ENG vs WI : ವೆಸ್ಟ್‌ಇಂಡೀಸ್ 55 ರನ್‌ಗೆ‌ ಆಲೌಟ್‌ : ವಿಶ್ವಕಪ್‌ನಲ್ಲಿ ಕೆಟ್ಟ ದಾಖಲೆ ಬರೆದ ಕೆರಿಬಿಯನ್ನರು

ದುಬೈ : ಟಿ20 ವಿಶ್ವಕಪ್‌ನಲ್ಲಿ ವೆಸ್ಟ್‌ ಇಂಡಿಸ್‌ ಕೆಟ್ಟ ದಾಖಲೆಯೊಂದನ್ನು ಬರೆದಿದ್ದು, ಇಂಗ್ಲೆಂಡ್‌ ವಿರುದ್ದದ ಪಂದ್ಯದಲ್ಲಿ 55 ರನ್‌ಗಳಿಗೆ ಆಲೌಟ್‌ ಆಗಿದೆ. ಈ ಮೂಲಕ ವಿಶ್ವಕಪ್‌ನಲ್ಲಿ ಕನಿಷ್ಟ ಮೊತ್ತಕ್ಕೆ ಆಲೌಟ್‌ ಆದ ಎರಡನೇ ತಂಡ ಅನ್ನೋ ಅಪಖ್ಯಾತಿಗೆ ತುತ್ತಾಗಿದೆ.

ದುಬೈನ ಅಂತರಾಷ್ಟ್ರೀಯ ಕ್ರಿಕೆಟ್‌ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ನಡೆಸಿದ್ದ ವೆಸ್ಟ್‌ ಇಂಡಿಸ್‌ ತಂಡ ಇಂಗ್ಲೆಂಡ್‌ ವಿರುದ್ದ ವೈಫಲ್ಯ ಕಂಡಿದೆ. ಆದಿಲ್‌ ರಶೀದ್‌ ಹಾಗೂ ಮಿಲ್ಸ್‌ ದಾಳಿಗೆ ತತ್ತರಿಸಿದ ವೆಸ್ಟ್‌ ಇಂಡಿಸ್ ತಂಡ 14.2ಓವರ್‌ಗಳಲ್ಲಿ ತನ್ನೆಲ್ಲಾ ವಿಕೆಟ್‌ ಕಳೆದುಕೊಂಡು ಕೇವಲ 55 ರನ್‌ಗಳಿಗೆ ಆಲೌಟಾಗಿತ್ತು.

ಆರಂಭಿಕರಾಗಿದ್ದ ಲಿಂಡ್ಲೆ ಸಿಮಂಡ್ಸ್‌ ಹಾಗೂ ಇವಿನ್‌ ಲೂವಿಸ್‌ ಅವರು ಎರಡಂಕಿ ದಾಟುವ ಮೊದಲೇ ಮೊಯಿನ್‌ ಆಲಿ ಹಾಗೂ ವೋಕ್ಸ್‌ ಫೆವಿಲಿಯನ್‌ ದಾರಿ ತೋರಿಸಿದ್ರು. ನಂತರ ಬ್ಯಾಟಿಂಗ್‌ ಗೆ ಇಳಿದ ಕ್ರೀಸ್‌ ಗೇಲ್‌ ರನ್‌ಗಳಿಸಲು ಪರದಾಡಿದ್ರು. 12 ಎಸೆತಗಳನ್ನು ಎದುರಿಸಿ ಮೂರು ಬೌಂಡರಿ ಸಹಿತ 13 ರನ್‌ ಗಳಿಸಿದ್ರೂ ಮಿಲ್ಸ್‌ ದಾಳಿಗೆ ತತ್ತರಿಸಿ ಹೋದ್ರು. ನಂತರ ದ ಹೆಟ್ಮಯರ್‌, ಡ್ವೇನ್‌ ಬ್ರಾವೋ, ನಿಕೋಲಸ್‌ ಪೂರನಾ, ಕಿರೊನ್‌ ಪೊಲಾರ್ಡ್‌, ಆಂಡ್ರೆ ರೆಸೆಲ್‌, ಮಕೊಯ್‌, ಹುಸೈನ್‌, ರವಿ ರಾಂಪಾಲ್‌ ಸತತವಾಗಿ ವೈಫಲ್ಯ ಅನುಭವಿಸಿದ್ದಾರೆ.

ಇಂಗ್ಲೆಂಡ್‌ ತಂಡದ ಪರವಾಗಿ ಮಾರಕ ದಾಳಿ ಸಂಘಟಿಸಿದ ಆದಿಲ್‌ ರಶೀದ್‌ 2.2 ಓವರ್‌ಗಳಲ್ಲಿ ಕೇವಲ 2 ರನ್‌ ನೀಡಿ 4 ವಿಕೆಟ್‌ ಕಬಳಿಸಿದ್ರೆ, ಮೊಯಿನ್‌ ಆಲಿ 17ಕ್ಕೆ 2 ಹಾಗೂ ಟಿ.ಮಿಲ್ಸ್‌ 17 ಕ್ಕೆ 2 ವಿಕೆಟ್‌ ಪಡೆದುಕೊಂಡಿದ್ದಾರೆ. ಉಳಿದಂತೆ ವೋಕ್ಸ್‌ ಹಾಗೂ ಕ್ರಿಸ್‌ ಜೋರ್ಡಾನ್‌ ತಲಾ 1 ವಿಕೆಟ್‌ ಪಡೆದುಕೊಂಡಿದ್ದಾರೆ.

ವೆಸ್ಟ್‌ ಇಂಡಿಸ್‌ ತಂಡ ವಿಶ್ವಕಪ್‌ ನಲ್ಲಿ ಮೊದಲ ಬಾರಿ ಕನಿಷ್ಟ ಮೊತ್ತಕ್ಕೆ ಆಲೌಟ್‌ ಆಗಿದೆ. 2010ರ ವಿಶ್ವಕಪ್‌ನಲ್ಲಿ ಐರ್ಲೆಂಡ್‌ ತಂಡವನ್ನ 68 ಆಲೌಟ್‌ ಮಾಡಿದ್ದ, ವೆಸ್ಟ್‌ ಇಂಡಿಸ್‌ ತಂಡ ಇದೀಗ ಇಂಗ್ಲೆಂಡ್‌ ವಿರುದ್ದ ಕೇವಲ 55 ರನ್‌ಗಳಿಗೆ ಆಲೌಟ್‌ ಆಗುವ ಮೂಲಕ ವಿಶ್ವಕಪ್‌ ಆರಂಭದಲ್ಲಿಯೇ ಮುಖಭಂಗ ಅನುಭವಿಸಿದೆ.

ಇದನ್ನೂ ಓದಿ : ಯುವ ಕ್ರಿಕೆಟ್‌ ಆಟಗಾರ್ತಿಗೆ ಲೈಂಗಿಕ ಕಿರುಕುಳ : ಭಾರತದ ಕ್ರಿಕೆಟ್ ಕೋಚ್‌ ವಿರುದ್ದ ಪ್ರಕರಣ ದಾಖಲು

ಇದನ್ನೂ ಓದಿ : ಪಾಕಿಸ್ತಾನ ವಿರುದ್ದ ಪಂದ್ಯಕ್ಕೆ ಸಜ್ಜಾಗಿದೆ ಟೀಂ ಇಂಡಿಯಾ : ಹೇಗಿರುತ್ತೆ ಗೊತ್ತಾ ಪ್ಲೇಯಿಂಗ್‌ XI

T20 World Cup : ENG vs WI, Windies shot out for 55, their lowest World Cup score

Comments are closed.