Exclusive : KL Rahul out of West Indies T20s : ವೆಸ್ಟ್ ಇಂಡೀಸ್ ವಿರುದ್ಧದ ಟಿ20 ಸರಣಿಯಿಂದ ಕೆ.ಎಲ್ ರಾಹುಲ್ ಔಟ್

ಬೆಂಗಳೂರು: ಕೊರೊನಾಗೆ ಗುರಿಯಾಗಿದ್ದ ಟೀಮ್ ಇಂಡಿಯಾದ ಸ್ಟಾರ್ ಓಪನಿಂಗ್ ಬ್ಯಾಟರ್ ಕೆ.ಎಲ್ ರಾಹುಲ್ (KL Rahul) ವೆಸ್ಟ್ ಇಂಡೀಸ್ ವಿರುದ್ಧದ ಟಿ20 ಸರಣಿಯಿಂದ (KL Rahul out of West Indies T20s) ಹೊರ ಬಿದ್ದಿದ್ದಾರೆ. ಕಳೆದ ವಾರ ರಾಹುಲ್ ಅವರಿಗೆ ಕೋವಿಡ್-19 ಪಾಸಿಟಿವ್ ಕಾಣಿಸಿಕೊಂಡಿತ್ತು. ರಾಹುಲ್ ಸದ್ಯ ಕೊರೊನಾದಿಂದ ಚೇತರಿಸಿಕೊಳ್ಳುತ್ತಿದ್ದರೂ, ವಿಂಡೀಸ್ ವಿರುದ್ಧದ ಟಿ20 ಸರಣಿ (India Vs West Indies T20 Series) ಆರಂಭದ ಹೊತ್ತಿಗೆ ಸಂಪೂರ್ಣ ಫಿಟ್ ಆಗಲು ಸಾಧ್ಯವಿಲ್ಲದೇ ಇರುವ ಕಾರಣ ಸರಣಿಗೆ ಅಲಭ್ಯರಾಗಿದ್ದಾರೆ.

ವೆಸ್ಟ್ ಇಂಡೀಸ್ ವಿರುದ್ಧದ ಟಿ20 ಸರಣಿಗೆ ಆಯ್ಕೆ ಮಾಡಲಾಗಿದ್ದ ಭಾರತ ತಂಡದಲ್ಲಿ ರಾಹುಲ್ ಸ್ಥಾನ ಪಡೆದಿದ್ದರು. ಸ್ಪೋರ್ಟ್ಸ್ ಹರ್ನಿಯಾ (Sports Hernia) ಸಮಸ್ಯೆಗೆ ಜರ್ಮನಿಯಲ್ಲಿ ಶಸ್ತ್ರಚಿಕಿತ್ಸೆ ಪಡೆದು ಬಂದಿದ್ದ ರಾಹುಲ್, ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್ ಅಖಾಡೆಮಿಯಲ್ಲಿ ಅಭ್ಯಾಸವನ್ನೂ ಆರಂಭಿಸಿದ್ದರು. ಇನ್ನೇನು ವಿಂಡೀಸ್ ಪ್ರವಾಸಕ್ಕೆ ಸಿದ್ಧ ಎನ್ನುವಷ್ಟರಲ್ಲಿ ರಾಹುಲ್ ಅವರಿಗೆ ಕೊರೊನಾ ಪಾಸಿಟಿವ್ ಕಾಣಿಸಿಕೊಂಡಿತ್ತು.

ಕಳೆದ ದಕ್ಷಿಣ ಆಫ್ರಿಕಾ ವಿರುದ್ಧದ ತವರು ಟಿ20 ಸರಣಿಗೆ ನಾಯಕನಾಗಿ ಆಯ್ಕೆಯಾಗಿದ್ದ ರಾಹುಲ್ ಅವರಿಗೆ ಅಲ್ಲೂ ಅದೃಷ್ಟ ಕೈ ಕೊಟ್ಟಿತ್ತು. ಸರಣಿ ಆರಂಭಕ್ಕೆ ಮುನ್ನಾ ದಿನ ತೊಡೆ ಸಂಧು (Groin Injury) ಗಾಯಕ್ಕೊಳಗಾಗಿ ಇಡೀ ಸರಣಿಯಿಂದಲೇ ಹೊರ ಬಿದ್ದಿದ್ದರು. ನಂತರ ಇಂಗ್ಲೆಂಡ್ ಪ್ರವಾಸಕ್ಕೂ ರಾಹುಲ್ ಅಲಭ್ಯರಾಗಿದ್ದರು. ಈಗ ವೆಸ್ಟ್ ಇಂಡೀಸ್ ವಿರುದ್ಧದ ಟಿ20 ಸರಣಿಯಿಂದಲೂ ರಾಹುಲ್ ಹೊರ ಬಿದ್ದಿದ್ದಾರೆ. ವಿಂಡೀಸ್ ವಿರುದ್ಧದ 5 ಪಂದ್ಯಗಳ ಟಿ20 ಸರಣಿಯ ಮೊದಲ ಪಂದ್ಯ ಶುಕ್ರವಾರ (ಜುಲೈ 29) ಟ್ರಿನಿಡಾಡ್”ನ ಬ್ರಿಯಾನ್ ಲಾರಾ ಸ್ಟೇಡಿಯಂನಲ್ಲಿ ನಡೆಯಲಿದೆ.

ವೆಸ್ಟ್ ಇಂಡೀಸ್ ವಿರುದ್ಧದಟಿ20 ಸರಣಿಗೆ ಭಾರತ ತಂಡ:
ರೋಹಿತ್ ಶರ್ಮಾ (ನಾಯಕ), ಇಶಾನ್ ಕಿಶನ್, ಸೂರ್ಯಕುಮಾರ್ ಯಾದವ್, ದೀಪಕ್ ಹೂಡ, ಶ್ರೇಯಸ್ ಅಯ್ಯರ್, ರಿಷಭ್ ಪಂತ್ (ವಿಕೆಟ್ ಕೀಪರ್), ದಿನೇಶ್ ಕಾರ್ತಿಕ್ (ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜ, ಅಕ್ಷರ್ ಪಟೇಲ್, ಆರ್.ಅಶ್ವಿನ್, ಕುಲ್ದೀಪ್ ಯಾದವ್, ರವಿ ಬಿಷ್ಣೋಯ್, ಭುವನೇಶ್ವರ್ ಕುಮಾರ್, ಆವೇಶ್ ಖಾನ್, ಹರ್ಷಲ್ ಪಟೇಲ್, ಅರ್ಷದೀಪ್ ಸಿಂಗ್.

ಭಾರತ Vs ವೆಸ್ಟ್ ಇಂಡೀಸ್: ಟಿ20 ಸರಣಿಯ ವೇಳಾಪಟ್ಟಿ
ಜುಲೈ 29: ಮೊದಲ ಟಿ20 ಪಂದ್ಯ (ಟ್ರಿನಿಡಾಡ್)
ಆಗಸ್ಟ್ 01: ಎರಡನೇ ಟಿ20 ಪಂದ್ಯ (ಸೇಂಟ್ ಕಿಟ್ಸ್)
ಆಗಸ್ಟ್ 02: ಮೂರನೇ ಟಿ20 ಪಂದ್ಯ (ಸೇಂಟ್ ಕಿಟ್ಸ್)
ಆಗಸ್ಟ್ 06: ನಾಲ್ಕನೇ ಟಿ20 ಪಂದ್ಯ (ಫ್ಲೋರಿಡಾ)
ಆಗಸ್ಟ್ 07: ಐದನೇ ಟಿ20 ಪಂದ್ಯ (ಫ್ಲೋರಿಡಾ)

ಇದನ್ನೂ ಓದಿ : Exclusive : KL Rahul out of West Indies T20s : ವೆಸ್ಟ್ ಇಂಡೀಸ್ ವಿರುದ್ಧದ ಟಿ20 ಸರಣಿಯಿಂದ ಕೆ.ಎಲ್ ರಾಹುಲ್ ಔಟ್

ಇದನ್ನೂ ಓದಿ : Murali Vijay : ಮುರಳಿ ವಿಜಯ್ ಮುಂದೆ “ಡಿಕೆ ಡಿಕೆ” ಎಂದು ಕೂಗಿದ ಫ್ಯಾನ್ಸ್

ಇದನ್ನೂ ಓದಿ : MS Dhoni Issued Notice ಎಂ.ಎಸ್​ ಧೋನಿಗೆ ‘ಸುಪ್ರೀಂ’ನಿಂದ ನೋಟಿಸ್​ : ಏನಿದು ಆಮ್ರಪಾಲಿ ಪ್ರಕರಣ, ಇಲ್ಲಿದೆ ಮಾಹಿತಿ

Exclusive KL Rahul out of West Indies T20s

Comments are closed.