ಸೋಮವಾರ, ಏಪ್ರಿಲ್ 28, 2025
HomeSportsCricketKL Rahul Athiya Shetty: ಪ್ರಿಯಕರನ ಫಿಫ್ಟಿಗೆ ಪ್ರೇಯಸಿಯ ಹೃದಯ ಮುದ್ರೆ; ರಾಹುಲ್ ಅರ್ಧಶತಕವನ್ನುಆಥಿಯಾ ಶೆಟ್ಟಿ...

KL Rahul Athiya Shetty: ಪ್ರಿಯಕರನ ಫಿಫ್ಟಿಗೆ ಪ್ರೇಯಸಿಯ ಹೃದಯ ಮುದ್ರೆ; ರಾಹುಲ್ ಅರ್ಧಶತಕವನ್ನುಆಥಿಯಾ ಶೆಟ್ಟಿ ಸಂಭ್ರಮಿಸಿದ್ದು ಹೀಗೆ

- Advertisement -

ಮುಂಬೈ: KL Rahul Athiya Shetty : ಕರ್ನಾಟಕದ ಸ್ಟೈಲಿಷ್ ಕ್ರಿಕೆಟಿಗ, ಟೀಮ್ ಇಂಡಿಯಾದ ಉಪನಾಯಕ ಕೆ.ಎಲ್ ರಾಹುಲ್ ಮತ್ತು ಬಾಲಿವುಡ್ ಸೂಪರ್ ಸ್ಟಾರ್ ಸುನೀಲ್ ಶೆಟ್ಟಿಯವರ ಪುತ್ರಿ ಆಥಿಯಾ ಶೆಟ್ಟಿ ಪ್ರೀತಿಸುತ್ತಿರುವ ವಿಚಾರ ನಿಮ್ಗೆ ಗೊತ್ತೇ ಇದೆ. ಮುಂದಿನ ವರ್ಷದ ಜನವರಿಯಲ್ಲಿ ಈ ಸ್ಟಾರ್ ಜೋಡಿಯ ಮದುವೆಯೂ ನಡೆಯಲಿದೆ.

ಕೆ.ಎಲ್ ರಾಹುಲ್ ಮಂಗಳವಾರ ಆಸ್ಟ್ರೇಲಿಯಾ ವಿರುದ್ಧ ಮೊಹಾಲಿಯಲ್ಲಿ ನಡೆದ ಟಿ20 ಪಂದ್ಯದಲ್ಲಿ (India Vs Australia T20 Series) ಅಮೋಘ ಅರ್ಧಶತಕ ಬಾರಿಸಿದ್ದರು. ಪ್ರಿಯಕರ ಫಿಫ್ಟಿ ಹೊಡೆಯುತ್ತಿದ್ದಂತೆ ಪ್ರೇಯಸಿ ಆಥಿಯಾ ಸಂಭ್ರಮಕ್ಕೆ ಪಾರವೇ ಇರ್ಲಿಲ್ಲ. ಆ ಸಂಭ್ರಮವನ್ನು ಆಥಿಯಾ ಶೆಟ್ಟಿ ಇನ್’ಸ್ಟಾಗ್ರಾಂ ಸ್ಟೋರೀಸ್ ಮೂಲಕ ಹಂಚಿಕೊಂಡಿದ್ದಾರೆ. ರಾಹುಲ್ ಅರ್ಧಶತಕ ಬಾರಿಸಿ ಬ್ಯಾಟ್ ತೋರಿಸುತ್ತಿರುವ ಚಿತ್ರವನ್ನು ಇನ್’ಸ್ಟಾಗ್ರಾಂ ಸ್ಟೋರೀಸ್’ನಲ್ಲಿ ಪೋಸ್ಟ್ ಮಾಡಿರುವ ಆಥಿಯಾ ಶೆಟ್ಟಿ ಜೊತೆಗೆ “ಹೃದಯ” ಚಿಹ್ನೆಯನ್ನೂ ಹಾಕಿದ್ದಾರೆ.

ಮೊಹಾಲಿಯಲ್ಲಿ ನಡೆದ ಆಸ್ಟ್ರೇಲಿಯಾ ವಿರುದ್ಧದ ಪ್ರಥಮ ಟಿ20 ಪಂದ್ಯದಲ್ಲಿ ರಾಹುಲ್ ಕೇವಲ 35 ಎಸೆತಗಳಲ್ಲಿ ಅಬ್ಬರದ 55 ರನ್ ಬಾರಿಸಿದ್ದರು. ರಾಹುಲ್ ಅವರ ಇನ್ನಿಂಗ್ಸ್’ನಲ್ಲಿ 4 ಬೌಂಡರಿಗಳು ಮತ್ತು 3 ಸಿಕ್ಸರ್’ಗಳು ಇದ್ದವು. ತಮ್ಮ ಸ್ಟ್ರೈಕ್’ರೇಟ್ ವಿರುದ್ಧ ಪ್ರಶ್ನೆ ಎತ್ತಿದ್ದ ಟೀಕಾಕಾರರಿಗೆ ರಾಹುಲ್ ಬ್ಯಾಟ್’ನಿಂದಲೇ ಉತ್ತರಿಸಿದ್ದರು.

ಏಷ್ಯಾ ಕಪ್ ಟೂರ್ನಿಯಲ್ಲಿ ಅಫ್ಘಾನಿಸ್ತಾನ ವಿರುದ್ಧದ ಪಂದ್ಯಕ್ಕೂ ಮುನ್ನ ರಾಹುಲ್ ಅವರ ಆಟ ತೀವ್ರ ಟೀಕೆಗೆ ಗುರಿಯಾಗಿತ್ತು. ಅದರಲ್ಲೂ ಕ್ರಿಕೆಟ್ ಶಿಶು ಹಾಂಕಾಂಗ್ ವಿರುದ್ಧದ ಪಂದ್ಯದಲ್ಲಿ ನಿಧಾನಗತಿಯ ಆಟವಾಡಿದ್ದ ರಾಹುಲ್ 39 ಎಸೆತಗಳಲ್ಲಿ ಕೇವಲ 36 ರನ್ ಗಳಿಸಿದ್ದರು.

ಆದರೆ ಆಸ್ಟ್ರೇಲಿಯಾ ವಿರುದ್ಧದ 3 ಪಂದ್ಯಗಳ ಟಿ20 ಸರಣಿ ಮೊದಲ ಪಂದ್ಯದಲ್ಲೇ ಅಬ್ಬರಿಸಿರುವ ರಾಹುಲ್ ತಮ್ಮ ಹಳೇ ಲಯಕ್ಕೆ ಮರಳಿದ್ದಾರೆ. ಪ್ರಿಯಕರನ ಬ್ಯಾಟಿಂಗ್’ಗೆ ಫಿದಾ ಆಗಿರುವ ಆಥಿಯಾ ಶೆಟ್ಟಿ, ಆ ಸಂಭ್ರಮವನ್ನು ಇನ್’ಸ್ಟಾಗ್ರಾಂ ಸ್ಟೋರೀಸ್’ನಲ್ಲಿ ಹಂಚಿಕೊಂಡಿದ್ದಾರೆ. ಮಂಗಳೂರು ಮೂಲದ ಕೆ.ಎಲ್ ರಾಹುಲ್ ಮತ್ತು ಆಥಿಯಾ ಶೆಟ್ಟಿ ಕಳೆದ 3 ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದಾರೆ. ಇಬ್ಬರ ಪ್ರೀತಿಗೆ ಎರಡೂ ಕುಟುಂಬಗಳ ಒಪ್ಪಿಗೆಯಿದ್ದು, ಮುಂದಿನ ವರ್ಷದ ಜನವರಿಯಲ್ಲಿ ಈ ತಾರಾ ಜೋಡಿ ಮುಂಬೈನಲ್ಲಿ ಹಸೆಮಣೆ ಏರಲಿದೆ.

ಇದನ್ನೂ ಓದಿ : Harmanpreet Kaur : 100 ಎಸೆತಗಳಲ್ಲಿ 100 ರನ್.. 111 ಎಸೆತಗಳಲ್ಲಿ 143 ರನ್.. ಕೌರ್ ರೌದ್ರಾವತಾರಕ್ಕೆ ಬೆಚ್ಚಿದ ಇಂಗ್ಲೆಂಡ್

ಇದನ್ನೂ ಓದಿ : Special Gift for Virat Kohli: ವಿರಾಟ್ ಕೊಹ್ಲಿಗೆ ವಿಶೇಷ ಉಡುಗೊರೆ ನೀಡಿದ ಪಂಜಾಬ್ ಮಹಿಳೆ ; ಗಿಫ್ಟ್ ನೋಡಿ ಕಿಂಗ್ ಫುಲ್ ಫಿದಾ

How Athiya Shetty Celebrated KL Rahul Half Century

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular