ಸೋಮವಾರ, ಏಪ್ರಿಲ್ 28, 2025
HomeSportsCricketಐರ್ಲೆಂಡ್ ಯುವ ಆಟಗಾರನಿಗೆ ಬ್ಯಾಟ್ ಗಿಫ್ಟ್ ನೀಡಿದ ಹಾರ್ದಿಕ್ ಪಾಂಡ್ಯ

ಐರ್ಲೆಂಡ್ ಯುವ ಆಟಗಾರನಿಗೆ ಬ್ಯಾಟ್ ಗಿಫ್ಟ್ ನೀಡಿದ ಹಾರ್ದಿಕ್ ಪಾಂಡ್ಯ

- Advertisement -

ಬ್ಲಿನ್: ಐರ್ಲೆಂಡ್ ವಿರುದ್ಧದ ಟಿ20 ಸರಣಿಯಲ್ಲಿ ಟೀಮ್ ಇಂಡಿಯಾವನ್ನು (India tour of Ireland) ಮುನ್ನಡೆಸುತ್ತಿರುವ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ, ಐರ್ಲೆಂಡ್ ಆಟಗಾರರೊಬ್ಬರಿಗೆ ಬ್ಯಾಟ್ ಗಿಫ್ಟ್ ಕೊಟ್ಟಿದ್ದಾರೆ. ಭಾರತ ವಿರುದ್ಧದ 2 ಪಂದ್ಯಗಳ ಟಿ20 ಸರಣಿಯ ಪಂದ್ಯದಲ್ಲಿ ಸಿಡಿಲಬ್ಬರದ ಅರ್ಧಶತಕ ಸಿಡಿಸಿದ್ದ ಹ್ಯಾರಿ ಟೆಕ್ಟರ್ (Harry Tector) ಅವರೇ ಹಾರ್ದಿಕ್ ಪಾಂಡ್ಯ ಅವರಿಂದ ಬ್ಯಾಟ್ ಗಿಫ್ಟ್ ಪಡೆದ ಅದೃಷ್ಟವಂತ. ಹಾರ್ದಿಕ್ ಪಾಂಡ್ಯ ಬ್ಯಾಟ್ ಗಿಫ್ಟ್ (Hardik Pandya gifts) ಕೊಡುತ್ತಿರುವ ವೀಡಿಯೋವನ್ನು ಬಿಸಿಸಿಐ ತನ್ನ ಟ್ವಿಟರ್ ಖಾತೆಯಲ್ಲಿ ಪ್ರಕಟಿಸಿದೆ.

“ಹ್ಯಾರಿ ಟೆಕ್ಟರ್ ಅವರಿಗೆ ಬ್ಯಾಟ್ ಗಿಫ್ಟ್ ಕೊಟ್ಟಿದ್ದೇನೆ. ಹೀಗಾಗಿ ಅವರು ಇನ್ನೂ ಒಂದಷ್ಟು ಸಿಕ್ಸರ್’ಗಳನ್ನು ಸಿಡಿಸಿ ಐಪಿಎಲ್ ಕಾಂಟ್ರಾಕ್ಟ್ ಪಡೆಯಲಿದೆ. ಅವರಿಗೆ ಶುಭ ಹಾರೈಸುತ್ತೇನೆ”.
ಹಾರ್ದಿಕ್ ಪಾಂಡ್ಯ, ಐರ್ಲೆಂಡ್ ವಿರುದ್ಧದ ಟಿ20 ಸರಣಿಯಲ್ಲಿ ಟೀಮ್ ಇಂಡಿಯಾ ನಾಯಕ.

ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ಇತ್ತೀಚೆಗೆ ಭಾರತ ಮತ್ತು ಶ್ರೀಲಂಕಾ ಸರಣಿಯ ವೇಳೆ ಲಂಕಾ ಅಲ್ರೌಂಡರ್ ಚಮಿಕ ಕರುಣಾರತ್ನೆ ಅವರಿಗೂ ಬ್ಯಾಟ್ ಗಿಫ್ಟ್ ಕೊಟ್ಟಿದ್ದರು.

ಮೊದಲ ಟಿ20 ಪಂದ್ಯದಲ್ಲಿ ಹ್ಯಾರಿ ಟೆಕ್ಟರ್ ಭಾರತದ ಬೌಲಿಂಗ್ ದಾಳಿಯನ್ನು ಚಿಂದಿ ಉಡಾಯಿಸಿದ್ದರು. ಕೇವಲ 33 ಎಸೆತಗಳಲ್ಲಿ 6 ಬೌಂಡರಿ ಮತ್ತು 3 ಸಿಕ್ಸರ್ಸ್ ನೆರವಿನಿಂದ ಅಜೇಯ 64 ರನ್ ಗಳಿಸಿದ್ದ ಟೆಕ್ಟರ್, ಕ್ರಿಕೆಟ್ ಜಗತ್ತಿನ ಗಮನ ಸೆಳೆದಿದ್ದರು. ಆದರೆ ಹ್ಯಾರಿ ಟೆಕ್ಟರ್ ಅವರ ಏಕಾಂಗಿ ಹೋರಾಟದ ಮಧ್ಯೆಯೂ ಪಂದ್ಯವನ್ನು ಭಾರತ 7 ವಿಕೆಟ್”ಗಳಿಂದ ಗೆದ್ದುಕೊಂಡು ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ.

22 ವರ್ಷದ ಬಲಗೈ ಬ್ಯಾಟ್ಸ್”ಮನ್ ಹ್ಯಾರಿ ಟೆಕ್ಟರ್, ಐರ್ಲೆಂಡ್ ಪರ 20 ಏಕದಿನ ಪಂದ್ಯಗಳನ್ನಾಡಿದ್ದು, 7 ಅರ್ಧಶತಕಗಳ ಸಹಿತ 670 ರನ್ ಗಳಿಸಿದ್ದಾರೆ. 33 ಟಿ20 ಅಂತರಾಷ್ಟ್ರೀಯ ಪಂದ್ಯಗಳಿಂದ 132.74ರ ಸ್ಟ್ರೈಕ್’ರೇಟ್’ನಲ್ಲಿ 604 ರನ್ ಕಲೆ ಹಾಕಿದ್ದಾರೆ.

ಇದನ್ನೂ ಓದಿ : Mayank Agarwal : ರೋಹಿತ್‌ಗೆ ಕೋವಿಡ್, ಕನ್ನಡಿಗ ಮಯಾಂಕ್ ಅಗರ್ವಾಲ್‌ಗೆ ಒಲಿದ ಅದೃಷ್ಟ

ಇದನ್ನೂ ಓದಿ : Jaspreet Bumrah to lead India : ಟೀಮ್ ಇಂಡಿಯಾಗೆ ಬುಮ್ರಾ ನಾಯಕ ?

Hardik Pandya gifts bat to Ireland star

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular