೂ ಐಸಿಸಿ ಪಂದ್ಯಗಳಿಗೆ 1 ಕೋಟಿ ರೂ.ಗಳನ್ನು ನಿಗದಿ ಪಡಿಸಲಾಗಿತ್ತು. ಭಾರತದ ಫ್ಯಾಂಟಸಿ ಯೂನಿಕಾರ್ನ್ ಕಂಪನಿಯಾಗಿರುವ ಡ್ರೀಮ್11 2018ರಿಂದ ಐಪಿಎಲ್ ಪ್ರಾಯೋಜಕತ್ವ ಹೊಂದಿದೆ. 2020ರಲ್ಲಿ ಡ್ರೀಮ್11 ಐಪಿಎಲ್‌ನ ಟೈಟಲ್ ಸ್ಪಾನ್ಸರ್‌ಶಿಪ್ ಪಡೆದುಕೊಂಡಿತ್ತು. ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ಗೂ ಮುನ್ನ ಟೀಮ್ ಇಂಡಿಯಾ ಕಿಟ್ ಸ್ಪಾನ್ಸರ್ ಆಗಿ ಖ್ಯಾತ ಅಂತರಾಷ್ಟ್ರೀಯ ಕಂಪನಿ ಅಡಿಡಾಸ್ ಜೊತೆ ಬಿಸಿಸಿಐ ಐದು ವರ್ಷಗಳ ಒಪ್ಪಂದ ಮಾಡಿಕೊಂಡಿತ್ತು.

ಇದನ್ನೂ ಓದಿ : Ajit Agarkar : ಬಿಸಿಸಿಐ ಆಯ್ಕೆ ಸಮಿತಿಗೆ ಅಜಿತ್ ಅಗರ್ಕರ್ ಚೇರ್ಮನ್ ? ರೇಸ್’ನಲ್ಲಿದ್ದಾರೆ ವೆಂಗ್ಸರ್ಕರ್, ಶಾಸ್ತ್ರಿ

ಇದನ್ನೂ ಓದಿ : Rishabh Pant : ರಿಷಭ್ ಪಂತ್’ಗೆ ಪುನರ್ಜನ್ಮ.. ಇದೇನಾಶ್ಚರ್ಯ? ಮರುಜನ್ಮದ ದಿನಾಂಕ ಪ್ರಕಟಿಸಿದ ಸ್ಟಾರ್ ವಿಕೆಟ್ ಕೀಪರ್

ಭಾರತ ಕ್ರಿಕೆಟ್ ತಂಡದ ಟೈಟಲ್ ಸ್ಪಾನ್ಸರ್’ಗಳು :

  • ವಿಲ್ಸ್ (Wills): 1990s
  • ಐಟಿಸಿ (ITC): 1999s
  • ಸಹರಾ ಗ್ರೂಪ್ (Sahara Group): 2002-2023
  • ಸ್ಟಾರ್ ಇಂಡಿಯಾ (Star India): 2014-2017
  • ಒಪ್ಪೊ (OPPO): 2017-2022
  • ಬೈಜುಸ್ (Byju’s): 2022-23
  • ಡ್ರೀಮ್11 (Dream11): 2023-26

Dream11 Title Sponsorship : BCCI announces Dream11 as the new Team India Lead Sponsor

Comments are closed.