ಭಾನುವಾರ, ಏಪ್ರಿಲ್ 27, 2025
HomeSportsCricketIndia beat Pakistan: ಬುಮ್ರಾ ಬೆಂಕಿ ಬೌಲಿಂಗ್ , ಪಾಕಿಸ್ತಾನ ವಿರುದ್ಧ ಭಾರತಕ್ಕ ರೋಚಕ ಜಯ...

India beat Pakistan: ಬುಮ್ರಾ ಬೆಂಕಿ ಬೌಲಿಂಗ್ , ಪಾಕಿಸ್ತಾನ ವಿರುದ್ಧ ಭಾರತಕ್ಕ ರೋಚಕ ಜಯ !

- Advertisement -

India vs Pakistan : ನ್ಯೂ ಯಾರ್ಕ್: ಬೌಲರ್’ಗಳ ಅಮೋಘ ಪ್ರದರ್ಶನದ ನೆರವಿನಿಂದ ಭಾರತ ತಂಡ, ಐಸಿಸಿ ಟಿ20 ವಿಶ್ವಕಪ್ ಟೂರ್ನಿಯ (ICC t20 World Cup 2024) ಹೈವೋಲ್ಟೇಜ್ ಪಂದ್ಯದಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ತಂಡವನ್ನು 6 ರನ್’ಗಳಿಂದ ರೋಚಕವಾಗಿ ಮಣಿಸಿತು. ಇದರೊಂದಿಗೆ ರೋಹಿತ್ ಶರ್ಮಾ ಬಳಗ ಟೂರ್ನಿಯಲ್ಲಿ ಸತತ 2ನೇ ಜಯ ದಾಖಲಿಸಿದರೆ, ಪಾಕಿಸ್ತಾನ ಸತತ ಎರಡನೇ ಸೋಲು ಕಂಡಿತು.

ICC t20 World Cup 2024 India vs Pakistan Jasprit Bumrah Best Bowling India beat Pakistan
Image Credit : Sachin Tendulkar/ twitter

ನ್ಯೂ ಯಾರ್ಕ್’ನ ನಾಸೌ ಕೌಂಟಿ ಇಂಟರ್ ನ್ಯಾಷನಲ್ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಭಾರತ ಭಾರೀ ಬ್ಯಾಟಿಂಗ್ ವೈಫಲ್ಯ ಎದುರಿಸಿ 19 ಓವರ್’ಗಳಲ್ಲಿ 119 ರನ್’ಗಳಿಗೆ ಆಲೌಟಾಯಿತು. ಭಾರತ ಪರ ವಿಕೆಟ್ ಕೀಪರ್ ಬ್ಯಾಟರ್ ರಿಷಭ್ ಪಂತ್ ಮೂರು ಜೀವದಾನಗಳ ಸಹಿತ 31 ಎಸೆತಗಳಲ್ಲಿ 42 ರನ್ ಗಳಿಸಿದರು. ನಾಯಕ ರೋಹಿತ್ 13 ರನ್ ಗಳಿಸಿದರೆ, ಮಾಜಿ ನಾಯಕ ವಿರಾಟ್ ಕೊಹ್ಲಿ ಕೇವಲ 4 ರನ್ ಗಳಿಸಿ ಔಟಾದರು. ವಿಶ್ವದ ನಂ.1 ಟಿ20 ಬ್ಯಾಟರ್ ಸೂರ್ಯಕುಮಾರ್ ಯಾದವ್ 7 ರನ್ ಗಳಿಸಿ ಔಟಾದರು.

ಇದನ್ನೂ ಓದಿ : Rishabh Pant Played Golf: ಹೋಟೆಲ್ ಕಾರಿಡಾರ್‌ನಲ್ಲಿ ಕ್ರಿಕೆಟ್ ಬ್ಯಾಟ್ ಹಿಡಿದು ಗಾಲ್ಫ್ ಆಡಿದ ರಿಷಭ್ ಪಂತ್ !

ನಂತರ ಕಠಿಣ ಪಿಚ್’ನಲ್ಲಿ 120 ರನ್’ಗಳ ಗುರಿ ಬೆನ್ನತ್ತಿದ ಪಾಕಿಸ್ತಾನ ವೇಗಿ ಜಸ್ಪ್ರೀತ್ ಬುಮ್ರಾ (Jasprit Bumrah) ದಾಳಿಗೆ ತತ್ತರಿಸಿ 20 ಓವರ್’ಗಳಲ್ಲಿ 7 ವಿಕೆಟ್ ನಷ್ಟಕ್ಕೆ 113 ರನ್ ಗಳಿಸಲಷ್ಟೇ ಶಕ್ತವಾಯಿತು. ಅಮೋಘ ಬೌಲಿಂಗ್ ಪ್ರದರ್ಶಿಸಿದ ಬುಮ್ರಾ 4 ಓವರ್’ಗಳಲ್ಲಿ ಕೇವಲ 14 ರನ್ನಿತ್ತು 3 ವಿಕೆಟ್ ಪಡೆದು ಪಂದ್ಯಶ್ರೇಷ್ಠರಾಗಿ ಮೂಡಿ ಬಂದರು. ಇದರೊಂದಿಗೆ ಭಾರತ ತಂಡ ಐಸಿಸಿ ಟಿ20 ವಿಶ್ವಕಪ್ ಇತಿಹಾಸದಲ್ಲಿ ಪಾಕಿಸ್ತಾನ ವಿರುದ್ಧ 7ನೇ ಗೆಲುವು ದಾಖಲಿಸಿತು. ಜೂನ್ 12ರಂದು ನಡೆಯುವ ತನ್ನ 3ನೇ ಲೀಗ್ ಪಂದ್ಯದಲ್ಲಿ ಭಾರತ, ಆತಿಥೇಯ ಅಮೆರಿಕ ತಂಡವನ್ನು ಎದುರಿಸಲಿದೆ.

ICC t20 World Cup 2024 India vs Pakistan Jasprit Bumrah Best Bowling India beat Pakistan
Image Credit : Twitter

ಇದನ್ನೂ ಓದಿ : KL Rahul & Monank Patel: ಟಿ20 ವಿಶ್ವಕಪ್: ಅಮೆರಿಕ ತಂಡದ ನಾಯಕ ನಮ್ಮ ಕನ್ನಡಿಗ ರಾಹುಲ್ ಅಭಿಮಾನಿಯಂತೆ !

ಟಿ20 ವಿಶ್ವಕಪ್’ನಲ್ಲಿ ಭಾರತ Vs ಪಾಕಿಸ್ತಾನ ಮುಖಾಮುಖಿ
2007: ಭಾರತಕ್ಕೆ ಜಯ
2007: ಭಾರತಕ್ಕೆ ಜಯ (ಫೈನಲ್)
2012: ಭಾರತಕ್ಕೆ ಜಯ
2014: ಭಾರತಕ್ಕೆ ಜಯ
2016: ಭಾರತಕ್ಕೆ ಜಯ
2021: ಪಾಕಿಸ್ತಾನಕ್ಕೆ ಜಯ
2022: ಭಾರತಕ್ಕೆ ಜಯ
2024: ಭಾರತಕ್ಕೆ ಜಯ

ಇದನ್ನೂ ಓದಿ : Afghanistan Beat New Zealand: ಟಿ20 ವಿಶ್ವಕಪ್’ನಲ್ಲಿ ಮತ್ತೊಂದು ಬಿಗ್ ಶಾಕ್, ಕಿವೀಸ್ ಕಿವಿ ಹಿಂಡಿದ ಆಫ್ಘನ್ ಪಡೆ !

ICC t20 World Cup 2024 India vs Pakistan Jasprit Bumrah Best Bowling India beat Pakistan

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular