Duleep Trophy final : ನಾಳೆಯಿಂದ ಚಿನ್ನಸ್ವಾಮಿಯಲ್ಲಿ ದುಲೀಪ್ ಟ್ರೋಫಿ ಫೈನಲ್, ಚಾಂಪಿಯನ್ ಪಟ್ಟದ ನಿರೀಕ್ಷೆಯಲ್ಲಿ ದಕ್ಷಿಣ ವಲಯ

ಬೆಂಗಳೂರು : Duleep Trophy final : ದೇಶೀಯ ಕ್ರಿಕೆಟ್’ನ ಪ್ರತಿಷ್ಠಿತ ಟೂರ್ನಿಯಾಗಿರುವ ದುಲೀಪ್ ಟ್ರೋಫಿ ಫೈನಲ್ (Duleep Trophy final 2023) ಪಂದ್ಯ ನಾಳೆ ಬೆಂಗಳೂರಿನ ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆರಂಭವಾಗಲಿದ್ದು, ಆತಿಥೇಯ ದಕ್ಷಿಣ ವಲಯ ಹಾಗೂ ಉತ್ತರ ವಲಯ (South Zone Vs West Zone) ತಂಡಗಳು ಮುಖಾಮುಖಿಯಾಗಲಿವೆ.

ಐದು ದಿನಗಳ ಈ ಪಂದ್ಯದಲ್ಲಿ ಹನುಮ ವಿಹಾರಿ ನಾಯಕತ್ವದ ದಕ್ಷಿಣ ವಲಯ ತಂಡದ ಚಾಂಪಿಯನ್ ಪಟ್ಟಕ್ಕೇರುವ ನಿರೀಕ್ಷೆಯಲ್ಲಿದೆ. ಕರ್ನಾಟಕದ ಬಲಗೈ ಓಪನರ್ ಮಯಾಂಕ್ ಅಗರ್ವಾಲ್ (Mayank Agarwal), ರಾಜ್ಯದ ಮತ್ತೊಬ್ಬ ಭರವಸೆಯ ಬ್ಯಾಟ್ಸ್’ಮನ್ ಆರ್.ಸಮರ್ಥ್, ಯುವ ಬಲಗೈ ವೇಗದ ಬೌಲರ್’ಗಳಾದ ವೈಶಾಖ್ ವಿಜಯ್ ಕುಮಾರ್ ಮತ್ತು ವಿದ್ವತ್ ಕಾವೇರಪ್ಪ ದಕ್ಷಿಣ ವಲಯ ತಂಡದಲ್ಲಿದ್ದಾರೆ. ಉತ್ತರ ವಲಯ ವಿರುದ್ಧದ ಸೆಮಿಫೈನಲ್ ಪಂದ್ಯದಲ್ಲಿ ಕನ್ನಡಿಗರ ಪರಾಕ್ರಮದಿಂದ ದಕ್ಷಿಣ ವಲಯ ಫೈನಲ್ ತಲುಪಿತ್ತು.

ಸೆಮಿಫೈನಲ್’ನಲ್ಲಿ ಮಯಾಂಕ್ ಅಗರ್ವಾಲ್ ಎರಡೂ ಇನ್ನಿಂಗ್ಸ್’ಗಳಲ್ಲಿ ಅರ್ಧಶತಕ ಬಾರಿಸಿದ್ರೆ, ವಿದ್ವತ್ ಕಾವೇರಪ್ಪ ಮತ್ತು ವೈಶಾಖ್ ವಿಜಯ್ ಕುಮಾರ್ 5 ವಿಕೆಟ್’ಗಳ ಸಾಧನೆ ಮಾಡಿದ್ದರು. ಗುಜರಾತ್’ನ ಪ್ರಿಯಾಂಕ್ ಪಾಂಚಾಲ್ ನಾಯಕತ್ವದ ಪಶ್ಚಿಮ ವಲಯ ತಂಡದಲ್ಲಿ ಟೀಮ್ ಇಂಡಿಯಾ ಟೆಸ್ಟ್ ಸ್ಪೆಷಲಿಸ್ಟ್ ಚೇತೇಶ್ವರ್ ಪೂಜಾರ, ಸೂರ್ಯಕುಮಾರ್ ಯಾದವ್, ಸರ್ಫರಾಜ್ ಖಾನ್’ರಂತಹ ಸ್ಟಾರ್ ಆಟಗಾರರಿದ್ದು, ಫೈನಲ್ ಪಂದ್ಯ ಭಾರೀ ಕುತೂಹಲ ಕೆರಳಿಸಿದೆ.

ದುಲೀಪ್ ಟ್ರೋಫಿ ಫೈನಲ್
ದಕ್ಷಿಣ ವಲಯ Vs ಪಶ್ಚಿಮ ವಲಯ
ಪಂದ್ಯ ಆರಂಭ: ಬೆಳಗ್ಗೆ 9.30ಕ್ಕೆ
ಸ್ಥಳ: ಎಂ.ಚಿನ್ನಸ್ವಾಮಿ ಕ್ರೀಡಾಂಗಣ, ಬೆಂಗಳೂರು
ಲೈವ್ ಸ್ಟ್ರೀಮಿಂಗ್: ಬಿಸಿಸಿಐ.ಟಿವಿ (bcci.tv)

ಇದನ್ನೂ ಓದಿ : India Vs West Indies test series : ಡ್ರೀಮ್11 ಜರ್ಸಿಯಲ್ಲಿ ಮಿಂಚಿದ ಟೀಮ್ ಇಂಡಿಯಾ ಆಟಗಾರರು, ನಾಳೆಯಿಂದ ಹೊಸ ಪ್ರಯಾಣ ಶುರು

ಇದನ್ನೂ ಓದಿ : Duleep Trophy final BCCI : ಬಿಸಿಸಿಐಗೆ ಮತ್ತೊಂದು ಮುಜುಗರ, ದೇಶೀಯ ಟೂರ್ನಿಗಳಿಗೆ ಬ್ರಾಡ್’ಕಾಸ್ಟರ್ಸ್ ಇಲ್ಲ, ತಾನೇ ಲೈವ್ ಸ್ಟ್ರೀಮ್ ಮಾಡಲು ಮುಂದಾದ ಕ್ರಿಕೆಟ್ ಬಾಸ್

ದಕ್ಷಿಣ ವಲಯ ತಂಡ:

  1. ಹನುಮ ವಿಹಾರಿ (ನಾಯಕ)
  2. ಮಯಾಂಕ್ ಅಗರ್ವಾಲ್ (ಉಪನಾಯಕ)
  3. ರವಿಕುಮಾರ್ ಸಮರ್ಥ್
  4. ತಿಲಕ್ ವರ್ಮಾ
  5. ಸಾಯಿ ಸುದರ್ಶನ್
  6. ರಿಕಿ ಭುಯಿ
  7. ಕೆ.ಎಸ್ ಭರತ್ (ವಿಕೆಟ್ ಕೀಪರ್)
  8. ವಾಷಿಂಗ್ಟನ್ ಸುಂದರ್
  9. ಸಚಿನ್ ಬೇಬಿ
  10. ಪ್ರದೋಶ್ ರಂಜನ್ ಪಾಲ್
  11. ಸಾಯಿ ಕಿಶೋರ್
  12. ವಿದ್ವತ್ ಕಾವೇರಪ್ಪ
  13. ವೈಶಾಖ್ ವಿಜಯ್ ಕುಮಾರ್
  14. ಕೆ.ವಿ ಸಸಿಕಾಂತ್
  15. ದರ್ಶನ್ ಮಿಸಾಲ್.

ಪಶ್ಚಿಮ ವಲಯ ತಂಡ:

  1. ಪ್ರಿಯಾಂಕ್ ಪಾಂಚಾಲ್
  2. ಹಾರ್ವಿಕ್ ದೇಸಾಯಿ
  3. ಚೇತೇಶ್ವರ್ ಪೂಜಾರ
  4. ಸೂರ್ಯಕುಮಾರ್ ಯಾದವ್
  5. ಸರ್ಫರಾಜ್ ಖಾನ್
  6. ಪೃಥ್ವಿ ಶಾ
  7. ತುಷಾರ್ ದೇಶಪಾಂಡೆ
  8. ಯುವರಾಜ್ ಸಿಂಗ್ ದೋಡಿಯಾ
  9. ಚಿಂತನ್ ಗಜ
  10. ಧರ್ಮೇಂದ್ರ ಸಿಂಗ್ ಜಡೇಜ
  11. ಶಮ್ಸ್ ಮುಲಾನಿ
  12. ಅರ್ಜನ್ ನಾಗಸ್ವಾಲಾ
  13. ಹೇತ್ ಪಟೇಲ್
  14. ಅತೀತ್ ಸೇಠ್
  15. ಅರ್ಪಿತ್ ವಸವಾಡ.

Duleep Trophy final: Duleep Trophy final at Chinnaswamy from tomorrow, South Zone hoping for the title

Comments are closed.