Duleep Trophy final : ದಕ್ಷಿಣ ವಲಯಕ್ಕೆ ಮೊದಲ ದಿನವೇ ಆಘಾತ, ಮೇಲುಗೈ ಸಾಧಿಸಿದ ಪಶ್ಚಿಮ ವಲಯ

ಬೆಂಗಳೂರು: Duleep Trophy final : ಆತಿಥೇಯ ದಕ್ಷಿಣ ವಲಯ ತಂಡ ದುಲೀಪ್ ಟ್ರೋಫಿ ಫೈನಲ್ (Duleep Trophy final 2023) ಪಂದ್ಯದ ಮೊದಲ ದಿನವೇ ಪಶ್ಚಿಮ ವಲಯ ವಿರುದ್ಧ ಮುಗ್ಗರಿಸಿದೆ. ಬೆಂಗಳೂರಿನ ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಬುಧವಾರ ಆರಂಭಗೊಂಡ ಪಂದ್ಯದಲ್ಲಿ ಟಾಸ್ ಗೆದ್ದ ಪಶ್ಚಿಮ ವಲಯ ಮೊದಲು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಬೌಲಿಂಗ್ ಸ್ನೇಹಿ ಪಿಚ್’ನಲ್ಲಿ ಭರಪೂರ ಲಾಭವೆತ್ತುವ ಪಶ್ಚಿಮ ವಲಯ ತಂಡದ ರಣತಂತ್ರ ಫಲಕೊಟ್ಟಿತ್ತು.

ದಕ್ಷಿಣ ವಲಯ ಪರ ಇನ್ನಿಂಗ್ಸ್ ಆರಂಭಿಸಿದ ಕನ್ನಡಿಗರಾದ ಆರ್.ಸಮರ್ಥ್ (7 ರನ್) ಮತ್ತು ಮಯಾಂಕ್ ಅಗರ್ವಾಲ್ (28 ರನ್) ತಂಡಕ್ಕೆ ಉತ್ತಮ ಆರಂಭ ಒದಗಿಸುವಲ್ಲಿ ವಿಫಲರಾದರು. 3ನೇ ವಿಕೆಟ್’ಗೆ ತಿಲಕ್ ವರ್ಮಾ (40 ರನ್) ಮತ್ತು ನಾಯಕ ಹನುಮ ವಿಹಾರಿ (63 ರನ್) 79 ರನ್ ಸೇರಿಸಿ ತಂಡವನ್ನು ಆರಂಭಿಕ ಆಘಾತದಿಂದ ಪಾರು ಮಾಡಿದರು. ಆದರೆ 121ರ ಮೊತ್ತದಲ್ಲಿ ತಿಲಕ್ ವರ್ಮಾ ಔಟಾಗುತ್ತಿದ್ದಂತೆ ದಕ್ಷಿಣ ವಲಯ ಹಠಾತ್ ಕುಸಿತ ಕಂಡಿತು.

121 ರನ್ನಿಗೆ 2 ವಿಕೆಟ್ ಕಳೆದುಕೊಂಡಿದ್ದ ತಂಡ, ಕೇವಲ 55 ರನ್ ಅಂತರದಲ್ಲಿ 5 ವಿಕೆಟ್ ಕಳೆದುಕೊಂಡಿತು. ಮಧ್ಯಮ ಕ್ರಮಾಂಕದಲ್ಲಿ ತಂಡಕ್ಕೆ ಆಸರೆಯಾದರ ಹನುಮ ವಿಹಾರಿ 63 ರನ್ ಗಳಿಸಿ 6ನೇ ವಿಕೆಟ್ ರೂಪದಲ್ಲಿ ಔಟಾದರು. ವಿಕೆಟ್ ಕೀಪರ್ ರಿಕಿ ಭುಯಿ 9 ರನ್, ಸಚಿನ್ ಬೇಬಿ 7 ರನ್ ಗಳಿಸಿ ಔಟಾದ್ರೆ ಟೀಮ್ ಇಂಡಿಯಾ ಆಟಗಾರ ವಾಷಿಂಗ್ಟನ್ ಸುಂದರ್ ಅಜೇಯ 9 ರನ್ ಗಳಿಸಿ ಕನ್ನಡಿಗ ವೈಶಾಖ್ ವಿಜಯ್ ಕುಮಾರ್ (ಅಜೇಯ 5 ರನ್) ಜೊತೆ 2ನೇ ದಿನಕ್ಕೆ ಕ್ರೀಸ್ ಕಾಯ್ದುಕೊಂಡಿದ್ದಾರೆ. ಮಂದ ಬೆಳಕಿನ ಕಾರಣ ಪ್ರಥಮ ದಿನದಾಟ ಬೇಗನೆ ಅಂತ್ಯಗೊಂಡಾಗ ದಕ್ಷಿಣ ವಲಯ ತಂಡ ತನ್ನ ಮೊದಲ ಇನ್ನಿಂಗ್ಸ್’ನಲ್ಲಿ 7 ವಿಕೆಟ್ ನಷ್ಟಕ್ಕೆ 182 ರನ್ ಗಳಿಸಿದೆ.

ಇದನ್ನೂ ಓದಿ : Let’s Get Married movie : ‘ಲೆಟ್ಸ್ ಗೆಟ್ ಮ್ಯಾರೀಡ್’ ಸಿನಿಮಾದ ಟ್ರೇಲರ್ ಹಾಗೂ ಆಡಿಯೋ ಬಿಡುಗಡೆ ಮಾಡಿದ ಕ್ಯಾಪ್ಟನ್ ಕೂಲ್ ಎಂ.ಎಸ್.ಧೋನಿ

ಇದನ್ನೂ ಓದಿ : KL Rahul comeback: ಟೀಮ್ ಇಂಡಿಯಾ ಕಂಬ್ಯಾಕ್, ನಿಗೂಢ ಸಂದೇಶ ರವಾನಿಸಿದ ಕೆ.ಎಲ್ ರಾಹುಲ್

Comments are closed.