ಕೋವಿಡ್‌ ಪ್ರಕರಣ ಹೆಚ್ಚಳ, ಮತ್ತೆ ಲಾಕ್‌ಡೌನ್‌ ಜಾರಿ : ಸುಳಿವು ಕೊಟ್ಟ ಸಚಿವರು

ಮುಂಬೈ : ಕೋವಿಡ್ -19 ಪ್ರಕರಣಗಳ ಸಂಖ್ಯೆ ಮಹಾರಾಷ್ಟ್ರದಲ್ಲಿ ಏರಿಕೆಯಾಗುತ್ತಿದೆ. ಅದ್ರಲ್ಲೂ ರಾಜ್ಯದಲ್ಲಿ ತೀವ್ರ ನಿಗಾ ಘಟಕಕ್ಕೆ (ಐಸಿಯು) ದಾಖಲಾಗುವ ರೋಗಿಗಳ ಸಂಖ್ಯೆಯಲ್ಲಿ ಹೆಚ್ಚುತ್ತಿದೆ. ಈ ಹಿನ್ನೆಲೆಯಲ್ಲಿ ಮಹಾರಾಷ್ಟ್ರದಲ್ಲಿ(Maharashtra) ಮತ್ತೆ ಲಾಕ್‌ಡೌನ್‌ (Lockdown Again in Maharashtra ) ಭೀತಿ ಶುರುವಾಗಿದೆ. ಜೊತೆಗೆ ಸಚಿವರೋರ್ವರು ಲಾಕ್‌ಡೌನ್‌ ಜಾರಿಯ ಕುರಿತು ಸುಳಿವು ಕೊಟ್ಟಿದ್ದಾರೆ.

ಕೋವಿಡ್ -19 ಸೋಂಕಿನ ಹಿನ್ನೆಲೆಯಲ್ಲಿ ಕಳೆದ ಮೂರು ಅಲೆಗಳಿಂದಲೂ ಮಹಾರಾಷ್ಟ್ರ ತತ್ತರಿಸಿ ಹೋಗಿತ್ತು. ಆದರೆ ಕಳೆದ ಕೆಲ ತಿಂಗಳಿನಿಂದಲೂ ಜನಜೀವನ ಸಹಜ ಸ್ಥಿತಿಗೆ ಮರಳುತ್ತಿದೆ. ಈ ನಡುವಲ್ಲೇ ಕೋವಿಡ್‌ ವೈರಸ್‌ ಸೋಂಕಿನ ಪ್ರಕರಣ ಹೆಚ್ಚಳವಾಗಲು ಆರಂಭವಾಗಿದೆ. ಅದ್ರಲ್ಲೂ ಮುಂಬೈ ಮಹಾನಗರದಲ್ಲಿಯೇ ಸೋಂಕಿತ ಪ್ರಕರಣ ಹೆಚ್ಚುತ್ತಿದ್ದು, ಆಸ್ಪತ್ರೆಗೆ ದಾಖಲಾಗುವ ಜನರ ಸಂಖ್ಯೆಯಲ್ಲೂ ಏರಿಕೆ ಕಾಣುತ್ತಲೇ ಇದೆ. ಇದು ರಾಜ್ಯ ಸರಕಾರದ ತಲೆನೋವಿಗೆ ಕಾರಣವಾಗಿದೆ.

ರಾಜ್ಯದಲ್ಲಿ ಹೆಚ್ಚುತ್ತಿರುವ ಕರೋನವೈರಸ್ ಪ್ರಕರಣಗಳ ನಡುವಲ್ಲೇ, ಮುಂಬೈ ನಗರ ರಕ್ಷಕ ಸಚಿವ ಅಸ್ಲಾಮ್ ಶೇಖ್ ಕೋವಿಡ್ -19 ಪ್ರಕರಣಗಳ ಏರಿಕೆಯ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಮತ್ತೊಂದು ಲಾಕ್‌ಡೌನ್‌ (Lockdown)ಜಾರಿಯಾಗಲಿದೆ ಎಂದಿದ್ದಾರೆ. ಆಸ್ಪತ್ರೆಗೆ ದಾಖಲಾಗುತ್ತಿರುವ ರೋಗಿಗಳ ಸಂಖ್ಯೆಯನ್ನು ಗಮನಿಸಿದ್ರೆ, ಹಲವು ನಿರ್ಬಂಧವನ್ನು ಜಾರಿಗೊಳಿಸಲೇ ಬೇಕಾಗಿದೆ. ವಿಮಾನಯಾನ ಸೇವೆಯಲ್ಲಿ ಸದ್ಯ ನಿರ್ಬಂಧ ಜಾರಿಯಲ್ಲಿದೆ. ಜನರು ಕಾಳಜಿ ವಹಿಸದೇ ಇದ್ರೆ ಲಾಕ್‌ಡೌನ್‌ ಜಾರಿಯಾಗುವುದು ಖಚಿತ ಎಂದಿದ್ದಾರೆ.

ಮಹಾರಾಷ್ಟ್ರದ ಆರೋಗ್ಯ ಇಲಾಖೆ ನೀಡಿರುವ ಮಾಹಿತಿಯ ಪ್ರಕಾರ, ‌ಮಹಾರಾಷ್ಟ್ರದಲ್ಲಿ ಮಂಗಳವಾರ 711 ಹೊಸ ಕೊರೊನಾ ವೈರಸ್ ಪ್ರಕರಣಗಳು ದಾಖಲಾಗಿವೆ, ಹಿಂದಿನ ದಿನ 431 ರಿಂದ ತೀವ್ರ ಏರಿಕೆ ದಾಖಲಾಗಿದೆ.‌ ಇದು ಫೆಬ್ರವರಿ 27 ನಂತರದಲ್ಲಿ ದಾಖಲಾದ ಗರಿಷ್ಠ ದೈನಂದಿನ ಸೋಂಕಿತರ ಸಂಖ್ಯೆಯಾಗಿದೆ. ಭಾರತದಲ್ಲಿ ಕಳೆದ 24 ಗಂಟೆಗಳಲ್ಲಿ ಒಟ್ಟು 2,745 ಹೊಸ ಕೊರೊಆ ವೈರಸ್ ಸೋಂಕಿನ ಪ್ರಕರಣಗಳು ವರದಿಯಾಗಿವೆ. ದೇಶದ ಒಟ್ಟು ಸಂಖ್ಯೆ ಈಗ 4,31,60,832 ಆಗಿದೆ. ಕೇಂದ್ರ ಆರೋಗ್ಯ ಸಚಿವಾಲಯದ ಅಂಕಿಅಂಶಗಳ ಪ್ರಕಾರ, ಆರು ಸಾವುಗಳೊಂದಿಗೆ ಸಾವಿನ ಸಂಖ್ಯೆ 5,24,636 ಕ್ಕೆ ಏರಿಕೆ ಕಂಡಿದೆ.

ಇದನ್ನೂ ಓದಿ : Saudi Arabia bans travel : ಭಾರತ ಸೇರಿ 15 ದೇಶಗಳಿಗೆ ಪ್ರಯಾಣ ನಿಷೇಧಿಸಿದ ಸೌದಿ ಅರೇಬಿಯಾ

ಇದನ್ನೂ ಓದಿ : ಮಹಾರಾಷ್ಟ್ರದಲ್ಲಿ ಕೋವಿಡ್-19 ಪ್ರಕರಣ ಹೆಚ್ಚಳ : ಸಿಎಂ ಉದ್ಧವ್ ಠಾಕ್ರೆ ಮಹತ್ವದ ಘೋಷಣೆ

Lockdown Again in Maharashtra, minister give hint after covid-19 cases rise

Comments are closed.