Pani Puri : ನೇಪಾಳ ರಾಜಧಾನಿಯಲ್ಲಿ ಪಾನಿಪುರಿಗೆ ನಿರ್ಬಂಧ : ಇದಕ್ಕೆ ಕಾರಣ ಏನು ಗೊತ್ತಾ

ನೇಪಾಳ : Pani Puri : ದೇಶದಲ್ಲಿ ಕೊರೊನಾ ಪ್ರಕರಣಗಳು ಹೆಚ್ಚುತ್ತಿರುವ ಬೆನ್ನಲ್ಲೇ ನೆರೆಯ ದೇಶ ನೇಪಾಳದಲ್ಲಿ ಕಾಲರಾದ ಆತಂಕ ಹೆಚ್ಚಾಗಿದೆ. ನೇಪಾಳ ರಾಜಧಾನಿ ಕಾಠ್ಮಂಡು ಕಣಿವೆಯ ಲಲಿತ್​ಪುರ ಮೆಟ್ರೋಪಾಲಿಟನ್​ ಸಿಟಿಯಲ್ಲಿ 12ಕ್ಕೂ ಅಧಿಕ ಮಂದಿಯಲ್ಲಿ ಕಾಲರಾ ಕಾಣಿಸಿಕೊಂಡಿದೆ. ಹೀಗಾಗಿ ಕಾಲರಾವನ್ನು ಆರಂಭಿಕ ಹಂತದಲ್ಲಿಯೇ ಹತೋಟಿಗೆ ತರುವ ಉದ್ದೇಶದಿಂದ ಈ ಪ್ರದೇಶದಲ್ಲಿ ಪಾನಿಪುರಿ ಮಾರಾಟಕ್ಕೆ ನಿರ್ಬಂಧ ಹೇರಲಾಗಿದೆ.


ಪಾನಿಪುರಿ ತಯಾರಿಸಲು ಬಳಸುವ ನೀರಿನಲ್ಲಿ ಕಾಲರಾ ಬ್ಯಾಕ್ಟೀರಿಯಾ ಕಂಡು ಬಂದಿರುವ ಹಿನ್ನೆಲೆಯಲ್ಲಿ ಈ ನಿರ್ಧಾರವನ್ನು ಕೈಗೊಳ್ಳಲಾಗಿದೆ. ಮಹಾನಗರ ಪಾಲಿಕೆ ವ್ಯಾಪ್ತಿಯ ಜನ ನಿಬಿಡ ಪ್ರದೇಶಗಳು ಹಾಗೂ ಕಾರಿಡಾರ್​ಗಳಲ್ಲಿ ಪಾನಿ ಪುರಿ ಮಾರಾಟ ಸಂಪೂರ್ಣ ಬಂದ್​ ಆಗಿದೆ. ಕಣಿವೆಯಲ್ಲಿ ಕಾಲರಾ ಇನ್ನಷ್ಟು ಹೆಚ್ಚುವ ಅಪಾಯವಿದೆ ಎಂದು ಮುನ್ಸಿಪಲ್ ಪೊಲೀಸ್ ಮುಖ್ಯಸ್ಥ ಸೀತಾರಾಮ್ ಹಚೇತು ಹೇಳಿದ್ದಾರೆ.


ನೇಪಾಳದ ಆರೋಗ್ಯ ಸಚಿವಾಲಯ ನೀಡಿರುವ ಮಾಹಿತಿಯ ಪ್ರಕಾರ ಕಾಠ್ಮಂಡು ಕಣಿವೆಯಲ್ಲಿ ಇನ್ನೂ ಏಳು ಜನರಿಗೆ ಕಾಲರಾ ವರದಿ ಪಾಸಿಟಿವ್​ ಬಂದಿದ್ದು ಈ ಮೂಲಕ ಒಟ್ಟು ಕಾಲರಾ ರೋಗಿಗಳ ಸಂಖ್ಯೆ 12ಕ್ಕೆ ತಲುಪಿದೆ ಎನ್ನಲಾಗಿದೆ.


ಆರೋಗ್ಯ ಸಚಿವಾಲಯದ ಅಧೀನದಲ್ಲಿರುವ ಸಾಂಕ್ರಾಮಿಕ ರೋಗ ಹಾಗೂ ರೋಗ ನಿಯಂತ್ರಣ ವಿಭಾಗದ ನಿರ್ದೇಶಕ ಚುಮನ್​ಲಾಲ್​ ದಾಶ್​, ಕಾಠ್ಮಂಡು ಮಹಾನಗರದಲ್ಲಿ ಐದು ಕಾಲರಾ ಮತ್ತು ಚಂದ್ರಗಿರಿ ಪುರಸಭೆ ಹಾಗೂ ಬುಧನೀಲಕಂಠ ಪುರಸಭೆಗಳಲ್ಲಿ ತಲಾ ಒಂದೊಂದು ಪ್ರಕರಣಗಳನ್ನು ಗುರುತಿಸಲಾಗಿದೆ.


ಸೋಂಕಿತರು ಪ್ರಸ್ತುತ ಟೇಕುನಲ್ಲಿರುವ ಸುಕ್ರರಾಜ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಹಿಂದೆ, ರಾಜಧಾನಿಯ ವಿವಿಧ ಭಾಗಗಳಲ್ಲಿ ಐದು ಕಾಲರಾ ಪ್ರಕರಣಗಳು ಕಂಡುಬಂದಿವೆ. ಸೋಂಕಿತರಲ್ಲಿ ಇಬ್ಬರು ಈಗಾಗಲೇ ಚಿಕಿತ್ಸೆ ಪಡೆದು ಡಿಸ್ಚಾರ್ಜ್ ಆಗಿದ್ದಾರೆ.

ಇದನ್ನು ಓದಿ : ಚಿನ್ನಸ್ವಾಮಿ ಮೈದಾನದಲ್ಲೇ ಸೋತಿದ್ದ ನಾಯಕ, ಅದೇ ಮೈದಾನದಲ್ಲಿ ರಣಜಿ ಟ್ರೋಫಿ ಎತ್ತಿ ಹಿಡಿದ !

ಇದನ್ನೂ ಓದಿ : KL Rahul: ಪ್ರೇಯಸಿ ಜೊತೆ ಜರ್ಮನಿಗೆ ಹಾರಿದ ಕ್ರಿಕೆಟರ್ ಕೆ.ಎಲ್ ರಾಹುಲ್

‘Pani Puri’ banned in Nepal’s Kathmandu valley as cholera cases jump to 12

Comments are closed.