Woman swims to India : ಪ್ರಿಯಕರನನ್ನು ವರಿಸಲು ಬಾಂಗ್ಲಾದಿಂದ ಭಾರತಕ್ಕೆ ಈಜಿ ಬಂದ ಪ್ರಿಯತಮೆ

Woman swims to India  : 22 ವರ್ಷದ ಬಾಂಗ್ಲಾದೇಶದ ಯುವತಿಯೊಬ್ಬಳು ಭಾರತದಲ್ಲಿರುವ ತನ್ನ ಪ್ರಿಯಕರನನ್ನು ಮದುವೆಯಾಗಬೇಕೆಂದು ತನ್ನ ದೇಶದಿಂದ ಭಾರತಕ್ಕೆ ಈಜಿಕೊಂಡೇ ಬಂದಿದ್ದಾಳೆ. ಸುಂದರ್​ಬನ್​ ಕಾಡುಗಳಲ್ಲಿ ಧೈರ್ಯವಾಗಿ ಈಜಿದ ಈ ಯುವತಿಯು ತನ್ನ ಪ್ರಿಯಕರನನ್ನು ಸೇರಬೇಕೆಂದು ಭಾರತ ತಲುಪಿದ್ದಾಳೆ.

ಈಕೆಯನ್ನು ಕೃಷ್ಣ ಮಂಡಲ್​ ಎಂದು ಗುರುತಿಸಲಾಗಿದೆ. ಬಾಂಗ್ಲಾದೇಶದ ಈಕೆ ಫೇಸ್​ಬುಕ್​ನಲ್ಲಿ ಅಭಿಕ್​ ಮಂಡಲ್​​ನ್ನು ಪ್ರೀತಿಸುತ್ತಿದ್ದಳು ಎನ್ನಲಾಗಿದೆ. ಕೃಷ್ಣ ಮಂಡಲ್​ ಬಳಿ ಪಾಸ್​ಪೋರ್ಟ್​ ಇಲ್ಲದ ಹಿನ್ನೆಲೆಯಲ್ಲಿ ಈಜಿಕೊಂಡೇ ಗಡಿ ದಾಟಿದ್ದಾಳೆ. ಕೃಷ್ಣ ಮಂಡಲ್ ಎಂದು ಗುರುತಿಸಲಾದ ಬಾಂಗ್ಲಾದೇಶದ ಮಹಿಳೆ ಅಭಿಕ್ ಮಂಡಲ್ ಅವರನ್ನು ಫೇಸ್‌ಬುಕ್‌ನಲ್ಲಿ ಭೇಟಿಯಾಗಿ ಪ್ರೀತಿಸುತ್ತಿದ್ದರು. ಕೃಷ್ಣ ಅವರ ಬಳಿ ಪಾಸ್‌ಪೋರ್ಟ್ ಇಲ್ಲದ ಕಾರಣ ಅಕ್ರಮವಾಗಿ ಗಡಿ ದಾಟಲು ನಿರ್ಧರಿಸಿದ್ದರು.

ಮೂರು ದಿನಗಳ ಹಿಂದೆ ಕೋಲ್ಕತ್ತಾದ ಕಾಳಿಘಾಟ್ ದೇವಸ್ಥಾನದಲ್ಲಿ ಕೃಷ್ಣ ಅಭಿಕ್ ಅವರನ್ನು ವಿವಾಹವಾದರು. ಆದರೆ, ಅಕ್ರಮವಾಗಿ ದೇಶಕ್ಕೆ ಪ್ರವೇಶಿಸಿದ್ದಕ್ಕಾಗಿ ಆಕೆಯನ್ನು ಸೋಮವಾರ ಬಂಧಿಸಲಾಯಿತು.ಕೃಷ್ಣಾ ಮಂಡಲ್​ರನ್ನು ಬಾಂಗ್ಲಾದೇಶದ ಹೈ ಕಮಿಷನ್​​​ಗೆ ಹಸ್ತಾಂತರಿಸುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.


ಈ ವರ್ಷದ ಆರಂಭದಲ್ಲಿ ಬಾಂಗ್ಲಾ ದೇಶದ ಪ್ರಜೆಯೊಬ್ಬರು ಭಾರತದಿಂದ ಚಾಕಲೇಟ್​ ಖರೀದಿಸಲು ಗಡಿಯುದ್ದಕ್ಕೂ ಈಜಿದ್ದಾರೆ. ಎಮಾನ್​ ಹೊಸೈನ್​ ಎಂಬಾತ ಸಣ್ಣ ನದಿಯನ್ನು ದಾಟಿ ತನ್ನ ನೆಚ್ಚಿನ ಚಾಕಲೇಟ್​ ಖರೀದಿ ಮಾಡಲು ಬೇಲಿಯನ್ನು ದಾಟಿ ಭಾರತದ ಗಡಿ ಪ್ರವೇಶಿಸಿದ್ದನು. ಬಳಿಕ ಎಮಾನ್​ ಹೊಸೈನ್​ನನ್ನು ಸ್ಥಳೀಯ ಪೊಲೀಸರಿಗೆ ಒಪ್ಪಿಸಲಾಯಿತು. ಬಳಿಕ ಈತನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು. ಬಳಿಕ ಈತನನ್ನು ಹದಿನೈದು ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಯಿತು.

ಇದನ್ನು ಓದಿ : cm basavaraj bommai in udupi : ಉಡುಪಿ ಪ್ರವಾಸದಲ್ಲಿ ಸಿಎಂ ಬೊಮ್ಮಾಯಿ : ಪಠ್ಯ ಪರಿಷ್ಕರಣೆ ಕುರಿತು ಸ್ಪಷ್ಟನೆ

ಇದನ್ನೂ ಓದಿ : Aryan Khan : ಪದವಿ ಓದುವಾಗಲೇ ಗಾಂಜಾ ಸೇವಿಸುತ್ತಿದ್ದೇ : ಆರ್ಯನ್ ಖಾನ್ ತಪ್ಪೊಪ್ಪಿಗೆ

Woman swims to India from Bangladesh to marry lover

Comments are closed.