ಭಾನುವಾರ, ಏಪ್ರಿಲ್ 27, 2025
HomeSportsCricketನಿನ್ನನ್ನು ನೋಡಿ ಖುಷಿಯಾಗುತ್ತಿದೆ..” ಸಚಿನ್ ಪುತ್ರನ ಬಗ್ಗೆ ಇಂಗ್ಲೆಂಡ್ ಮಹಿಳಾ ಕ್ರಿಕೆಟರ್ ಹೀಗೆ ಹೇಳಿದ್ದೇಕೆ ?

ನಿನ್ನನ್ನು ನೋಡಿ ಖುಷಿಯಾಗುತ್ತಿದೆ..” ಸಚಿನ್ ಪುತ್ರನ ಬಗ್ಗೆ ಇಂಗ್ಲೆಂಡ್ ಮಹಿಳಾ ಕ್ರಿಕೆಟರ್ ಹೀಗೆ ಹೇಳಿದ್ದೇಕೆ ?

- Advertisement -

ಲಂಡನ್: ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ ಮಗ ಅರ್ಜುನ್ ತೆಂಡೂಲ್ಕರ್ ಸದ್ಯ ಇಂಗ್ಲೆಂಡ್”ನಲ್ಲಿದ್ದಾರೆ. ಲಂಡನ್”ನಲ್ಲಿರುವ ಸಚಿನ್ ಪುತ್ರನ ಫೋಟೋವನ್ನು ಇಂಗ್ಲೆಂಡ್ ಮಹಿಳಾ ಕ್ರಿಕೆಟ್ ತಂಡದ ಆಟಗಾರ್ತಿ ಡೇನಿಯಲ್ ವ್ಯಾಟ್, ತಮ್ಮ ಟ್ವಿಟರ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ (England Woman Cricketer Danielle Wyatt Posts Arjun Tendulkar). ಈ ಪೋಸ್ಟ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

ಅರ್ಜನ್ ತೆಂಡೂಲ್ಕರ್ ಮತ್ತು ಇಂಗ್ಲೆಂಡ್ ಮಹಿಳಾ ಕ್ರಿಕೆಟರ್ ಡೇನಿಯಲ್ ವ್ಯಾಟ್ (Danielle Wyatt) ತುಂಬಾ ವರ್ಷಗಳಿಂದ ಸ್ನೇಹಿತರು. ಈ ಹಿಂದೆ ಇಂಗ್ಲೆಂಡ್”ಗೆ ಹೋದಾಗ ತಮ್ಮ ಸ್ನೇಹಿತೆಯನ್ನು ಅರ್ಜುನ್ ಭೇಟಿ ಮಾಡಿದ್ದರು. ಈ ಬಾರಿ ಕೂಡ ಇಬ್ಬರೂ ಲಂಡನ್”ನ ರೆಸ್ಟೋರೆಂಟ್ ಒಂದರಲ್ಲಿ ರಾತ್ರಿ ಊಟಕ್ಕೆಂದು ಭೇಟಿಯಾಗಿದ್ದಾರೆ. ಈ ವೇಳೆ ಕ್ಲಿಕ್ಕಿಸಿರುವ ಫೋಟೋವನ್ನು ಡೇನಿಯಲ್ ವ್ಯಾಟ್ ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಿದ್ದಾರೆ.

ಅಪ್ಪ ಸಚಿನ್ ತೆಂಡೂಲ್ಕರ್ 16ನೇ ವರ್ಷಕ್ಕೇ ಭಾರತ ಪರ ಆಡಿದವರು. ಆದರೆ 22 ವರ್ಷದ ಅರ್ಜುನ್ ತೆಂಡೂಲ್ಕರ್ (Sachin Tendulkar’s son Arjun Tendulkar) ಇನ್ನೂ ಮುಂಬೈ ಪರ ರಣಜಿ ಪಂದ್ಯವನ್ನೂ ಆಡಿಲ್ಲ. ಮಗನನ್ನು ಕ್ರಿಕೆಟರ್ ಮಾಡಬೇಕು ಎಂಬುದು ಸಚಿನ್ ಅವರ ಕನಸು. ಆದರೆ ಅರ್ಜುನ್ ತೆಂಡೂಲ್ಕರ್”ಗೆ ಮಾತ್ರ ಯಾಕೋ ಕ್ರಿಕೆಟ್ ಕೈ ಹಿಡಿಯುತ್ತಿಲ್ಲ.

ಐಪಿಎಲ್-2022 ಹರಾಜಿನಲ್ಲಿ ಅರ್ಜುನ್ ತೆಂಡೂಲ್ಕರ್ ಅವರನ್ನು ಮುಂಬೈ ಇಂಡಿಯನ್ಸ್ ಫ್ರಾಂಚೈಸಿ 30 ಲಕ್ಷ ರೂ.ಗಳಿಗೆ ಖರೀದಿಸಿತ್ತು. ಆದರೆ ಸಚಿನ್ ಪುತ್ರನಿಗೆ ಒಂದೇ ಒಂದು ಪಂದ್ಯದಲ್ಲಿ ಆಡುವ ಅವಕಾಶ ಸಿಕ್ಕಿರಲಿಲ್ಲ.

ಇದನ್ನೂ ಓದಿ : ಪಾಂಡ್ಯ ಅಣ್ಣನೊಂದಿಗೆ ಕಿರಿಕ್.. ಸ್ವಂತ ರಾಜ್ಯಕ್ಕೆ ಗುಡ್‌ಬೈ.. ಟೀಮ್ ಇಂಡಿಯಾಗೆ ಎಂಟ್ರಿ.. ಟಿ20 ಸೆಂಚುರಿ.. ಇದು ಹೂಡ ಸಕ್ಸಸ್ ಸ್ಟೋರಿ

ಇದನ್ನು ಓದಿ : Eoin Morgan : ಇಂಗ್ಲಿಷ್ ಕ್ರಿಕೆಟ್ ದಿಕ್ಕನ್ನೇ ಬದಲಿಸಿದ ಐರಿಷ್ ಆಟಗಾರ ; ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಇಂಗ್ಲೆಂಡ್ ದಿಗ್ಗಜನ ವಿದಾಯ

ಇದನ್ನೂ ಓದಿ : India Vs England test : ಭಾರತವನ್ನು ಸೋಲಿಸುವುದು ಸುಲಭವಲ್ಲ.. ಇಂಗ್ಲೆಂಡ್ ಎಚ್ಚರಿಕೆ ಕೊಟ್ಟ ಸ್ವಂತ ಆಟಗಾರ

ಇದನ್ನೂ ಓದಿ : ಮತ್ತೆ ಶುರುವಾಗಲಿದೆ ಕರ್ನಾಟಕ ಪ್ರೀಮಿಯರ್ ಲೀಗ್… ಹೊಸ ಟಿ20 ಲೀಗ್‌ನ ಹೆಸರೇನು ಗೊತ್ತಾ ?

England Woman Cricketer Danielle Wyatt Posts Arjun Tendulkar Photo

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular