ಭಾನುವಾರ, ಏಪ್ರಿಲ್ 27, 2025
HomeSportsCricketGanguly and Morgan : ಭಾರತದ 75ನೇ ಸ್ವಾತಂತ್ರ್ಯೋತ್ಸವ: ಸೆಪ್ಟೆಂಬರ್ 16ರಂದು ಕೋಲ್ಕತಾದಲ್ಲಿ ಭಾರತ Vs...

Ganguly and Morgan : ಭಾರತದ 75ನೇ ಸ್ವಾತಂತ್ರ್ಯೋತ್ಸವ: ಸೆಪ್ಟೆಂಬರ್ 16ರಂದು ಕೋಲ್ಕತಾದಲ್ಲಿ ಭಾರತ Vs ವಿಶ್ವ ಇಲೆವೆನ್ ಕ್ರಿಕೆಟ್ ಮ್ಯಾಚ್

- Advertisement -

ಬೆಂಗಳೂರು: (Ganguly and Morgan) ಭಾರತ ಕ್ರಿಕೆಟ್ ತಂಡದ ಯಶಸ್ವಿ ನಾಯಕ, ಬಂಗಾಳದ ಹುಲಿ ಖ್ಯಾತಿಯ ಸೌರವ್ ಗಂಗೂಲಿ 17 ವರ್ಷಗಳ ನಂತರ ಮತ್ತೆ ಟೀಮ್ ಇಂಡಿಯಾವನ್ನು ಮುನ್ನಡೆ ಸಲಿದ್ದಾರೆ. ಹಾಲಿ ಬಿಸಿಸಿಐ ಅಧ್ಯಕ್ಷರೂ ಆಗಿರುವ ಸೌರವ್ ಗಂಗೂಲಿ ಮತ್ತೆ ಭಾರತ ತಂಡದ ನಾಯಕತ್ವ ವಹಿಸಲಿದ್ದಾರೆ. ಇತ್ತೀಚೆಗಷ್ಟೇ 50 ವರ್ಷ ಪೂರೈಸಿರುವ ಗಂಗೂಲಿ ಈ ವಯಸ್ಸಲ್ಲಿ ಮತ್ತೆ ಕ್ರಿಕೆಟ್ ಆಡ್ತಾರಾ? ಟೀಮ್ ಇಂಡಿಯಾ ನಾಯಕನಾಗ್ತಾರಾ? ಅನ್ನೋ ಪ್ರಶ್ನೆ ಮೂಡ್ಬಹ್ದು. ಗಂಗೂಲಿ ನಾಯಕನಾಗಿರೋದು ಲೆಜೆಂಡ್ಸ್ ಕ್ರಿಕೆಟ್ ಲೀಗ್ ಟೂರ್ನಿಯಲ್ಲಿ.

ಭಾರತದ 75ನೇ ವರ್ಷದ ಸ್ವಾತಂತ್ರ್ಯೋತ್ಸವದ ಸಂಭ್ರಮದ ಹಿನ್ನೆಲೆಯಲ್ಲಿ ಸೆಪ್ಟೆಂಬರ್ 16ರಂದು ಭಾರತ (ಇಂಡಿಯಾ ಮಹಾರಾಜಾಸ್) ಮತ್ತು ವಿಶ್ವ ಇಲೆವೆನ್ ತಂಡಗಳ ಮಧ್ಯೆ ಕೋಲ್ಕತಾದ ಈಡನ್ ಗಾರ್ಡನ್ಸ್ ಮೈದಾನದಲ್ಲಿ ಲೆಜೆಂಡ್ಸ್ ಕ್ರಿಕೆಟ್ ಲೀಗ್ (Legends League Cricket LLC) ವಿಶೇಷ ಕ್ರಿಕೆಟ್ ಪಂದ್ಯವೊಂದು ನಡೆಯಲಿದೆ. ಆ ಪಂದ್ಯದಲ್ಲಿ ಭಾರತ ತಂಡವನ್ನು ಸೌರವ್ ಗಂಗೂಲಿ ಮುನ್ನಡೆಸಲಿದ್ದಾರೆ. 2019ರ ಐಸಿಸಿ ವಿಶ್ವಕಪ್ ವಿಜೇತ ಇಂಗ್ಲೆಂಡ್ ತಂಡದ ನಾಯನ್ ಐಯಾನ್ ಮಾರ್ಗನ್ ವಿಶ್ವ ಇಲೆವೆನ್ ತಂಡದ ಸಾರಥ್ಯ ವಹಿಸಲಿದ್ದಾರೆ.

ಸೌರವ್ ಗಂಗೂಲಿ ನೇತೃತ್ವದ ಇಂಡಿಯಾ ಮಹಾರಾಜಾಸ್ ತಂಡದ ಪರ ಮಾಜಿ ಡ್ಯಾಶಿಂಗ್ ಓಪನರ್ ವೀರೇಂದ್ರ ಸೆಹ್ವಾಗ್, ಮೊಹಮ್ಮದ್ ಕೈಫ್, ಇರ್ಫಾನ್ ಪಠಾಣ್, ಹರ್ಭಜನ್ ಸಿಂಗ್, ಪಾರ್ಥಿವ್ ಪಟೇಲ್ ಕಣಕ್ಕಿಳಿಯಲಿದ್ದಾರೆ. ವಿಶ್ವ ಇಲೆವೆನ್ ಪರ ದಕ್ಷಿಣ ಆಫ್ರಿಕಾದ ದಿಗ್ಗಜ ಆಲ್ರೌಂಡರ್ ಜಾಕ್ ಕಾಲೀಸ್, ವಿಶ್ವಶ್ರೇಷ್ಠ ವೇಗದ ಬೌಲರ್ ಡೇಲ್ ಸ್ಟೇನ್, ಹರ್ಷಲ್ ಗಿಬ್ಸ್, ಜಾಂಟಿ ರೋಡ್ಸ್, ಶ್ರೀಲಂಕಾ ದಿಗ್ಗಜರಾದ ಸನತ್ ಜಯಸೂರ್ಯ, ಮುತ್ತಯ್ಯ ಮುರಳೀಧರನ್ ಸಹಿತ ಹಲವರು ಆಡಲಿದ್ದಾರೆ.

ಇಂಡಿಯಾ ಮಹಾರಾಜಾಸ್ ತಂಡ:
ಸೌರವ್ ಗಂಗೂಲಿ (ನಾಯಕ), ವೀರೇಂದ್ರ ಸೆಹ್ವಾಗ್, ಮೊಹಮ್ಮದ್ ಕೈಫ್, ಯೂಸುಫ್ ಪಠಾಣ್, ಎಸ್.ಬದ್ರಿನಾಥ್, ಇರ್ಫಾನ್ ಪಠಾಣ್, ಪಾರ್ಥಿವ್ ಪಟೇಲ್ (ವಿಕೆಟ್ ಕೀಪರ್), ಸ್ಟುವರ್ಟ್ ಬಿನ್ನಿ, ಎಸ್.ಶ್ರೀಶಾಂತ್, ಹರ್ಭಜನ್ ಸಿಂಗ್, ನಮನ್ ಓಜಾ, ಅಶೋಕ್ ದಿಂಡಾ, ಪ್ರಜ್ಞಾನ್ ಓಜಾ, ಅಜಯ್ ಜಡೇಜ, ಆರ್.ಪಿ ಸಿಂಗ್, ಜೋಗಿಂದರ್ ಶರ್ಮಾ, ರಿತಿಂದರ್ ಸಿಂಗ್ ಸೋಧಿ.

ವಿಶ್ವ ಇಲೆವೆನ್ ತಂಡ:
ಐಯಾನ್ ಮಾರ್ಗನ್ (ನಾಯಕ), ಲಿಂಡ್ಲ್ ಸಿಮೊನ್ಸ್, ಹರ್ಷಲ್ ಗಿಬ್ಸ್, ಜಾಕ್ ಕಾಲೀಸ್, ಸನತ್ ಜಯಸೂರ್ಯ, ಮ್ಯಾಟ್ ಪ್ರಯರ್ (ವಿಕೆಟ್ ಕೀಪರ್), ನೇಥನ್ ಮೆಕ್ಕಲಂ, ಜಾಂಟಿ ರೋಡ್ಸ್, ಮುತ್ತಯ್ಯ ಮುರಳೀಧರನ್, ಡೇಲ್ ಸ್ಟೇನ್, ಹ್ಯಾಮಿಲ್ಟನ್ ಮಸಕಜ, ಮಶ್ರಫೆ ಮೊರ್ತಾಜ, ಅಸ್ಘರ್ ಅಫ್ಘಾನ್, ಮಿಚೆಲ್ ಜಾನ್ಸನ್, ಬ್ರೆಟ್ ಲೀ, ಕೆವಿನ್ ಓ’ಬ್ರಯಾನ್, ದಿನೇಶ್ ರಾಮ್ದಿನ್ (ವಿಕೆಟ್ ಕೀಪರ್).

ಇದನ್ನೂ ಓದಿ : Virat Kohli Practice : ಏಷ್ಯಾ ಕಪ್ ಟೂರ್ನಿಗೆ ವಿರಾಟ್ ಕೊಹ್ಲಿ ಭರ್ಜರಿ ತಾಲೀಮು, ಹೇಗಿದೆ ಹೊತ್ತಾ ಕಿಂಗ್ ಕೊಹ್ಲಿಯ ಸಿದ್ಧತೆ

ಇದನ್ನೂ ಓದಿ : Mayank Agarwal Cooking : ಕ್ರಿಕೆಟ್ ಬಿಟ್ಟು ಅಡುಗೆ ಭಟ್ಟನಾದ ಮಯಾಂಕ್… ಅಗರ್ವಾಲ್ ಕೈಯಿಂದ ರೆಡಿಯಾಯ್ತು ಘಮ ಘಮ ಬಿರಿಯಾನಿ

Ganguly and Morgan to captain Legends League Cricket LLC

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular