ಬೆಂಗಳೂರು : ಇಂಡಿಯನ್ ಪ್ರೀಮಿಯರ್ ಲೀಗ್ ಎರಡನೇ ಸೀಸನ್ ಪಂದ್ಯಗಳು ಇನ್ನು ಕೆಲವೇ ದಿನಗಳಲ್ಲಿ ಆರಂಭಗೊಳ್ಳಲಿದೆ. ಈ ನಡುವಲ್ಲೇ ಬೆಂಗಳೂರು ರಾಯಲ್ ಚಾಲೆಂಜರ್ಸ್ ತಂಡ ಅಭಿಮಾನಿಗಳಿಗೆ ಗುಡ್‌ನ್ಯೂಸ್ ಕೊಟ್ಟಿದೆ.
ಸಪ್ಟೆಂಬರ್ 19ರಿಂದ ಆರಂಭವಾಗಲಿರುವ ಐಪಿಎಲ್ ಪಂದ್ಯಾವಳಿಗಾಗಿ ಅಭಿಮಾನಿಗಳು ಕಾದು ಕುಳಿತಿದ್ದಾರೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಮೂವರು ಆಟಗಾರ ರನ್ನು ಹೊಸದಾಗಿ ತಂಡಕ್ಕೆ ಸೇರ್ಪಡೆಗೊಳಿಸಿಕೊಂಡಿದೆ. ಶ್ರೀಲಂಕಾದ ಖ್ಯಾತ ಆಲ್‌ರೌಂಡರ್ ಆಟಗಾರ ವನಿಂದು ಹಸರಂಗ, ವೇಗದ ಎಸೆತಗಾರ ಚಾಮೀರಾ ಹಾಗೂ ಸಿಂಗಾಪುರ ಹಾಗೂ ಆಸ್ಟ್ರೇಲಿಯಾ ಆಟಗಾರ ಟಿಮ್ ಡೇವಿಡ್ ಆರ್‌ಸಿಬಿ ಸೇರಿಕೊಂಡಿದ್ದಾರೆ.
ಈ ಮೂವರು ಆಟಗಾರರನ್ನು ತಂಡಕ್ಕೆ ಸೇರ್ಪಡೆಗೊಳಿಸಿರುವ ಕುರಿತು ಈಗಾಗಲೇ ಅಧಿಕೃತವಾಗಿ ಆರ್‌ಸಿಟಿ ಘೋಷಣೆಯನ್ನು ಮಾಡಿದ್ದು, ಟ್ವೀಟರ್ ಖಾತೆಯಲ್ಲಿ ಈ ಕುರಿತು ಟ್ವೀಟ್ ಮಾಡಿದೆ.
ಟಿಮ್ ಡೇವಿಡ್ ಇದುವರೆಗೆ 49 ಟಿ 20 ಪಂದ್ಯಗಳನ್ನು ಆಡಿದ್ದು, ಇದರಲ್ಲಿ ಅವರು 155.09 ಸ್ಟ್ರೈಕ್ ರೇಟ್‌ನಲ್ಲಿ 1171 ರನ್ ಗಳಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಚಾಮೀರಾ 60 ದೇಶೀಯ ಟಿ 20 ಪಂದ್ಯಗಳಲ್ಲಿ 59 ವಿಕೆಟ್ ಪಡೆದರೆ, ಟಿ 20 ಅಂತರಾಷ್ಟ್ರೀಯ ಪಂದ್ಯಗಳಲ್ಲಿ 30 ವಿಕೆಟ್ ಪಡೆದಿದ್ದಾರೆ.
ಇನ್ನು ಭಾರತ ವಿರುದ್ದ ಸರಣಿಯಲ್ಲಿ ಹಸರಂಗ ಅದ್ಬುತ ಪ್ರದರ್ಶನವನ್ನು ನೀಡಿದ್ದಾರೆ. 22 ಟಿ 20 ಪಂದ್ಯಗಳನ್ನು ಆಡಿದ್ದು,192 ರನ್ ಗಳಿಸಿದ್ದಾರೆ. ಜೊತೆಗೆ 33 ವಿಕೆಟ್ ಪಡೆಯುವ ಮೂಲಕ ಆಲ್‌ರೌಂಡರ್ ಆಟದ ಪ್ರದರ್ಶನ ನೀಡಿದ್ದಾರೆ.