ಸೋಮವಾರ, ಏಪ್ರಿಲ್ 28, 2025
HomeSportsCricketUmpire Asad rauf : ಪಾಕಿಸ್ತಾನದಲ್ಲಿ ಚಪ್ಪಲಿ ಮಾರುತ್ತಿದ್ದಾರೆ ಮಾಜಿ ಐಸಿಸಿ ಅಂಪೈರ್

Umpire Asad rauf : ಪಾಕಿಸ್ತಾನದಲ್ಲಿ ಚಪ್ಪಲಿ ಮಾರುತ್ತಿದ್ದಾರೆ ಮಾಜಿ ಐಸಿಸಿ ಅಂಪೈರ್

- Advertisement -

ಲಾಹೋರ್: ಅವರು ಒಂದು ಕಾಲದಲ್ಲಿ ಐಸಿಸಿ ಎಲೈಟ್ ಪ್ಯಾನೆಲ್ ಅಂಪೈರ್ ಆಗಿದ್ದವರು. ಈಗ ನೋಡಿದ್ರೆ ಅದೇ ವ್ಯಕ್ತಿ ಪಾಕಿಸ್ತಾನದ ಲಾಹೋರ್”ನಲ್ಲಿ ಚಪ್ಪಲಿ ಮಾರುತ್ತಿದ್ದಾರೆ. ಇದು ಪಾಕಿಸ್ತಾನದ ಮಾಜಿ ಅಂಪೈರ್ ಅಸಾದ್ ರೌಫ್ (Umpire Asad Rauf) ಕಥೆ. 2000-2013ರವರೆಗೆ 170 ಅಂತರಾಷ್ಟ್ರೀಯ ಪಂದ್ಯಗಳಲ್ಲಿ ಅಂಪೈರ್ ಆಗಿ ಕಾರ್ಯನಿರ್ವಹಿಸಿದ್ದ ಅಸಾದ್ ರೌಫ್, ಲಾಹೋರ್’ನ ಲಂಡಾ ಬಜಾರ್”ನಲ್ಲಿ ಬಟ್ಟೆ ಹಾಗೂ ಪಾದರಕ್ಷೆ ಅಂಗಡಿ ನಡೆಸುತ್ತಿದ್ದಾರೆ. (Former ICC’s elite panel Umpire Asad rauf selling second-hand clothes and Shoe’s in Lahore)

66 ವರ್ಷದ ಅಸಾದ್ ರೌಫ್ 49 ಟೆಸ್ಟ್, 98 ಏಕದಿನ ಹಾಗೂ 23 ಟಿ20 ಪಂದ್ಯಗಳಲ್ಲಿ ಅಂಪೈರ್ ಆಗಿ ಕಾರ್ಯ ನಿರ್ವಹಿಸಿದ್ದಾರೆ. ಉತ್ತಮ ಅಂಪೈರ್ ಆಗಿದ್ದ ಅಸಾದ್ ರೌಫ್ ವೃತ್ತಿಜೀವನದಲ್ಲಿ ಹಲವಾರು ಸ್ಮರಣೀಯ ಪಂದ್ಯಗಳಿಗೆ ಅಂಪೈರ್ ಆಗಿದ್ದರು. ಐಪಿಎಲ್’ನಲ್ಲೂ ಅಂಪೈರಿಂಗ್ ನಡೆಸಿದ್ದ ಅಸಾದ್ ರೌಫ್ ವಿರುದ್ಧ 2013ರ ಐಪಿಎಲ್ ಟೂರ್ನಿಯ ವೇಳೆ ಮ್ಯಾಚ್ ಫಿಕ್ಸಿಂಗ್ ಆರೋಪ ಕೇಳಿ ಬಂದಿತ್ತು. ಈ ಹಿನ್ನೆಲೆಯಲ್ಲಿ ಅವರನ್ನು ಬಿಸಿಸಿಐ ಅಮಾನತುಗೊಳಿಸಿತ್ತು.

ಇದರ ಬೆನ್ನಲ್ಲೇ ಲೈಂಗಿಕ ಪ್ರಕರಣವೊಂದರಲ್ಲಿ ಅಸಾದ್ ರೌಫ್ ಹೆಸರು ಕೇಳಿ ಬಂದಿತ್ತು. ನಂತರ ಅಂಪೈರಿಂಗ್ ವೃತ್ತಿಗೆ ರೌಫ್ ವಿದಾಯ ಹೇಳಿದ್ದರು. ಐಸಿಸಿ ಎಲೈಟ್ ಪ್ಯಾನೆಲ್ ಅಂಪೈರ್ ಆಗಿದ್ದ ಅಸಾದ್ ರೌಫ್ ಜೀವನ ನಿರ್ವಹಣೆಗಾಗಿ ಚಪ್ಪಲಿ ಅಂಗಡಿ ನಡೆಸುತ್ತಿದ್ದಾರಾ? ಈ ಪ್ರಶ್ನೆಗೆ ಸ್ವತಃ ರೌಫ್ ಅವರೇ ಉತ್ತರ ಕೊಟ್ಟಿದ್ದಾರೆ. “ನಾನು ನನಗಾಗಿ ಚಪ್ಪಲಿ ಹಾಗೂ ಬಟ್ಟೆ ಅಂಗಡಿ ನಡೆಸುತ್ತಿಲ್ಲ. ಅಂಗಡಿಯಲ್ಲಿ ಕೆಲಸ ಮಾಡುವ ದಿನಗೂಲಿ ಸಿಬ್ಬಂದಿಗಾಗಿ ಈ ಕೆಲಸ ಮಾಡುತ್ತಿದ್ದೇನೆ. ಹಣ ಗಳಿಸಬೇಕೆಂಬ ದುರಾಸೆಯಿಲ್ಲ, ಯಾಕಂದ್ರೆ ನನ್ನ ಬಳಿ ಸಾಕಷ್ಟು ಹಣವಿದೆ”.

– ಅಸಾದ್ ರೌಫ್, ಐಸಿಸಿ ಮಾಜಿ ಅಂಪೈರ್.

ಮಾಜಿ ಕ್ರಿಕೆಟಿಗರೂ ಆಗಿರುವ ಅಸಾದ್ ರೌಫ್ ಪಾಕಿಸ್ತಾನ ದೇಶೀಯ ಕ್ರಿಕೆಟ್”ನಲ್ಲಿ ಲಾಹೋರ್ ತಂಡವನ್ನ ಪ್ರತಿನಿಧಿಸಿದ್ದರು. ಲಾಹೋರ್ ಪರ 71 ಪ್ರಥಮದರ್ಜೆ ಪಂದ್ಯಗಳನ್ನು ಆಡಿರುವ ಅಸಾದ್ ರೌಫ್ 3,423 ರನ್ ಮತ್ತು 40 ಲಿಸ್ಟ್ “ಎ” ಪಂದ್ಯಗಳಿಂದ 611 ರನ್ ಗಳಿಸಿದ್ದಾರೆ.

ಇದನ್ನೂ ಓದಿ : Murali Vijay : ಡಿಕೆ ಕಂಬ್ಯಾಕ್ ಮಾಡಿದ್ದನ್ನು ನೋಡಿ ರೊಚ್ಚಿಗೆದ್ದ ಮುರಳಿ ವಿಜಯ್ ಮಾಡಿದ್ದೇನು ಗೊತ್ತಾ?

ಇದನ್ನೂ ಓದಿ : 1983 World Cup victory : ಭಾರತ ಮೊದಲ ಕ್ರಿಕೆಟ್ ವಿಶ್ವಕಪ್ ಗೆದ್ದು ಇಂದಿಗೆ 29 ವರ್ಷ, ದಿಗ್ಗಜರು ಹೇಳಿದ್ದೇನು ?

Former ICC’s elite panel Umpire Asad rauf selling second-hand clothes and Shoe’s in Lahore

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular