FIR against Mahendra Singh Dhoni : ಚೆಕ್ ಬೌನ್ಸ್ ಪ್ರಕರಣದಲ್ಲಿ ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಸೇರಿದಂತೆ ಎಂಟು ಜನರ ವಿರುದ್ಧ ಬೇಗುಸರಾಯ್‌ನ ಸಿಜೆಎಂ ನ್ಯಾಯಾಲಯದಲ್ಲಿ ಪ್ರಕರಣ ದಾಖಲಾಗಿದೆ. ‘ನ್ಯೂ ಗ್ಲೋಬಲ್ ಪ್ರೊಡ್ಯೂಸ್ ಇಂಡಿಯಾ ಲಿಮಿಟೆಡ್’ ಎಂಬ ಕಂಪನಿ ನೀಡಿದ್ದ 30 ಲಕ್ಷ ರೂಪಾಯಿ ಚೆಕ್ ಬೌನ್ಸ್ ಆಗಿದೆ ಎಂದು ಆರೋಪಿಸಿ ಡಿಎಸ್ ಎಂಟರ್‌ಪ್ರೈಸಸ್ ಎಂಬ ಕಂಪನಿ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಿದೆ.
ಮಹೇಂದ್ರ ಸಿಂಗ್ ಧೋನಿಯು ಈ ಕಂಪನಿಯ ಉತ್ಪನ್ನವನ್ನು ಪ್ರಚಾರ ಮಾಡುತ್ತಿದ್ದರು. ಧೋನಿಯೇ (Mahendra Singh Dhoni)ಈ ಕಂಪನಿಯ ಚೇರ್ ಮ್ಯಾನ್ ಇದ್ದಾರೆ ಎಂದು ಹೇಳಲಾಗುತ್ತಿದೆ. ಈ ಸಂಬಂಧ ಸೋಮವಾರದಂದು ವಿಚಾರಣೆ ನಡೆಸಿದ ನ್ಯಾಯಾಲಯವು ಜುಡಿಷಿಯಲ್ ಮ್ಯಾಜಿಸ್ಟ್ರೇಟ್ ಅಜಯ್ ಕುಮಾರ್ ಮಿಶ್ರಾಗೆ ಪ್ರಕರಣವನ್ನು ಕಳುಹಿಸಿದ್ದು ಮುಂದಿನ ವಿಚಾರಣೆಯು ಜೂನ್ 28ಕ್ಕೆ ನಡೆಯಲಿದೆ.
ಮೂಲಗಳ ಪ್ರಕಾರ, ನ್ಯೂ ಗ್ಲೋಬಲ್ ಪ್ರೊಡ್ಯೂಸ್ ಇಂಡಿಯಾ ಲಿಮಿಟೆಡ್ 30 ಲಕ್ಷ ರೂಪಾಯಿ ಮೌಲ್ಯದ ರಸಗೊಬ್ಬರವನ್ನು ಪೂರೈಸಲು ಡಿಎಸ್ ಎಂಟರ್ಪ್ರೈಸಸ್ನೊಂದಿಗೆ ಒಪ್ಪಂದಕ್ಕೆ ಸಹಿ ಹಾಕಿತ್ತು. ಇದಾದ ಬಳಿಕ ರಸಗೊಬ್ಬರವನ್ನು ವಿತರಿಸಲಾಯಿತು. ಆದರೆ ಕಂಪನಿಯು ಮಾರಾಟಗಾರರೊಂದಿಗೆ ಸಹಕರಿಸಲಿಲ್ಲ. ಹೀಗಾಗಿ ದೊಡ್ಡ ಪ್ರಮಾಣದ ರಸಗೊಬ್ಬರವು ಮಾರಾಟವಾಗದೆ ಉಳಿಯಿತು.
ಆದರೆ ಉಳಿದ ರಸಗೊಬ್ಬರಗಳನ್ನು ಕಂಪನಿ ವಾಪಸ್ ತೆಗೆದುಕೊಂಡಿದ್ದು ಇದರ ಬದಲಾಗಿ 30 ಲಕ್ಷ ರೂಪಾಯಿ ಮೌಲ್ಯದ ಚೆಕ್ನ್ನು ಏಜೆನ್ಸಿ ಹೆಸರಿನಲ್ಲಿ ನೀಡಲಾಗಿತ್ತು.ಈ ಚೆಕ್ನ್ನು ಬ್ಯಾಂಕಿನಲ್ಲಿ ಡ್ರಾ ಮಾಡಲು ತೆಗೆದುಕೊಂಡು ಹೋದಾಗ ಅದು ಬೌನ್ಸ್ ಆಗಿದೆ ಎಂದು ತಿಳಿದು ಬಂದಿದೆ. ಈ ಸಂಬಂಧ ಕಂಪನಿಗೆ ಲೀಗಲ್ ನೋಟಿಸ್ ನೀಡಲಾಗಿದೆ. ಆದರೆ ಈ ವಿಷಯದಲ್ಲಿ ಯಾವುದೇ ಕ್ರಮ ಕೈಗೊಂಡಿಲ್ಲ. ಹಾಗೂ ಈ ವಿಚಾರವಾಗಿ ಕಂಪನಿಯು ಈವರೆಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಭಾರತೀಯ ದಂಡ ಸಂಹಿತೆ ಸೆಕ್ಷನ್ 406,120(ಬಿ) ಹಾಗೂ ಎನ್ಐ ಕಾಯ್ದೆಯ ಸೆಕ್ಷನ್ 138ರ ಅಡಿಯಲ್ಲಿ ನ್ಯೂ ಗ್ಲೋಬಲ್ ಪ್ರೊಡ್ಯೂಸ್ ಇಂಡಿಯಾ ಲಿಮಿಟೆಡ್ ಮಹೇಂದ್ರ ಸಿಂಗ್ ಧೋನಿ ಹಾಗೂ ಸಿಇಓ ರಾಜೇಶ್ ಆರ್ಯ ಸೇರಿದಂತೆ ಇತರರ ಹೆಸರನ್ನು ದೂರಿನಲ್ಲಿ ಉಲ್ಲೇಖಿಸಿದೆ.
ಇದನ್ನು ಓದಿ : Aryan Khan : ಪದವಿ ಓದುವಾಗಲೇ ಗಾಂಜಾ ಸೇವಿಸುತ್ತಿದ್ದೇ : ಆರ್ಯನ್ ಖಾನ್ ತಪ್ಪೊಪ್ಪಿಗೆ
ಇದನ್ನೂ ಓದಿ : Singer KK dies : ಹಾಡುತ್ತಿರುವಾಗಲೇ ಸಾವನ್ನಪ್ಪಿದ ಖ್ಯಾತ ಗಾಯಕ ಕೃಷ್ಣಕುಮಾರ್ ಕುಂನಾತ್
FIR against Mahendra Singh Dhoni in Bihar’s Begusarai